
ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Serial ) ಜಯದೇವ್ ಹಾಗೂ ಶಕುಂತಲಾಗೆ ಗೌತಮ್ ಆಸ್ತಿ ಸಿಕ್ಕಿದ್ದರೂ ಕೂಡ ಅದನ್ನು ಅನುಭವಿಸೋಕೆ ಆಗ್ತಿಲ್ಲ. ಆರಂಭದಲ್ಲಿ ಗೌತಮ್ ಆಸ್ತಿಯನ್ನು ಭೂಮಿಗೆ ಹಾಗೂ ಭೂಮಿ ಮಗುಗೆ ಆಸ್ತಿಯನ್ನು ಬರೆದುಕೊಡಲಾಗಿತ್ತು. ಇದಕ್ಕೂ ಮೊದಲು ಜಯದೇವ್‌ಗೆ ಗೌತಮ್ ತನ್ನ ಪಿತ್ರಾರ್ಜಿತ ಆಸ್ತಿಯನ್ನು ಬರೆದುಕೊಟ್ಟಿದ್ದನು.
ಗೌತಮ್ 600 ಕೋಟಿ ರೂಪಾಯಿ ಸಾಲ ಮಾಡಿದ್ದನು. ಇದನ್ನೀಗ ಜಯದೇವ್, ಶಕುಂತಲಾ ತೀರಿಸಬೇಕಿದೆ. ಆಸ್ತಿ ಭೂಮಿ ಹೆಸರಿನಲ್ಲಿ ಇರೋದಿಕ್ಕೆ ಅವರಿಗೆ ಅನುಭವಿಸೋಕೆ ಆಗ್ತಿಲ್ಲ. ಭೂಮಿಕಾ ಹಾಗೂ ಅವನ ಮಗ ನಾಳೆ ಬಂದು ಆಸ್ತಿಯನ್ನು ಕೇಳಬಹುದು ಅಂತ ಶಕುಂತಲಾಗೆ ಭಯ ಶುರುವಾಗಿದೆ.
ನನ್ನ ಆಸ್ತಿಯನ್ನು ಮಾತ್ರ ನಾನು ಸಾಲಕ್ಕೆ ಕೊಡೋದಿಲ್ಲ, ಗೌತಮ್ ಮಾಡಿದ ಸಾಲಕ್ಕೆ ನಾನು ಯಾಕೆ ನನ್ನ ಆಸ್ತಿ ಕೊಡಲಿ ಎನ್ನೋದು ಜಯದೇವ್ ವಾದ. ಈಗ ಮನೆ ಬಿಟ್ಟು ಹೋಗಿರುವ ಭೂಮಿಕಾ ನಾಳೆ ಬಂದು ಆಸ್ತಿ ಕೇಳಿದರೆ ಏನು ಮಾಡೋದು ಅಂತ ಶಕುಂತಲಾ-ಜಯದೇವ್‌ಗೆ ಭಯ ಶುರುವಾಗಿದೆ. ಅಂದು ಮನೆ ಬಿಟ್ಟು ಹೋಗುವಾಗ ಭೂಮಿಕಾ ಬಳಿ ಎಲ್ಲ ಪತ್ರಕ್ಕೂ ಸಹಿ ಹಾಕಿಸಿಕೊಂಡು ಕಳಿಸಿದ್ರೆ ಚೆನ್ನಾಗಿ ಇರುತ್ತಿತ್ತು ಅಂತ ಜಯದೇವ್ ಲೆಕ್ಕ ಹಾಕಿದ್ದಾನೆ.
ಗೌತಮ್ ಮನೆ ಬಿಟ್ಟು ಹೋಗಿ ಐದು ವರ್ಷವಾದರೂ ಕೂಡ, ಅವನಿಗೆ ಪತ್ರಗಳು ಬರುತ್ತಲೇ ಇರುತ್ತವೆ. ಎಲ್ಲರೂ ಅವನಿಗೆ ಗೌರವ ಕೊಡುತ್ತಾರೆ. ಬ್ಯಾಂಕ್‌ನವರು ಸಾಲ ಕಟ್ಟಬೇಕು ಎಂದು ಹೇಳಿದ್ದಾರೆ, ಗೌತಮ್ ಸಮಯಾವಕಾಶ ಕೇಳಿದರೆ ಮಾತ್ರ ಬ್ಯಾಂಕ್‌ನವರು ಓಕೆ ಎಂದು ಹೇಳುತ್ತಾರೆ. ಹೀಗಾಗಿ ಭೂಮಿಕಾ ಹಾಗೂ ಗೌತಮ್ ಇಬ್ಬರನ್ನು ಹುಡುಕಬೇಕು ಅಂತ ಜಯದೇವ್, ಶಕುಂತಲಾ ಪ್ಲ್ಯಾನ್ ಮಾಡುತ್ತಿದ್ದಾರೆ.
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾಗೆ ಅವಳಿ ಮಕ್ಕಳು ಜನಿಸಿದರು. ಭೂಮಿಗೆ ತನ್ನ ಹೊಟ್ಟೆಯಲ್ಲಿ ಅವಳಿ ಮಕ್ಕಳಿರೋದು ಗೊತ್ತೇ ಇರಲಿಲ್ಲ. ಭೂಮಿಗೆ ಮೊದಲು ಮಗಳು ಹುಟ್ಟಿದಾಗ, ಜಯದೇವ್ ಅದನ್ನು ತಗೊಂಡು ಕಾಡಿನಲ್ಲಿ ಬಿಸಾಕಿದ್ದನು. ಆಮೇಲೆ ಈ ವಿಷಯ ಭೂಮಿಗೆ ಗೊತ್ತಾಯ್ತು. ಗೌತಮ್ ಆಸ್ತಿ ಮೇಲೆ ಅವನ ಮಲತಾಯಿ ಶಕುಂತಲಾ ಹಾಗೂ ಅವಳ ಮಗ ಜಯದೇವ್‌ಗೆ ಕಣ್ಣಿತ್ತು. “ನೀನು ಈ ಮನೆಯಿಂದ, ಮನೆಯವರಿಂದ ದೂರ ಆದರೆ ಮಾತ್ರ ನಿನ್ನವರು ಬದುಕಿ ಉಳಿಯುತ್ತಾರೆ” ಅಂತ ಭೂಮಿಗೆ ಶಕುಂತಲಾ ವಾರ್ನ್ ಮಾಡಿದ್ದಳು. ಹೀಗಾಗಿ ಭೂಮಿ ಮನೆಯಿಂದ ಹೊರಗಡೆ ಹೋಗಿದ್ದಳು. ಈಗ ಗೌತಮ್ 600 ಕೋಟಿ ರೂಪಾಯಿ ಸಾಲ ಮಾಡಿರೋದು ಶಕುಂತಲಾ ತಲೆಗೆ ಬಂದಿದೆ. ಈ ಸಾಲದಿಂದ ಇವರು ತಪ್ಪಿಸಿಕೊಳ್ಳಲು ಮತ್ತೆ ಗೌತಮ್‌ನನ್ನು ಹುಡುಕುತ್ತಿದ್ದಾರೆ. ಹಾಗಾದರೆ ಮುಂದೆ ಏನಾಗಬಹುದು?
ಶಕುಂತಲಾ ಪಾತ್ರದಲ್ಲಿ ವನಿತಾ ವಾಸು, ಜಯದೇವ್ ಪಾತ್ರದಲ್ಲಿ ರಾಣವ್ ಗೌಡ, ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.