Amruthadhaare Serial: ಮತ್ತೆ ಮನೆ ಖಾಲಿ ಮಾಡಿದ ಭೂಮಿಕಾ; ಗೌತಮ್‌ಗೆ ಹುಡುಕೋಕೆ ಇನ್ನೂ 5 ವರ್ಷ ಬೇಕಾ?

Published : Sep 30, 2025, 11:23 PM IST
amruthadhaare serial kannada

ಸಾರಾಂಶ

ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷಗಳ ಕಾಲ ಹುಡುಕಾಟದಿಂದ ಕೊನೆಗೂ ಗೌತಮ್‌ಗೆ ಭೂಮಿ ಕಾಣಿಸಿದ್ದಳು. ಈಗ ಮತ್ತೆ ಭೂಮಿ, ಗೌತಮ್‌ನಿಂದ ದೂರ ಆಗಿದ್ದಾಳೆ. ಹೀಗಾದರೆ ಭೂಮಿ-ಗೌತಮ್‌ ಒಂದಾಗೋದು ಕನಸಾಗಿ ಉಳಿಯತ್ತಾ? 

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಮಗನನ್ನು ಎಂಎಲ್‌ಎ ಕಿಡ್ನ್ಯಾಪ್‌ ಮಾಡಿದ್ದನು. ಈ ವಿಚಾರ ಗೌತಮ್‌ಗೆ ಗೊತ್ತಾಗಿತ್ತು. ಫೈಟ್‌ ಮಾಡಿ ಅವನು ಮಗನನ್ನು ಬಿಡಿಸಿಕೊಂಡು ಬಂದು, ಮನೆಗೆ ಕರೆದುಕೊಂಡು ಹೋಗಿದ್ದನು. ಅಪಾಯದಲ್ಲಿದ್ದ ಮಗ ಮನೆಗೆ ಬಂದಿದ್ದು ಭೂಮಿಗೆ ನಿಟ್ಟುಸಿರು ಬಿಡುವ ಹಾಗೆ ಮಾಡಿತ್ತು. ಆದರೆ ಈಗ ಭೂಮಿಕಾ, ಗೌತಮ್‌ನಿಂದ ಇನ್ನಷ್ಟು ದೂರ ಆಗಿದ್ದಾಳೆ.

ಭೂಮಿ ಮನೆಗೆ ಹೋದ ಗೌತಮ್!‌

ಮಗನನ್ನು ಕಾಪಾಡಿದ ಗೌತಮ್‌, ಮತ್ತೆ ಭೂಮಿಯನ್ನು ಮೀಟ್‌ ಮಾಡಲೇ ಇಲ್ಲ. ಅವಳ ಮನೆ ಮುಂದೆ ಮಗನನ್ನು ಬಿಟ್ಟು, ಆನಂದ್‌ ಜೊತೆಗೆ ಊರು ಬಿಟ್ಟು ಹೋಗಿದ್ದನು. ಆಮೇಲೆ ತಾಯಿ ಭಾಗ್ಯಳನ್ನು ಭೇಟಿ ಮಾಡಿ, ಭೂಮಿಕಾ ಸಿಕ್ಕಿದ್ದು, ಮಗನನ್ನು ನೋಡಿರುವ ವಿಷಯವನ್ನು ಹೇಳಿಕೊಂಡಿದ್ದನು. ಆಗ ಭಾಗ್ಯಮ್ಮ, ಮೊಮ್ಮಗ-ಸೊಸೆಯನ್ನು ನೋಡಬೇಕು ಅಂತ ಹೇಳಿದ್ದಳು. ತನ್ನಿಂದ ಭೂಮಿಕಾಗೆ ಸಮಸ್ಯೆ ಆಗತ್ತೆ ಅಂತ ಕುಶಾಲನಗರ ಬಿಟ್ಟು ಹೋಗಿದ್ದ ಗೌತಮ್‌, ತಾಯಿಯನ್ನು ಕರೆದುಕೊಂಡು ಮತ್ತೆ ಭೂಮಿ ಇದ್ದ ಮನೆಗೆ ಹೋಗಿದ್ದಾನೆ.

ಎಂಎಲ್‌ಎ ಪಂಚೆ ಎಳೆದ ಗೌತಮ್

ಗೌತಮ್‌ ಆ ಊರು ಬಿಟ್ಟ ದಿನವೇ, ರೌಡಿಗಳು ಬಂದು ಭೂಮಿ ಮನೆಯವರಿಗೆ ತೊಂದರೆ ಕೊಟ್ಟಿದ್ದರು. ಹೀಗಾಗಿ ಮಲ್ಲಿ, ಮಗ ಆಕಾಶ್‌ ಜೊತೆ ಭೂಮಿ ಮನೆ ಖಾಲಿ ಮಾಡಿದ್ದಳು. ಈ ವಿಚಾರ ಗೊತ್ತಾದಾಗ ಗೌತಮ್‌ಗೆ ದೊಡ್ಡ ಶಾಕ್‌ ಆಯ್ತು. ಆಮೇಲೆ ಎಂಎಲ್‌ಎ ಮನೆಗೆ ಹೋಗಿ ಅವನು ನನ್ನ ಪತ್ನಿ, ಮಗನನ್ನು ಎಲ್ಲಿ ಬಚ್ಚಿಟ್ಟಿದ್ದೀಯಾ ಅಂತ ಬೈದಿದ್ದಾನೆ. “ನಾನು ಬಚ್ಚಿಟ್ಟಿಲ್ಲ, ರೋಡ್‌ನಲ್ಲಿ ಮರ್ಯಾದೆ ಕಳೆಯುತ್ತಿದ್ದೆ” ಎಂದು ಎಂಎಲ್‌ಎ ಹೇಳಿದ್ದನು. ಅದಿಕ್ಕೆ ಗೌತಮ್‌ “ನೀನು ಬೇರೆಯವರ ಮರ್ಯಾದೆ ತೆಗೆಯಲು ಹೋದರೆ, ಜನರು ನಿನ್ನ ಮರ್ಯಾದೆ ತೆಗೆಯುತ್ತಾರೆ” ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ಅವನು ಎಂಎಲ್‌ಎ ಪಂಚೆ ಎಳೆದಿದ್ದಾನೆ. ಆಗ ಎಂಎಲ್‌ಎ ಮುದುಡಿಕೊಂಡು ಕೂತಿದ್ದಾನೆ.

ದ್ವೇಷ ಮಾಡ್ತೀನಿ ಎಂದ ಭೂಮಿ

ಐದು ವರ್ಷಗಳ ಕಾಲ ಪತ್ನಿ ಎಲ್ಲಿದ್ದಾಳೆ ಅಂತ ಗೌತಮ್‌ ಹುಡುಕಾಟ ಮಾಡಿದ್ದನು. ಕ್ಯಾಬ್‌ ಡ್ರೈವರ್‌ ಆಗಿ ಊರೂರು ಸುತ್ತಿದ್ದ ಅವನಿಗೆ ಕುಶಾಲನಗರದಲ್ಲಿ ಮಗ ಸಿಕ್ಕಿದ್ದನು, ಪತ್ನಿಯನ್ನು ನೋಡುವ ಅವಕಾಶ ಸಿಕ್ಕಿತ್ತು. “ಮಗಳು ಹುಟ್ಟಿದ್ದು, ಹುಟ್ಟಿದಕೂಡಲೇ ಕಿಡ್ನ್ಯಾಪ್‌ ಆಗಿರೋ ವಿಷಯವನ್ನು ಮುಚ್ಚಿಟ್ಟಿರಿ. ಒಂಭತ್ತು ತಿಂಗಳು ಹೆತ್ತು ಹೊತ್ತ ಮಗುವಿನ ಬಗ್ಗೆ ನೀವು ಹೇಳಲೇ ಇಲ್ಲ. ಇದು ಬೇಸರ ಆಯ್ತು, ನಿಮ್ಮನ್ನು ನಾನು ದ್ವೇಷ ಮಾಡ್ತೀನಿ” ಎಂದು ಗೌತಮ್‌ಗೆ ಭೂಮಿ ಹೇಳಿದ್ದಳು.

ಯಾವಾಗ ಒಂದಾಗ್ತಾರೆ?

ಭೂಮಿಕಾ ಈ ಕಾರಣ ಬಿಟ್ಟು, ಬೇರೆ ವಿಷಯಕ್ಕೆ ಮನೆ ಬಿಟ್ಟು ಹೋಗಿರಬಹುದು ಎಂದು ಗೌತಮ್‌ಗೆ ಅನಿಸಿದೆ. ನಿಜವಾದ ಕಾರಣ ಏನು ಎಂದು ಅವನು ಹುಡುಕಾಟ ಮಾಡಿದ್ದನು. ಆದರೂ ಕೂಡ ಅವನಿಗೆ ಸತ್ಯ ಅರ್ಥ ಆಗಿಲ್ಲ. ಗೌತಮ್‌ ಮಲತಾಯಿ ಶಕುಂತಲಾ, ಭೂಮಿಗೆ ಮನೆ ಬಿಟ್ಟು ಹೋಗಿಲ್ಲ ಅಂದ್ರೆ ನಿನ್ನವರು ಯಾರೂ ಇರೋದಿಲ್ಲ ಎಂದು ಹೇಳಿದ್ದಳು. ನನ್ನವರು ಆರಾಮಾಗಿರಬೇಕು ಅಂತ ಭೂಮಿ, ಗೌತಮ್‌ನಿಂದ ದೂರ ಹೋಗಿದ್ದಾಳೆ. ಒಟ್ಟಿನಲ್ಲಿ ಇವರಿಬ್ಬರ ನಡುವೆ ಇರುವ ಮನಸ್ತಾಪ ಯಾವಾಗ ಸರಿ ಹೋಗತ್ತೆ? ಯಾವಾಗ ಈ ಜೋಡಿ ಒಂದಾಗತ್ತೆ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು

ಭೂಮಿಕಾ- ಛಾಯಾ ಸಿಂಗ್‌

ಗೌತಮ್‌ ದಿವಾನ್-‌ ರಾಜೇಶ್‌ ನಟರಂಗ

ಭಾಗ್ಯಮ್ಮ- ಚಿತ್ಕಳಾ ಬಿರಾದಾರ್‌

ಆಕಾಶ್-ದುಷ್ಯಂತ್‌ ಚಕ್ರವರ್ತಿ

ಆನಂದ್-‌ ಸಿಲ್ಲಿ ಲಲ್ಲಿ ಆನಂದ್‌

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!