
ಬೆಂಗಳೂರು (ಸೆ.30): ಬಿಗ್ ಬಾಸ್ ಸೀಸನ್ 12 ಆರಂಭವಾಗಿ ಈಗಾಗಲೇ ಎರಡು ದಿನಗಳು ಕಳೆದಿದ್ದು, 18 ಕಂಟೆಸ್ಟೆಂಟ್‌ಗಳಿಗೆ ಟಾಸ್ಕ್ ಮೇಲೆ ಟಾಸ್ಕ್ ಕೊಟ್ಟು ಆಟವಾಡಿಸಲಾಗುತ್ತಿದೆ. ಆದರೆ, ಕಳೆದ ಸೀಸನ್ 11ರ ಸ್ಪರ್ಧಿಯಾಗಿರುವ ಧನರಾಜ್ ಆಚಾರ್ ಬಿಗ್ ಬಾಸ್ ಶೋ ನೋಡೋದ್ರಿಂದ ನಮಗೇನು ಸಿಗುತ್ತದೆ ಎಂದು ಉಡಾಫೆ ಮಾತನಾಡಿದ್ದಾನೆ. ಇದಕ್ಕೆ ಟ್ರೋಫಿ ವಿಜೇತ ಹನುಮಂತ ತಮ್ಮ ದೋಸ್ತನಿಗೆ ಸರಿಯಾಗಿ ಬುದ್ಧಿ ಹೇಳಿದ್ದಾನೆ.
ಕನ್ನಡ ಬಿಗ್ ಬಾಸ್ ಸೀಸನ್‌ನಲ್ಲಿ ಒಳ್ಳೆಯ ಸ್ನೇಹಿತರು ಹುಟ್ಟಿಕೊಳ್ಳುತ್ತಾರೆ. ಬಿಗ್ ಬಾಸ್ ಹೊರಗೆ ಬಂದರೂ ಅವರು ತಮ್ಮ ಸ್ನೇಹವನ್ನು ಮುಂದುವರೆಸುತ್ತಾರೆ. ಇದಕ್ಕೆ ತುಕಾಲಿ ಸಂತೋಷ್-ವರ್ತೂರು ಸಂತೋಷ್, ಕುರಿಗಾಹಿ ಹನುಮಂತ-ಧನರಾಜ್ ಆಚಾರ್, ಶೈನ್ ಶೆಟ್ಟಿ-ವಾಸುಕಿ ವೈಭವ್ ಸೇರಿ ಹಲವು ಜೋಡಿಗಳಿದ್ದಾರೆ. ಆದರೆ, ತುಂಬಾ ನೆನಪಿನಲ್ಲಿ ಇರುವವರು ಈಗಲೂ ಆಗಾಗ್ಗೆ ಸೇರುವ ಮತ್ತು ವಾರಕ್ಕೆರಡು ಬಾರಿ ವಿಡಿಯೋ ಕಾಲ್ ಮಾಡಿ ಮಾತನಾಡಿಕೊಳ್ಳುವ ಸ್ನೇಹಿತರಲ್ಲಿ ಧನರಾಜ್ ಆಚಾರ್ ಮತ್ತು ಹನುಮಂತ ಲಮಾಣಿ ಎಲ್ಲರಿಗೂ ನೆನಪಾಗುತ್ತಾರೆ.
ಬಿಗ್ ಬಾಸ್ ಸೀಸನ್ 12 ಆರಂಭವಾಗುತ್ತಿದ್ದಂತೆ ಧನರಾಜ್ ಆಚಾರ್‌ಗೆ ಕರೆ ಮಾಡಿದ ದೋಸ್ತ ಹನುಮಂತ ವಿಡಿಯೋ ಕರೆ ಮಾಡುತ್ತಾನೆ. ಈ ಕಡೆಯಿಂದ ದೋಸ್ತ ಅಂತ ಧನರಾಜ್ ಹೇಳಿದರೆ, ಏನು ದೋಸ್ತ ಅರಾಮದೀಯ ಎಂದು ಹನುಮಂತ ಕೇಳುತ್ತಾನೆ. ನಂತರ, ಬಿಗ್ ಬಾಸ್ ನೋಡ್ತಿದೀಯ ಎಂದು ಕೇಳಿದ ಧನರಾಜ್‌ಗೆ ಅದಕ್ಕಂತಾನ ನಾನು ಮೊನ್ನೆ ಟಿವಿಗೆ ರೊಕ್ಕ ಹಾಕಿಸಿ ರಿಚಾರ್ಜ್ ಮಾಡಿಸೀನಿ ಎಂದು ಹನುಮಂತ ಹೇಳುತ್ತಾನೆ. ಹೆಂಗೈತಿ ದೋಸ್ತ ಬಿಗ್ ಬಾಸ್ ಎಂದು ಧನರಾಜ್ ಕೇಳಿದ್ದಕ್ಕೆ, ಪಾಪ ನಿಮ್ಮ ಮಂಗಳೂರು ಹುಡುಗಿ ಬಂದು ಎರಡ್ಮೂರು ಹೆಜ್ಜೆ ಇಟ್ಟಾಳ, ಆಮೇಲೆ ಎಲಿಮಿನೇಷನ್ ಮಾಡಿಬಿಟ್ಟರು ದೋಸ್ತ ಎಂದು ಹನುಮಂತ ಹೇಳುತ್ತಾರೆ.
