ಅಗ್ನಿಸಾಕ್ಷಿ: ಚಂದ್ರಿಕಾ ಗುಟ್ಟು ಬಯಲಾಗಲು ಬೇಕಾಯ್ತು ವರ್ಷ 6!

Published : Mar 05, 2019, 12:23 PM ISTUpdated : Mar 05, 2019, 12:29 PM IST
ಅಗ್ನಿಸಾಕ್ಷಿ: ಚಂದ್ರಿಕಾ ಗುಟ್ಟು ಬಯಲಾಗಲು ಬೇಕಾಯ್ತು ವರ್ಷ 6!

ಸಾರಾಂಶ

ಕಡೆಗೂ 'ಅಗ್ನಿಸಾಕ್ಷಿ' ಧಾರಾವಾಹಿಗೆ ಸಿಕ್ಕಿದೆ ಬಿಗ್ ಟ್ವಿಸ್ಟ್. ಚಂದ್ರಿಕಾಳ ಕರಾಳ ಮುಖವಾಡ ಬಟಾ ಬಯಲಾಗಿದೆ. ಇನ್ನು ಮುಂದೆಯಾದರೂ ಡಿಂಪಲ್ ಜೋಡಿ ಮಾಡುತ್ತಾ ರೊಮ್ಯಾನ್ಸ್ ?

ರಾತ್ರಿ 8 ಗಂಟೆ ಆದ್ರೆ ಸಾಕು ಎಲ್ಲರೂ ‘ಅಗ್ನಿಸಾಕ್ಷಿ..’ ಧಾರಾವಾಹಿ ನೋಡುವುದ್ರಲ್ಲಿ ಬ್ಯುಸಿ. ಗಟ್ಟಿ ಧ್ವನಿಯೊಂದು ಕೇಳಿದರೆ, ರಿಮೋಟ್ ಹೆಂಗಸರ ಕೈಯಲ್ಲಿದೆ ಎಂದರ್ಥ.

ಸಿದ್ದಾರ್ಥ್- ಸನ್ನಿಧಿ ಜೋಡಿಯ ಡೆಡ್ಲಿ ಕಾಂಬಿನೇಷನ್‌ ಮಧ್ಯೆ ಹುಳಿ ಹಿಂಡುತ್ತಿದ್ದದ್ದು ಚಂದ್ರಿಕಾ. ಖಳ ನಟಿಯಾದರೂ ಚಂದ್ರಿಕಾಳ ಡ್ರೆಸ್ ಸೆನ್ಸ್, ಅಭಿನಯಕ್ಕೂ ಮಂದಿ ಫಿದಾ ಆಗಿದ್ದು ಸುಳ್ಳಲ್ಲ. ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಮೋಡಿ ಮಾಡಿದ ಡಿಂಪಲ್ ಜೋಡಿಯ ರೊಮ್ಯಾನ್ಸ್ ನೋಡ್ಬೇಕಾ? ಆಥವಾ ಚಂದ್ರಿಕಾಳ ಕುತಂತ್ರವೋವೆಂದು ಫುಲ್ ಕನ್ಫ್ಯೂಸ್‌ನಲ್ಲಿದ್ದ ಮಂದಿಗೆ ಧಾರಾವಾಹಿ ಆರಂಭವಾಗಿ ಆರು ವರ್ಷಗಳ ನಂತರ ಕ್ಲಿಯರ್ ಪಿಕ್ಚರ್ ಸಿಕ್ಕಂತಾಗಿದೆ.

ಎಲ್ಲರನ್ನೂ ಬುಗುರಿಯಂತೆ ಆಡಿಸಿ, ಮಜಾ ತೆಗೆದುಕೊಳ್ಳುತ್ತಿದ ಚಂದ್ರಿಕಾ ಈಗ ಅವಳೇ ತೋಡಿಕೊಂಡ ಪಾಯಕ್ಕೆ ಬಿದ್ದಿದ್ದಾಳೆ ಪಾಪ. ಕೌಶಿಕ್ ಮತ್ತು ತೇಜಸ್‌ರನ್ನು ಕೈಯಲ್ಲಿ ಹಿಡಿದುಕೊಂಡು, ತನ್ನ ನಾದಿನಿ ಅಂಜಲಿ ಹಾಗೂ ಮನೆಯವರನ್ನು ಖೆಡ್ಡಾಕ್ಕೆ ಬೀಳಿಸಲು ಸರ್ವ ಸಿದ್ಧಳಾಗಿದ್ದಳು. ವಂಚಿಸಿ, ವಂಚಿಸಿ ಅಭ್ಯಾಸವಾಗಿದ್ದ ಚಂದ್ರಿಕಾಗೆ ಇದೇನು ಹೊಸತಲ್ಲ. ಸಿಕ್ಕಾಪಟ್ಟೆ ವಿಶ್ವಾಸದಿಂದ ಬೀಗುತ್ತಿದ್ದಳು. ಸಧ್ಯ ಸಿಕ್ಕಿ ಬಿದ್ದಿದ್ದಾಳೆ. ಇತ್ತ ಟಿವಿ ಮುಂದೆ ಕೂರುತ್ತಿದ್ದ ಹೆಂಗಳೆಯರಿಗೂ ಸಿಕ್ಕಿದೆ ನೆಮ್ಮದಿ.

ಪ್ರೇಮಿಗಳ ದಿನದಂದೇ ದಾಂಪತ್ಯಕ್ಕೆ ಕಾಲಿಟ್ಟ 'ಅಗ್ನಿಸಾಕ್ಷಿ'ಯ ಸಿದ್ಧಾರ್ಥ!

ಚಂದ್ರಿಕಾಳ ಕ್ರಿಮಿನಲ್ ಮೈಂಡ್ ಬಗ್ಗೆ ಮನೆ ಮಂದಿಗೆ ತಿಳಿಸಲು ಭಗೀರಥ ಪ್ರಯತ್ನ ಮಾಡುತ್ತಿದ್ದ ಸನ್ನಿಧಿಯೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾಳೆ. ಸಾಕು ಈ ಗೋಳು, ಇನ್ನಾದರೂ ಈ ಮುದ್ದಾದ ಜೋಡಿ ರೊಮ್ಯಾನ್ಸ್ ಮಾಡಿಕೊಂಡು, ನೆಮ್ಮದಿಯಾಗಿರಲಿ ಎನ್ನುವುದು 'ಅಗ್ನಿಸಾಕ್ಷಿ' ಅಭಿಮಾನಿಗಳ ಅಂಬೋಣ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!