
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರೋ ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ, ಜಯದೇವ್ ಸುಖದ ಸುಪ್ಪತ್ತಿಗೆಯಲ್ಲಿ ಬದುಕುತ್ತಿದ್ದಾರೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನುವಂತೆ, ಗೌತಮ್ ದಿವಾನ್ ಕಷ್ಟಪಟ್ಟ ಹಣವನ್ನು ಇವರು ಮನಸ್ಸಿಗೆ ಬಂದಂತೆ ಖರ್ಚು ಮಾಡುತ್ತಿದ್ದಾರೆ.
ಗೌತಮ್ ದಿವಾನ್ ಹಾಗೂ ಭೂಮಿಕಾ ನಡುವೆ ಷಡ್ಯಂತ್ರ ಮಾಡಿ, ಅವರ ಮಗಳನ್ನು ಕದ್ದು ಕಾಡಿನಲ್ಲಿ ಬಿಸಾಕಿದ್ದಾರೆ. ಇದಾದ ಬಳಿಕ ಉಳಿದವರನ್ನು ಕೂಡ ಸುಮ್ಮನೆ ಬಿಡೋದಿಲ್ಲ ಎಂದು ಭೂಮಿಕಾಗೆ ಧಮ್ಕಿ ಹಾಕಿದ್ದರು. ಹೀಗಾಗಿಯೇ ಭೂಮಿಕಾ ಮನೆ ಬಿಟ್ಟು ಹೋಗಿದ್ದಳು. ತನ್ನವರು ಆರಾಮಾಗಿರಬೇಕು ಎಂದು ಭೂಮಿ ಮನೆ ಬಿಟ್ಟು ಹೋಗಿದ್ದಳು.
ಐದು ವರ್ಷಗಳಿಂದ ಹೆಂಡ್ತಿ, ಮಗನನ್ನು ಹುಡುಕಿ ಗೌತಮ್ ಸುಸ್ತಾಗಿದ್ದಾನೆ. ಕುಶಾಲನಗರದಲ್ಲಿ ಭೂಮಿಕಾ ಹಾಗೂ ಗೌತಮ್ ಭೇಟಿಯಾಗಿದೆ. “ನನಗೆ ನಿಮ್ನನ್ನು ಕಂಡರೆ ಪ್ರೀತಿ ಇಲ್ಲ, ಮ್ಮ ಮೇಲೆ ನನಗೆ ದ್ವೇಷ ಅಷ್ಟೇ ಇರೋದು, ನಮ್ಮಿಂದ ದೂರ ಇರಿ” ಎಂದು ಕೂಡ ಹೇಳಿದ್ದಾರೆ. ಭೂಮಿಕಾ ತನ್ನನ್ನು ದ್ವೇಷ ಮಾಡುತ್ತಿದ್ದಾಳೆ, ನನ್ನ ಪ್ರೀತಿ ಅವರಿಗೆ ಅರ್ಥ ಆಗ್ತಿಲ್ಲ ಅಂತ ಗೌತಮ್ ಬೇಸರಮಾಡಿಕೊಂಡಿದ್ದಾನೆ, ಇನ್ನೊಂದು ಕಡೆ ಮಗನನ್ನು ನೋಡಿಲ್ಲ ಎಂದು ತಳಮಳ ವ್ಯಕ್ತಪಡಿಸಿದ್ದನು.
ಅಚಾನಕ್ ಆಗಿ ಭೂಮಿಕಾ ಮಗ ಆಕಾಶ್ ಹಾಗೂ ಗೌತಮ್ ಭೇಟಿ ಆಗುತ್ತದೆ. ನನ್ನ ತಾಯಿ ನನ್ನನ್ನು ಅಪ್ಪು ಅಂತ ಕರೆಯುತ್ತಾರೆ ಎಂದು ಅವನು ಗೌತಮ್‌ಗೆ ಪರಿಚಯ ಮಾಡಿಕೊಟ್ಟಿದ್ದನು. ಪೇರೆಂಟ್ಸ್ ಕರೆದುಕೊಂಡು ಬರಬೇಕು ಅಂತ ಟೀಚರ್ ಹೇಳಿದ್ದಾರೆ ಎಂದು ಅವನು ಗೌತಮ್‌ನನ್ನೇ ಡ್ಯಾಡಿ ಎಂದು ಕರೆದುಕೊಂಡು ಹೋಗಿದ್ದನು. ಕ್ಯಾಬ್ ಡ್ರೈವರ್‌ಗೆ ಇಂಗ್ಲಿಷ್ ಬರೋದಿಲ್ಲ, ಪ್ರಿನ್ಸಿಪಲ್ ಇಂಗ್ಲಿಷ್‌ನಲ್ಲಿ ಮಾತನಾಡಿದ್ರೆ ಏನು ಮಾಡೋದು ಅಂತ ಅವನು ತಲೆಬಿಸಿ ಮಾಡಿಕೊಂಡಿದ್ದನು. ಆದರೆ ಗೌತಮ್ ಇಂಗ್ಲಿಷ್‌ನಲ್ಲಿ ಮಾತನಾಡಿದ್ದು ಆಕಾಶ್‌ಗೆ ಅಚ್ಚರಿ ತರಿಸಿತ್ತು.
