Anchor Anushree, ರೋಶನ್ ಮದುವೆಯಲ್ಲಿ ಮಿಸ್‌ ಆದ ಅದೊಂದು ವಿಷಯ ವಿಡಿಯೋದಲ್ಲಿ ಬಯಲು!

Published : Aug 31, 2025, 10:29 AM IST
anchor anushree

ಸಾರಾಂಶ

Anchor Anushree Wedding: ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಅದ್ದೂರಿಯಾಗಿ ನಡೆದ ನಟಿ, ನಿರೂಪಕಿ ಅನುಶ್ರೀ ಮದುವೆಯಲ್ಲಿ ಒಂದು ವಿಷಯ ಮಿಸ್‌ ಆಗಿತ್ತು. ಅದನ್ನೀಗ ಅವರು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. 

ನಟಿ, ನಿರೂಪಕಿ ಅನುಶ್ರೀ ಅವರು ಐಟಿ ಉದೋಗಿ ರೋಶನ್‌ ಅವರನ್ನು ಪ್ರೀತಿಸಿ, ಮದುವೆ ಆಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಆಗಸ್ಟ್‌ 28ರಂದು ಬೆಳಗ್ಗೆ 10.56ಕ್ಕೆ ಮಾಂಗಲ್ಯಧಾರಣೆ ಆಗಿದೆ. ರೆಸಾರ್ಟ್‌, ಮದುವೆ ಮಂಟಪವಂತೂ ಅದ್ದೂರಿಯಾಗಿ ಸಿಂಗಾರ ಆಗಿತ್ತು. ಆರಂಭದಲ್ಲಿ ಅನುಶ್ರೀ ಅವರು ಸಿಲ್ವರ್‌ ಕಲರ್‌ ಸೀರೆ ಉಟ್ಟು,, ಆಮೇಲೆ ಕೆಂಪು, ಕೇಸರಿ ಬಣ್ಣದ ಸೀರೆಯಲ್ಲಿ, ಅದ್ಭುತವಾದ ಆಭರಣಗಳೊಂದಿಗೆ ಕಂಗೊಳಿಸಿದ್ದಾರೆ. ರೋಶನ್‌ ಅವರು ರೇಷ್ಮೆ ಪಂಚೆ, ಶರ್ಟ್‌ ಹಾಕಿದ್ದರು. ಈಗ ಅನುಶ್ರೀ ಅವರು ಸೋಶಿಯಲ್‌ ಮೀಡಿಯಾದಲ್ಲಿ ಮದುವೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಅನುಶ್ರೀ ಅವರು ಸೋಶಿಯಲ್‌ ಮೀಡಿಯಾದಲ್ಲಿ, "ಹೊಸ ಬಾಳಿನ ಹೊಸ್ತಿಲಲ್ಲಿ .…ಹಾರೈಸಿದ ಹೃದಯಗಳಿಗೆ ಕೋಟಿ ಕೋಟಿ ಧನ್ಯಾವಾದಗಳು" ಎಂದು ಮದುವೆ ವಿಡಿಯೋ ಶೇರ್‌ ಮಾಡಿದ್ದಾರೆ. ಅಂದಹಾಗೆ ಈ ವಿಡಿಯೋದಲ್ಲಿ ಪುನೀತ್‌ ರಾಜ್‌ಕುಮಾರ್‌ ಫೋಟೋ, ಅನುಶ್ರೀ-ರೋಶನ್‌ ಜೊತೆಗೆ ಅಪ್ಪು ನಿಂತಿರುವಂತೆ ವಿಡಿಯೋ ಎಡಿಟ್‌ ಮಾಡಲಾಗಿದೆ. ಇದನ್ನು ನೋಡಿದ ಎಂಥವರು ಕೂಡ ಭಾವುಕರಾಗುತ್ತಾರೆ.

ರೋಶನ್‌ ಯಾರು?

ರೋಶನ್‌ ಅವರು ಕೊಡಗು ಮೂಲದ ಐಟಿ ಉದ್ಯೋಗಿಯಂತೆ. ನಾನು 300 ಕೋಟಿ ಇರುವವನಲ್ಲ, ನಾನು ಐಟಿ ಉದ್ಯೋಗಿ ಎಂದು ಅವರು ಹೇಳಿಕೊಂಡಿದ್ದಾರೆ. ಅನುಶ್ರೀ ಅವರು, “ಹೃದಯವಂತ ಅವರು. ನಿಮ್ಮೆಲ್ಲ ಆಶೀರ್ವಾದ ಇದ್ದರೆ ಇವರು ಮುಂದೆ 300 ಕೋಟಿ ಒಡೆಯ” ಎನ್ನಬಹುದು. ವರ್ಷಗಳಿಂದ ಅನುಶ್ರೀ, ರೋಶನ್‌ ಡೇಟ್‌ ಮಾಡುತ್ತಿದ್ದರು. ಈ ವಿಷಯವು ಅನುಶ್ರೀ ಕುಟುಂಬಸ್ಥರು, ಅವರ ಆಪ್ತರಿಗೆ ಮಾತ್ರ ಗೊತ್ತಿತ್ತು. ಹೀಗಾಗಿಯೇ ಅವರು ಕಳೆದ ಎರಡು ವರ್ಷಗಳಿಂದ “ಶೀಘ್ರದಲ್ಲಿ ಮದುವೆ ಆಗ್ತೀನಿ” ಎಂದು ಹೇಳುತ್ತಲೇ ಬಂದಿದ್ದರು. ಪ್ರೀತಿ ಮಾಡಿ, ಹುಡುಗ ಫಿಕ್ಸ್‌ ಆಗಿರೋದ್ದಿಕ್ಕೆ ಅವರು ಅಷ್ಟು ಧೈರ್ಯದಿಂದ ಮದುವೆ ಆಗ್ತೀನಿ ಅಂತ ಹೇಳಿಕೊಂಡು ಬರುತ್ತಿದ್ದರು.