ಇಲ್ಲ ದೋಸ್ತ ಆ ಹುಡುಗಿ ಹೊರಗಡೆ ಬಂದಿರುವುದಕ್ಕೆ ಚಾನ್ಸೇ ಇಲ್ಲ ಎಂದು ಧನರಾಜ್ ಹೇಳ್ತಾರೆ. ಅದಕ್ಕೆ ಸುದೀಪ್ ಸರ್ ಮೊನ್ನೆ ಹೇಳಲಿಲ್ಲವೇನು? ಎಕ್ಸ್‌ಪೆಕ್ಟ್ ದಿ ಅನ್ ಎಕ್ಸೆಪ್ಟೆಡ್ ಅಂತಾ. ಅಕ್ಕೆ ಎಲಿಮಿನೇಷನ್ ಆಗಿರುತ್ತದೆ ದೋಸ್ತಾ ಎಂದು ಹನುಮಂತ ಹೇಳುತ್ತಾರೆ. ಆಗ ಹೊರಗೆ ಬಂದಿರಲ್ಲ ದೋಸ್ತಾ ಎಂದು ಧನರಾಜ್ ಬೇಸರದಿಂದ ಹೇಳ್ತಾರೆ. ನೀ ಹೆಂಗೂ ಮಂಗಳೂರಾಗ ಅದಿಯಲ್ಲ, ಅವರ ಮನೆಗೆ ಹೋಗಿ ನೋಡ್ಕೊಂಡು ಬಾ ದೋಸ್ತಾ ಎಂದು ಹನುಮಂತ ಕೇಳಿಕೊಳ್ಳುತ್ತಾನೆ. ಆಗ ಧನರಾಜ್ ಸುದೀಪ್ ಸರ್‌ಗೆ ಒಂದು ಕಾಲ್ ಮಾಡಿ ಕೇಳೋಣ ಎನ್ನುತ್ತಾರೆ.
ಅದಕ್ಕೆ ಹನುಮಂತ 'ಏ... ಮುಕಳೆಪ್ಪ ಬರೀ.., ಸುದೀಪ್ ಸರ್ ವಾಯ್ಸ್ ಕೇಳಿದ್ರೆ ಉಚ್ಚೆ ಹೊಯ್ಕೊಳ್ತೀಯ. ಅಂಥಾದ್ರಾಗ ಸುದೀಪ್ ಸರ್‌ಗೆ ಫೋನ್ ಹಚ್ಚಿ ಮಾತಾಡ್ತೀನಿ ಅಂತೀಯಲ್ಲೋ ಮಾರಾಯ ಎಂದು ತಲೆ ಚಚ್ಚಿಕೊಂಡು ನಗಾಡುತ್ತಾರೆ. ಮತ್ತೆ ಯಾರ ಹತ್ತಿರ ಕೇಳೋಣ ಎಂದು ಚಿಂತೆ ಮಾಡುತ್ತಾರೆ. ಆಗ ಧನರಾಜ್ ಆಚಾರ್ ಬಿಡು ದೋಸ್ತ, ಇವತ್ತು ಟಿವಿಯಾಗ ಬರ್ತದಲ್ಲ ನೋಡನಂತ ಯಾಕೆ ತಲೆ ಯಾಕೆ ಬಿಸಿ ಮಾಡಿಕೊಳ್ತೀಯ. ನಾವಾ ಅಲ್ಲಿ ಬಿಗ್ ಬಾಸ್ ಮನಿಯಾಗ ಇದ್ದು ಬಾಳುವೆ ಮಾಡಿ ಬದುಕಿ ಬಂದಿವಲ್ಲ ಅದು ದೊಡ್ಡ ಮಾತಾಗೈತಿ. ನಮ್ಮದಾ ಹರದು ಹನ್ನೆರಡು ಆಗೈತಿ ಎಂದು ಹನುಮಂತ ಹೇಳ್ತಾರೆ.