ಬೇಕಾಬಿಟ್ಟು ಪಾರ್ಟಿ ಮಾಡಿಕೊಂಡು, ಶಕುಂತಲಾ ಹಾಗೂ ಅವಳ ಮಗ ಜಯದೇವ್ ಬಿಂದಾಸ್ ಆಗಿ ಬದುಕುತ್ತಿದ್ದಾರೆ. ಮನಸೋ ಇಚ್ಛೆ ಅವರು ಹಣ ಖರ್ಚು ಮಾಡುತ್ತಿದ್ದಾರೆ. ಹೀಗಿರುವಾಗ ಶಕುಂತಲಾಗೆ, “ಗೌತಮ್ ಹಾಗೂ ಭೂಮಿಕಾ ಒಂದಾಗಿ ಮನೆಗೆ ಬಂದಿದ್ದಾರೆ. ಆಮೇಲೆ ನಮ್ಮಿಂದ ಆಸ್ತಿಯನ್ನು ತಗೊಂಡು ಮನೆಯಿಂದ ಹೊರಗಡೆ ಹಾಕಿದ್ದಾರೆ, ನಾವು ಭಿಕ್ಷೆ ಬೇಡೋ ಥರ ಆಯ್ತು” ಎಂದು ಕನಸು ಬಿದ್ದಿದೆ. ಇದನ್ನು ಅವಳು ಮಗ ಜಯದೇವ್ ಬಳಿ ಹೇಳಿಕೊಂಡಾಗ, ಅವನು, “ಈ ಥರ ಆಗೋದಿಲ್ಲ, ಚಾನ್ಸ್ ಇಲ್ಲ” ಎಂದು ಧೈರ್ಯ ತುಂಬಿದ್ದಾನೆ. ಬಹುಶಃ ಮುಂದೆ ಈ ರೀತಿ ಆದರೂ ಆಶ್ಚರ್ಯ ಇಲ್ಲ. ಮುಂದೆ ಆಗುವ ಕಥೆಯನ್ನು ಈಗ ಬರಹಗಾರರು ಸುಳಿವು ಕೊಟ್ಟಿರಬಹುದಾ? ಎಂಬ ಪ್ರಶ್ನೆ ಎದುರಾಗಿದೆ.
ಗೌತಮ್ ದಿವಾನ್ ಹಾಗೂ ಭೂಮಿ ಮದುವೆಯಾಗಿ ಮಗು ಜನಿಸಿದೆ. ಮನೆಯವರಿಗೋಸ್ಕರ ಇವರು ಮದುವೆಯಾದರು, ಆಮೇಲೆ ಪ್ರೀತಿಸಿದರು, ಪಾಲಕರೂ ಆದರು. ಇವರ ಮದುವೆ ತಡೆಯಲು, ಮಗು ಆಗೋದನ್ನು ತಡೆಯಲು ಮಲತಾಯಿ ಶಕುಂತಲಾ ತುಂಬ ಪ್ರಯತ್ನಪಟ್ಟಳು. ಆದರೆ ಏನೂ ಮಾಡಲಾಗಲಿಲ್ಲ. ಇನ್ನೊಂದು ಕಡೆ ಕುತಂತ್ರ ಮಾಡಿ ಗೌತಮ್ ಮಗಳನ್ನು ದೂರ ಮಾಡಿದ್ದಾರೆ, ಭೂಮಿಕಾಳನ್ನು ಮನೆಯಿಂದ ಓಡಿಸಿದ್ದಾರೆ. ಹಾಗಾದರೆ ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.
ಗೌತಮ್ ದಿವಾನ್- ರಾಜೇಶ್ ನಟರಂಗ
ಭೂಮಿಕಾ ಸದಾಶಿವ- ಛಾಯಾ ಸಿಂಗ್
ಶಕುಂತಲಾ- ವನಿತಾ ವಾಸು
ಜಯದೇವ್- ರಾಣವ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.