Amruthadhaare Serial: ಭೂಮಿಯನ್ನು ಓವರ್‌ಟೇಕ್‌ ಮಾಡಿ ಜೀವನ್‌ಗೆ ಮಾಂಜಾ ಕೊಟ್ಟ ಅಪೇಕ್ಷಾ!

Published : Apr 30, 2025, 04:31 PM ISTUpdated : Apr 30, 2025, 04:49 PM IST
Amruthadhaare Serial: ಭೂಮಿಯನ್ನು ಓವರ್‌ಟೇಕ್‌ ಮಾಡಿ ಜೀವನ್‌ಗೆ ಮಾಂಜಾ ಕೊಟ್ಟ ಅಪೇಕ್ಷಾ!

ಸಾರಾಂಶ

ಜೀವನ್ ತಂದೆ-ತಾಯಿಯನ್ನು ಮನೆಯಿಂದ ಹೊರಹಾಕಿದ್ದಕ್ಕೆ ಗೌತಮ್ ಭೂಮಿ ಮನೆಗೆ ಬಂದು ಗದರಿಸಿದ್ದಾನೆ. ಅಪೇಕ್ಷಾ ಜೀವನ್‌ನ ತರಾಟೆಗೆ ತೆಗೆದುಕೊಂಡು, ತಂದೆ-ತಾಯಿಯ ಮಹತ್ವವನ್ನು ತಿಳಿಸಿದ್ದಾಳೆ. ವೀಕ್ಷಕರು ಅಪೇಕ್ಷಾ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ʼಅಮೃತಧಾರೆʼ ಧಾರಾವಾಹಿಯಲ್ಲಿ ತಂದೆ-ತಾಯಿಯನ್ನು ಜೀವನ್‌ ಮನೆಯಿಂದ ಹೊರಗಡೆ ಹಾಕಿದ್ದಾನೆ. ಈ ವಿಷಯ ಈಗ ಗೌತಮ್‌ಗೆ ಗೊತ್ತಾಗಿತ್ತು. ಗೌತಮ್‌ ನೇರವಾಗಿ ಜೀವನ ಮನೆಗೆ ಬಂದು ಬಾಯಿಗೆ ಬಂದ ಹಾಗೆ ಬೈದು, ಎಚ್ಚರಿಕೆ ಕೊಟ್ಟಿದ್ದನು. ಈಗ ಗೌತಮ್‌, ಭೂಮಿ ಮನೆಗೆ ಬಂದು “ನಿನ್ನ ಗಂಡ ಯಾಕೆ ನನ್ನ ಮನೆಯ ವಿಷಯಕ್ಕೆ ತಲೆ ಹಾಕ್ತಾನೆ” ಅಂತ ಬೈದಿದ್ದಾನೆ. ಆಗ ಭೂಮಿ ಬದಲು ಅಪೇಕ್ಷಾ ಸರಿಯಾಗಿ ಉತ್ತರ ಕೊಟ್ಟಿದ್ದಾಳೆ. 

ಗೌತಮ್‌ ವಿರುದ್ಧ ಹರಿಹಾಯ್ದ ಅಪರ್ಣಾ! 
“ನಿನ್ನ ಹತ್ರ ಉಪಚಾರ ಮಾಡಿಸಿಕೊಳ್ಳೋಕೆ ನಾನು ಬಂದಿಲ್ಲ. ಎಲ್ಲರೂ ಹೇಗೆ ಅಂತ ಗೊತ್ತಾಗಿದೆ. ನನಗೆ ಜ್ಞಾನೋದಯ ಆಗಿದೆ. ಆಟ ಆಡೋಕೆ ನನ್ನ ಲೈಫ್‌ ಬೇಕಾ? ನಿನ್ನ ಗಂಡನಿಗೆ ಬುದ್ಧಿ ಇಲ್ವಾ? ಮಾಡೋಕೆ ಕೆಲಸ ಇಲ್ವಾ? ನನ್ನ ಲೈಫ್‌ನ ಉಸ್ತುವಾರಿಯನ್ನು ಅವರಿಗೆ ಆಮಂತ್ರಣ ಕೊಟ್ಟಿದೀನಾ? ನನಗೆ ಇಲ್ಲಿಯವರೆಗೆ ಗೌರವ, ಮರ್ಯಾದೆ ಕೊಟ್ಟು ಮಾತನಾಡುತ್ತಿದ್ದೆ. ಗೌತಮ್‌ ನನ್ನ ಜೀವನದಲ್ಲಿ ಒಂದೇ ಅಲ್ಲ, ಉದ್ಯಮದಲ್ಲಿಯೂ ತಲೆಹಾಕ್ತಿದ್ದಾರೆ” ಎಂದು ಜೀವನ್‌, ಭೂಮಿ ಮುಂದೆ ಹೇಳಿದ್ದಾನೆ. 

