ಕಿರುತೆರೆಯಲ್ಲಿ ಇತಿಹಾಸ ಬರೆದ ಟಿಎನ್​ಸೀ ಹುಟ್ಟುಹಬ್ಬವಿಂದು: ನಟಿ ಮಾಳವಿಕಾ ಭಾವನಾತ್ಮಕ ಪೋಸ್ಟ್

Published : Dec 06, 2023, 12:22 PM IST
ಕಿರುತೆರೆಯಲ್ಲಿ ಇತಿಹಾಸ ಬರೆದ ಟಿಎನ್​ಸೀ ಹುಟ್ಟುಹಬ್ಬವಿಂದು: ನಟಿ ಮಾಳವಿಕಾ ಭಾವನಾತ್ಮಕ ಪೋಸ್ಟ್

ಸಾರಾಂಶ

ಹಲವು ಜನಪ್ರಿಯ ಧಾರಾವಾಹಿಗಳನ್ನು ನೀಡಿರುವ ನಿರ್ದೇಶಕ, ನಟ, ನಿರ್ಮಾಪಕ ಮತ್ತು ಸಾಹಿತಿ ಟಿ.ಎನ್​. ಸೀತಾರಾಮ್​ ಅವರ ಜನ್ಮದಿನವಿಂದು. ನಟಿ ಮಾಳವಿಕಾ ಅವಿನಾಶ್​ ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ್ದಾರೆ.  

ಮಾಯಾಮೃಗ, ಮತ್ತೆ ಮಾಯಾಮೃಗ, ಮುಕ್ತ, ಮುಕ್ತ ಮುಕ್ತ, ಮನ್ವಂತರ... ಸೇರಿದಂತೆ ಕಿರುತೆರೆಯಲ್ಲಿ ಇತಿಹಾಸವನ್ನೇ ಸೃಷ್ಟಿಸಿರುವ ಹಲವು ಜನಪ್ರಿಯ ಧಾರಾವಾಹಿಗಳನ್ನು ನೀಡಿರುವ ನಿರ್ದೇಶಕ ಟಿ.ಎನ್​.ಸೀತಾರಾಮ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.  ಟಿ.ಎನ್​.ಸೀತಾರಾಮ್​ ಅವರ ಸೀರಿಯಲ್​ ಎಂದರೆ ಅದು ಜನಪ್ರಿಯವಾಗುವುದು ಗ್ಯಾರೆಂಟಿ ಎನ್ನುವಷ್ಟರ ಮಟ್ಟಿಗೆ ಇರುತ್ತದೆ. ಬದುಕಿನ ಕಷ್ಟ ಸುಖ, ಪರಂಪರೆ ಆಧುನಿಕತೆಯ ಮುಖಾಮುಖಿ, ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದ ಜನರ ಮಾನಸಿಕ ತುಮುಲಗಳು ಇವನ್ನೆಲ್ಲ ಚಿಕ್ಕ ಮಕ್ಕಳಿಗೂ ಅರ್ಥ ಆಗುವ ರೀತಿಯಲ್ಲಿ ಇವರು ಸೀರಿಯಲ್​ಗಳನ್ನು ಮಾಡುವುದೇ ಅದಕ್ಕೆ ಸಾಕ್ಷಿ. ವೃತ್ತಿಯಲ್ಲಿ ವಕೀಲರಾಗಿರುವ   ಸೀತಾರಾಮ್​ ಅವರು ವೃತ್ತಿಗಿಂತ ಹೆಚ್ಚು ವಕೀಲರಾಗಿ ಸೀರಿಯಲ್​ಗಳಲ್ಲಿ ಯಶಸ್ವಿಯಾದವರು.  ತಮ್ಮ ಬಹುತೇಕ ಸೀರಿಯಲ್​ಗಳಲ್ಲಿ ಲಾಯರ್ ಪಾತ್ರಗಳಲ್ಲಿಯೇ ಮಿಂಚುತ್ತಿರುವವರು.  ಕ್ರೌರ್ಯ, ಧರಣಿಮಂಡಲ ಮಧ್ಯದೊಳಗೆ, ಮತದಾನ, ಮೀರಾ ಮಾಧವ ರಾಘವ, ಮತದಾನ, ಪಲ್ಲವಿ. (ಕಿರುತೆರೆ ಧಾರವಾಹಿಗಳು) ಸಂಕಲನ, ಮಾಯಾಮೃಗ, ಮನ್ವಂತರ, ಮುಕ್ತ ಮಳೆಬಿಲ್ಲು, ಕಾಲೇಜು ರಂಗ, ಮುಖಾಮುಖಿ, ನಾವೆಲ್ಲರು ಒಂದೇ, (ಪತ್ತೇದಾರಿ) ಪ್ರಭಾಕರ್, ದಶಾವತಾರ, ಜ್ವಾಲಮುಖಿ, ಮುಕ್ತ ಮುಕ್ತ, ಮಹಾಪರ್ವ, ಮಗಳು ಜಾನಕಿ ಮೂಲಕ ಕನ್ನಡದ ದೃಶ್ಯ ಮಾಧ್ಯಮಗಳಲ್ಲೂ ತಮ್ಮ ಛಾಪು ಮೂಡಿಸಿದವರು. 

ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕದಲ್ಲಿ ಸಕ್ರಿಯವಾಗಿರುವ ಖ್ಯಾತ ನಿರ್ದೇಶಕ, ನಟ, ನಿರ್ಮಾಪಕ ಮತ್ತು ಸಾಹಿತಿ, ರಂಗಭೂಮಿಯಲ್ಲೂ ಹಲವು ನಾಟಕಗಳ ನಿರ್ಮಾಣ ಮಾಡಿರುವ ಸೀತಾರಾಮ್​ ಅವರಿಗೆ ಇಂದು ಜನ್ಮದಿನದ ಸಂಭ್ರಮ.  1948ರಲ್ಲಿ ಹುಟ್ಟಿರುವ ಸೀತಾರಾಮ್​ ಅವರು ಇವತ್ತು ಅಂದರೆ ಡಿಸೆಂಬರ್​ 6ರಂದು ತಮ್ಮ 75ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಯಸ್ಸು ಎನ್ನುವುದು ಕೇವಲ ದೇಹಕ್ಕೆ ಮಾತ್ರ ಎನ್ನುವುದನ್ನು ಇದಾಗಲೇ ವಿವಿಧ ಕ್ಷೇತ್ರಗಳಲ್ಲಿ ಆ್ಯಕ್ಟೀವ್​ ಆಗಿರುವ ಗಣ್ಯರು ಹಾಗೂ ಸೆಲೆಬ್ರಿಟಿಗಳು ತೋರಿಸುತ್ತಿದ್ದಾರೆ. ಅದೇ ರೀತಿ ಸೀತಾರಾಮ್​ ಅವರು ಕೂಡ. ವಯಸ್ಸು 75 ಆದರೂ ಇಂದಿಗೂ ಅವರು ಬಣ್ಣದ ಲೋಕದಲ್ಲಿ ಸಕ್ರಿಯರು. ಅಪಾರ ಅಭಿಮಾನಿಗಳನ್ನು ಹೊಂದಿರುವ ಸೀತಾರಾಮ್​ ಅವರಿಗೆ ಇಂದು ದೇಶದ ವಿವಿಧ ಮೂಲೆಗಳಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ.

ಸರ್​ ನೇಮ್​ ಹಿಡಿದು ಪ್ರತಿಯೊಂದನ್ನು ಹೆಣ್ಣೇ ಯಾಕೆ ತ್ಯಾಗ ಮಾಡ್ಬೇಕು? ಗೌತಮ್​ ಮಾತಿಗೆ ಚಪ್ಪಾಳೆಗಳ ಸುರಿಮಳೆ

ಅದೇ ರೀತಿ, ನಟಿ ಮಾಳವಿಕಾ ಅವಿನಾಶ್​ ಕೂಡ ಶುಭ ಕೋರಿದ್ದಾರೆ. ಅಂದಹಾಗೆ  ಸೀತಾರಾಮ್ ಅವರು ತಾವು ಮಾತ್ರವಲ್ಲದೇ ಹಲವು ಕಲಾವಿದರನ್ನು ಪರಿಚಯಿಸಿದವರು. ಹಲವರಿಗೆ ಅವರು ಗುರು ಕೂಡ. ಅವರ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಮಾಳವಿಕಾ ಅವಿನಾಶ್​ ಅವರೂ  ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಇದನ್ನೇ ಬರೆದುಕೊಂಡಿದ್ದಾರೆ. ತಮಗೆ ತಿಳಿದಿರುವ ಎಲ್ಲವನ್ನೂ ಅವರು ನನಗೆ ಕಲಿಸಿದರು. ನಟನೆ, ಜೀವನ, ಸಾಹಿತ್ಯ, ಕಾನೂನು, ಭಾಷೆ... ತಮಗೆ ಗೊತ್ತಿರುವ ಎಲ್ಲವೂ ಎಂದು ಬರೆದುಕೊಂಡಿರುವ ಮಾಳವಿಕಾ ಅವರು, ತಮ್ಮ ಗುರುವಿನ ಸಮಾನ ಟಿ.ಎನ್​.ಸೀತಾರಾಮ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.  

ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ (Malavika Avinash) ಆಗಾಗ್ಗೆ ಸೋಷಿಯಲ್​ ಮೀಡಿಯಾ ಮೂಲಕ ಕೆಲವೊಂದು ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುವ ಮಾಳವಿಕಾ ಅವರು ತಮಗೆ ಅನ್ನಿಸಿದ್ದನ್ನು ನೇರಾನೇರ ಹೇಳುತ್ತಾರೆ. ತಮ್ಮ ಅನುಭವದ ಸಾರವನ್ನು ಉಣಬಡಿಸುತ್ತಾರೆ.  ಇದೀಗ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಟಿ.ಎನ್​.ಸೀತಾರಾಮ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. 

ನೃತ್ಯದ ಮೂಲಕ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ ಶ್ರೀರಸ್ತು ಶುಭಮಸ್ತು ಪೂರ್ಣಿ ದಂಪತಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪತ್ನಿ, ಮಗಳ ಜೊತೆ ಹೋಗಿ ಮನೆಗೆ ಹೊಸ ಕಾರ್‌ ತಂದ Amruthadhaare Serial ನಟ ರಾಜೇಶ್‌ ನಟರಂಗ!
BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್‌ ಕೊಟ್ಟ ಗಿಲ್ಲಿ ನಟ