ಬೇಗ ಮುತ್ತು ಕೊಡಿಸ್ರಪ್ಪಾ... ಇನ್ನು ಕಾಯೋಕೆ ಆಗಲ್ಲ ಅಂತಿದ್ದಾರೆ ಅಮೃತಧಾರೆ ಫ್ಯಾನ್ಸ್​!

Published : Mar 16, 2024, 02:40 PM IST
ಬೇಗ ಮುತ್ತು ಕೊಡಿಸ್ರಪ್ಪಾ... ಇನ್ನು ಕಾಯೋಕೆ ಆಗಲ್ಲ ಅಂತಿದ್ದಾರೆ ಅಮೃತಧಾರೆ ಫ್ಯಾನ್ಸ್​!

ಸಾರಾಂಶ

ಗೌತಮ್​ ಮತ್ತು ಭೂಮಿಕಾ ದಂಪತಿಯ ಹಾಗೆ ಬಾಳುವುದನ್ನು ನೋಡಬೇಕು, ಬೇಗ ಕಿಸ್​ ಕೊಡಿಸ್ರಪ್ಪಾ ಎಂದು ಹೇಳುತ್ತಿದ್ದಾರೆ ಅಮೃತಧಾರೆ ಫ್ಯಾನ್ಸ್.  

ಪ್ರೀತಿ-ಗೀತಿ ಅನ್ನೋದೇ ಗೊತ್ತಿಲ್ಲದ ಗೌತಮ್​ಗೆ ಈಗ ಪತ್ನಿ ಭೂಮಿ ಮೇಲೆ ಲವ್​ ಶುರುವಾಗಿದೆ. ಅತ್ತ ಭೂಮಿಕಾ ಅಂತೂ ತನ್ನ ಪ್ರೀತಿಯನ್ನು ಪತಿಗೆ ಹೇಗೆ ತಿಳಿಸಬೇಕು ಎನ್ನುವುದನ್ನು ತಿಳಿಯದೇ ಕಸಿವಿಸಿಯಲ್ಲಿಯೇ ಇದ್ದಾಳೆ. ಅವಳು ಪ್ರೀತಿಯನ್ನು ತಿಳಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಪೆದ್ದು ಗೌತಮ್​ಗೆ ಗೊತ್ತೇ ಆಗುತ್ತಿಲ್ಲ. ಸ್ನೇಹಿತ ಆನಂದ್​, ಗೌತಮ್​ಗೆ ಚಾಲೆಂಜ್​ ಕೊಟ್ಟಿದ್ದ. ಪತ್ನಿಗೆ ಕಿಸ್​ ಮಾಡ್ಲೇಬೇಕು ಎನ್ನುವ ಚಾಲೆಂಜ್​ ಇದಾಗಿತ್ತು. ಇಲ್ಲದಿದ್ದರೆ ಪಾರ್ಟಿಯಲ್ಲಿ ಕುಡಿದ ವಿಷಯವನ್ನು ಅಜ್ಜಿಗೆ ತಿಳಿಸುವುದಾಗಿ ಹೇಳಿದ್ದ. ಗೌತಮ್​ಗೆ ಬೇರೆ ದಾರಿಯೇ ಇರಲಿಲ್ಲ. ಪತ್ನಿಗೆ ಕಿಸ್​ ಕೊಡಲೇಬೇಕು ಎಂದು ಹೋಗಿದ್ದ. ಅಷ್ಟರಲ್ಲಿಯೇ ಭೂಮಿಕಾ ಸಮೀಪ ಹಲ್ಲಿ ಬಂದು ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.  

