ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ RESTART ಮಾಡ್ತಿದ್ದೀನಿ ಎಂದು ಹಿಮಾಲಯ ಪರ್ವತವೇರಿದ ನಟಿ ಸಂಜನಾ ಬುರ್ಲಿ

Published : Mar 12, 2025, 10:42 AM ISTUpdated : Mar 12, 2025, 11:31 AM IST
ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ RESTART ಮಾಡ್ತಿದ್ದೀನಿ ಎಂದು ಹಿಮಾಲಯ ಪರ್ವತವೇರಿದ ನಟಿ ಸಂಜನಾ ಬುರ್ಲಿ

ಸಾರಾಂಶ

ನಟಿ ಸಂಜನಾ ಬುರ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ ಹೊರಬಂದ ನಂತರ ಹಿಮಾಲಯಕ್ಕೆ ಟ್ರೆಕ್ಕಿಂಗ್ ಹೋಗಿದ್ದಾರೆ. ಕೇವಲ ಎರಡು ದಿನಗಳಲ್ಲಿ ಟ್ರೆಕ್ಕಿಂಗ್ ಮುಗಿಸಿ, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಿಮ ಚಾರಣ ದೈಹಿಕವಾಗಿ ಸವಾಲಿನಿಂದ ಕೂಡಿತ್ತು ಎಂದು ಹೇಳಿದ್ದಾರೆ. ಅಲ್ಲದೆ, ಟ್ರೆಕ್ಕಿಂಗ್ ಮಾಡುವವರಿಗೆ ಇಚ್ಛಾಶಕ್ತಿ, ಆತ್ಮವಿಶ್ವಾಸದ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ.  

ಕನ್ನಡ ಕಿರುತೆರೆಯ ಜನಪ್ರಿಯ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ ಆಗಿ ಜನಮನ ಗೆದ್ದ ನಟಿ ಸಂಜನಾ ಬುರ್ಲಿ, ಈಗಾಗಲೇ ಸೀರಿಯಲ್ ನಿಂದ ಹೊರ ಬಂದಿದ್ದಾರೆ. ಹೊರ ಬರುವಾಗ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊರ ಬರೋದಾಗಿ ತಿಳಿಸಿದ್ದರು. ಆದರೆ ಸೀರಿಯಲ್ ನಿಂದ ಹೊರ ಬಂದ ಮೇಲೆ ನಟಿ ದೇಶ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ರು. ಕೆಲವು ದಿನಗಳ ಹಿಂದೆ ದುಬೈನಲ್ಲಿ ಎಂಜಾಯ್ ಮಾಡ್ತಿದ್ರು, ಇದೀಗ ಹಿಮಾಲಯ ಪರ್ವತ ಟ್ರೆಕ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಸಂಜನಾ. 

ಸ್ಕೈ ಡೈವಿಂಗ್ ರೋಚಕ ಅನುಭವ ಬಿಚ್ಚಿಟ್ಟ ಪುಟ್ಟಕ್ಕನ ಮಕ್ಕಳು ನಟಿ ಸಂಜನಾ ಬುರ್ಲಿ

ನಾನು ಅನುಭವಿಸಿದ ಎಲ್ಲಾ ಕಷ್ಟಗಳನ್ನು ಮರೆತು, ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ರೀಸ್ಟಾರ್ಟ್ ಮಾಡಲು ಬಯಸಿದ್ದೇನೆ ಎನ್ನುತ್ತಾ ನಟಿ (Sanjana Burli) ಎರಡು ದಿನಗಳ ಹಿಮಾಲಯ ಟ್ರೆಕ್ಕಿಂಗ್ ಮಾಡಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಹಿಮಾಲಯ ಟ್ರೆಕ್ಕಿಂಗ್ ಸಮಯದಲ್ಲಿ ತಮಗಾದ ಅನುಭಗಳು ಹಾಗೂ ಮಾಡಿದಂತಹ ಸಾಹಸ, ಅನುಭವಿಸಿದ ಕಷ್ಟಗಳ ಕುರಿತು ಸಹ ಮಾಹಿತಿ ಹಂಚಿಕೊಂಡಿದ್ದಾರೆ. ನಟಿ ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡ ಮಾಹಿತಿ ಹೀಗಿದೆ… 

