ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಾನು ಸಮುದ್ರಕ್ಕೆ ಬಿದ್ದು ನೆನಪು ಕಳೆದುಕೊಂಡಿದ್ದಾಳೆ. ಅವಳು ವಿಶ್ವನ ಮನೆಗೆ ಹೋಗುವ ಸಾಧ್ಯತೆಗಳಿವೆ. ಈ ರೋಚಕ ತಿರುವಿನಿಂದ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಸೀರಿಯಲ್ ರೋಚಕ ತಿರುವಿನೊಂದಿಗೆ ಮುನ್ನುಗ್ಗುತ್ತಿದೆ. ಸೈಕೋ ಗಂಡನ ಅತಿಯಾದ ಪ್ರೀತಿಯಿಂದ ನೊಂದಿದ್ದ ಜಾನು ಸಮುದ್ರಕ್ಕೆ ಜಿಗಿದಿದ್ದಳು. ಎಷ್ಟೇ ಹುಡುಕಾಡಿದ್ರೂ ಜಾನು ಸಿಕ್ಕರಲಿಲ್ಲ. ಹಾಗಾಗಿ ಒಲವಿನ ಮಡದಿಯನ್ನು ಕಳೆದುಕೊಂಡ ಜಯಂತ್ ಒಬ್ಬನೇ ಭಾರತಕ್ಕೆ ಹಿಂದಿರುಗಿದ್ದನು. ಜಯಂತ್ ಸೈಕೋ ಆದ್ರೂ ಪತ್ನಿಯ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದನು. ಇದೀಗ ತನ್ನ ಚಿನ್ನುಮರಿಯನ್ನು ಕಳೆದುಕೊಂಡ ಕಣ್ಣೀರು ಹಾಕುತ್ತಿದ್ದಾನೆ. ಪತ್ನಿ ತವರಿಗೆ ಬಂದು ಜಾನು ನಿಧನವಾಗಿರುವ ಸುದ್ದಿಯನ್ನು ಹೇಳಿದ್ದಾನೆ. ಜಾನು ಆಗಮನಕ್ಕಾಗಿ ಬಗೆ ಬಗೆಯ ತಿಂಡಿ ಮಾಡ್ಕೊಂಡು ಕಾಯ್ತಿದ್ದ ಕುಟುಂಬದಲ್ಲೀಗ ಶೋಕ ಮಡುಗಟ್ಟಿದೆ.
ಇಂದು ಬೆಳಗ್ಗೆ ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದೆ. ಚೆನ್ನೈನ ಸಮುದ್ರದಡದಲ್ಲಿ ಜಾನು ಸಿಕ್ಕಿದ್ದನ್ನು ಕಂಡು ಪ್ರೇಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿರುವ ಜಾನು ಮುಂದಿನ ಹಾದಿ ಏನು ಎಂಬುದರ ಬಗ್ಗೆ ಪ್ರೇಕ್ಷಕರು ತಮ್ಮ ತಮ್ಮಲ್ಲಿಯೇ ಚರ್ಚೆ ನಡೆಸುತ್ತಿದ್ದಾರೆ. ಜಾನು ಸತ್ತಿದ್ದಾಳೆ ಎಂದು ಲಕ್ಷ್ಮೀ ನಿವಾಸದ ಕುಟುಂಬಸ್ಥರಿಗೆ ಗೊತ್ತಿಲ್ಲ.
ವಿಶ್ವನ ಮನೆಗೆ ಬರ್ತಾಳಾ ಜಾನು?
ವಿಶ್ವನ ತಂದೆ ಕೆಲಸದ ನಿಮಿತ್ ಚೆನ್ನೈಗೆ ತೆರಳಿದ್ದಾರೆ. ಜಾನು ಸಹ ಚೆನ್ನೈನ ಬೀಚ್‌ನಲ್ಲಿ ಸಿಕ್ಕಿದ್ದಾಳೆ. ಹಾಗಾಗಿ ಈ ಎರಡೂ ಸನ್ನಿವೇಶಗಳನ್ನು ವೀಕ್ಷಕರು ಲಿಂಕ್ ಮಾಡುತ್ತಿದ್ದಾರೆ. ಸಮುದ್ರಕ್ಕೆ ಜಿಗಿದಿರುವ ಕಾರಣ, ಜಾನು ನೆನಪಿನ ಶಕ್ತಿ ಕಳೆದುಕೊಂಡಿರುವ ಸಾಧ್ಯತೆಗಳಿವೆ. ಚೆನ್ನೈನ ಬೀಚ್‌ನಲ್ಲಿ ಜಾನು ಮತ್ತು ವಿಶ್ವನ ತಂದೆ ಮುಖಾಮುಖಿಯಾಗಬಹುದು. ಅಲ್ಲಿಂದ ಚಿನ್ನುಮರಿಯನ್ನು ತನ್ನ ಮನೆಗೆ ಕರೆದುಕೊಂಡು ಬರೋ ಸಾಧ್ಯತೆಗಳಿವೆ. ಜಾನು ತನ್ನ ತಂಗಿ ಲಕ್ಷ್ಮೀಯ ಮಗಳು ಎಂದು ವಿಶ್ವನ ತಂದೆಗೆ ಗೊತ್ತಿಲ್ಲ. ವಿಶ್ವನ ತಾಯಿ ಲಲಿತಾಗೂ ಜಾನು ಯಾರು ಎಂದು ಗೊತ್ತಿಲ್ಲ. ನೆನಪಿನಶಕ್ತಿ ಕಳೆದುಕೊಂಡ ಜಾನು, ವಿಶ್ವನ ಮನೆಯಲ್ಲಿ ಆಶ್ರಯ ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಜಾಹ್ನವಿ ಜಾಲದಲ್ಲಿ ಜಯಂತ್ ಬಂಧಿ.., ಗಂಡನ ಮೇಲಿನ ಕೋಪಕ್ಕೆ ಒಂದು ಪ್ರಾಣನೇ ಹೋಗುತ್ತಾ?
