ದರ್ಶನ್ ಜೈಲಿಗೆ, ಕಿಲ್ಲಿಂಗ್ ಸ್ಟಾರ್ ಬಗ್ಗೆ ಅಪ್ಡೇಟ್ ನೀಡ್ತಿದ್ದ ಲಾಯರ್ ‌ಬಿಗ್ ಬಾಸ್‌ಗೆ..

By Santosh Naik  |  First Published Sep 28, 2024, 9:24 PM IST

ಇತ್ತೀಚಿನ ದಿನಗಳಲ್ಲಿ ತಮ್ಮ ಸೋಶಿಯಲ್‌ ಮೀಡಿಯಾ ಕಂಟೆಂಟ್‌ಗಳ ಕಾರಣಕ್ಕಾಗಿಯೇ ಸುದ್ದಿಯಲ್ಲಿದ್ದ ವಕೀಲ ಕೆಎನ್‌ ಜಗದೀಶ್‌ ಕುಮಾರ್‌ ಬಿಗ್‌ ಬಾಸ್‌ ಮನೆಗೆ ಹೋಗುವ ಲಿಸ್ಟ್‌ನಲ್ಲಿದ್ದಾರೆ. ಈ ಬಗ್ಗೆ ಕಲರ್ಸ್‌ ಕನ್ನಡ ಅಪ್‌ಡೇಟ್‌ ನೀಡಿದೆ.


ಬೆಂಗಳೂರು (ಸೆ.28): ರಾಜ್ಯದಲ್ಲಿ ಯಾವುದೇ ಹೈವೋಲ್ಟೇಜ್‌ ಪ್ರಕರಣವಾದರೂ ಅದರ ಹಿಂದೆ ನಿಂತು ಮಾತನಾಡುವ ವಕೀಲ ಕೆಎನ್‌ ಜಗದೀಶ್‌ ಕುಮಾರ್‌ 11ನೇ ಆವೃತ್ತಿಯ ಬಿಗ್‌ ಬಾಸ್ ಮನೆಗೆ ಹೋಗುವ ಸಾಧ್ಯತೆ ಇದೆ. ಈ ಬಗ್ಗೆ ಕಲರ್ಸ್‌ ಕನ್ನಡ ವಾಹಿನಿಯೇ ಅಪ್‌ಡೇಟ್‌ ನೀಡಿದೆ. ರಾಜ ರಾಣಿ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಕಲರ್ಸ್‌ ಕನ್ನಡ, ಕೆಎನ್‌ ಜಗದೀಶ್‌ ಅವರ ಫೋಟೋ ರಿಲೀಸ್ ಮಾಡಿ ಇವರು ಬಿಗ್‌ ಬಾಸ್‌ ಮನೆಯ ಸ್ವರ್ಗ ಅಥವಾ ನರಕಕ್ಕೆ ಯಾವುದಕ್ಕೆ ಹೋಗಬೇಕು ಎಂದು ವೋಟ್‌ ಮಾಡಲು ಹೇಳಿದೆ. ಈ ವೋಟಿಂಗ್‌ನ ಆಧಾರದ ಮೇಲೆ ಬಿಗ್‌ ಬಾಸ್‌ ಮನೆಯಲ್ಲಿ ಅವರು ಸ್ವರ್ಗಕ್ಕೆ ಹೋಗುತ್ತಾರೋ? ನರಕಕ್ಕೆ ಹೋಗುತ್ತಾರೋ? ಎನ್ನುವುದು ನಿರ್ಧಾರವಾಗಿದೆ. ಇದಕ್ಕಾಗಿ ಜಿಯೋ ಆಪ್‌ನಲ್ಲಿ ವೋಟಿಂಗ್‌ ಮಾಡುವಂತೆ ಹೇಳಿದೆ. ಇತ್ತೀಚೆಗೆ ಕಿಲ್ಲಿಂಗ್‌ ಸ್ಟಾರ್‌ ದರ್ಶನ್‌ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಅವರ ಪರವಾಗಿ ಮಾತನಾಡುವ ಮೂಲಕ ದರ್ಶನ್‌ ಅಭಿಮಾನಿಗಳ ಕೃಪೆಗೆ ಪಾತ್ರರಾಗಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಇವರ ಪೋಸ್ಟ್‌ಗಳು ಹಾಗೂ ಹೇಳಿಕೆಗಳು ವೈರಲ್‌ ಆಗುತ್ತಿರುವ ನಡುವೆಯೇ ಅವರು ಬಿಗ್‌ ಬಾಸ್‌ಗೆ ಎಂಟ್ರಿ ಕೊಡುವ ವಿಚಾರ ಹೊರಹೊಮ್ಮಿದೆ.

