Sudeep​ ಸರ್​ನ ನೋಡಿ ತುಂಬಾ ಬೇಜಾರ್​ ಆಯ್ತು: ಸಿಕ್ಕಾಪಟ್ಟೆ ಫೀಲ್​ ಮಾಡಿಕೊಂಡಿದ್ಯಾಕೆ ಈ ಯುವತಿಯರು ಕೇಳಿ!

Published : Sep 30, 2025, 09:57 PM IST
Ladies about Sudeeps hairstyle

ಸಾರಾಂಶ

ಬಿಗ್​ಬಾಸ್​ 12ರಲ್ಲಿ ಕಿಚ್ಚ ಸುದೀಪ್​ ಅವರ ಹೊಸ ಕರ್ಲಿ ಹೇರ್​ಸ್ಟೈಲ್​ ಚರ್ಚೆಯಲ್ಲಿದೆ. ಇದು ಅವರ ಮುಂಬರುವ ಸಿನಿಮಾದ ಗೆಟಪ್ ಆಗಿದ್ದು, ಈ ಹೊಸ ಶೈಲಿಯು ಕೆಲವು ಯುವತಿಯರಿಗೆ ನಿರಾಸೆ ಮೂಡಿಸಿದೆ ಮತ್ತು ಅವರು ತಮ್ಮ ಹಿಂದಿನ ಕೇಶವಿನ್ಯಾಸವನ್ನೇ ಇಷ್ಟಪಟ್ಟಿದ್ದಾಗಿ ಹೇಳಿದ್ದಾರೆ.

ಈ ಬಾರಿಯ ಬಹು ನಿರೀಕ್ಷಿತ ಬಿಗ್​ಬಾಸ್​ 12 (Bigg Boss 12) ಆರಂಭವಾಗಿ ಮೂರು ದಿನಗಳಾಗುತ್ತ ಬಂದಿದೆ. ಬಿಗ್​ಬಾಸ್​ ಮನೆಯಲ್ಲಿ ಆಟಗಳು, ಟಾಸ್ಕ್​, ಎಲಿಮಿನೇಷನ್​ ಟ್ವಿಸ್ಟ್​ ಎಲ್ಲವೂ ಭರ್ಜರಿಯಾಗಿಯೇ ನಡೆಯುತ್ತಿದೆ. ಸಾಮಾನ್ಯವಾಗಿ ಬಿಗ್​ಬಾಸ್​ ರಿಯಾಲಿಟಿ ಷೋ ನಡೆಸಿಕೊಡುವ ನಟರ ಡ್ರೆಸ್​, ಹೇರ್​ಸ್ಟೈಲ್​ ಸಕತ್​ ಡಿಫರೆಂಟ್​ ಆಗಿರುತ್ತದೆ. ಅವರ ಡ್ರೆಸ್​ ಡಿಸೈನ್​ ವರ್ಣನೆ ಮಾಡುವುದಕ್ಕಾಗಿಯೇ ದೊಡ್ಡ ವರ್ಗವೂ ಹುಟ್ಟಿಕೊಳ್ಳುವಷ್ಟರ ಮಟ್ಟಿಗೆ ಅವರ ಡಿಸೈನ್​ ಇರುತ್ತದೆ. ಅದೇ ರೀತಿ ಕನ್ನಡದಲ್ಲಿ ಸುದೀಪ್​ ಅವರ ಡ್ರೆಸ್​, ಹೇರ್​ಸ್ಟೈಲ್​, ಮೇಕಪ್​ ಎಲ್ಲವೂ ಪ್ರತಿಬಾರಿಯೂ ಗಮನ ಸೆಳೆಯುವುದು ಉಂಟು. ಅವರ ಗೆಟಪ್​ ವಿಭಿನ್ನ ರೀತಿಯಲ್ಲಿಇರುವುದಕ್ಕೆ ಅವರ ಅಭಿಮಾನಿಗಳು ಖುಷಿ ಪಡುವುದು ಇದೆ. ಅದರಲ್ಲಿಯೂ ವೀಕೆಂಡ್​ನಲ್ಲಿ ಅವರು ಬಿಗ್​ಬಾಸ್​ ಮನೆಯಲ್ಲಿ ಕಾಣಿಸಿಕೊಳ್ಳುವಾಗ ಅವರ ಮಾತಿಗಿಂತಲೂ ಹೆಚ್ಚಾಗಿ ಅವರ ಸ್ಟೈಲ್​ ನೋಡುವುದಕ್ಕಾಗಿಯೇ ವೀಕೆಂಡ್​ನಲ್ಲಿ ಷೋ ನೋಡುವವರು ಇದ್ದಾರೆ.

