ಬಿಗ್ ಬಾಸ್ ಆನೆ ವಿನಯ್ ಗೌಡ ರಾಂಗ್ ಆಗಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ಟ್ರೋಲರ್‌ಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು (ಮಾ.15): ತಮ್ಮ ಸಾಮಾಜಿಕ ಕಾರ್ಯಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಗಮನಸೆಳೆದಿರುವ ಅನು ಎನ್ನುವವರು, ಅನು ಅಕ್ಕ ಎಂದೇ ಫೇಮಸ್ ಆಗಿದ್ದಾರೆ. ಆದರೆ, ಇತ್ತೀಚೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಅತಿಥಿ ಉಪನ್ಯಾಸಕರ ಕುರಿತಾಗಿ ಮಾಡಿದ ಕಾಮೆಂಟ್ಸ್‌ನಿಂದಾಗಿ ಅವರು ಭಾರೀ ಸಮಸ್ಯೆಗೆ ಈಡಾಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಬರುತ್ತಿರುವ ಅಸಭ್ಯ ಕಾಮೆಂಟ್‌ಗಳ ಬಗ್ಗೆ ಇತ್ತೀಚೆಗೆ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ್ದ ಆಕೆ, ಇದರ ನಡುವೆ ಕಾಮೆಂಟ್ಸ್‌ಗಳನ್ನು ಕಂಡು ಲೈವ್‌ನಲ್ಲೇ ಕಣ್ಣೀರಿಟ್ಟಿದ್ದರು. ಬಣ್ಣವೇ ಕಾಣದ ಸರ್ಕಾರಿ ಶಾಲೆಗಳಿಗೆ ತಮ್ಮದೇ ಖರ್ಚಿನಲ್ಲಿ ಸಾಲ-ಸೋಲ ಮಾಡಿಕೊಂಡು ಸುಣ್ಣ-ಬಳಿಯುವ ಅನು ಇದೇ ಕೆಲಸಗಳ ಮೂಲಕೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಘಟನೆಯ ಬಳಿಕ ಸಾಕಷ್ಟು ಮಂದಿ ಅನು ಅವರ ನಿಸ್ವಾರ್ಥ ಸೇವೆಯನ್ನು ಗಮನಿಸಿ ಆಕೆಗೆ ಬೆಂಬಲ ನೀಡಿದ್ದರೆ, ಇನ್ನೂ ಕೆಲವರು ಆಕೆ ಅತಿಥಿ ಉಪನ್ಯಾಸಕರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಇದರ ನಡುವೆ ಬಿಗ್ ಬಾಸ್‌ನಲ್ಲಿ ಆನೆ ಎಂದೇ ಫೇಮಸ್ ಆಗಿದ್ದ ವಿನಯ್ ಗೌಡ, ಟ್ರೋಲರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿ ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ವಿನಯ್ ಗೌಡ ಹೇಳಿದ್ದೇನು?
ಇವತ್ತು ನಾನೊಂದು ವಿಡಿಯೋ ನೋಡಿದೆ. ಅಕ್ಕ ಎನ್ನುವವರು ಅಪ್‌ಲೋಡ್ ಮಾಡಿರುವ ವಿಡಿಯೋ ಅದು. ನೋಡಿ ತುಂಬಾ ಬೇಜಾರ್ ಆಯಿತು. ಸಿಕ್ಕಾಪಟ್ಟೆ ಬೇಜಾರ್ ಆಯಿತು. ಅವರು ಒಳ್ಳೊಳ್ಳೆ ಕೆಲಸಗಳನ್ನು ಮಾಡ್ತಾ ಇದ್ದಾರೆ. ಸರ್ಕಾರಿ ಶಾಲೆಗಳನ್ನು ಬೆಳೆಸೋದಕ್ಕೆ ಸ್ವಂತ ಹಣ ಯೂಸ್ ಮಾಡಿ, ಒಂದಷ್ಟು ಸಾಲ-ಸೋಲ ಮಾಡಿ ಕೆಲಸ ಮಾಡ್ತಿದ್ದಾರೆ. ಅವರಿಗೆ ಮೈ ಹುಷಾರಿಲ್ಲ., ಆರೋಗ್ಯ ಸರಿ ಇಲ್ಲ ಅಂದ್ರೂನು, ನಮ್ಮ ಫ್ಯುಚರ್‌ಗೆ ನಮ್ಮ ಮಕ್ಕಳ ಫ್ಯುಚರ್‌ಗೋಸ್ಕರ, ಸರ್ಕಾರಿ ಶಾಲೆಗಳನ್ನ ಪೇಂಟ್ ಮಾಡೋದು, ಕ್ಲೀನ್ ಮಾಡೋದು, ರಾತ್ರಿ ಹಗಲು ಅನ್ನೋದನ್ನ ನೋಡದೇ ಅಲ್ಲೇ ಮಲಗಿಕೊಳ್ಲೋದು, ಎಷ್ಟೆಲ್ಲಾ ಸಹಾಯ ಮಾಡ್ತಾ ಇದ್ದಾರೆ. ಈ ಕಾಮೆಂಟ್ಸ್ ಮಾಡೋದು, ಕೆಟ್ಟ ಕೆಟ್ಟದಾಗಿ ಬೈಯೋದು. ಅಸಹ್ಯವಾಗಿರೋ ಪದಗಳನ್ನ ಕಾಮೆಂಟ್‌ನಲ್ಲಿ ಯೂಸ್ ಮಾಡೋದು? ಏನ್ ಸಿಗತ್ತೆ ನಿಮಗೆ ಇದರಿಂದ?
