
Bhagyalakshmi Kannada Serial Today Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಯಾರೂ ಕೂಡ ಊಹಿಸಲು ಆಗದಷ್ಟರ ಮಟ್ಟಿಗೆ ತಾಂಡವ್ ಬದಲಾಗಿದ್ದಾನೆ. ಶ್ರೇಷ್ಠ ಎಷ್ಟೇ ಬೆದರಿಕೆ ಹಾಕಿದರೂ ಕೂಡ ಅವನು ಮಾತ್ರ ಸ್ವಲ್ಪವೂ ಅವಳ ಮಾತು ಕೇಳ್ತಿಲ್ಲ. ಇನ್ನೊಂದು ಕಡೆ ಭಾಗ್ಯ ಯಾರ ಜೊತೆ ಬದುಕಬೇಕು ಎಂದು ಎಲ್ಲರೂ ತಲೆ ಕೆಡಿಸಿಕೊಂಡಿದ್ದಾರೆ.
ಸುನಂದಾಗೆ ಮಗಳು ಭಾಗ್ಯ, ತಾಂಡವ್ ಜೊತೆ ಸಂಸಾರ ಮಾಡಲಿ, ಎರಡನೇ ಮದುವೆ ಬೇಡ ಎಂಬ ಹಠವಿದೆ. ಇನ್ನು ಕುಸುಮಾಗೆ ತನ್ನ ಮಗ ತಾಂಡವ್ ಜೊತೆ ಭಾಗ್ಯ ನರಕ ಅನುಭವಿಸಿದಳು, ಈಗ ಆದಿ ಜೊತೆ ಮದುವೆ ಆಗಿ ಖುಷಿಯಾಗಿರಲಿ ಎಂಬ ಆಸೆಯಿದೆ.
ಭಾಗ್ಯಳ ಬದುಕನ್ನು ರೂಪಿಸಲು ಅವಳ ಅತ್ತೆ, ತಾಯಿ ಇಬ್ಬರೂ ಜ್ಯೋತಿಷಿ ಬಳಿ ಬಂದಿದ್ದಾರೆ. ಆಗ ಕೂಡ ಜ್ಯೋತಿಷಿಯು ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ ಮಾತನಾಡಿದ್ದಾರೆ. ಹೀಗಾಗಿ ಕುಸುಮಾಗೆ ಬೇಸರ ತಂದರೆ, ಸುನಂದಾಗೆ ಖುಷಿ ಕೊಟ್ಟಿದೆ.
ಆದೀಶ್ವರ್ ಕಾಮತ್ ಹಾಗೂ ಭಾಗ್ಯ ಮದುವೆಯಾದರೆ ಖುಷಿಯಿಂದ ಜೀವನ ಮಾಡ್ತಾಳೆ, ತಾಂಡವ್‌ನನ್ನು ಮದುವೆ ಆದರೆ ಅವನು ಯಾವತ್ತೂ ಅವಳನ್ನು ಬಿಡೋದಿಲ್ಲ ಎಂದು ಜ್ಯೋತಿಷಿ ಹೇಳಿದ್ದಾನೆ.
ಭಾಗ್ಯಳಿಗೆ ತಾಂಡವ್ ಕಂಡರೆ ಇಷ್ಟವೇ ಇಲ್ಲ, ಲೆಕ್ಕವಿಲ್ಲದ ಸಮಸ್ಯೆಗಳನ್ನು ನೀಡಿ, ಎಲ್ಲರ ಪ್ರೀತಿಯನ್ನು ಧಿಕ್ಕಾರ ಮಾಡಿದ ತಾಂಡವ್‌ನನ್ನು ನಾನು ಕ್ಷಮಿಸೋದಿಲ್ಲ, ಮಗಳಿಗೋಸ್ಕರ ಮನೆಯೊಳಗಡೆ ಬಿಟ್ಕೊಂಡೆ ಎಂದು ಅವನು ಹೇಳಿದ್ದಾನೆ. ಆದೀಶ್ವರ್ ಕಾಮತ್ ಪ್ರೀತಿಯನ್ನು ಒಪ್ಪಿಕೊಳ್ಳಬೇಕು, ಎರಡನೇ ಮದುವೆ ಆಗಬೇಕು ಎನ್ನುವಾಗ ಭಾಗ್ಯಳ ಬದುಕಲ್ಲಿ ಮತ್ತೆ ತಾಂಡವ್ ಎಂಟ್ರಿಯಾಗಿದೆ. ಹೀಗಾಗಿ ಅವಳಿಗೆ ಪರಿಸ್ಥಿತಿಯನ್ನು ಕಂಟ್ರೋಲ್ ಮಾಡೋದು ಕಷ್ಟವಾಗಿದೆ.
ತಂದೆ ತಾಂಡವ್ ಕಂಡರೆ ತನ್ವಿಗೆ ತುಂಬ ಇಷ್ಟ. ಅಪ್ಪನಿಗೆ ಒಂದು ಚಾನ್ಸ್ ಕೊಡು, ಅವರು ಬದಲಾಗ್ತಾರೆ, ನಮ್ಮ ಜೊತೆ ಚೆನ್ನಾಗಿ ಇರುತ್ತಾರೆ ಎಂದು ತನ್ವಿ ಹೇಳುತ್ತಿದ್ದಾಳೆ. ಅಪ್ಪನನ್ನು ಅವಳು ಬಿಟ್ಟುಕೊಡೋ ಮಾತೇ ಇಲ್ಲ. ಮಗಳಿಗೋಸ್ಕರ ಭಾಗ್ಯೆ ಏನೂ ಮಾಡಲು ಆಗ್ತಿಲ್ಲ. ಭಾಗ್ಯ ತಾಯಿಗೂ ಕೂಡ ಮಗಳು ಎರಡನೇ ಮದುವೆ ಆಗೋದು ಇಷ್ಟವೇ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.