
ಅಮೃತಧಾರೆ ಸೀರಿಯಲ್‌ನಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಬರೀ ಕತೆಯಲ್ಲಿ ಮಾತ್ರ ಅಲ್ಲ, ಲುಕ್‌ನಲ್ಲೂ ಗೆಟಪ್‌ನಲ್ಲೂ ಚೇಂಜ್ ಮೇಲೆ ಚೇಂಜ್ ಶುರುವಾಗಿದೆ. ಇನ್ನೊಂದು ಕಡೆ ಕಥೆಯಲ್ಲೂ ದೊಡ್ಡದೊಂದು ಪಾಸಿಟಿವ್ ತಿರುವು ಎದುರಾಗಿದೆ. ಇಷ್ಟು ದಿನ ಕ್ಯಾಬ್ ಓಡಿಸ್ಕೊಂಡು ಹಾಯಾಗಿದ್ದ ಗೌತಮ್ ದಿವಾನ್ ಹೊಸ ಸಾಮ್ರಾಜ್ಯ ಕಟ್ಟಲು ಸ್ಕೆಚ್ ಹಾಕ್ತಿದ್ದಾನೆ. ಮಗ ಕ್ಯಾಬ್ ಓಡಿಸೋದನ್ನು ನೋಡಿ ಅವನ ತಾಯಿ ಬೇಸರ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಭೂಮಿಕಾ ಬಳಿ ಹೇಳುವಾಗ ಗೌತಮ್ ಇದನ್ನು ಕದ್ದು ಕೇಳಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಉದ್ಯಮ ಶುರು ಮಾಡೋದಾಗಿ ಹೇಳಿದ್ದಾನೆ. ಇದರಿಂದ ಹೊಸ ಅಧ್ಯಾಯ ತೆರೆದುಕೊಳ್ಳುವ ಸಾಧ್ಯತೆ ಇದೆ. ಈ ಹಿಂದೆ ಗೌತಮ್ ‘ದಿವಾನ್ ಗ್ರೂಪ್ ಆಫ್ ಕಂಪನೀಸ್’ನ ಓಡೆಯನಾಗಿದ್ದ. ಬಿಲಿಯನೇರ್ ಬಿಸಿನೆಸ್‌ಮೆನ್ ಆಗಿದ್ದ. ಆದರೆ, ಆತನ ಮಲತಾಯಿ ಮಾಡಿದ ಮೋಸದಿಂದ ರಾತ್ರಿ ಕಳೆದು ಹಗಲಾಗುವುದರೊಳಗೆ ಆ ಮನೆಯಿಂದಲೇ ಆಚೆ ಬರುವ ಹಾಗಾಯ್ತು. ಆತನ ತಮ್ಮ ಜೈದೇವ್ ಮೋಸದಿಂದ ಎಲ್ಲ ಆಸ್ತಿಯನ್ನ ಬರೆಸಿಕೊಂಡಿದ್ದಲ್ಲದೇ ಆತನ ಪತ್ನಿ ಭೂಮಿಯನ್ನೂ ಆತನಿಂದ ದೂರವಾಗುವ ಹಾಗೆ ಮಾಡಿಬಿಟ್ಟ. ಇದರಲ್ಲಿ ಜೈದೇವ್ ಅಮ್ಮ, ಗೌತಮ್ ಮಲತಾಯಿ ಶಕುಂತಲಾ ಕೈವಾಡವೂ ಇತ್ತು. ಇದರಿಂದ ಗೌತಮ್ ಮನೆ ಬಿಟ್ಟು ಹೋಗುವಂತೆ ಆಯಿತು.
ದೊಡ್ಡದೊಂದು ತಿರುವು ಬಂದು ಐದು ವರ್ಷದ ನಂತರ ಬೇರೆ ಬೇರೆಯಾಗಿದ್ದವರೆಲ್ಲ ಒಂದಾದರು. ಈಗ ಗೌತಮ್ ಹಾಗೂ ಭೂಮಿಕಾ ಒಂದಾಗಿದ್ದಾರೆ. ಎಲ್ಲರೂ ಖುಷಿಯಲ್ಲಿರುವಾಗಲೇ ಬಿಲಿಯನೇರ್ ಗೌತಮ್ ಕ್ಯಾಬ್ ಡ್ರೈವರ್ ಆಗಿರೋದಕ್ಕೆ ಗೌತಮ್ ಅಮ್ಮ ಭಾಗ್ಯನಿಗೆ ಬೇಸರವಾಗಿದೆ. ಇದನ್ನು ಗೌತಮ್‌ಗೂ ಹೇಳಿದ್ದಾಳೆ. ಕೇವಲ ದುಡ್ಡು ಮಾಡಲು ಮಗ ಬ್ಯುಸಿನೆಸ್ ಮಾಡಬೇಕು ಅನ್ನೋದು ಶಕುಂತಲಾ ಗುರಿಯಲ್ಲ. ಬದಲಿಗೆ ಮಗನಿಂದ ಸಮಾಜಕ್ಕೆ ಸಾಕಷ್ಟು ಕೊಡುಗೆ ಸಿಗಬೇಕು, ಸರ್ಕಾರಿ ಶಾಲೆಗಳಿಗೆ, ಕಷ್ಟದಲ್ಲಿರುವ ಜನರಿಗೆ ನೆರವು ಸಿಗಬೇಕು ಅನ್ನುವುದು ಭಾಗ್ಯ ಆಸೆ. ಹೀಗಾಗಿ, ಹೊಸ ಉದ್ಯಮ ಮಾಡೋದಾಗಿ ಅವನು ತಾಯಿ ಭರವಸೆ ನೀಡಿದ್ದಾನೆ. ಈಗಿರೋದಕ್ಕಿಂತ ಹತ್ತು ಪಟ್ಟು ದೊಡ್ಡ ಸಾಮ್ರಾಜ್ಯ ಕಟ್ಟುತ್ತೇನೆ ಅಂತ ತಾಯಿಗೆ ಮಾತು ಕೊಟ್ಟಿದ್ದಾನೆ.