ನಾನೇ ಮನೆಯಿಂದ ಆಚೆ ಹಾಕಿದೆ! 
“ಅಪ್ಪ-ಮಗನ ಮಧ್ಯೆ ಜಗಳ ಇರತ್ತೆ, ಮನಸ್ತಾಪ ಇರತ್ತೆ. ಇದೆಲ್ಲ ಸಹಜ. ಅಪ್ಪ-ಅಮ್ಮ ನನ್ನ ಜೊತೆ ಜಗಳ ಮಾಡಿಕೊಂಡು ಬಂದಿದ್ದಾರೆ. ನಾನು ಅವರನ್ನು ಮನೆಯಿಂದ ಆಚೆ ಹಾಕಿದೆ. ನಾನು ಕಟ್ಟಿಸಿದ ಮನೆಯಲ್ಲಿ ನನಗೆ ಸ್ವಾತಂತ್ರ್ಯ ಇರಲಿಲ್ಲ. ಎಲ್ಲದಕ್ಕೂ ಪ್ರಶ್ನೆ ಮಾಡಿದ್ದಕ್ಕೆ ಅವರನ್ನು ಹೊರಗಡೆ ಹಾಕಿದೆ. ಈಗ ನನ್ನ ಉದ್ಯಮಕ್ಕೆ ನಿನ್ನ ಗಂಡ ಎಂಟ್ರಿ ಕೊಟ್ಟಿದ್ದಾರೆ. ನನ್ನ ಅಪ್ಪ-ಅಮ್ಮನನ್ನು ಹೇಗೆ ನೋಡಿಕೊಳ್ಳಬೇಕು ಅಂತ ನನಗೆ ಗೊತ್ತಿದೆ. ನಾನು ಬುದ್ಧಿಮಾಂದ್ಯ ಅಲ್ಲ. ನನ್ನ ಲೈಪ್‌ನ ನಿರ್ಧಾರಗಳನ್ನು ನಾನೇ ತಗೋತೀನಿ” ಎಂದು ಜೀವನ್‌ ಕೂಗಾಡಿದ್ದಾನೆ.

ಮನೆ ಕಟ್ಟಿಸಿ ಬಿಲ್ಡಪ್‌ ಕೊಡಬೇಡ! 
“ಅಪ್ಪ-ಅಮ್ಮನ ಬೆಲೆ ನಿನಗೆ ಗೊತ್ತಿಲ್ಲ. ವಯಸ್ಸಿದೆ ಅಂತ ಹಾರಾಡಬೇಡ. ನಿನ್ನ ಅಣ್ಣ ಅಂತ ಕರೆಯೋಕೆ ನನಗೆ ನಾಚಿಕೆ ಆಗುತ್ತದೆ. ನೀನು ಅಪ್ಪ ಆದಾಗಲೇ ನಿನಗೆ ಅಪ್ಪ-ಅಮ್ಮನ ಬೆಲೆ ಅಂತ ಗೊತ್ತಾಗೋದು. ಅಪ್ಪ-ಅಮ್ಮ ಯಾವಾಗಲೂ ಕಣ್ಣು ಮುಂದೆ ಇರೋದಿಕ್ಕೆ ನಿನಗೆ ಅವರ ಬೆಲೆ ಅರ್ಥ ಆಗ್ತಿಲ್ಲ. ನಾವು ಗಂಡನ ಮನೆಗೆ ಬಂದಿರೋದಿಕ್ಕೆ ಅವರ ಬೆಲೆ ಏನು ಅಂತ ನನಗೆ ಗೊತ್ತಾಗಿದೆ. ನೀನು ಅಣ್ಣ ಅಂತ ಸುಮ್ಮನೆ ಇದೀನಿ, ನಿನ್ನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ರೂ ಇಲ್ಲಿ ಆಗ್ತಿದ್ದಿದ್ದು ಬೇರೆ. ದೊಡ್ಡ ಮನೆ ಕಟ್ಟಿಸಿ ಬಿಲ್ಡಪ್‌ ಕಟ್ಟಿಕೊಳ್ಳೋದಲ್ಲ, ಅದಕ್ಕೆ ತಕ್ಕ ಹಾಗೆ ಇರಬೇಕು. ಅಪ್ಪ-ಅಮ್ಮ ಇಲ್ಲ ಅಂದ್ರೆ ನೀನು ಏನೂ ಇಲ್ಲ, ಈಗಲೂ ಇರುತ್ತಾ ಇರಲಿಲ್ಲ” ಎಂದು ಅಪೇಕ್ಷಾ, ತನ್ನ ಅಣ್ಣನ ಮುಂದೆ ಕೂಗಾಡಿದ್ದಾಳೆ. 