ಕಳೆದ 4-5 ವರ್ಷಗಳಿಂದ ಚಳಿಗಾಲದಲ್ಲಿ ಹಿಮಾಲಯ ಪರ್ವತದಲ್ಲಿ ಹಿಮ ಚಾರಣ (Himalaya Trekking) ಮಾಡಬೇಕೆಂದು ತನಗೆ ತಾನು ಸವಾಲು ಹಾಕಿಕೊಂಡಿದ್ದೆ, ಅಂತಿಮವಾಗಿ ಅದನ್ನು ಸುರಕ್ಷಿತವಾಗಿ ಮತ್ತು ಉತ್ತಮವಾಗಿ ಮಾಡಿರುವುದು ನಿಜವಾಗಿಯೂ ಸಂತೋಷದ ವಿಷಯವಾಗಿದೆ. ಅದರಲ್ಲೂ ನಾನು ವಿಶೇಷವಾಗಿ 4-5 ದಿನಗಳ ಚಾರಣವನ್ನು ಕೇವಲ 2 ದಿನಗಳಲ್ಲಿ ಮುಗಿಸಿರೋದು ಸಹ ವಿಶೇಷ ಎನಿಸುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ ಈ ಹಿಮ ಚಾರಣ ಅಷ್ಟೇನೂ ಸುಲಭವಾಗಿರಲಿಲ್ಲ, ಆದರೆ ಇದು ಮಾನಸಿಕವಾಗಿ ಸವಾಲು ಹಾಕುವಂತದ್ದು ಆಗಿರಲಿಲ್ಲ ಎಂದಿದ್ದಾರೆ. ಆದರೆ ಈ ಚಾರಣ ದೈಹಿಕವಾಗಿ ತುಂಬಾನೆ ಚಾಲೆಂಜಿಂಗ್ ಆಗಿತ್ತು, ನಾನು ಅಂದುಕೊಂಡದ್ದಕ್ಕಿಂತ ಹೆಚ್ಚು ಚಾಲೆಂಜಿಂಗ್ ಆಗಿತ್ತು, ಆದ್ದರಿಂದ ಹೃದಯಭಾಗದಲ್ಲಿರುವ ಈ 3900 ಮೀಟರ್ ಎತ್ತರದ ಹಿಮಾಲಯ ಶಿಖರವನ್ನು ಪೂರ್ಣಗೊಳಿಸಿದ ನಂತರ ಕಲಿಯಬೇಕಾದ ಕೆಲವು ಪ್ರಮುಖ ಪಾಠಗಳು ಇಲ್ಲಿವೆ ಎಂದು… ಜೀವನ ಪಾಠಗಳ ಕುರಿತು ಸಹ ಮಾಹಿತಿ ಹಂಚಿಕೊಂಡಿದ್ದಾರೆ. 

ನಮ್ಮ ಡಿಸಿ ಸ್ನೇಹಾ ಮೇಡಂ ಸೀರಿಯಲ್ ಬಿಟ್ಮೇಲೆ ಸಖತ್ ಬೋಲ್ಡ್ ಆಗ್ಬಿಟ್ರಲ್ಲ!

ಹಿಮಾಲಯ ಟ್ರೆಕ್ ಮಾಡೋರಿಗೆ ಸಂಜನಾ ಬುರ್ಲಿ ನೀಡಿರುವ ಸಲಹೆಗಳು ಇವು: 
ಅಚಲವಾದ ಇಚ್ಛಾಶಕ್ತಿಯನ್ನು ಹೊಂದಿರಿ, ಅದು ಹೆಚ್ಚಿನ ಸಮಯಗಳಲ್ಲಿ ಸಹಾಯ ಮಾಡುತ್ತದೆ.

ಅತಿಯಾದ ಆತ್ಮವಿಶ್ವಾಸವನ್ನು ಎಂದಿಗೂ ಹೊಂದಿರಬೇಡಿ, ಏಕೆಂದರೆ ಪರ್ವತಗಳು ಯಾವಾಗಲೂ ಅತ್ಯಂತ ಕಠಿಣವಾದವುಗಳನ್ನು ವಿನಮ್ರಗೊಳಿಸುವ ಮಾರ್ಗಗಳನ್ನು ಹೊಂದಿವೆ.

