Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಪದೇ ಪದೇ ಅದೇ ಎಪಿಸೋಡ್ ತೋರಿಸ್ತಿರೋದು ವೀಕ್ಷಕರಿಗೆ ಬೇಸರ ತಂದಿದೆ. ಇದಕ್ಕೆ ಕಾರಣ ಏನು? ಅಂಥದ್ದೇನಾಯ್ತು?
ಸೀರಿಯಲ್‌ನಲ್ಲಿ ಹೇಳಿದ್ದನ್ನೇ ಹೇಳ್ತಾರೆ, ತೋರಿಸಿದ್ದನ್ನೇ ತೋರಿಸ್ತಾರೆ ಎನ್ನೋ ದೂರ ಸಾಮಾನ್ಯ. ಇದಕ್ಕೆ ಪುಷ್ಠಿ ಕೊಡುವಂತೆ ‘ಅಮೃತಧಾರೆ’ ಧಾರಾವಾಹಿಯಲ್ಲಿ ( Amruthadhaare Kannada Serial ) ಮತ್ತೆ ಮತ್ತೆ ಅದೇ ಚಿತ್ರಕಥೆಯನ್ನು ತೆರೆ ಮೇಲೆ ತರುತ್ತಿದ್ದಾರೆ. ಗಂಡ ಮತ್ತೆ ವಿದೇಶಕ್ಕೆ ಹೋಗ್ತಿದ್ದಾನೆ ಎಂದು ಪಾರ್ಥನ ಜೊತೆ ಭೂಮಿಕಾ ಏರ್‌ಪೋರ್ಟ್‌ಗೆ ಹೊರಟಿದ್ದಾಳೆ, ಅಲ್ಲಿ ಅವನಿಗೆ ಬಾಯ್ ಹೇಳಿ ಬರೋದು ಅವರ ಪ್ಲ್ಯಾನ್. ಈಗ ಮತ್ತೆ ಶಕುಂತಲಾ, ಜಯದೇವ್ ಸೇರಿಕೊಂಡು ಭೂಮಿಯನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದಾರೆ. ಈ ಹಿಂದೆ ಇದೇ ಥರ ಜಯದೇವ್, ಭೂಮಿಯನ್ನು ಮುಗಿಸಲು ಸಂಚು ಮಾಡಿದ್ದನು, ಭೂಮಿ ಬಚಾವ್ ಆಗಿದ್ದಳು. ಸೀರಿಯಲ್‌ನಲ್ಲಿ ಭೂಮಿ ಮನೆಯಿಂದ ಹೊರಗಡೆ ಹೋದಾಗೆಲ್ಲ ಅವಳನ್ನು ಮುಗಿಸಲು ಶಾಕುಂತಲಾ, ಜಯದೇವ್ ಪ್ಲ್ಯಾನ್ ಮಾಡುತ್ತಿರೋದು ಪದೇ ಪದೇ ರಿಪೀಟ್ ಆಗ್ತಿದೆ.
ಹೀಗಾಗಿ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
ಏನೋ ಕಥೆ ಇದು, ಹುಚ್ಚು, ಸೀರಿಯಲ್ ಪೂರ್ತಿ ಬರೀ, ಕಳ್ಳತನ, ಆಕ್ಸಿಡೆಂಟ್, ಕಿಡ್ನ್ಯಾಪ್, ಕಾಡಲ್ಲಿ ಎಲ್ಲ ಓಡಾಡಿಸುವುದು, ಬರೀ ಇದೇ ಆಯ್ತಲ್ಲ ! ಅದೆಷ್ಟು ಬಾರಿ ಮಾಡಿದ್ದ ಚಿತ್ರಕಥೆಯನ್ನೇ ರಿಪೀಟ್ ಮಾಡ್ತೀರಾ! ಮುಂದೆ ಕಥೆ ಹೇಗೆ ನಡೆಸಬೇಕು ಅನ್ನೋದು ಗೊತ್ತಾಗಲಿಲ್ಲ ಅಂದ್ರೆ ಸೀರಿಯಲ್ ಮುಗಿಸಿಬಿಡಿ ಅದು ಬಿಟ್ಟು ಜನರ ಪಿತ್ತ ಯಾಕೆ ರೈಸ್ ಮಾಡ್ತೀರಾ?
ಮಿಸ್ ಆಗಿರುವ ಪಾಪು ಇರುವ ಮನೆ ರೀಚ್ ಆಗ್ತಾಳೆ ಭೂಮಿಕಾ..
1000 ಸಂಚಿಕೆಗಳು ಮುಗಿದರೂ ಅಮ್ಮ ಮಗನ ಕುತಂತ್ರಗಳಿಗೆ ಬ್ರೇಕ್ ಹಾಕಲ್ಲ ಬಿಡಿ. ಇದನ್ನೆಲ್ಲ ಸಹಿಸಿಕೊಂಡು ನೋಡ್ತಾರಲ್ಲ ನಮ್ ಜನ ಅವ್ರಿಗೆ ಕೊಡಬೇಕು ಒಂದು ಅವಾರ್ಡ್
ಈ ಡೈರೆಕ್ಟರ್‌ಗೆ ತಲೆ ಓಡ್ತಿಲ್ಲ ಅನ್ಸ್ತಿದೆ ಯಾಕೆಂದರೆ ಇದೆ ತರ ಎಷ್ಟ ಸೀನ್ ಕ್ರಿಯೇಟ್ ಮಾಡ್ತೀರಿ.
