ಅಮಿತಾಭ್​ ಮೊಮ್ಮಗನ ಜೊತೆ ಡೇಟಿಂಗ್​ ಮಾಡ್ತಿರೋ ಶಾರುಖ್​ ಪುತ್ರಿ ಕೆಬಿಸಿಯಲ್ಲಿ! ಸುಹಾನಾಗೆ ಬಿಗ್​ಬಿ ಕೇಳಿದ್ದೇನು?

By Suvarna News  |  First Published Dec 6, 2023, 1:05 PM IST

ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​ ಅಮಿತಾಭ್​ ಬಚ್ಚನ್​ ಮೊಮ್ಮಗ ಅಗಸ್ತ್ಯ ನಂದಾ ಜೊತೆ ಡೇಟಿಂಗ್​ ಮಾಡುತ್ತಿದ್ದು, ಇದೀಗ ಕೌನ್​ ಬನೇಗಾ ಕರೋರ್​ಪತಿಯಲ್ಲಿ ಕಾಣಿಸಿಕೊಂಡಿದ್ದಾರೆ. 
 


ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಮತ್ತು ಅಮಿತಾಭ್​ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರು ಜೋಯಾ ಅಖ್ತರ್ ಅವರ 'ದಿ ಆರ್ಚೀಸ್' ಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಲಿದ್ದಾರೆ. ಡಿಸೆಂಬರ್ 7 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರ ಬಿಡುಗಡೆಯಾಗುವ ಮೊದಲೇ, ಅವರ ಡೇಟಿಂಗ್ ವದಂತಿಗಳು ವೇಗವಾಗಿ ಹರಡುತ್ತಿವೆ. ನಟ ಶಾರುಖ್ ಖಾನ್ (Shah Rukh Khan) ಮಗಳು ಸುಹಾನಾ ಖಾನ್​ಗೆ ಈಗ 22 ವರ್ಷ ವಯಸ್ಸು. ಇದಾಗಲೇ ಬಿಕಿನಿ ಡ್ರೆಸ್​ ತೊಟ್ಟು ಭಾರಿ ಸುದ್ದಿಯಾಗಿರೋ ಸುಹಾನಾ ಖಾನ್​ ತಮಗಿಂತ ಆರು ತಿಂಗಳು ಚಿಕ್ಕ ವಯಸ್ಸಿನ ಅಗಸ್ತ್ಯ ನಂದಾ ಜೊತೆ  ಹಲವು ಸ್ಥಳಗಳಲ್ಲಿ, ಪಾರ್ಟಿಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದು, ಭಾರಿ ಸದ್ದು ಮಾಡುತ್ತಿದ್ದಾರೆ. ಇದೀಗ ಶಾರುಖ್​ ಖಾನ್​ ಪುತ್ರಿ ಸುಹಾನಾ, ತಮ್ಮ ಡೇಟಿಂಗ್​ ಪಾರ್ಟನರ್​ ಅಗಸ್ತ್ಯರ ಅಜ್ಜ ಅಮಿತಾಭ್ ಅವರ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ 'ಕೌನ್ ಬನೇಗಾ ಕರೋರ್​ಪತಿ 15' ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಇವರಿಬ್ಬರ ಪ್ರಶ್ನೋತ್ತರ ನಡೆದಿದ್ದು, ಹಾಸ್ಯದ ಮಾತುಕತೆ ನಡೆದಿದೆ.

ನೀವು ಕೆಬಿಸಿಯಲ್ಲಿ ಬರುವುದನ್ನು ತಿಳಿದಾಗ ಶಾರುಖ್​ ಸಾಬ್​ ಏನು ಹೇಳಿದ್ರು ಎಂದು ಅಮಿತಾಭ್​ ಬಚ್ಚನ್​ ಕೇಳಿದ್ದಾರೆ. ಅದಕ್ಕೆ ಸುಹಾನಾ ಖಾನ್, ತಮಾಷೆಯಾಗಿ ನೀವು ಅವರ ಜೊತೆ ಹಲವು ಚಿತ್ರಗಳಲ್ಲಿ ಅಪ್ಪನ ಪಾತ್ರ ಮಾಡಿದ್ದೀರಿ. ಅದಕ್ಕಾಗಿ ನನಗೆ ಸುಲಭದ ಪ್ರಶ್ನೆ ಕೇಳಬೇಕೆಂದು ಕೋರಿಕೊಳ್ಳುತ್ತೇನೆ ಎಂದರು. 

Tap to resize

Latest Videos

ಅಭಿಷೇಕ್​ ಜೊತೆ ವಿಚ್ಛೇದನ ಸುದ್ದಿ ಬೆನ್ನಲ್ಲೇ ಮಗಳ ಜೊತೆ ಐಶ್ವರ್ಯ ರೈ ಡ್ಯಾನ್ಸ್​ ವೈರಲ್​!