ಸುದೀಪ್​ ವಿಭಿನ್ನ ಹೇರ್​ಸ್ಟೈಲ್​

ಅದೇ ರೀತಿ ಈ ಬಾರಿಯೂ ಸುದೀಪ್​ ಅವರು ವಿಭಿನ್ನ ಹೇರ್​ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಕರ್ಲಿ ಹೇರ್​ಸ್ಟೈಲ್​. ಯಾವಾಗಲೂ ತಮ್ಮ ನೆಚ್ಚಿನ ನಟನ ಡ್ರೆಸ್​, ಹೇರ್​ಸ್ಟೈಲ್​ಗಳನ್ನು ಅಭಿಮಾನಿಗಳು ಫಾಲೋ ಮಾಡುವುದು ಇದೆ. ಅದೇ ರೀತಿ ಸುದೀಪ್​ ಅವರು ಬಿಗ್​ಬಾಸ್​ನಲ್ಲಿ ಟ್ರೆಂಡ್​ ಹುಟ್ಟುಹಾಕುವುದು ಇದೆ. ಈ ಬಾರಿ ಕರ್ಲಿ ಹೇರ್​ಸ್ಟೈಲ್​ ಕೂಡ ಟ್ರೆಂಡಿಂಗ್​ನಲ್ಲಿ ಇದೆ. ಹಾಗೆಂದು ಸುದೀಪ್​ ಅವರು ಈ ಹೇರ್​ಸ್ಟೈಲ್​ ಅನ್ನು ಬಿಗ್​ಬಾಸ್​ಗಾಗಿಯೇ ಮಾಡಿಕೊಂಡವರಲ್ಲ. ಬದಲಿಗೆ ಅದು ಅವರ ಮುಂಬರುವ ಸಿನಿಮಾದ ಹೇರ್ ಸ್ಟೈಲ್ ಎನ್ನಲಾಗಿದೆ.

