'ಬಿಗ್ ಬಾಸ್ ಕನ್ನಡ ಸೀಸನ್ 12' ಮತ್ತೊಂದು ಪ್ರೋಮೋ ರಿಲೀಸ್​​: ಕಾಗೆ-ನರಿ ಕಥೆ ಹೇಳಿದ್ಯಾಕೆ ಕಿಚ್ಚ ಸುದೀಪ್!

Published : Sep 13, 2025, 06:50 PM IST
Kichcha Sudeep

ಸಾರಾಂಶ

'ಬಿಗ್ ಬಾಸ್ ಕನ್ನಡ ಸೀಸನ್ 12' ಶೀಘ್ರದಲ್ಲೇ ಆರಂಭ ಆಗಲಿದೆ. ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲು ಸಜ್ಜಾಗಿದ್ದಾರೆ. 'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಆಗಲಿದ್ದು, ಇದೀಗ 2ನೇ ಪ್ರೋಮೋ ಬಿಡುಗಡೆಯಾಗಿದೆ.

ಈಗಾಗಲೇ ಕನ್ನಡದಲ್ಲಿ 11 ಬಿಗ್ ಬಾಸ್ ಸೀಸನ್​​ಗಳು ಯಶಸ್ವಿಯಾಗಿ ಮುಗಿದಿವೆ. ಈಗ 12ನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. 'ಬಿಗ್ ಬಾಸ್ ಕನ್ನಡ ಸೀಸನ್ 12' ಶೀಘ್ರದಲ್ಲೇ ಆರಂಭ ಆಗಲಿದೆ. ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲು ಸಜ್ಜಾಗಿದ್ದಾರೆ. 'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಆಗಲಿದ್ದು, ಇದೀಗ 2ನೇ ಪ್ರೋಮೋ ಬಿಡುಗಡೆಯಾಗಿದೆ.

ಕಿಚ್ಚ ಸುದೀಪ್ ವಿಶೇಷವಾದ ಗೆಟಪ್​​ನಲ್ಲಿ ಬಿಗ್ ಬಾಸ್ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ‘ಹನ್ನೊಂದು ಸೀಸನ್ ನೋಡಿರೋ ನಮಗೆ, ಎಲ್ಲಾ ಗೊತ್ತು ಅನ್ನೋರಿಗೆ 'ಓ ಭ್ರಮೆ..' ಅಂತಾರೆ ಬಿಗ್ ಬಾಸ್! ಇದು ಸೀಸನ್ ಹನ್ನೆರಡು, Expect the Unexpected!’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ಹಂಚಿಕೊಳ್ಳಲಾಗಿದೆ.

ಈ ಸಲ ನೀವಿದ್ದೀರಾ.. ನೀವಿದ್ದೀರಾ ಅಂತಾ ಕೇಳ್ತಾ ಇದ್ದೋರು, ಈಗ ನೆಕ್ಸ್ಟ್ ಏನು.. ನೆಕ್ಸ್ಟ್ ಏನು.. ಅಂತಾ ಕೇಳ್ತಾ ಇದ್ದೀರಾ. ಒಂದು ಕತೆ ಹೇಳ್ಲಾ.. ಎಂದು ಕಿಚ್ಚ ಸುದೀಪ್ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಊರಿನಲ್ಲಿ ಒಂದು ಕಾಗೆ ಇತ್ತು. ನೀವೆಲ್ಲಾ ಶಾಲೆಯಲ್ಲಿ ಕೇಳಿದ್ದೀರಲ್ಲ. ಅದೇ ಕಾಗೆನೇ. ಆ ಕಾಗೆಗೆ ಹಸಿವಾಗಿದ್ದಾಗ ವಡೆ ಮಾಡುತ್ತಿರುವ ಅಜ್ಜಿಯ ಬಳಿ ಹೋಗಿ, ಅಜ್ಜಿ.. ಅಜ್ಜಿ.. ನಂಗೋದು ವಡೆ ಕೊಡ್ತೀಯಾ ಅಂತ ಕೇಳಿದಾಗ ಅಜ್ಜಿ ಪ್ರೀತಿಯಿಂದ ಕಾಗೆಗೆ ಒಂದು ವಡೆ ಕೊಟ್ರು. ಕಾಗೆ ಆ ವಡೆನಾ ತಗೊಂಡು, ಹಾರ್ಕೊಂಡು ಹೋಗಿ ಮರದ ಮೇಲೆ ಕೂತು ಇನ್ನೇನು ವಡೆ ತಿನ್ನಬೇಕು ಅನ್ನೋ ಅಷ್ಟರಲ್ಲಿ ಒಬ್ಬನ ಎಂಟ್ರಿ.. ಅದು ವಿಲನ್.