ಜಾನು ನೋಡಲು ಬಂದ ವಿಶ್ವ!
ಜಾನ ನೋಡಲು ಜಯಂತ್‌ನ ಮನೆಗೆ ವಿಶ್ವ ಬಂದಿದ್ದಾನೆ. ಕಾಲ್ ಮಾಡಿದ್ರೂ ಜಾನು ಸಂಪರ್ಕಕ್ಕೆ ಸಿಗದ ಕಾರಣ ವಿಶ್ವ ನೇರವಾಗಿಯೇ ಭೇಟಿಯಾಗಲು ಬಂದಿದ್ದನು. ಎಷ್ಟೇ ಕೂಗಿದರೂ ಮನೆಯಿಂದ ಯಾವುದೇ ಉತ್ತರ ಬಾರದ ಹಿನ್ನೆಲೆ ಪತ್ರ ಬರೆದಿಟ್ಟು ಹೋಗಿದ್ದಾನೆ. ಪತ್ರದ ಕೊನೆಯಲ್ಲಿ ತನ್ನ ಹೆಸರಿನ ಬದಲಾಗಿ ಗೂಬೆ ಎಂದು ಬರೆದಿದ್ದಾನೆ. ಅಲ್ಲಿಂದ ಹೋಗುವಷ್ಟರಲ್ಲಿ ಜಯಂತ್‌ನ ಕೈಯಲ್ಲಿ ವಿಶ್ವ ತಗ್ಲಾಕೊಂಡಿದ್ದನು. ನಂತರ ಅಲ್ಲಿ ಏನೋ ಸುಳ್ಳು ಹೇಳಿ ವಿಶ್ವ ಎಸ್ಕೇಪ್ ಆಗಿದ್ದನು.
ಜಯಂತ್‌ನ ಮೇಲೆ ಭಾವನ ಮತ್ತು ಸಂತೋಷ್‌ಗೆ ಅನುಮಾನ
ಇನ್ನು ಜಯಂತ್‌ನ ಮೇಲೆ ಭಾವನ ಮತ್ತು ಸಂತೋಷ್‌ಗೆ ಅನುಮಾನ ಮೂಡಿದೆ. ಶ್ರೀಲಂಕಾದಲ್ಲಿ ಜಾನು ಖುಷಿಯಾಗಿರಲಿಲ್ಲ. ಅಮ್ಮನ ಜೊತೆ ಫೋನ್‌ನಲ್ಲಿ ಮಾತನಾಡುವ ಚೆನ್ನಾಗಿರಲಿಲ್ಲ. ಏನಾಗಿದೆ ಅಂತ ಕೇಳಿದಾಗ ಚೆನ್ನಾಗಿಯೇ ಇದ್ದೀನಿ ಎಂದು ಸುಳ್ಳು ಹೇಳಿದ್ದಳು. ಈ ವಿಷಯವನ್ನು ನನ್ನಿಂದ ನಂಬೋಕೆ ಆಗ್ತಿಲ್ಲ ಎಂದು ಭಾವನಾ ಹೇಳಿದ್ದಾಳೆ. , ನಿಮ್ಮ ಜೊತೆಯಲ್ಲಿರುವಾಗಲೇ ಸಮುದ್ರಕ್ಕೆ ಬಿದ್ದಳು ಎಂದು ಸಂತೋಷ್ ಪ್ರಶ್ನೆ ಮಾಡಿದ್ದಾನೆ.
ಇದನ್ನೂ ಓದಿ: 'ಟಾಕ್ಸಿಕ್ ರಿಲೇಶನ್‌ಶಿಪ್‌ನಲ್ಲಿದ್ದೆ, ಸಾಕಾಗಿದೆ; ಈಗ ಅರೆಂಜ್ ಮ್ಯಾರೇಜ್ ಆಗ್ತೀನಿ': ʼಲಕ್ಷ್ಮೀ ನಿವಾಸʼ ನಟಿ ರೂಪಿಕಾ!