ದೊಡ್ಡ ತಾರಾಬಳಗದ ಸಾಕ್ಷಿ

ಅನುಶ್ರೀ ಅವರು ಚಿಕ್ಕ ವಯಸ್ಸಿನನಲ್ಲಿದ್ದಾಗ ತಂದೆ ಬಿಟ್ಟು ಹೋಗಿದ್ದರು. ಹೀಗಾಗಿ ಬಡತನದಲ್ಲಿ ಬೆಳೆದರು, ತಾಯಿಯ ಪ್ರೀತಿಯಲ್ಲಿ ಅವರು ಶಿಕ್ಷಣ ಮುಗಿಸಿದರು, ಈಗ ಅವರು ನಿರೂಪಕಿಯಾಗಿ ಹೆಸರು ಮಾಡಿದ್ದಾರೆ. ಈ ಮದುವೆಯಲ್ಲಿ ರಾಜ್‌ ಬಿ ಶೆಟ್ಟಿ, ಅಕುಲ್‌ ಬಾಲಾಜಿ-ಜ್ಯೋತಿ, ಜಗ್ಗೇಶ್‌, ಚೈತ್ರಾ ಜೆ ಆಚಾರ್‌, ಕಾವ್ಯಾ ಶಾ-ವರುಣ್‌ ಕುಮಾರ್‌, ರಚಿತಾ ರಾಮ್‌, ಅರ್ಜುನ್‌ ಜನ್ಯ, ವಿಜಯ್‌ ಪ್ರಕಾಶ್‌, ಧ್ರುವ ಸರ್ಜಾ-ಪ್ರೇರಣಾ ಶಂಕರ್‌, ಹಂಸಲೇಖ, ಪ್ರೇಮಾ, ಸೋನಲ್‌ ಮೊಂಥೆರೋ-ತರುಣ್‌ ಸುಧೀರ್‌, ನೆನಪಿರಲಿ ಪ್ರೇಮ್‌, ಅಜಯ್‌ ರಾಜ್‌, ಡಾಲಿ ಧನಂಜಯ, ಅನು ಪ್ರಭಾಕರ್-ರಘು ಮುಖರ್ಜಿ, ಶಿವರಾಜ್‌ಕುಮಾರ್-ಗೀತಾ, ನಿಶ್ವಿಕಾ ನಾಯ್ಡು ಮುಂತಾದವರು ಭಾಗಿಯಾಗಿದ್ದರು.

ಪುನೀತ್‌ ದೈಹಿಕವಾಗಿ ಇದ್ದಿದ್ದರೆ ಬರುತ್ತಿದ್ದರು

ಅನುಶ್ರೀ ಅವರಿಗೆ ನಟ ಪುನೀತ್‌ ರಾಜ್‌ಕುಮಾರ್‌ ಅಂದರೆ ಸಿಕ್ಕಾಪಟ್ಟೆ ಇಷ್ಟ. ಇವರ ಮದುವೆ ಮಂಟಪದ ಪಕ್ಕದಲ್ಲೇ ಪುನೀತ್‌ ರಾಜ್‌ಕುಮಾರ್‌ ಅವರ ಫೋಟೋವನ್ನು ಕೂಡ ಇಡಲಾಗಿತ್ತು. ಅಂದಹಾಗೆ ಅಶ್ವಿನಿ, ರಾಘವೇಂದ್ರ ರಾಜ್‌ಕುಮಾರ್‌ ಫ್ಯಾಮಿಲಿಯಿಂದ ಯಾರೂ ಬಂದಿರಲಿಲ್ಲ. ಈ ಬಗ್ಗೆ ನಿಖರವಾದ ಕಾರಣ ರಿವೀಲ್‌ ಆಗಿಲ್ಲ. ಪುನೀತ್‌ ದೈಹಿಕವಾಗಿ ಇದ್ದಿದ್ದರೆ ಪಕ್ಕಾ ಬರುತ್ತಿದ್ದರು.

ಅಂದಹಾಗೆ ಅನುಶ್ರೀಗೆ ರೋಶನ್‌ ಅವರು ಬಂಗಾರದ ಬಳೆಗಳು, ಸರವನ್ನು ಹಾಕಿದ್ದಾರೆ. ರೋಶನ್‌ಗೆ ಅನುಶ್ರೀ ತಮ್ಮ ಬಂಗಾರದ ಸರ, ಬ್ರೇಸ್‌ಲೈಟ್‌ ಹಾಕಿದ್ದಾರೆ. ತುಳುನಾಡ ಸಂಪ್ರದಾಯದಂತೆ ಮದುವೆ ಆಗಿದೆ. ಹೆಣ್ಣು ಒಪ್ಪಿಸುವ ಶಾಸ್ತ್ರ ಮಾಡಲಾಗಿದ್ದು, ಅಲ್ಲಿ ಅನುಶ್ರೀ ಹಾಗೂ ಅವರ ತಾಯಿ, ಕುಟುಂಬಸ್ಥರು ಕೂಡ ಕಣ್ಣೀರು ಹಾಕಿ ಮುದ್ದಿನ ಮಗಳನ್ನು ಬೀಳ್ಕೊಟ್ಟಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!