ಇದೀಗ ಆಫೀಸ್​ನಲ್ಲಿ ಮೀಟಿಂಗ್​ ನಡೆಯುತ್ತಿದ್ದಾಗ ಭೂಮಿಕಾ ಫೋನ್​ ಬಂದಿದೆ. ಎಲ್ಲರೂ ಗೌತಮ್​ಗೆ ತಮಾಷೆ ಮಾಡಿದ್ದಾರೆ. ಭೂಮಿಕಾ ಇನ್ನೂ ಫೋನ್​ ಕಟ್​ ಮಾಡಿರಲಿಲ್ಲ. ಆ ವೇಳೆಗಾಗಲೇ ಭೂಮಿಗೆ ಕಿಸ್​ ಮಾಡುವಂತೆ ಗೌತಮ್​ಗೆ ಆನಂದ್​ ಮತ್ತೆ ಸಜೆಷನ್​ ಕೊಟ್ಟಿದ್ದಾನೆ. ಇದನ್ನೆಲ್ಲಾ ಭೂಮಿಕಾ ಕೇಳಿಸಿಕೊಂಡು ನಾಚಿ ನೀರಾಗಿದ್ದಾಳೆ. ಅಷ್ಟೊತ್ತಿಗಾಗಲೇ ಫೋನ್​ ಕಟ್​ ಆಗದೇ ಇರುವ ವಿಷಯ ಗೌತಮ್​ಗೆ ತಿಳಿದು ಗಾಬರಿಯಾಗಿದ್ದಾನೆ. ಅದೇನೇ ಇರಲಿ, ಡುಮ್ಮಾ ಸರ್​ ಬೇಗ ಪತ್ನಿಗೆ ಕಿಸ್​ ಕೊಡುವುದನ್ನು ನೋಡಬೇಕು ಅಂತಿದ್ದಾರೆ ಅಮೃತಧಾರೆ ಫ್ಯಾನ್ಸ್​. ಎಷ್ಟು ಅಂತ ಕಾಯಿಸುತ್ತೀರಾ, ಬೇಗ ಕಿಸ್​ ಕೊಡಿಸಿ, ಪತಿ-ಪತ್ನಿ ಲವ್​ ಸ್ಟೋರಿ ಇನ್ನೊಂದು ಹಂತಕ್ಕೆ ಹೋಗುವುದನ್ನು ನಾವು ನೋಡಬೇಕು ಎಂದು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ.

ಅಮಿತಾಭ್ ಆಸ್ಪತ್ರೆಗೆ ದಾಖಲಾಗ್ಲೇ ಇಲ್ವಾ? ಅಭಿ-ಐಷ್​ ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಇದೇನಿದು ಹೊಸ ವಿಷ್ಯ?

ಇದಾಗಲೇ, ಆನಂದ್​ ನೀಡಿದ್ದ ಕಿಸ್​ ಚಾಲೆಂಜ್​ ಪ್ರಕಾರ, ಭೂಮಿಕಾಗೆ ಹೇಗೆ ಕಿಸ್​ ಕೊಡುವುದು ಎನ್ನುವ ಗುಂಗಿನಲ್ಲಿ ಮನೆಗೆ ಹೋಗಿದ್ದ ಗೌತಮ್​. ಭೂಮಿಕಾ ಮಲಗಿದ್ದಳು. ಗೌತಮ್​ನ ಗೊರಕೆ ಶಬ್ದ ಕೇಳಿಸಬಾರದು ಎಂದು ದಿನವೂ ಕಿವಿಗೆ ಹತ್ತಿಹಾಕಿಕೊಂಡು ಮಲಗುತ್ತಾಳೆ ಇವಳು. ಗೌತಮ್​ ಪತ್ನಿಯನ್ನು ಕರೆದರೂ ಅವಳಿಗೆ ಅದು ಕೇಳಿಸಿರಲಿಲ್ಲ. ಕಿಸ್​ ಮಾಡುವುದು ಹೇಗೆ ಎನ್ನುವ ದೊಡ್ಡ ಚಿಂತೆಯಾಗುತ್ತಿದ್ದಂತೆಯೇ  ಅಲ್ಲೊಂದು ಹಲ್ಲಿ ಬಂದಿತ್ತು.  ಹಲ್ಲಿಯನ್ನು ಹುಷ್​ ಹುಷ್​ ಎಂದು ಓಡಿಸುವಷ್ಟರಲ್ಲಿಯೇ ಅದು ಭೂಮಿಕಾ ಮಲಗಿದ್ದ ಹಾಸಿಗೆ ಬಳಿ ಹೋಗಿತ್ತು. ಅದನ್ನು ಓಡಿಸಲು ಗೌತಮ್​ ಭೂಮಿಕಾ ಬಳಿ ಬರುತ್ತಿದ್ದಂತೆಯೇ, ಭೂಮಿಕಾಗೆ ಎಚ್ಚರವಾಗಿತ್ತು.  ಪತ್ನಿಗೆ ಕಿಸ್​ ಕೊಡಲು ಹಲ್ಲಿ ಸಹಾಯ ಮಾಡುತ್ತೆ ಎಂದು ಫ್ಯಾನ್ಸ್​ ಕಾದಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಮತ್ತೊಂದು ಟಿಪ್ಸ್​ ಕೊಟ್ಟಿದ್ದಾನೆ ಆನಂದ್​. 