ಕಳೆದ ಸಾರಿ ಒಂದು ಅಟ್ಯಾಕ್ ಆದ ಮೇಲೂ ಯಾಕೆ ಪುನ ಹೊರಗೆ ಹೋಗಬೇಕು, ಅಷ್ಟು ನೆನಪಿಲ್ವಾ ಭೂಮಿಕಾಗೆ. ಅದೂ ಅಲ್ಲದೆ ಶಾಕುಂತಲ ಮಗೂಗೆ ತೊಂದರೆ ಕೊಡ್ತೀನಿ ಅಂತಲೂ ಹೇಳಿದ್ದು ಮರೆತಂತಿದೆ!
ಸದಾ ಇದೇ ಐಡಿಯಾನಾ? ಬೋರ್ ಆಗುತ್ತಿದೆ ನೋಡುವುದಕ್ಕೆ! ಪಾರ್ಥನೇ ಪ್ರತಿ ಸಲವೂ! ತನ್ನ ಮಗನನ್ನೇ ಟಾರ್ಗೆಟ್ ಮಾಡುವ ರಾಕ್ಷಸಿ ಶಕುಂತಲಾ!
ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತಿರುವ ಈ ಧಾರಾವಾಹಿ. ಶಕುಂತಲಾಳ ಹಿನ್ನೆಲೆ ಬೆಳಕಿಗೆ ಬರುವುದು ಬಾಕಿ ಇರುವುದರಿಂದ ಕನಿಷ್ಠ ಒಂದು ವರ್ಷವಾದರೂ ಇದನ್ನು ಎಳೆಯುವ ಎಲ್ಲಾ ಪ್ರಯತ್ನಗಳು ನಡೆಯುತ್ತವೆ ಬಿಡಿ!
ಆ ಜಯದೇವ್‌ಗೆ ಈ ಐಡಿಯಾ ಬಿಟ್ರೆ ಬೇರೆ ಗೊತ್ತೇ ಇಲ್ವಾ?
ಒಬ್ಬೊಬ್ಬರೇ ಧಾರಾವಾಹಿಯಿಂದ ಎಕ್ಸಿಟ್ ಆಗ್ತಾ ಇದಾರೆ, ಭೂಮಿಕಾ ಅಪ್ಪ, ಅಮ್ಮ, ಅಪ್ಪಿ, ಸುಧಾ ಮಗಳು, ಆನಂದ್ ಹೆಂಡ್ತಿ, ಅವನ ಮಕ್ಕಳು ಎಲ್ಲರೂ ಕಾಣೋದೇ ಇಲ್ಲ! ಎಲ್ಲರೂ ತುಂಬಿದಂತೆ ಇದ್ರೆ ಧಾರಾವಾಹಿ ನೋಡಕ್ಕೆ ಚಂದ,, ನಾಲ್ಕೈದು ಆರ್ಟಿಸ್ಟ್ ಅಲ್ಲೇ ಧಾರಾವಾಹಿ ಮುಗಿಸಿದ್ರೆ ನೋಡಲು ಬೇಜಾರು.
ಅಯ್ಯೋ ದೇವ್ರೇ ಏನು ಕಥೆನೋ ಇದು ಬರೇ ಸಾಯಿಸೋದು ಆಕ್ಸಿಡೆಂಟ್ ಮಾಡೋದು ಇದೇ ಆಯಿತು.
ಧಾರಾವಾಹಿ ಶುರು ಆದಾಗಿನಿಂದ ಮುಗಿಯೋವರೆಗೂ ಬರೆ ಕಿಡ್ನ್ಯಾಪ್, ಕೊಲೆಗೆ ಸ್ಕೆಚ್ ಹಾಕುತ್ತಾರೆ. ಒಳ್ಳೆ ಸಂದೇಶ ಕೊಡ್ತಾ ಇದ್ದೀರಾ,ಬರೇ ಮನೆ ಹಾಳು ಬುದ್ಧಿ ತೋರಿಸಿ ಯಾಕೆ ಜನಗಳಿಗೆ ತಪ್ಪು ಸಂದೇಶ ಕೊಡ್ತೀರಾ? ನೋಡಿದ್ರೆ ತಿಳ್ಕೊಬೇಕು, ಅದು ಬಿಟ್ಟು ಮನೆಯಲ್ಲೇ ವಿಲನ್ ಮಾಡ್ತಿದ್ದೀರಿ.
ಜಯದೇವನ ಕುತಂತ್ರಗಳನ್ನು ಹೇಗೆ ಬಯಲು ಮಾಡಿದ್ರೋ ಅದೇ ತರ, ಶಕುಂತಲಾಳ ಎಲ್ಲ ಸಾಕ್ಷಿಗಳನ್ನು ಎಲ್ಲರ ಮುಂದೆ ತೋರಿಸಿದ್ದರೆ ಕತೆ ಚೆನ್ನಾಗಿರುತ್ತಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.