ನಿಮ್ಮ ಇಚ್ಛಾಶಕ್ತಿಗೂ ಇಲ್ಲಿ ಒಂದು ಮಿತಿ ಇದೆ. ಒಂದು ಹಂತವನ್ನು ಮೀರಿ,, ಪ್ರಾಯೋಗಿಕವಾಗಿ ಹೇಳುವುದಾದರೆ, ನಿಮ್ಮ ದೇಹವು ನಿಮಗೆ ಸ್ಪಷ್ಟ ಚಿಹ್ನೆಗಳನ್ನು ನೀಡುತ್ತದೆ, ನೀವು ಇನ್ನು ಮುಂದೆ  ನಿಮ್ಮನ್ನು ಪ್ರಾಕ್ಟಿಕಲ್ ಆಗಿ ಮುಂದೆ ದೂಡಲು ಸಾಧ್ಯವಿಲ್ಲ, ಅಥವಾ ನೀವು ವಿರಾಮಗಳನ್ನು ತೆಗೆದುಕೊಳ್ಳಬೇಕು ಅಥವಾ ನಿಧಾನಗೊಳಿಸಬೇಕು. ನಿಮ್ಮ ದೇಹ ಮತ್ತು ನಿಮ್ಮ ಜೆನೆಟಿಕ್ಸ್ ಗೌರವಿಸಿ ಮತ್ತು ಯಾವುದನ್ನೂ ಅತಿಯಾಗಿ ಮಾಡಬೇಡಿ. ಅಕ್ಯೂಟ್ ಮೌಂಟೇನ್ ಸಿಕ್ನೆಸ್ (#AMS) ಒಂದು ವೈಜ್ಞಾನಿಕ ವಿಷಯವಾಗಿದೆ. ಇದರ ಬಗ್ಗೆ ತಿಳಿದಿರಲಿ. 

ಪ್ರತಿಯೊಬ್ಬರ ದೇಹವು ಆನುವಂಶಿಕವಾಗಿ ವಿಭಿನ್ನವಾಗಿರುತ್ತದೆ. ನಿಮ್ಮ ದೇಹವು ಅತಿಯಾದ ಎತ್ತರ ಮತ್ತು ತಾಪಮಾನವನ್ನು ಹೇಗೆ ನಿಭಾಯಿಸಬಹುದು ಎಂಬುದು ಇತರರಿಗಿಂತ ತುಂಬಾ ಭಿನ್ನವಾಗಿರಬಹುದು. ಹಾಗಾಗಿ ಎಂದಿಗೂ ಹೋಲಿಕೆ ಮಾಡಬೇಡಿ. ನಿಮ್ಮ ಸ್ವಂತ ವೇಗವನ್ನು ನಂಬಿ ಮತ್ತು ನಿಮ್ಮ ವೇಗದೊಂದಿಗೆ ಸಿಂಕ್ ಆಗಿ. 

ಎಲ್ಲಕ್ಕಿಂತ ಮುಖ್ಯವಾಗಿ, ಒಂದು ಸಮಯದಲ್ಲಿ ಒಂದು ಹೆಜ್ಜೆಯ ಮೇಲೆ ಕೇಂದ್ರೀಕರಿಸಿ ಮತ್ತು ಪ್ರತಿ ಹಂತದಲ್ಲೂ ಮಾನಸಿಕ ಮತ್ತು ದೈಹಿಕ ಅನುಭವಗಳ ಪ್ರತಿಯೊಂದು ಬಿಟ್ ಅನ್ನು ಆನಂದಿಸಲು ಮರೆಯಬೇಡಿ!

ನನ್ನ ಭವಿಷ್ಯದ ದೀರ್ಘ ಚಾರಣಕ್ಕಾಗಿ ನಾನು ಈ ಪಾಠಗಳನ್ನು ನೆನಪಿಸಿಕೊಳ್ಳುತ್ತೇನೆ ಎಂದು ಸಂಜನಾ ಬುರ್ಲಿ ಬರೆದುಕೊಂಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ನಟನಿಗೆ ಶಾಕ್​: ಒಂದ್​ ಸಲ ನೋಡ್ತೀನಿ, 2 ಸಲ ನೋಡ್ತೀನಿ ಆಮೇಲೆ ನನ್​ ಭಾಷೆ ಬರತ್ತೆ!
'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!