ಕಾಗೆ ಬಾಯಲಿದ್ದ ವಡೆಯನ್ನು ಕಿತ್ತುಕೊಳ್ಳಬೇಕು ಎಂದು ಸ್ಕೆಚ್ ಹಾಕಿದ್ದ ನರಿ, ಕಾಕಾ.. ಕಾಕಾ.. ನೀನು ಕೋಗಿಲೆ ತರಹ ಹಾಡನ್ನ ಹಾಡ್ತೀಯಾ.. ಹಾಗಾಗಿ ನನಿಗೋಸ್ಕರ ಒಂದು ಹಾಡು ಹಾಡ್ತೀಯಾ ಅಂತ ಕೇಳಿತು.. ನಿಮಗೆಲ್ಲ ಗೊತ್ತಿರೋ ಹಾಗೆ ಪಾಪ ಕಾಗೆ, ನರಿ ಮಾತನ್ನ ಕೇಳೋಕು, ಹಾಡೋದು ಶುರು ಮಾಡೋಕು, ವಡೆ ಕಾಗೆ ಬಾಯಿಂದ ಬೀಳೋಕು, ವಡೆ ನರಿ ಬಾಯಿಗೆ ಸೇರಬೇಕು ಅನ್ನೋವಾಗ... ನಿಮಗೆಲ್ಲ ಕ್ಲೈಮಾಕ್ಸ್ ಗೊತ್ತಿದೆ ಅಂತ ಅಂದುಕೊಂಡ್ರೆ... ಓ ಭ್ರಮೆ. ಈ ಸಲ ಬಿಗ್ ಬಾಸ್ ಹಾಗೇನೆ ನಾವು ‘ಹನ್ನೊಂದು ಸೀಸನ್ ನೋಡಿರೋ ನಮಗೆ, ಎಲ್ಲಾ ಗೊತ್ತು ಅನ್ನೋರಿಗೆ 'ಓ ಭ್ರಮೆ..' ಅಂತಾರೆ ಬಿಗ್ ಬಾಸ್ ಎಂದು ಈ ಪ್ರೋಮೋದಲ್ಲಿ ಹೇಳಲಾಗಿದೆ.
 

 

ಯಾವೆಲ್ಲ ಸ್ಪರ್ಧಿಗಳು ಬರಬಹುದು

ಸೆಪ್ಟೆಂಬರ್ 28ರ ಭಾನುವಾರದಂದು 'ಬಿಗ್ ಬಾಸ್ ಕನ್ನಡ ಸೀಸನ್ 12' ರಿಯಾಲಿಟಿ ಶೋ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಬರಬಹುದು ಎಂಬುದರ ಲೆಕ್ಕಾಚಾರ ಈಗಲೇ ಶುರುವಾಗಿದೆ. ಸುದೀಪ್ ಅವರು ‘ಮಾರ್ಕ್’ ಮತ್ತು ‘ಬಿಲ್ಲ ರಂಗ ಭಾಷಾ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ನಡುವೆಯೇ ಅವರು ಬಿಗ್ ಬಾಸ್ ಶೋ ನಡೆಸಿಕೊಡಲು ಸಜ್ಜಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!