ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಹೃದಯ ಸಮಸ್ಯೆ ಇರೋರು ನೋಡ್ಬಾರ್ದಾ? ಏನಾಗ್ತಿದೆ ಇಲ್ಲಿ!

By Bhavani Bhat  |  First Published Aug 10, 2024, 6:00 PM IST

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಏಕಾಏಕಿ ಟರ್ನ್ ಪಡೆದುಕೊಂಡಿದೆ. ಇದನ್ನು ಹೃದಯ ಸಮಸ್ಯೆ ಇರೋರು ನೋಡಬಾರದಾ? ಅಂಥದ್ದೇನಿದೆ ಇದರಲ್ಲಿ?


ಕಲರ್ಸ್‌ ಕನ್ನಡದಲ್ಲಿ ಸಖತ್ ಪಾಪ್ಯುಲರ್ ಆಗ್ತಿರೋದು ಲಕ್ಷ್ಮೀ ಬಾರಮ್ಮ ಸೀರಿಯಲ್‌. ಮೊದಲೆಲ್ಲ ಸೋಬರ್ ಆಗಿ ಲಕ್ಷ್ಮೀಯ ಅದದೇ ಡೈಲಾಗ್ ಕೇಳಿ ರೋಸಿ ಹೋಗಿದ್ದ ವೀಕ್ಷಕರಿಗೆ ಇದೀಗ ನಿಜಕ್ಕೂ ಥ್ರಿಲ್ ಅನಿಸುವಂಥಾ ಎಪಿಸೋಡ್‌ಗಳು ಪ್ರಸಾರವಾಗಲಿದೆ.  ಕಳೆದ ಒಂದು ವಾರದಿಂದ ಸಿಕ್ಕಾಪಟ್ಟೆ ಟ್ವಿಸ್ಟ್ ಅಂಡ್ ಟರ್ನಿಂಗ್ ಈ ಸೀರಿಯಲ್‌ನಲ್ಲಿದೆ. ಇದೊಂದು ತ್ರಿಕೋನ ಪ್ರೇಮದ ಕಥೆಯಾದರೂ ಈ ಸೀರಿಯಲ್‌ನ ನಿಜ ಪ್ರೇಮಿಯನ್ನು ನಾಯಕ ವೈಷ್ಣವ್‌ ತಾಯಿ ಕಾವೇರಿ ಬೆಟ್ಟದ ಮೇಲಿಂದ ತಳ್ಳಿ ಸಾಯಿಸಿಬಿಟ್ಟಿದ್ದಾಳೆ. ಅಷ್ಟಕ್ಕೂ ಕೀರ್ತಿ ಅವಳಿಗೇನು ಮಾಡಿದ್ದಾಳೆ ಅಂದರೆ ದೊಡ್ಡ ಹಿಸ್ಟರಿಯೇ ಇದೆ. ಕಾವೇರಿಗೆ ತನ್ನ ಮಗ ವೈಷ್ಣವ್ ಬಗ್ಗೆ ವಿಪರೀತ ವ್ಯಾಮೋಹ. ಅದೇ ಮಗನ ಹಾಗೂ ಕೀರ್ತಿಯ ಪ್ರೇಮವನ್ನು ದೂರ ಮಾಡುವಂತೆ ಮಾಡಿದೆ. 