ಅದೇ ಇನ್ನೊಂದೆಡೆ, ಸುಹಾನಾ ಖಾನ್​ ಕೆಬಿಸಿ ಶೂಟಿಂಗ್ ಮುಗಿಸಿ ಸೆಟ್‌ನಿಂದ ಹೊರಹೋಗುವ ವಿಡಿಯೋ ವೈರಲ್​ ಆಗುತ್ತಿದೆ. ಭರ್ಜರಿ ಮೇಕಪ್​ ಧರಿಸಿ ಬಂದಿರುವ ಸುಹಾನಾ,  ಬೂದು ಬಣ್ಣದ ಸ್ವೆಟ್‌ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ನೇರವಾದ ಹೇರ್ ಸ್ಟೈಲ್ ಮಾಡಿಕೊಂಡಿರುವ ಆಕೆ,  ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿದ್ದಾರೆ. ಇನ್ನು ಇವರಿಬ್ಬರ ದಿ ಆರ್ಚೀಸ್' ಚಿತ್ರದ ಕುರಿತು ಹೇಳುವುದಾದರೆ, ಜನಪ್ರಿಯ ಆರ್ಚೀಸ್‌ ಕಾಮಿಕ್ಸ್‌ ಸರಣಿಯ ಭಾರತೀಯ ರೂಪಾಂತರ ಇದಾಗಿದೆ.  ಈ ಜೋಡಿ ಮೊದಲು ಪ್ರೀತಿಸಿದ್ದು ಕೂಡ ಇದೇ  ಚಿತ್ರದ ಸೆಟ್​ನಲ್ಲಿ ಎನ್ನಲಾಗುತ್ತಿದೆ.  ಸುಹಾನಾ ವೆರೋನಿಕಾ ಲಾಡ್ಜ್ ಪಾತ್ರವನ್ನು ನಿರ್ವಹಿಸಿದ್ದರೆ, ಅಗಸ್ತ್ಯ ಆರ್ಚಿ ಆಂಡ್ರ್ಯೂಸ್ ಪಾತ್ರವನ್ನು ನಿರ್ವಹಿಸಿದ್ದಾರೆ. ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಕಿರಿಯ ಪುತ್ರಿ ಖುಷಿ ಕಪೂರ್ ಕೂಡ 'ಆರ್ಚೀಸ್' ಚಿತ್ರದ ಮೂಲಕ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ವೇದಾಂಗ್ ರೈನಾ, ಯುವರಾಜ್ ಮೆಂಡಾ, ಮಿಹಿರ್ ಅಹುಜಾ ಮತ್ತು ಅದಿತಿ 'ಡಾಟ್' ಸೆಹಗಲ್ ಕೂಡ ನಟಿಸಿದ್ದಾರೆ. 

ಅಂದಹಾಗೆ ಅಗಸ್ತ್ಯ, ಅಮಿತಾಭ್​ ಬಚ್ಚನ್ ಅವರ ಮಗಳು ಶ್ವೇತಾ ಬಚ್ಚನ್ ಅವರ ಮಗ. ಕೆಲ ತಿಂಗಳ ಹಿಂದೆ ನಡೆದ ಪಾರ್ಟಿಯೊಂದರಲ್ಲಿ ಸುಹಾನಾ ಖಾನ್​ (Suhana Khan) ಅವರನ್ನು ಕಾರು ಹತ್ತಿಸಿದ ಅಗಸ್ತ್ಯ ನಂದ ಪ್ರೀತಿಯ  ಫ್ಲೈಯಿಂಗ್ ಕಿಸ್​ ಕೊಟ್ಟಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಕಪೂರ್ ಕುಟುಂಬ ಆಯೋಜಿಸಿದ್ದ ಕ್ರಿಸ್ಮಸ್ ಪಾರ್ಟಿಯಲ್ಲಿ ಅಗಸ್ತ್ಯ ಹಾಗೂ ಸುಹಾನಾ ಅವರನ್ನು ತನ್ನ ಸಂಗಾತಿ ಎಂದು ಪರಿಚಯಿಸಿದರು ಎಂದು ಸುದ್ದಿ ಕೂಡ ಆಗಿತ್ತು.  ಇಬ್ಬರೂ  ಚಿತ್ರದ ಸೆಟ್ ಗಳಲ್ಲಿ ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತಿರುತ್ತಾರೆ ಎನ್ನಲಾಗಿದೆ. ಇವರಿಬ್ಬರು ಒಂದೇ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಂಡಿದ್ದು, "ಇವರಿಬ್ಬರು ಒಟ್ಟಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ, ಅಷ್ಟೇ ಅಲ್ಲದೆ ಅವರ ಬಾಂಧವ್ಯವನ್ನು ಗುಟ್ಟಾಗಿ ಇಡಲು ಕೂಡ ಯೋಚನೆ ಮಾಡೋದಿಲ್ಲ. ಆದರೂ ಇವರಿಬ್ಬರು ಈ ಬಗ್ಗೆ ಇನ್ನೂ ಅಧಿಕೃತವಾಗಿ ಹೇಳುವ ಯೋಜನೆಯನ್ನು ಹಾಕಿಕೊಂಡಿಲ್ಲ. ಪ್ರಾಜೆಕ್ಟ್‌ನಲ್ಲಿ (Project) ಕೆಲಸ ಮಾಡಿದವರಿಗೆಲ್ಲರಿಗೂ ಇವರಿಬ್ಬರ ಬಾಂಡಿಂಗ್ ಗೊತ್ತಿದೆ" ಎಂದು ಮೂಲಗಳು ಹೇಳಿವೆ. 

ಕಿರುತೆರೆಯಲ್ಲಿ ಇತಿಹಾಸ ಬರೆದ ಟಿಎನ್​ಸೀ ಹುಟ್ಟುಹಬ್ಬವಿಂದು: ನಟಿ ಮಾಳವಿಕಾ ಭಾವನಾತ್ಮಕ ಪೋಸ್ಟ್

 

 
 
 
 
 
 
 
 
 
 
 
 
 
 
 

A post shared by Voompla (@voompla)

click me!