ಅಮೃತಧಾರೆ ಅಪೇಕ್ಷಾ ಕ್ಯೂಟ್ ವಿಡಿಯೋ ಮಾಡಿದ್ರೂ ಬಾಯಿಗೆ ಬಂದಂಗೆ ಬೈತಿರೋ ನೆಟ್ಟಿಗರು! ಏನಿದು ವಿಷ್ಯ?
ಇದ್ದರೆ ನಿಮ್ಮಂಥ ಅಕ್ಕ-ತಂಗಿ ಇರಬೇಕು ಎಂದು ಹಿಂದೊಮ್ಮೆ ಅಮೃತಧಾರೆಯ ಅಪ್ಪಿ ಉರ್ಫ್ ಅಪೇಕ್ಷಾ ಮತ್ತು ಭೂಮಿಕಾ ಸಹೋದರಿಯನ್ನು ತೋರಿಸಿ ಹೇಳುತ್ತಿದ್ದರು. ಆದರೆ ಈಗ ಈ ಅಕ್ಕ-ತಂಗಿ ವಾರೆಗಿತ್ತಿಯರಾಗಿದ್ದಾರೆ. ಭೂಮಿಕಾ ಈಗಲೂ ಅದೇ ಒಳ್ಳೆಯತನ ಉಳಿಸಿಕೊಂಡಿದ್ದರೆ, ಅಪೇಕ್ಷಾ ಸಂಪೂರ್ಣ ಬದಲಾಗಿದ್ದಾಳೆ. ವಿಲನ್ ಅತ್ತೆ ಜೊತೆ ಸೇರಿಕೊಂಡು ಖುದ್ದು ಅಕ್ಕಳಿಗೇ ವಿಲನ್ ಆಗಿಬಿಟ್ಟಿದ್ದಾಳೆ. ಅಷ್ಟಕ್ಕೂ ಅಪೇಕ್ಷಾ ಹೀಗೆ ಮಾಡಲು ಕಾರಣವೂ ಇದೆ. ಪಾರ್ಥನ ಜೊತೆ ತನ್ನ ಮದುವೆಯಾಗದಂತೆ ಮಾಡಲು ಅಕ್ಕ ಪ್ರಯತ್ನ ಪಟ್ಟಿದ್ದಾಳೆ ಎನ್ನುವ ತಪ್ಪು ತಿಳಿವಳಿಕೆಯಿಂದ ಆಕೆ ಅಕ್ಕನನ್ನು ಕಂಡರೆ ಗುರ್ ಎನ್ನುತ್ತಿದ್ದಾಳೆ.
ಅಷ್ಟಕ್ಕೂ, ಅಪೇಕ್ಷಾ ಮತ್ತು ಪಾರ್ಥ ಅವರ ಮದುವೆ ಹೇಗಾದರೂ ನಿಲ್ಲಿಸಬೇಕು ಎಂದು ವಿಲನ್ ಅತ್ತೆ ಶಕುಂತಲಾ ದೇವಿಯ ಮಾತಿಗೆ ಕಟ್ಟುಬಿದ್ದ ಭೂಮಿಕಾ, ಈ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದಳು. ಬುದ್ಧಿವಂತೆ ಆಗಿದ್ದ ಭೂಮಿಕಾ, ಈ ಒಂದು ವಿಷಯದಲ್ಲಿ ಅತ್ತೆಯ ಬಲೆಯೊಳಕ್ಕೆ ಸಿಲುಕಿಬಿಟ್ಟಳು. ಈಗ ಇದನ್ನೇ ಮುಂದು ಮಾಡಿಕೊಂಡು ಅತ್ತೆ ಅಪೇಕ್ಷಾಳ ತಲೆಯಲ್ಲಿ ವಿಷ ಬೀಜ ಬಿತ್ತಿದ್ದಾಳೆ. ತನ್ನ ಅಕ್ಕ ಹೇಗೆ ಎಂದು ಹುಟ್ಟಿನಿಂದಲೂ ನೋಡಿಕೊಂಡು ಬಂದಿದ್ದ ಅಪೇಕ್ಷಾಗೆ ಈಗ ಅತ್ತೆಯ ಮಾತೇ ಪ್ರಿಯ ಆಗಿಬಿಟ್ಟಿದೆ. ಅಕ್ಕನ ಮೇಲೆ ತಿರುಗಿ ಬೀಳುತ್ತಿದ್ದಾಳೆ.
