Amruthadhaare Serial: ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡ್ತಂತೆ! ಶಕುಂತಲಾ, ಜಯದೇವ್‌ ಸ್ಥಿತಿ ಯಾವ ಶತ್ರುಗೂ ಬೇಡ

Published : Sep 14, 2025, 01:15 PM IST
amruthadhaare serial

ಸಾರಾಂಶ

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್-ಭೂಮಿಕಾರನ್ನು ಬೇರೆ ಮಾಡಿ, ಅವರಿಂದ ಮಗಳನ್ನು ದೂರ ಮಾಡಿರೋ ಜಯದೇವ್, ಶಕುಂತಲಾಗೆ ಈಗ ಕೇಡುಕಾಲ ಶುರುವಾಗಿದೆ. 

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ತನ್ನ ಮಗ ಆಕಾಶ್‌, ಮಲ್ಲಿ ಜೊತೆ ಕುಶಾಲನಗರದಲ್ಲಿ ಮನೆಯವರಿಗೆ ತಿಳಿದಯಂತೆ ವಾಸ ಮಾಡುತ್ತಿದ್ದಾಳೆ. ಮಗಳು ಹುಟ್ಟಿರೋದು, ಕಿಡ್ನ್ಯಾಪ್‌ ಆಗಿರೋದನ್ನು ಹೇಳಿಲ್ಲ ಅಂತ ಬೇಸರ ಮಾಡಿಕೊಂಡು ಭೂಮಿಕಾ ಮನೆ ಬಿಟ್ಟು ಹೋಗಿದ್ದಾಳೆ ಅಂತ ಗೌತಮ್‌ ಭಾವಿಸಿದ್ದಾನೆ. ಅದಾದ ನಂತರ ಶಕುಂತಲಾ ಆಸ್ತಿಗೋಸ್ಕರ ಈ ರೀತಿ ಮೋಸ ಮಾಡಿದ್ದಾಳೆ ಅಂತ ಗೌತಮ್‌ಗೆ ಅರ್ಥವಾಗಿದೆ. ಗೌತಮ್‌ ಈಗ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದಾನೆ.

ಆರ್ಥಿಕ ಸಮಸ್ಯೆ ಇದೆ!

ಡ್ರೈವರ್‌ ಆಗಿ ಹೊಸ ಹೊಸ ಊರಿಗೆ ಹೋಗೋದು, ಅಲ್ಲಿ ಭೂಮಿಕಾ ಹುಡುಕಾಟ ಮಾಡೋದು ಗೌತಮ್‌ ಕೆಲಸವಾಗಿದೆ. ಕಳೆದ ಐದು ವರ್ಷದಿಂದ ಅವನು ಇದೇ ರೀತಿ ಮಾಡುತ್ತಿದ್ದಾನೆ. ಆದರೆ ಇನ್ನೂ ಭೂಮಿಕಾ ಮಾತ್ರ ಸಿಕ್ಕಿಲ್ಲ. ಭೂಮಿಕಾ ಮಗ ಆಕಾಶ್‌ ತುಂಬ ತುಂಟ. ಅವನು ಸಿಕ್ಕಾಪಟ್ಟೆ ಕಿಲಾಡಿ. ತಾಯಿ ಟೀಚರ್‌ ಆಗಿ ಕೆಲಸ ಮಾಡುತ್ತಿದ್ದಾಳೆ, ಚಿಕ್ಕಮ್ಮ ಮಲ್ಲಿ ಐಎಎಸ್‌ ಪರೀಕ್ಷೆಗೆ ತಯಾರಿ ಮಾಡುತ್ತಿದ್ದಾಳೆ. ಇನ್ನೊಂದು ಕಡೆ ಆರ್ಥಿಕ ಸಮಸ್ಯೆ ಇದೆ ಅಂತ ಅವನಿಗೂ ಅರ್ಥ ಆಗಿದೆ.

ಅಪ್ಪನಂತೆ ಮಗ!

“ಚೆನ್ನಾಗಿ ಹಾಲು ಕುಡಿದು, ಆದಷ್ಟು ಬೇಗ ದೊಡ್ಡವನಾಗ್ತೀನಿ. ನಿಮ್ಮನ್ನು ನಾನೇ ನೋಡಿಕೊಳ್ತೀನಿ. ನಿಮಗೆ ಎಷ್ಟು ಬೇಕೋ ಅಷ್ಟು ಟಕಾ ಟಕ್‌ ಅಂತ ಅಕೌಂಟ್‌ಗೆ ದುಡ್ಡು ಹಾಕ್ತೀನಿ” ಎಂದು ಮಗ ಆಕಾಶ್‌ ತನ್ನ ತಾಯಿಗೆ ಹೇಳಿದ್ದಾನೆ. ಈ ಹಿಂದೆ ಭೂಮಿಕಾಗೆ ಬೇಕಾಗಬಹುದು ಅಂತ ಗೌತಮ್‌ ಒಂದು ಕೋಟಿ ರೂಪಾಯಿ ಹಣವನ್ನು ಭೂಮಿಕಾ ಖಾತೆಗೆ ಹಾಕಿದ್ದನು. ಮಿಡಲ್‌ ಕ್ಲಾಸ್‌ ಹುಡುಗಿ ಭೂಮಿಕಾ, ಅಷ್ಟು ದುಡ್ಡು ನೋಡಿ ಚಿಂತೆ ಮಾಡಿಕೊಂಡಿದ್ದಳು. ಆಮೇಲೆ ಆ ಹಣವನ್ನು ಗೌತಮ್‌ಗೆ ಮರಳಿ ಕೊಟ್ಟಿದ್ದಳು.

ಜಯದೇವ್‌ಗೆ ಬಿಗ್‌ ಶಾಕ್!‌

ಇನ್ನೊಂದು ಕಡೆ ಶಕುಂತಲಾ, ಜಯದೇವ್‌ ಮನೆಗೆ ಗೌತಮ್‌ ದಿವಾನ್‌ ಹೆಸರಿಗೆ ಒಂದಿಷ್ಟು ಪತ್ರಗಳು ಬರುತ್ತಿವೆ. ಐದು ವರ್ಷಗಳಿಂದ ಕಂಪೆನಿ, ಸಾಮಾಜಿಕ ಕೆಲಸ ಸೇರಿ ಎಲ್ಲದರಿಂದಲೂ ದೂರ ಇರುವ ಗೌತಮ್‌ಗೆ ಪತ್ರ ಬರುತ್ತಿರೋದು ಜಯದೇವ್‌ಗೆ ಸಿಟ್ಟು ತರಿಸಿದೆ. ಗೌತಮ್‌ನನ್ನು ಜನರು ಇಷ್ಟಪಡೋದನ್ನು ಅವನಿಗೆ ನೋಡಲಾಗ್ತಿಲ್ಲ. ಜಯದೇವ್‌ ಆಸ್ತಿಯನ್ನೆಲ್ಲ ನುಂಗಿ ನೀರು ಕುಡಿದಿರುವ ಅವರಿಗೆ ಬ್ಯಾಂಕ್‌ನಿಂದ ನೋಟೀಸ್‌ ಬಂದಿದೆ. ಇದ್ದ ಆಸ್ತಿಯನ್ನೆಲ್ಲ ಕರಗಿಸಿರೋ ಜಯದೇವ್‌ ಈಗ ಬ್ಯಾಂಕ್‌ನಿಂದ 600 ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದಾನೆ. ಈ ಹಣವನ್ನು ತೀರಿಸಿ ಅಂತ ಬ್ಯಾಂಕ್‌ನವರು ಮನೆ ಬಾಗಿಲಿಗೆ ಬಂದು ನೋಟೀಸ್‌ ನೀಡಿದ್ದಾರೆ.