ಇನ್ನೊಂದು ಕಡೆ ಭೂಮಿಕಾ ಲುಕ್ ಬದಲಾಗಿದೆ. ಆಕೆ ಗೌತಮ್ ಸಿಕ್ಕಿದಾಗ ಏಕ್‌ದಂ ಹತ್ತು ವರ್ಷ ಚಿಕ್ಕೋಳ ಥರ ಕಾಣೋದಕ್ಕೆ ಶುರುವಾದ್ಲು. ಕನ್ನಡಕ, ಕ್ಲೋಸ್ಡ್ ನೆಕ್ ಬ್ಲೌಸ್, ಹೇರ್‌ಸ್ಟೈಲ್ ಎಲ್ಲ ಬದಲಾಗಿತ್ತು. ಈಗ ಮತ್ತೆ ಭೂಮಿಕಾ ಲುಕ್ ಬದಲಾಗಿದೆ. ಭೂಮಿ ಮತ್ತೆ ಕನ್ನಡಕ ಧಾರಿಣಿ ಆಗಿದ್ದಾಳೆ. ಹೊಸ ಪ್ರೋಮೋದಲ್ಲಿ ಅವಳಿಗೆ ಮಲ್ಲಿಯ ಲವ್ ವಿಚಾರ ಗೊತ್ತಾಗಿದೆ. ಟಿಫಿನ್ ಬಾಕ್ಸ್ ಕೊಡಲಿಕ್ಕೆ ಅಂತ ಕಾಲೇಜಿಗೆ ಬಂದ ಭೂಮಿಗೆ ಮಲ್ಲಿ ಒಬ್ಬ ಹುಡುಗನ ಜೊತೆ ಸುತ್ತುತ್ತಾ ಇರುವ ವಿಚಾರ ಆಕೆಯ ಸ್ನೇಹಿತೆಯಿಂದ ತಿಳಿದಿದೆ. ಮಲ್ಲಿ ಕ್ಲಾಸ್ ಬಂಕ್ ಮಾಡಿ ಹುಡುಗನ ಜೊತೆ ಸುತ್ತುತ್ತಿದ್ದಾಳೆ ಅನ್ನೋ ವಿಚಾರ ಕೇಳಿ ನಮ್ ಭೂಮಿಗೆ ತಲೆ ಸುತ್ತಿದಂತೆ ಆಗಿಬಿಟ್ಟಿದೆ. ಇನ್ನ ಮಲ್ಲಿ ಮನೆಗೆ ಬರ್ತಿದ್ದ ಹಾಗೆ ಭೂಮಿಯಿಂದ ಕೋರ್ಟ್ ಮಾರ್ಶೆಲ್ ಆಗೋದು ಪಕ್ಕಾ!
ಭೂಮಿ ಟೀಚರ್ ಹೊಸ ಲುಕ್‌ನಲ್ಲಿ ಕೊಂಚ ವಯಸ್ಸಾದಂತೆ ಕಂಡರೂ ಚೆನ್ನಾಗಿ ಕಾಣ್ತಿದ್ದಾರೆ ಅನ್ನೋದು ವೀಕ್ಷಕರ ಅಭಿಪ್ರಾಯ. ವಯಸ್ಸಿಗೆ, ಆಕೆಯ ವ್ಯಕ್ತಿತ್ವಕ್ಕೆ ತಕ್ಕ ಹಾಗೆ ಈಕೆಯ ಗೆಟಪ್ ಇದೆ ಅಂತ ಈ ಸೀರಿಯಲ್ ವೀಕ್ಷಕರು ಮೆಚ್ಚಿಕೊಳ್ತಿದ್ದಾರೆ. ಮುಂದೆ ಭೂಮಿ ಲೈಫು ಮತ್ತೊಂದು ಟರ್ನ್ ಟ್ವಿಸ್ಟ್ ಗಳ ಹಾದಿಯಲ್ಲಿ ಮುನ್ನಡೆಯಲಿದೆ. ಇದಕ್ಕೆ ಮಲ್ಲಿ ಚಾಪ್ಟರ್ ಆಡೆಡ್ ಎಡಿಷನ್‌ನಂತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.