ಈಕೆ ನಿಜಕ್ಕೂ ಹಿಟ್ಲರ್ ಕಲ್ಯಾಣ ಅಂತರನಾ? ಫ್ರಾಕ್ ಡಾನ್ಸ್ ನೋಡಿ ಭಲೆ ಭಲೆ ಎಂದ ಫ್ಯಾನ್ಸ್
ಇಂತಿಪ್ಪ ಅಪ್ಪಿ ಈಗ ಅಮೃತವರ್ಷಿಣಿ ಸಿನಿಮಾದ ಭಲೆ ಭಲೆ ಚಂದದ ಚೆಂದುಳ್ಳಿ ಹೆಣ್ಣೆ ನೀನು ಹಾಡಿಗೆ ರೀಲ್ಸ್ ಮಾಡಿದ್ದಾರೆ. ಆದರೆ ಈಕೆ ಅಮೃತಧಾರೆ ಸೀರಿಯಲ್‌ನಲ್ಲಿ ಅಕ್ಕನ ವಿರುದ್ಧವೇ ತಿರುಗಿ ಬಿದ್ದ ಕಾರಣ, ಅದು ಸೀರಿಯಲ್ ಅನ್ನೋದನ್ನೂ ಮರೆತ ನೆಟ್ಟಿಗರು ಥೂ ನಿನಗೆ ನಾಚಿಕೆ ಆಗಬೇಕು, ಸೌಂದರ್ಯ ಎನ್ನೋದು ಮುಖದಲ್ಲಿ ಅಲ್ಲ, ಮನದೊಳಗೆ ಇರಬೇಕು, ನೀನು ಸ್ವಂತ ಅಕ್ಕನನ್ನೇ ಧಿಕ್ಕರಿಸುವ ಹೆಣ್ಣು... ಹೀಗೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದಾರೆ. ವಿಲನ್ ಪಾತ್ರಧಾರಿಗಳು ಸಾಮಾನ್ಯವಾಗಿ ಇಂಥ ಕೆಟ್ಟ ಕಮೆಂಟ್ಸ್ ಕೇಳುವುದು ಮಾಮೂಲಾಗಿದೆ. ಅದರಂತೆಯೇ ಅಪ್ಪಿಗೂ ನೆಟ್ಟಿಗರು ಬೈಯುತ್ತಿದ್ದಾರೆ.
ಅಂದಹಾಗೆ, ಅಪ್ಪಿ ಪಾತ್ರಧಾರಿಯ ರಿಯಲ್ ಹೆಸರು ಅಮೃತಾ ನಾಯಕ್. ಇವರು ಒಂದು ಮೊಟ್ಟೆ ಕಥೆ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಟೀಚರ್ ಪಾತ್ರ ಮಾಡಿದ್ದಾರೆ. ಅಲ್ಲದೇ ಇವು ಶಿವರಾಜ್‌ಕುಮಾರ್ ಅವರ ಕವಚ ಸಿನಿಮಾದಲ್ಲಿ ತಂಗಿ ಪಾತ್ರ ಮಾಡಿದ್ದಾರೆ. ಅಮೃತಧಾರೆಗೂ ಮೊದಲು ಇವರು ರಾಜಿ ಸೇರಿ ಕೆಲವು ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಬಟ್ಟೆ ಚೇಂಜ್ ಮಾಡೋ ಹಾಗಿಲ್ಲ, ವಾಷ್‌ರೂಮ್‌ಗೆ ಹೋಗೋದೂ ಕಷ್ಟ: ನೋವು ತೋಡಿಕೊಂಡ ರಾಗಿಣಿ