ಹೌದು, ದೋಸ್ತಾ ‘ಬಿಗ್ ಬಾಸ್ ನೋಡೋದ್ರಿಂದ ನಮಗೇನು ಸಿಗುತ್ತದೆ’ ಎಂದು ಧನರಾಜ್ ಆಚಾರ್ ಉಡಾಪೆಯಾಗಿ ಮಾತನಾಡುತ್ತಾರೆ. ಆಗ ಹನುಮಂತ, ನನಗೆ ಕಪ್ಪು ಸಿಕ್ಕಿದೆ ದೋಸ್ತಾ ಎಂದು ಹೇಳುತ್ತಾನೆ. ಅದಕ್ಕೆ ಧನರಾಜ್ ನನಗೆ ಸಿಕ್ಕಿಲ್ಲ ದೋಸ್ತಾ ಎನ್ನುತ್ತಾರೆ. ನಾನು ನಿನ್ನ ಗೆಳೆಯ ಸಿಕ್ಕಿದಿನಲ್ಲಾ ದೋಸ್ತಾ..., ಪ್ರಾಣಕ್ಕಿಂತ ಹೆಚ್ಚಾಗಿ ಪ್ರಾಣ ಕೊಡುವ ಗೆಳೆಯ ಎಂದು ಹನುಮಂತ ಹೇಳ್ತಾರೆ. ಆಗ ದೋಸ್ತಾ ನನ್ನ ಪ್ರಾಣ ಕಣೋ ನೀನು ಎಂದು ಧನರಾಜ್ ಸ್ವಲ್ಪ ಎಮೋಷನ್ ಆಗಿ ನಗಾಡುತ್ತಾರೆ. ಆಮೇಲೆ ನಮ್ಮ ಜೀವನ ಹೇಗಾಗಿದೆ ನೋಡು ದೋಸ್ತಾ? ಬಿಗ್ ಬಾಸ್ ಗೇಟಲ್ಲಿ ಕೂತು ಇದೇ ಮಾತಾಡೋದು ಆಯ್ತು. ಇವಾಗಲೂ ಇದೇ ಆಯ್ತು ಎಂದು ಧನರಾಜ್ ಹೇಳ್ತಾರೆ. ಆಗ ಹನುಮಂತ ಬಿಡು ಬಿಗ್ ಬಾಸ್ ಸುದ್ದಿನ ಮಾತಾಡೋದು ಬ್ಯಾಡ ನಾವು. ಅವ್ನೌನು ಪಾರಾಗಿ ಬಂದಿದ್ದೇ ದೊಡ್ಡದು ಹೋಗಲಿ ಎಂದು ಹನುಮಂತ ಹೇಳ್ತಾರೆ.
ಆಗ ಧನರಾಜ್ ಬಿಗ್ ಬಾಸ್ ವಿಚಾರ ಬಿಟ್ಟು ಬೇರೆ ಏನಾದ್ರೂ ಹೇಳು ದೋಸ್ತ ಎಂದರೆ, ಪುನಃ ಹನುಮಂತ ಆದ್ರೂ ದೋಸ್ತ 'ಆ ಮಂಗಳೂರು ಹುಡುಗಿ ಹೊರಗೆ ಹಾಕಿರ್ತಾರಲ್ಲಾ..? ಎಂದು ಕೇಳುತ್ತಾರೆ. ಆಗ ಪುನಃ ಅದೇ ವಿಚಾರ ಕೇಳಿದ್ದಕ್ಕೆ ಶಾಕ್ ಆದ ಧನರಾಜ್ ಆಚಾರ್ ಏ... ಮುಕಳೆಪ್ಪಾ ಎಂದು ಬೈಯುತ್ತಾ ತಮ್ಮ ಬಿಗ್ ಬಾಸ್ ಮನೆಯ ದೋಸ್ತಿ ಫೋಟೋಗಳನ್ನು ಮೆಲುಕು ಹಾಕುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.