ಒಳ್ಳೆಯವಳಾಗಿರೋ ಅಪೇಕ್ಷಾ! 
ತನ್ನ ಮದುವೆಯನ್ನು ಒಪ್ಪಲಿಲ್ಲ, ಅವಮಾನ ಮಾಡಿದರು ಅಂತ ಸದಾಶಿವ-ಮಂದಾಕಿನಿ ವಿರುದ್ಧ ಅಪೇಕ್ಷಾ ಕೂಗಾಡಿದ್ದಳು, ಸಿಟ್ಟು ಮಾಡಿಕೊಂಡಿದ್ದಳು, ಎಲ್ಲರ ಮುಂದೆ ಅವಮಾನ ಮಾಡಿದ್ದಳು. ಈಗ ಅವಳು ಸರಿ ಹೋಗಿದ್ದಾಳೆ. ತನ್ನ ತಪ್ಪನ್ನು ಒಪ್ಪಿಕೊಂಡು, ಪಾಲಕರ ಬಳಿ ಕ್ಷಮೆ ಕೇಳಿದ್ದಾಳೆ. ಈಗ ಅಪರ್ಣಾ ಈ ರೀತಿ ಮಾತನಾಡಿದ್ದು ಭೂಮಿಗೆ ಖುಷಿ ಆಗಿದೆ. ಅಷ್ಟೇ ಅಲ್ಲದೆ ಜೀವನ್‌ ಸಿಟ್ಟು ಇನ್ನಷ್ಟು ಜಾಸ್ತಿ ಆಗಿದೆ.

ವೀಕ್ಷಕರು ಫುಲ್‌ ಖುಷ್!‌ 
ಅಪೇಕ್ಷಾ ಈ ರೀತಿ ತಂದೆ-ತಾಯಿ ಬಗ್ಗೆ ಮಾತನಾಡಿದ್ದು ವೀಕ್ಷಕರಿಗೆ ಖುಷಿ ಕೊಟ್ಟಿದೆ. ಭೂಮಿಯನ್ನು ಓವರ್‌ ಟೇಕ್‌ ಮಾಡಿ, ಮಾತಾಡಿ ನಿಜಕ್ಕೂ ಜೀವನ್‌ಗೆ ಮಾಂಜಾ ಕೊಟ್ಟಿದ್ದಾಳೆ. ಈ ಎಪಿಸೋಡ್‌ ನಿಜಕ್ಕೂ ವೀಕ್ಷಕರಿಗೆ ಇಷ್ಟ ಆಗಲಿದೆ. ಅಕ್ಕ ಭೂಮಿ ಕೂಡ ಒಳ್ಳೆಯವಳು, ನನಗೆ ಏನೂ ತೊಂದರೆ ಕೊಟ್ಟಿಲ್ಲ ಅಂತ ಅಪರ್ಣಾಗೆ ಯಾವಾಗ ಅರ್ಥ ಆಗತ್ತೋ ಏನೋ! ಕಾದು ನೋಡಬೇಕಿದೆ.  

ಧಾರಾವಾಹಿ ಕಥೆ ಏನು?
ಗೌತಮ್‌ ಹಾಗೂ ಭೂಮಿ ಮದುವೆ ಆಗಿದ್ದಾರೆ. ಗೌತಮ್‌ ತಮ್ಮ ಪಾರ್ಥನನ್ನು ಭೂಮಿ ತಂಗಿ ಅಪರ್ಣಾ ಮದುವೆ ಆಗಿದ್ದಾಳೆ. ಭೂಮಿ ತಮ್ಮ ಜೀವನ್‌ನನ್ನು ಕೂಡ ಈ ಕುಟುಂಬದಲ್ಲಿ ಸಾಕಷ್ಟು ಸಮಸ್ಯೆ, ಭಿನ್ನಾಭಿಪ್ರಾಯ ಇದೆ. 

ಪಾತ್ರಧಾರಿಗಳು
ಗೌತಮ್-‌ ರಾಜೇಶ್‌ ನಟರಂಗ
ಭೂಮಿ- ಛಾಯಾ ಸಿಂಗ್‌
ಅಪರ್ಣಾ- ಅಮೃತಾ ನಾಯಕ್‌
ಜೀವನ್-‌ ಯಶವಂತ್‌ 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!