ಕೆಎನ್‌ ಜಗದೀಶ್‌ ಎರಡು ದಶಕಗಳ ಹಿಂದೆ ಬರೀ ಕಾಮನ್‌ ಮ್ಯಾನ್‌ ಆಗಿದ್ದವು. ನಂತರದಲ್ಲಿ ಬೆಂಗಳೂರಿನಲ್ಲಿ ಆರ್‌ಟಿಐ ಕಾರ್ಯಕರ್ತನಾಗಿ ಹೆಸರು ಮಾಡಿದ್ದ ಇವರೀಗ ಕಪ್ಪು ಕೋಟ್‌ ತೊಟ್ಟು ಪೊಲೀಸ್‌ ಇಲಾಖೆಯ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದಾರೆ. ಇತ್ತೀಚೆಗೆ, ಕರ್ನಾಟಕದ ಮಾಜಿ ಸಿಎಂ ಒಬ್ಬರ ಸೆಕ್ಸ್ ವಿಡಿಯೋ ಇದೆ ಎಂದು ಹೇಳುವ ಮೂಲಕ ದೊಡ್ಡ ಸುದ್ದಿ ಮಾಡಿದ್ದರು. ಅದಕ್ಕೂ ಮುನ್ನ ರಮೇಶ್‌ ಜಾರಕಿಹೊಳಿ ಸಿಡಿ ಕೇಸ್‌ನಲ್ಲಿ, ಸಂತ್ರಸ್ತ ಯುವತಿಯ ಪರವಾಗಿ ನಿಂತು ವಾದ ಮಾಡುವುದಾಗಿ ಹೇಳುವ ಮೂಲಕ ಸುದ್ದಿ ಮಾಡಿದ್ದರು.

ಕೆಎನ್‌ ಜಗದೀಶ್‌ ಬೆಂಗಳೂರಿನ ಕೂಡಿಗೆಹಳ್ಳಿ ನಿವಾಸಿ. ಮೊದಲು ಆರ್‌ಟಿಐ ಕಾರ್ಯಕರ್ತ. ಸ್ವತಃ ಪತ್ನಿಯೇ ಇವರ ಮೇಲೆ ವರದಕ್ಷಿಣಿ ಕಿರುಕುಳ ಆರೋಪ ಹೊರಿಸಿ ದೂರ ಆಗಿದ್ದಾರೆ.  ಇವರಿಂದ ದೂರವಾಗಿದ್ದ ತಾಯಿ ಕೂಡ ಇತ್ತೀಚೆಗೆ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ.

Latest Videos

undefined

ಬಿಗ್‌ಬಾಸ್‌ ಕನ್ನಡ ಸೀಸನ್ 1 ರಿಂದ 10ರವರೆಗೆ 50 ಲಕ್ಷ ಗೆದ್ದವರಿವರು!

2010ರಲ್ಲಿ ಸಮಯದಲ್ಲಿ ಇವರ ಹೆಸರಿನಲ್ಲಿ ತೆಗೆದ ಆರ್‌ಟಿಐ ಮಾಹಿತಿಗಳು ಮಾಧ್ಯಮ ಕಚೇರಿಗೆ ಹೋಗುತ್ತಿದ್ದವು. ಆರ್‌.ಅಶೋಕ್‌ ಅವರ ಸಂಬಂಧಿಗಳ ಕೂಡಿಗೆಹಳ್ಳಿ ಭೂ ಅಕ್ರಮದ ದಾಖಲೆಗಳನ್ನು ಮೊದಲು ಮಾಧ್ಯಮಕ್ಕೆ ನೀಡಿದವರೂ ಕೂಡ ಇವರೇ. ಬಳಿಕ ಆರ್‌.ಅಶೋಕ್‌ ಸಂಬಂಧಿಗಳ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ಇದರ ಬೆನ್ನಲ್ಲಿಯೇ ಅವರ ವಿರುದ್ಧ ಕ್ರಿಮಿನಲ್‌ ಕೇಸ್‌ಗಳೂ ಬಿದ್ದಿದ್ದವು. ಆ ಬಳಿಕ ಅವರು ರೌಡಿಶೀಟರ್‌ ಆಗಿ ಬದಲಾದರು.

ಕಿಪಿ ಕೀರ್ತಿ ಬಂದ್ರೆನೇ ಬಿಗ್ ಬಾಸ್ ನೋಡೋದು; ವೈಲ್ಡ್‌ ಕಾರ್ಡ್‌ ಎಂಟ್ರಿ ಫಿಕ್ಸ್?

'ನ್ಯಾಯ ಹುಡುಕೋದಿಕ್ಕೋಸ್ಕೋರ ನಾನು ಯಾವ ಮಟ್ಟಕ್ಕೆ ಬೇಕಾದ್ರೂ ಹೋಗುತ್ತೇನೆ. ಒಂದು ಸಲ ನಾನು ಡಿಸೈಡ್‌ ಮಾಡಿದ್ರೆ, ನನ್ನ ಮಾತು ನಾನೇ ಕೇಳಲ್ಲ.' ಎಂದು ಕೆಎನ್‌ ಜಗದೀಶ್‌ ಬಿಗ್‌ ಬಾಸ್‌ ಪ್ರೋಮೋದಲ್ಲಿ ಹೇಳಿದ್ದಾರೆ.

Unexpected - Lawyer Jagadish to enter the house of as 2nd Contestant 😂🔥 pic.twitter.com/1VE7Ydsc0j

— B B K 11 👁️‍🗨️👁️ (@MadhuT512865)
click me!