ಅಷ್ಟಕ್ಕೂ ಅಮೃತಧಾರೆಯ ಆನಂದ್​ ಮತ್ತು ಗೌತಮ್​ ಫ್ರೆಂಡ್​ಷಿಪ್​ ಎಲ್ಲರಿಗೂ ತಿಳಿದದ್ದೇ. ಇದ್ದರೆ ಇರಬೇಕು ಇಂಥ ಸ್ನೇಹಿತರು ಎನ್ನುವಂಥ ಸ್ನೇಹ ಅಮೃತಧಾರೆ ಸೀರಿಯಲ್​ ಗೌತಮ್​ ಮತ್ತು ಆನಂದ್​ ಅವರದ್ದು. ಇದು ಧಾರಾವಾಹಿಯಾದರೂ ನಿಜ ಜೀವನದಲ್ಲಿ ಇಂಥ ಸ್ನೇಹಿತರು ಸಿಕ್ಕರೆ ಅವರೆಷ್ಟು ಪುಣ್ಯವಂತರು ಎನ್ನುತ್ತಿದ್ದಾರೆ ಪ್ರೇಕ್ಷಕರು. ಯಾರೇ ಕೈಬಿಟ್ಟರೂ ಕೊನೆಯವರೆಗೆ ಇರುವವರು, ನೋವಿನ ಕಾಲಕ್ಕೆ ಆಗುವವರು ಸ್ನೇಹಿತರೇ ಎನ್ನುವ ಮಾತಿದೆ. ಆದರೆ ಇದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಹುತೇಕ ಮಂದಿ ಬೆನ್ನಿಗೆ ಚೂರಿ ಹಾಕುವವರೇ ಇರುವ ಸಮಯದಲ್ಲಿ ಗೌತಮ್​ ಮತ್ತು ಆನಂದ್​ ಸ್ನೇಹ ಮಾತ್ರ ಸೀರಿಯಲ್​ ವೀಕ್ಷಕರಿಗೆ ಖುಷಿ ಕೊಡುವುದಂತೂ ಸುಳ್ಳಲ್ಲ. ರೊಮ್ಯಾನ್ಸ್​, ಪ್ರೀತಿ, ಪ್ರಣಯದ ಗಂಧ ಗಾಳಿಯೇ ಇಲ್ಲದ ಗೌತಮ್​ಗೆ ಇವೆಲ್ಲವನ್ನೂ ಹೇಳಿಕೊಡುವ ಆನಂದ್​ನ ಸ್ನೇಹದ ಪರಿಯೇ ಕುತೂಹಲವಾದದ್ದು. ತಮಾಷೆಯ ಧಾಟಿಯಲ್ಲಿ ಪತ್ನಿಯ ಮೇಲೆ ಮೋಹ ಹುಟ್ಟುವಂತೆ ಮಾಡುವಲ್ಲಿ ಆನಂದ್​ ಪಾಲು ಬಹುದೊಡ್ಡದಿದೆ.

ಮತ್ತೆ ಮದುಮಕ್ಕಳಾದ ತಾಂಡವ್​-ಭಾಗ್ಯ: ಮದ್ವೆ ಫೋಟೋದಲ್ಲಿ ನಾನ್ಯಾಕೆ ಇಲ್ಲ ಎಂದು ಪ್ರಶ್ನಿಸಿದ ಗುಂಡ!


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12 : ಬಿಗ್ ಬಾಸ್‌ನಲ್ಲಿ ಗಿಲ್ಲಿ ಗಿಮಿಕ್, ದಾಖಲೆಯಾಯ್ತು ಇನ್ಸ್ಟಾ ಫಾಲೋವರ್ಸ್‌
ಚೈತ್ರಾ ಕುಂದಾಪುರ, ಸ್ಪಂದನಾ ಸೋಮಣ್ಣ ನಡುವೆ ತಂದಿಟ್ಟು ನಕ್ಕ ವಿಲನ್‌ Bigg Boss; ಯಾಕ್ರೀ ಹೀಗ್‌ ಮಾಡ್ತೀರಾ?