ಇದಕ್ಕಾಗಿಯೇ ಜ್ಯೋತಿಷ್ಯದ ನೆವದಲ್ಲಿ ಕೀರ್ತಿಯೇ ಮುಂದಾಗಿ ವೈಷ್ಣವ್‌ನಿಂದ ದೂರ ಹೋಗುವಂತೆ ಕಾವೇರಿ ತಂತ್ರ ಮಾಡಿದ್ದಾಳೆ. ವೈಷ್ಣವ್‌ಗೆ ಬೇರೆ ಮದುವೆ ಆಗಿ ಲಕ್ಷ್ಮೀ ಬಂದ ಮೇಲೂ ಸೊಸೆ ಹಾಗೂ ಮಗನ ನಡುವೆ ಆಪ್ತತೆ ಬೆಳೆಯದಂತೆ ಮಾಡಿದ್ದಾಳೆ. ಇದೇ ರಾಕ್ಷಸೀ ವ್ಯಾಮೋಹಕ್ಕೆ ಸಿಲುಕಿ ತನ್ನ ಅತ್ತೆಯನ್ನೂ ಮಗನಿಂದ ದೂರ ಮಾಡಿದವಳು ಈಕೆ. ಇದೀಗ ಕೀರ್ತಿಗೆ ಸತ್ಯ ತಿಳಿದಿದೆ. ಅವಳು ಹುಚ್ಚಳಂತೆ ಕಾವೇರಿಯನ್ನು ಕಾಡಿದಾಗ ಅವಳನ್ನೇ ಬೆಟ್ಟದ ಮೇಲಿಂದ ಕೆಳಗೆ ತಳ್ಳಿ ಸಾಯಿಸಿಬಿಟ್ಟಿದ್ದಾಳೆ. ಆದರೆ ಈಗ ಕೀರ್ತಿಯ ಹೊಸ ಅವತಾರವೊಂದು ಕಾಣಿಸಿಕೊಂಡಿದೆ.

Tap to resize

Latest Videos

ಕೀರ್ತಿಯ ಹೊಸ ಅವತಾರ ನೋಡಿ ವೀಕ್ಷಕರು ಬೆಚ್ಚಿಬಿದ್ದಿದ್ದಾರೆ. ಇದನ್ನು ಹೃದಯದ ಸಮಸ್ಯೆ ಇರುವವರು, ಗರ್ಭಿಣಿಯರು, ಮಕ್ಕಳು ನೋಡೋದು ಬೇಡ ಅನ್ನೋ ಮಾತು ಕೇಳಿ ಬರ್ತಿದೆ. ಕಾರಣ ಇದ್ದಕ್ಕಿದ್ದಂತೆ ಸೀರಿಯಲ್ ಕಥೆ ಹಾರರ್ ಜಾನರ್‌ಗೆ ಹೊರಳಿಕೊಂಡಿದೆ.  ಈಗ ಕಾವೇರಿಗೆ ಚೆನ್ನಾಗಿಯೇ ಅರ್ಥವಾಗಿದೆ ತನ್ನ ಪಾಪ ಕರ್ಮಗಳು ತನ್ನನ್ನು ಸುತ್ತುತ್ತಿವೆ ಎನ್ನುವುದು. ಹೀಗಾಗಿಯೇ ಆಗಾಗ ಭಯದಲ್ಲಿರುತ್ತಾಳೆ. ಈಗ ತಾನು ಮಾಡಿದ ಕರ್ಮದ ಕೆಲಸವೆಲ್ಲಾ ಕನಸಲ್ಲಿ ಬರುವುದಕ್ಕೆ ಶುರುವಾಗಿದೆ. ನೆಮ್ಮದಿಯಾಗಿ ನಿದ್ದೆಯನ್ನೇ ಮಾಡದಂತೆ ಮಾಡಿದೆ. ಕೀರ್ತಿಯನ್ನು ಕೊಂದಿದ್ದು, ಅತ್ತೆಗೆ ನೋವು ಕೊಟ್ಟಿದ್ದು ಎಲ್ಲವೂ ನಿದ್ದೆಯನ್ನು ಕಿತ್ತು ಕೊಳ್ಳುವಷ್ಟು ಕಾಡುತ್ತಿದೆ. ರಾತ್ರಿಯಿಡೀ ನಿದ್ದೆ ಮಾಡದೆ ಒದ್ದಾಡುತ್ತಿದ್ದಾಳೆ.  