undefined
ನಾನ್ ಹೇಳ್ತಾ ಇರೋದು ಈ ಫೇಕ್ ಕಾಮೆಂಟ್ಸ್, ಫೇಕ್ ಅಕೌಂಟ್ಸ್ ಇಟ್ಟುಕೊಂಡು ಕಾಮೆಂಟ್ಸ್ ಮಾಡುತ್ತಾರಲ್ಲ ಅವರ ಬಗ್ಗೆ. ನೀವ್ ಮಾಡ್ತಿರೋ ಕೆಲಸ.. ನಿಜವಾಗ್ಲೂ ನಿಮಗೆ ಇಷ್ಟ ಆಗ್ತಿದ್ರೆ. ನಿಮಗೆ ಮನಸ್ಸು ಅನ್ನೋದಿದ್ರೆ, ಮನುಷ್ಯತ್ವ ಅನ್ನೋದಿದ್ರೆ. ಒಂದ್ ಸಾರಿ ನಿಮ್ಮ ಮುಖನ ಕನ್ನಡಿನಲ್ಲಿ ನೋಡಿಕೊಳ್ಳಿ. ನಿಮ್ಮ ಅಕ್ಕ-ತಂಗಿಯರಿಗೆ, ತಾಯಿಗೆ ಅದೇ ಪದಗಳನ್ನ ಯೂಸ್ ಮಾಡಿ ನೋಡಿ, ಏನ್ ರಿಯಾಕ್ಷನ್ ಬರುತ್ತೆ ಅಂತಾ. ತಪ್ಪು ಅನ್ಸೋದಿಲ್ವಾ? ಪಾಪ ಅವರಿಗೆ ಆರೋಗ್ಯ ಸರಿ ಇಲ್ಲ ಅಂದ್ರೂನೂ, ಇಷ್ಟೆಲ್ಲಾ ಕೆಲ್ಸ ಮಾಡ್ತಿದ್ದಾರೆ. ಅದು ಸಾಲ ಮಾಡಿಕೊಂಡು ಮಾಡ್ತಿದ್ದಾರೆ. ನಮ್ಮ ಟ್ರೋಲ್ ಪೇಜ್‌ಗಳು, ನಮ್ಮ ಮೀಮ್ ಪೇಜ್‌ಗಳು ಅವರನ್ನಾದರೂ ನೋಡಿ ಕಲಿತುಕೊಳ್ಳಿ. ಒಂದು ಟ್ರೋಲ್ ಮಾಡಿದ್ರೂನೂ ಏನಾದ್ರೂ ಪಾಸಿಟಿವಿಟಿ ಇರುತ್ತೆ. ಅಂಥವರನ್ನ ನೋಡಿ ಈ ಫೇಕ್ ಅಕೌಂಟ್ ಇಟ್ಟುಕೊಂಡು ಫೇಕ್-ಫೇಕ್ ಆಗಿ ಕಾಮೆಂಟ್ ಮಾಡೋರು ಕಲಿಬೇಕು ನಿಜವಾಗಲೂ.
ನೆಕ್ಸ್ಟ್ ಏನಾಗಬಹುದು? ಸೈಬರ್ ಕ್ರೈಮ್‌ಗೆ ದೂರು ಹೋಗಬಹುದು. ಯಾರೆಲ್ಲಾ ನೆಗೆಟಿವ್ ಆಗಿ ಕಾಮೆಂಟ್ ಮಾಡ್ತಿದ್ದೀರೋ, ಕೆಟ್ಟ ಕೆಟ್ಟದಾಗಿ ಬರೆದಿದ್ದಾರೋ. ಅವರ ಅಡ್ರೆಸ್‌ಗಳು ಸಿಗುತ್ತೆ. ಸಿಗಲ್ಲ ಅಂತೇನಿಲ್ಲ. ಅದು ತೆಗೆಯೋದು ತುಂಬಾ ಈಸಿ. ಸಿಕ್ದಾಗ ಗೊತ್ತಲ್ವ ಏನಾಗುತ್ತೆ ಅಂತಾ. ಅಲ್ಲಿಯವರೆಗೂ ಹೋಗೋದ್ ಬೇಡ. ರಿಕ್ವೆಸ್ಟ್ ಮಾಡ್ತಾ ಇದ್ದೇನೆ. ಈ ಅಮ್ಮ.. ಅಕ್ಕ ಅನ್ನೋದಕ್ಕೆ ನಮಗೆ ಬರಲ್ಲ ಅಂತಾ ಅಲ್ಲ..ಅನ್ನಬಾರದು ಅಂತಾ ಅಷ್ಟೇ. ಅದು ಒಂದು ಗೌರವ. ಅಲ್ಲಿಯವರೆಗೂ ಎದುರು ಹಾಕಿಕೊಳ್ಳಬೇಡಿ.
ದಯವಿಟ್ಟು, ರಿಕ್ವೆಸ್ಟ್ ಮಾಡ್ತಿದ್ದೀನಿ. ಅನು ನನ್ನ ತಂಗಿ. ಅವಳಿಗೆ ಏನಾ ಆದ್ರೂನೂ ನನ್ನ ದಾಟಿಕೊಂಡೇ ಹೋಗಬೇಕು. ಆಕೆ ನನಗೆ ತುಂಬಾ ಬೆಂಬಲ ನೀಡಿದ್ದಾಳೆ. ನಾನು ಅನುನಾ ಮನಸಾರೆ ತಂಗಿ ಅಂತಾ ಒಪ್ಪಿಕೊಂಡಿದ್ದೇನೆ. ದಯವಿಟ್ಟು ಅವಳಿಗೆ ತೊಂದರೆ ಕೊಡಬೇಡಿ. ರಿಕ್ವೆಸ್ಟ್ ಮಾಡ್ತಿದ್ದೀನಿ. ತೊಂದರೆ ಕೊಡಬೇಡಿ.
ಮಹಿಳಾ ಸಾಧಕಿ ಪ್ರಶಸ್ತಿ ಪಡೆದು ಗಳಗಳನೇ ಅತ್ತ 'ಕನ್ನಡತಿ ಅಕ್ಕ ಅನು'; ಕೆಟ್ಟದಾಗಿ ಕಮೆಂಟ್ ಮಾಡದಂತೆ ಮನವಿ!
ತಮ್ಮ 2.10 ನಿಮಿಷದ ವಿಡಿಯೋದಲ್ಲಿ ಅನುಗೆ ತೊಂದರೆ ಕೊಡುತ್ತಿರುವ ಎಲ್ಲರಿಗೂ ವಿನಯ್ ಎಚ್ಚರಿಕೆ ನೀಡಿದ್ದಾರೆ. ಇನ್ನು ವಿನಯ್ ಅವರ ಮಾತಿಗೂ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. 'ವಿನಯ್ ಸರ್, ನೀವು ಹೇಳಿದ್ದು ನಿಜಾ ಯಾಕೆಂದರೆ ಒಳ್ಳೆಯ ಕೆಲಸ ಮಾಡುವವರಿಗೆ ಬೆಲೆ ಕೊಡುವವರಿಗಿಂತ, ಅವರ ಗೌರವಕ್ಕೆ ಧಕ್ಕೆ ತರುವ ಮಾತುಗಳು ಆಡ್ತಾರೆ ಅಷ್ಟೇ, ಕೆಟ್ಟದಾಗಿ ಮಾತಾಡಿರವರಿಗೆ ಯಾವ ರೀತಿಯಲ್ಲಿ ಬುದ್ಧಿ ಹೇಳಬೇಕು,ಹಾಗೆ ಹೇಳಿದ್ದೀರಾ ಈಗಲಾದರೂ ಕೆಲವರು ಬುದ್ಧಿ ಕಲಿಬೇಕು' ಎಂದ ಅಭಿಮಾನಿಯೊಬ್ಬರು ಬರೆದಿದ್ದಾರೆ.
ಡಿವೋರ್ಸ್ ಆದ 7 ತಿಂಗಳ ಬಳಿಕ ನಂಗೆ ಮಗು ಬೇಕು ಅನಿಸ್ತಿದೆ ಎಂದ ಮೆಗಾಸ್ಟಾರ್ ಮನೆ ಮಗಳು!