ಬೀದಿಗೆ ಬಂದ ಜಯದೇವ್-ಶಕುಂತಲಾ

ಕಂಪೆನಿ ಹೇಗೆ ನಡೆಸಬೇಕು? ಉದ್ಯೋಗಿಗಳನ್ನು ಹೇಗೆ ನೋಡಿಕೊಳ್ಳಬೇಕು ಎನ್ನೋದು ಜಯದೇವ್‌ಗೆ ಗೊತ್ತಿಲ್ಲ. ಜಯದೇವ್‌ ಜೊತೆ ಇರುವ ಪಾರ್ಥ ಕೂಡ ಸುಮ್ಮನೆ ಇರುವಂತಾಗಿದೆ. ಹೀಗಾಗಿ ಇಷ್ಟೆಲ್ಲ ಸಾಲ ಆಗಿದೆ. ಹಾಗಾದರೆ ಮುಂದೆ ಏನಾಗುವುದು ಎಂಬ ಪ್ರಶ್ನೆ ಎದುರಾಗಿದೆ. ಜಯದೇವ್‌, ಶಕುಂತಲಾ ಮಾತ್ರ ಬೀದಿಗೆ ಬರ್ತಾರೆ. ಅವರನ್ನು ಮೇಲೆ ಎತ್ತಲು ಗೌತಮ್‌ ಬರಬೇಕಿದೆ. ಒಟ್ಟಿನಲ್ಲಿ ಕರ್ಮ ಯಾರನ್ನೂ ಸುಮ್ಮನೆ ಬಿಡೋದಿಲ್ಲ ಎನ್ನೋದು ಇದಕ್ಕೆ. ಈಗ ಇರುವ ಆಸ್ತಿಯನ್ನು ಮಾರಿ, ಮನೆಯಿಂದ ಹೊರಗಡೆ ಬರೋದೊಂದು ಬಾಕಿ ಇದೆ.

ಕಥೆ ಏನು?

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ಗೆ ಶಕುಂತಲಾ ಎಂಬ ಮಲತಾಯಿ ಇದ್ದಳು. ಇವಳಿಗೆ ನಾಲ್ವರು ಮಕ್ಕಳು. ಗೌತಮ್‌ ದಿವಾನ್‌ ಹಾಗೂ ಭೂಮಿಕಾ ಮದುವೆಯಾಗಿ ಇವರಿಗೆ ಅವಳಿ ಮಕ್ಕಳು ಹುಟ್ಟಿದ್ದರು. ಭೂಮಿಕಾ ಮಗಳಿಗೆ ಜನ್ಮ ಕೊಟ್ಟಾಗ, ಆ ಮಗುವನ್ನು ಜಯದೇವ್‌ ಕಿಡ್ನ್ಯಾಪ್‌ ಮಾಡಿ, ಕಾಡಿನಲ್ಲಿ ಎಸೆದಿದ್ದನು. ಈ ವಿಷಯವನ್ನು ಗೌತಮ್‌ ಎಲ್ಲರಿಂದ ಮುಚ್ಚಿಟ್ಟಿದ್ದನು. ಶಕುಂತಲಾಳೇ ಮೋಸದಿಂದ ಭೂಮಿಕಾಗೆ ಹೇಳಿದ್ದಳು. ಈ ಮನೆಯಲ್ಲಿದ್ದರೆ ಮಗನನ್ನು ಕೂಡ ಇವಳು ಜೀವಂತವಾಗಿ ಉಳಿಸೋದಿಲ್ಲ ಅಂತ ಅರ್ಥ ಆಗಿ ಅವಳು ಮನೆಯಿಂದ ಹೊರಟು ಹೋಗಿದ್ದಳು.

ಪಾತ್ರಧಾರಿಗಳು

ಗೌತಮ್‌ ದಿವಾನ್-‌ ರಾಜೇಶ್‌ ನಟರಂಗ

ಭೂಮಿಕಾ- ಛಾಯಾ ಸಿಂಗ್‌

ಶಕುಂತಲಾ- ವನಿತಾ ವಾಸು

ಜಯದೇವ್-‌ ರಾಣವ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರಿಗೈಯಲ್ಲಿ ಟಾಯ್ಲೆಟ್​ ತೊಳೆದ Bigg Boss ಡಾಗ್​ ಸತೀಶ್​​: ನಿಮ್ಮ ಮನೆಗೂ ಬೇಕಾದ್ರೆ ಬರ್ತಾರಂತೆ!
Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?