ಕೊಲ್ಕತ್ತಾ: ಕಾಳಿಘಾಟ್ ಶಕ್ತಿಪೀಠದಲ್ಲಿ ಜಪ ಮಾಲೆ ಹಿಡಿದು, ಧ್ಯಾನಕ್ಕೆ ಕುಳಿತ ಪುಟ್ಟ ಗೌರಿ

ಕೀರ್ತಿ ಮಾತ್ರ ಕಾವೇರಿಯನ್ನು ಬಿಡದೇ ಕಾಡುತ್ತಿದ್ದಾಳೆ. ಸಾಯುವುದಕ್ಕೂ ಮುನ್ನ ಕೂಡ ಹೇಳಿನೇ ಸತ್ತಿದ್ದಾಳೆ. ನಾನು ನಿಮ್ಮನ್ನ ಬಿಡುವುದಿಲ್ಲ. ಸತ್ತ ಮೇಲೂ ಕಾಡುತ್ತೇನೆ ಎಂದೇ ಹೇಳಿದ್ದಳು. ಅದೆಲ್ಲವೂ ಈಗ ಕಾವೇರಿಯ ಭ್ರಮಾ ಲೋಕದಲ್ಲಿ ಸಂಚಾರವಾಗುತ್ತಿದೆ. ಕೀರ್ತಿ ತಾನೂ ಮದುಮಗಳ ವೇಷ ಧರಿಸಿಯೇ ಸತ್ತಿದ್ದಳು. ಇದೀಗ ವೇಷದಲ್ಲಿ ಕಾವೇರಿಯನ್ನು ಕಾಡುತ್ತಿದ್ದಾಳೆ. ಭರ್ಜರಿಯಾಗಿ ಇದರ ಪ್ರೋಮೋ ಪ್ರಸಾರವಾಗ್ತಿದೆ. ಇದನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.  'ಯಪ್ಪಾಆಆ ದೇವ್ರೇ ಈ ತರ ಎಪಿಸೋಡ್ ಯಾವ ಸೀರಿಯಲ್ ಅಲ್ಲೂ ಇದುವರೆಗೂ ಬಂದಿಲ್ಲ. ಭಯಂಕರ ಮರ್ರೆ' ಎಂದೆಲ್ಲ ಕಾಮೆಂಟ್ ಮಾಡ್ತಿದ್ದಾರೆ. ಈ ಪ್ರೋಮೋಗೂ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಈ ಸೀರಿಯಲ್ ವೀಕ್ಷಕರೆಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸೀರಿಯಲ್ ಅದ್ಭುತವಾಗಿ ಬರುತ್ತಿರುವುದಕ್ಕೆ ಫ್ಯಾನ್ಸ್ ಚಪ್ಪಾಳೆ ಹೊಡೆದಿದ್ದಾರೆ. ಅದರಲ್ಲೂ ಸಖತ್ ಟ್ವಿಸ್ಟ್ ಕೊಡಲು ಹೊರಟಿರುವ ಈ ಪ್ರೋಮೋ ನೋಡಿ ಸಿನಿಮಾಗೆ ಹೋಲಿಕೆ ಮಾಡುತ್ತಿದ್ದಾರೆ. ಬೆಸ್ಟ್ ಹಾರರ್ ಸಿನಿಮಾ ರೇಂಜಿಗಿದೆ ಈ ಪ್ರೋಮೋ ಎನ್ನುತ್ತಿದ್ದಾರೆ.
   

ಸದ್ಯ ಕಲರ್ಸ್ ಕನ್ನಡದ ಕೆಲವೊಂದು ಸೀರಿಯಲ್‌ಗಳು ಡಲ್ ಹೊಡೀತಿರೋ ಈ ಹೊತ್ತಲ್ಲಿ ಇಂಥದ್ದೊಂದು ರೆಸ್ಪಾನ್ಸ್ ಸೀರಿಯಲ್ ಟೀಮ್‌ಗೂ ಚೈತನ್ಯ ತಂದುಕೊಟ್ಟ ಹಾಗಿದೆ.

 

ಬ್ರಹ್ಮಗಂಟು ದೀಪಾಗೂ, ಜ್ಯೋತಿ ರೈಗೂ ಇದೆ ಲಿಂಕ್... ಸಡನ್ನಾಗಿ ಚೇಂಜ್ ಆದ ಇಬ್ಬರ ಲುಕ್!
 

click me!