
1424 ಎಪಿಸೋಡ್‌ಗಳಿಗೂ ಅಧಿಕ ಕಾಲ ಪ್ರಸಾರವಾಗಿದ್ದ ‘ಪವಿತ್ರ ರಿಷ್ತಾ’ ಧಾರಾವಾಹಿಯಲ್ಲಿ ನಟಿಸಿದ್ದ ನಟಿ ಪ್ರಿಯಾ ಮರಾಠೆ ಇನ್ನಿಲ್ಲ. 38 ವರ್ಷದ ಪ್ರಿಯಾ ಹಲವು ಟಿವಿ ಶೋಗಳು, ವೆಬ್ ಸರಣಿಗಳಲ್ಲಿ ನಟಿಸಿದ್ದರು. ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಮುಂಬೈನ ಮೀರಾ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿದ್ದ ಪ್ರಿಯಾ ಅವರಿಗೆ ಮತ್ತೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆಯುತ್ತಿದ್ದರೂ ಫಲಿಸಲಿಲ್ಲ. ಶನಿವಾರ ( ಆಗಸ್ಟ್ 30 ) ಅವರು ಕೊನೆಯುಸಿರೆಳೆದರು.
ಪ್ರಿಯಾ ಮರಾಠೆ Standup Comedian, ಕಿರುತೆರೆ ನಟಿ. 23 ಏಪ್ರಿಲ್ 1987 ರಂದು ಮುಂಬೈನಲ್ಲಿ ಜನಿಸಿದ ಅವರು ಶಾಲಾ, ಕಾಲೇಜು ಶಿಕ್ಷಣವನ್ನು ಅಲ್ಲಿಯೇ ಪೂರ್ಣಗೊಳಿಸಿದರು. ಆಮೇಲೆ ನಟನೆಗೆ ಬಂದರು. 'ಯಾ ಸುಖಾನೋಯ' ಮತ್ತು 'ಚಾರ್ ದಿವಸ್ ಸಾಸುಚೆ' ಎಂಬ ಮರಾಠಿ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್‌ನ 'ಕಸಮ್ ಸೆ' ಧಾರಾವಾಹಿಯಲ್ಲಿ ವಿದ್ಯಾ ಬಾಲಿ ಪಾತ್ರದಲ್ಲಿ ನಟಿಸಿದ್ದರು. ಕಾಮಿಡಿ ಸರ್ಕಸ್‌ನ ಮೊದಲ ಸೀಸನ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ನಂತರ 'ಪವಿತ್ರ ರಿಷ್ತಾ' ಧಾರಾವಾಹಿಯಲ್ಲಿ ನಟಿಸಿ ಖ್ಯಾತಿ ಗಳಿಸಿದರು. ಏಪ್ರಿಲ್ 2012 ರಲ್ಲಿ ಸೋನಿ ಟಿವಿಯ 'ಬಡೇ ಅಚ್ಛೇ ಲಗ್ತೇ ಹೈ' ಧಾರಾವಾಹಿಯಲ್ಲಿ ಜ್ಯೋತಿ ಮಲ್ಹೋತ್ರಾ ಪಾತ್ರವನ್ನು ನಿರ್ವಹಿಸಿದ್ದರು. 'ತೂ ತಿಥೇ ಮೇಂ', 'ಭಾಗೇ ರೇ ಮನ್', 'ಜೈಸ್ತುತೆ', 'ಭಾರತ್ ಕಾ ವೀರ್ ಪುತ್ರ - ಮಹಾರಾಣಾ ಪ್ರತಾಪ್' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. 2008 ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ 'ಹಮ್ನೆ ಜೀನಾ ಸೀಖ್ ಲಿಯಾ'ದಲ್ಲಿ ನಟಿಸಿದ್ದರು. ಗೋವಿಂದ ನಿಹಲಾನಿ ನಿರ್ದೇಶನದ ಮರಾಠಿ ಚಿತ್ರ 'ತೀ ಅನಿ ಇತರ್' ನಲ್ಲಿಯೂ ನಟಿಸಿದ್ದರು.
ಪ್ರಿಯಾ ಮರಾಠೆ 2012 ರಲ್ಲಿ ತಮ್ಮ ದೀರ್ಘಕಾಲದ ಗೆಳೆಯ ಶಾಂತನು ಮೊಘೆ ಅವರನ್ನು ವಿವಾಹವಾದರು. ಶಾಂತನು ಕೂಡ ಪ್ರಸಿದ್ಧ ನಟ. ಪ್ರಿಯಾ ಒಂದು ವರ್ಷದ ಹಿಂದಿನವರೆಗೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. Instagram ನಲ್ಲಿ 6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. 11 ಆಗಸ್ಟ್ 2024 ರಂದು ಕೊನೆಯ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರಿಯಾ ಟಿವಿ ಧಾರಾವಾಹಿಗಳಲ್ಲಿ ವಿಲನ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ಕೊನೆಯದಾಗಿ 2023 ರಲ್ಲಿ 'ತುಜೆಚ್ ಮಿ ಗೀತ್ ಗಾತ್ ಆಹೆ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.