ಸಿನಿಮಾಕ್ಕಾಗಿ ಹೊಸ ವಿನ್ಯಾಸ

ಈ ಹಿಂದೆ ಹಲವು ಸಂದರ್ಶನಗಳಲ್ಲಿ ಇದೇ ಹೇರ್​ಸ್ಟೈಲ್​ ಇಟ್ಟುಕೊಂಡೇ ಸುದೀಪ್​ ಮಾತನಾಡಿದ್ದರು. ತಮಿಳು ಭಾಷೆಯ ಚಾಯ್ ವಿತ್ ಚಿತ್ರಾ ಅನ್ನೋ ಈ ಸಂದರ್ಶನದಲ್ಲಿ ಕೂಡ ಸುದೀಪ್ ಇದೇ ಹೇರ್ ಸ್ಟೈಲ್ ಅಲ್ಲಿಯೇ ಕಾಣಿಸಿಕೊಂಡಿದ್ದರು. ಇದೇ 2 ಕಿಚ್ಚ ಸುದೀಪ್​ (Kiccha Sudeep) ಅವರಿಗೆ 52ನೇ ಹುಟ್ಟುಹಬ್ಬದ ಸಂಭ್ರಮ . ಹುಟ್ಟುಹಬ್ಬದ ಅಂಗವಾಗಿ ಮಾರ್ಕ್ ಸಿನಿಮಾ ಟೈಟಲ್ ಟೀಸರ್ ರಿಲೀಸ್ ಆಗಿತ್ತು. ಬಿಲ್ಲಾ ರಂಗ ಭಾಷಾ ಚಿತ್ರದ ಹೊಸ ಫೋಸ್ಟರ್‌ ರಿಲೀಸ್‌ ಆಗಿದ್ದು, ಇದರಲ್ಲಿ ಸುದೀಪ್‌ ಅವರ ಗೆಟಪ್‌ ನೋಡಿ ಫ್ಯಾನ್ಸ್‌ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಆ ಸಮಯದಲ್ಲಿ ಎಲ್ಲಕ್ಕಿಂತಲೂ ಹೆಚ್ಚಾಗಿ ಸುದೀಪ್​ ಅವರ ಕರ್ಲಿ ಹೇರ್​ಸ್ಟೈಲ್ ಗೆಟಪ್​ ಎಲ್ಲರ ಗಮನ ಸೆಳೆದಿತ್ತು. ​ಈ ಬಗ್ಗೆ ಇದಾಗಲೇ ಸಾಕಷ್ಟು ಮಂದಿ ಪ್ರಶ್ನೆ ಮಾಡಿದ್ದರು. ಇದರ ವಿನ್ಯಾಸಕರು ಯಾರು? ಬಿಗ್​ಬಾಸ್​ಗೂ ಇದಕ್ಕೂ ಸಂಬಂಧ ಇದ್ಯಾ? ಬಿಗ್​ಬಾಸ್​ನಲ್ಲಿಯೂ (Bigg Boss 12) ಇದೇ ಗೆಟಪ್​ನಲ್ಲಿ ಬರ್ತೀರಾ ಎನ್ನುವ ಪ್ರಶ್ನೆಯನ್ನೂ ಕೇಳಲಾಗಿತ್ತು. ಕೊನೆಗೆ ಅದು ಸತ್ಯ ಆಗಿದೆ.

ಫೀಲ್​ ಮಾಡಿಕೊಂಡಿರೋ ಯುವತಿಯರು!

ಆದರೆ, ಇದೀಗ worldofsvn ಎಂಬ ಚಾನೆಲ್​ನವರು ಕೆಲವು ಯುವತಿಯರಿಗೆ ಈ ಹೇರ್​ಸ್ಟೈಲ್​ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಯಾವೊಬ್ಬ ಯುವತಿಯರಿಗೂ ಸುದೀಪ್​ ಅವರ ಈ ಹೇರ್​ಸ್ಟೈಲ್ ಚೆನ್ನಾಗಿ ಕಾಣಿಸಲಿಲ್ಲ. ಮೊದಲಿನ ಹೇರ್​ಸ್ಟೈಲೇ ಚೆನ್ನಾಗಿದೆ. ಇದ್ಯಾಕೋ ನಮಗೆ ಇಷ್ಟವಾಗಲಿಲ್ಲ ಎಂದಿದ್ದಾರೆ. ಸುದೀಪ್​ ಸರ್​ ಹೇಗಿದ್ರೂ ಚೆಂದನೇ ನಿಜ. ಅವರ ಆ್ಯಕ್ಟಿಂಗ್​ ಕೂಡ ಸೂಪರ್​. ಆದ್ರೆ ಅವರು ಈ ಬಾರಿ ಹೇರ್​ಸ್ಟೈಲ್​ನಿಂದ ನಿರಾಸೆ ಮೂಡಿಸಿದ್ರು, ಈ ಹೇರ್​ಸ್ಟೈಲ್​ ಚೆನ್ನಾಗಿಲ್ಲ. ಅವರು ಮೊದಲಿನ ರೀತಿಯಲ್ಲಿ ಇದ್ದರೇನೇ ಚೆಂದ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಸುದೀಪ್​ ಸರ್ ಪ್ಲೀಸ್​ ಛಾನ್ಸ್​ ಕೊಡಿ.. ನನ್​ ಅಪ್ಪನ ಮೇಲಾಣೆ, ಮಗು ಥರ ಬರ್ತೀನಿ Huccha Venkat ಕಣ್ಣೀರು

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!