ಡಾ. ಬ್ರೋ ಮೂಲಕವೇ ಕೋಟ್ಯಾಂತರ ಕನ್ನಡಿಗರ ಮನಸ್ಸು ಗೆದ್ದಿರುವ ಹುಡುಗ ಗಗನ್. ಅವರ ಪ್ರಾಮಾಣಿಕತೆ, ನಾಟಕವಿಲ್ಲದ ಮಾತು ಜನರಿಗೆ ಇಷ್ಟವಾಗುತ್ತದೆ. ಮನೆಯಲ್ಲೇ ಕುಳಿತು ದೇಶ ನೋಡುವ ಅವಕಾಶ ಮಾಡಿಕೊಟ್ಟಿರುವ ಡಾ. ಬ್ರೋ ಗಳಿಕೆ ಎಷ್ಟು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಡಾ. ಬ್ರೋ (Dr. Bro) ಮೂಲಕವೇ ಮನೆಮಾತಾಗಿರುವ ಯುಟ್ಯೂಬರ್ ಗಗನ್ (YouTuber Gagan) ತಿಂಗಳಿಗೆ ಎಷ್ಟು ಗಳಿಸ್ತಾರೆ? ಡಾ ಬ್ರೋ ಯುಟ್ಯೂಬ್ ಚಾನೆಲ್ (Youtube Channel) ನೋಡುವ ಬಹುತೇಕ ವೀಕ್ಷಕರ ಪ್ರಶ್ನೆ ಇದು. ಅದಕ್ಕೀಗ ಗಗನ್ ಉತ್ತರ ನೀಡಿದ್ದಾರೆ. ನಿನ್ನೆ ಲೈವ್ ಬಂದಿದ್ದ ಗಗನ್, ವೀಕ್ಷಕರ ಪ್ರಶ್ನೆಗಳಿಗೆ ಉತ್ತರ ನೀಡ್ತಾ ಹೋದ್ರು. ಈ ಸಮಯದಲ್ಲಿ ತಮಗೆ ತಿಂಗಳಿಗೆ ಯುಟ್ಯೂಬ್ ನಿಂದ ಬರುವ ಹಣವೆಷ್ಟು, ಅದ್ರಲ್ಲಿ ಎಲ್ಲ ಖರ್ಚು ಕಳೆದು ಎಷ್ಟು ಉಳಿಯುತ್ತೆ ಎಂಬುದನ್ನು ರಿವೀಲ್ ಮಾಡಿದ್ದಾರೆ.
ವಾಸ್ತವವಾಗಿ ಯುಟ್ಯೂಬ್ ಗಳಿಕೆಯನ್ನು ರಿವೀಲ್ ಮಾಡ್ಬಾರದು ಎನ್ನುವ ರೂಲ್ಸ್ ಇದೆ. ಆದ್ರೆ ಗಗನ್ ಅಭಿಮಾನಿಗಳ ಕುತೂಹಲವನ್ನು ತಣಿಸಿದ್ದಾರೆ. ತಮ್ಮ ಮೊಬೈಲ್ ಸ್ಕ್ರೀನ್ ತೋರಿಸ್ತಾ ತಿಂಗಳಿಗೆ ಇಷ್ಟು ಹಣ ಬರುತ್ತೆ ಎಂದಿದ್ದಾರೆ.
undefined
priyanka chopra : ಹೀಗ್ ಬಂದ್ ಹಾಗ್ ಹೋದ ಪ್ರಿಯಾಂಕ.. ರಾಯಲ್ ಲುಕ್ ನಲ್ಲಿ ಪಿಗ್ಗಿ ಮಿಂಚಿಂಗ್
ಡಾ. ಬ್ರೋ ಚಾನೆಲ್ ತಿಂಗಳ ಗಳಿಕೆ ಎಷ್ಟು? : ಕಳೆದ ಒಂದು ತಿಂಗಳ ನನ್ನ ಯುಟ್ಯೂಬ್ ಸಂಬಳ 2, 100 ಡಾಲರ್ ಎಂದು ಗಗನ್ ಹೇಳಿದ್ದಾರೆ. ಅಂದ್ರೆ ರೂಪಾಯಿಗೆ ಇದನ್ನು ಕನ್ವರ್ಟ್ ಮಾಡಿದ್ರೆ 1 ಲಕ್ಷದ 76 ಸಾವಿರ ರೂಪಾಯಿ ಗಳಿಸೋದಾಗಿ ಗಗನ್ ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಗಳಿಕೆ ಏನಕ್ಕೂ ಸಾಲೋದಿಲ್ಲ ಅನ್ನೋದು ಅವರ ಅಭಿಪ್ರಾಯ. ಗಳಿಕೆ ಜೊತೆ ಲೆಕ್ಕ ಬಿಚ್ಚಿಟ್ಟ ಡಾ. ಬ್ರೋ, ವಿದೇಶಕ್ಕೆ ಹೋಗಿ ಬರಲು 50 ಸಾವಿರ ರೂಪಾಯಿ ಬೇಕು. ಹೊಟೇಲ್ ರೆಂಟ್, ವಿಡಿಯೋ, ಎಡಿಟಿಂಗ್ ಜೊತೆ ನನ್ನ ಇಎಂಐ ಎಲ್ಲ ಖರ್ಚನ್ನು ಲೆಕ್ಕ ಹಾಕಿದ್ರೆ ನನ್ನ ಬಳಿ ತಿಂಗಳಿಗೆ 10 – 20 ಸಾವಿರ ಉಳಿಯುತ್ತೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗಗನ್ ಈ ಗಳಿಕೆ ರಿವೀಲ್ ವಿಡಿಯೋ ವೈರಲ್ ಆಗಿದೆ. ಗಗನ್ ಪ್ರಾಮಾಣಿಕವಾಗಿ ತಮ್ಮ ಗಳಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಕೆಲ ಅಭಿಮಾನಿಗಳು ಹೇಳಿದ್ರೆ ಮತ್ತೆ ಕೆಲವರು ಸುಳ್ಳು ಎಂದಿದ್ದಾರೆ. ಡಾ. ಬ್ರೋ ಯುಟ್ಯೂಬ್ ಚಾನೆಲ್ ಗೆ ಬರುವ ವೀವ್ಸ್ ನೋಡಿದ್ರೆ ಗಗನ್ ತಿಂಗಳಿಗೆ 25 ಲಕ್ಷಕ್ಕಿಂತ ಹೆಚ್ಚು ಗಳಿಸ್ತಾರೆ ಎಂದು ವೀಕ್ಷಕರು ವಾದ ಮುಂದಿಟ್ಟಿದ್ದಾರೆ. ಮಿಲಿಯನ್ಸ್ ನಲ್ಲಿ ವೀವ್ಸ್ ಬರುವ ಕಾರಣ ಗಗನ್ ಗಳಿಕೆ ಹೆಚ್ಚು ಅನ್ನೋದೇ ಅನೇಕರ ಅಭಿಪ್ರಾಯ.
ಈ ಲಕ್ಷ ಕೋಟಿಯಾಗ್ಲಿ ಎಂದು ಕೆಲ ಅಭಿಮಾನಿಗಳು ಹಾರೈಸಿದ್ದಾರೆ. ಗಳಿಕೆ ಎಷ್ಟೇ ಇರಲಿ, ಇದು ಪ್ರಾಮಾಣಿಕವಾಗಿ ಗಳಿಸಿದ ಹಣ, ಕಷ್ಟಪಟ್ಟು ಸಂಪಾದಿಸಿದ ಹಣ ಎಂಬ ಅಭಿಮಾನಿಗಳು, ಗಗನ್ ಪ್ರಾಮಾಣಿಕತೆಯನ್ನು ಮೆಚ್ಚಿದ್ದಾರೆ.
ಅಪರೂಪಕ್ಕೆ ಲೈವ್ ಬಂದಿದ್ದ ಗಗನ್, ಯುಟ್ಯೂಬ್ ನಲ್ಲಿ ಹಣ ಗಳಿಸಬೇಕು ಎನ್ನುವವರಿಗೆ ಸಾಕಷ್ಟು ಕಿವಿಮಾತು ಹೇಳಿದ್ದಾರೆ. ಮಧ್ಯಮ ವರ್ಗದಿಂದ ಬಂದಿರುವ ಡಾ. ಬ್ರೋಗೆ ಸಾಮಾನ್ಯರ ಸಮಸ್ಯೆ ಅರಿವಿದೆ. ಹಾಗಾಗಿಯೇ ಆರಂಭದಲ್ಲಿಯೇ ಆಡಂಬರ ಬೇಡ. ನಿಮ್ಮ ಕೈನಲ್ಲಿರುವಷ್ಟೆ ಖರ್ಚು ಮಾಡಿ ಗ್ಯಾಜೆಟ್ ಖರೀದಿ ಮಾಡಿ, ಇಲ್ಲವೆ ಇರುವ ಗ್ಯಾಜೆಟ್ ಬಳಸಿ ಎಂದಿದ್ದಾರೆ. ಆರಂಭದಲ್ಲಿ ತನ್ನ ಯುಟ್ಯೂಬ್ ಹೇಗಿತ್ತು ಎಂಬುದರಿಂದ ಹಿಡಿದು ಈಗ ಯಾವೆಲ್ ಅಪ್ಲಿಕೇಷನ್, ಗ್ಯಾಜೆಟ್ ಬಳಕೆ ಮಾಡ್ತಿದ್ದೇನೆ ಎಂಬುದನ್ನು ಗಗನ್ ಹೇಳಿದ್ದಾರೆ.
ಶಿಖರ್ ಧವನ್‌ಗೆ ಗಬ್ಬರ್ ಸಿಂಗ್ ಅಡ್ಡ ಹೆಸರಿನಿಂದ ಕರಿಯೋದು ಯಾಕೆ ಗೊತ್ತಾ..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಯುಟ್ಯೂಬ್ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ಗಗನ್ ಗಳಿಕೆ ಇಷ್ಟಕ್ಕೆ ಸೀಮಿತವಲ್ಲ. ಅವರು ಫೇಸ್ಬುಕ್ ಹಾಗೂ ಪ್ರಮೋಷನ್ ವಿಡಿಯೋಗಳಿಂದ ಹಣ ಸಂಪಾದನೆ ಮಾಡ್ತಾರೆ. ಜೊತೆಗೆ ಈಗ ಗೋ ಪ್ರವಾಸ ಶುರು ಮಾಡಿದ್ದು, ಅದ್ರ ಮೂಲಕ ಅನೇಕ ಅಭಿಮಾನಿಗಳನ್ನು ತಮ್ಮ ಜೊತೆ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದಾರೆ.