ರಾಜಾ ರಾಣಿ ವೇದಿಕೆಗೆ ಬರುತ್ತಿದ್ದಂತೆ ಕಣ್ಣೀರಿಟ್ಟ ಅದಿತಿ ಪ್ರಭುದೇವ

Published : Jun 08, 2024, 08:46 PM IST
ರಾಜಾ ರಾಣಿ ವೇದಿಕೆಗೆ ಬರುತ್ತಿದ್ದಂತೆ ಕಣ್ಣೀರಿಟ್ಟ ಅದಿತಿ ಪ್ರಭುದೇವ

ಸಾರಾಂಶ

ಮೊದಲ ಎರಡು ಸೀಸನ್‌ನಲ್ಲಿ ನಟ ಸೃಜನ್ ಲೋಕೇಶ್ (Actor Srujan Lokesh), ಹಿರಿಯ ನಟಿ ತಾರಾ ಅನುರಾಧಾ (Actress Tara Anuradha) ತೀರ್ಪುಗಾರರಾಗಿದ್ದಾರೆ. ಮೂರನೇ ಸೀಸನ್‌ಗೆ ಹೊಸ ತೀರ್ಪುಗಾರರಾಗಿ ಅಪ್ಪಟ್ಟ ಕನ್ನಡತಿ, ಪ್ರತಿಭಾನ್ವಿತ ನಟಿ ಅದಿತಿ ಪ್ರಭುದೇವ ಆಗಮಿಸಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರೋ ರಾಜಾ ರಾಣಿ ರಿಯಾಲಿಟಿ ಶೋ (Raja Rani  Reality Show) ಅದ್ಧೂರಿಯಿಂದ ಆರಂಭವಾಗಿದೆ. ಶೋಗೆ ಜಡ್ಜ್‌  ಆಗಿ ಬಂದಿರುವ ಅದಿತಿ ಪ್ರಭುದೇವ (Actress Aditi Prabhudeva) ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಇದು ಮೂರನೇ ಸೀಸನ್ ಆಗಿದ್ದು, ನಿರೂಪಕಿಯಾಗಿ ಅನುಪಮಾ ವಾಹಿನಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ಮೊದಲ ಎರಡು ಸೀಸನ್‌ನಲ್ಲಿ ನಟ ಸೃಜನ್ ಲೋಕೇಶ್ (Actor Srujan Lokesh), ಹಿರಿಯ ನಟಿ ತಾರಾ ಅನುರಾಧಾ (Actress Tara Anuradha) ತೀರ್ಪುಗಾರರಾಗಿದ್ದಾರೆ. ಮೂರನೇ ಸೀಸನ್‌ಗೆ ಹೊಸ ತೀರ್ಪುಗಾರರಾಗಿ ಅಪ್ಪಟ್ಟ ಕನ್ನಡತಿ, ಪ್ರತಿಭಾನ್ವಿತ ನಟಿ ಅದಿತಿ ಪ್ರಭುದೇವ ಆಗಮಿಸಿದ್ದಾರೆ. ಶನಿವಾರ ಸಂಜೆ 7.30ಕ್ಕೆ ರಾಜಾ ರಾಣಿ ಸೀಸನ್ 3 ಶೋ ಪ್ರಸಾರ ಆರಂಭಿಸಿದೆ. ಮೊದಲ ಸಂಚಿಕೆ ನೋಡಲು ನೂರು ಜೋಡಿಗಳು ಆಗಮಿಸಿರೋದು ರಾಜಾ ರಾಣಿ ಫಸ್ಟ್ ಎಪಿಸೋಡ್ ವಿಶೇಷತೆ.

ಅದಿತಿ ಪ್ರಭುದೇವ ವೇದಿಕೆಗೆ ಶ್ಯಾನೇ ಟಾಪ್‌ ಆಗೋವಳೇ ಹಾಡಿಗೆ ಹೆಜ್ಜೆ ಹಾಕುತ್ತಲೇ ವೇದಿಕೆಗೆ ಆಗಮಿಸಿದರು. ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ಬರುತ್ತಿರೋದರ ಬಗ್ಗೆ ಅದಿತಿ ಪ್ರಭುದೇವ ಮಾತನಾಡಿದರು. ನಾನು ಮೊದಲ ಮತ್ತು ಎರಡನೇ ಸೀಸನ್‌ಗೆ ಸಿನಿಮಾ ಪ್ರಮೋಷನ್‌ಗಾಗಿ ಬಂದೆ. ಈಗ ಜಡ್ಜ್‌ ಆಗಿ ಬರುತ್ತಿರೋದಕ್ಕೆ ಸಂತೋಷವಾಗುತ್ತಿದೆ ಎಂದು ಅದಿತಿ ಪ್ರಭುದೇವ ಹೇಳಿದರು.

ಲೈಫ್-ವೈಫ್ ಬಗ್ಗೆ ಮಾತನಾಡಿದ ವಾರದಲ್ಲಿಯೇ ಡಿವೋರ್ಸ್; ಅಂದು ಚಂದನ್ ಹೇಳಿದ್ದೇನು?

ಮಗು ಮತ್ತು ಕೆಲಸ ಹೇಗೆ ಮ್ಯಾನೇಜ್ ಮಾಡ್ತಾರೆ ಅದಿತಿ?

ಮದುವೆಯಾದ್ಮೇಲೆ ಜೀವನ ತುಂಬಾ ಬದಲಾಗಿದೆ. ಈಗ ಎರಡು ತಿಂಗಳಿನಿಂದ ಅಮ್ಮನಾಗಿ ಪ್ರಮೋಷನ್ ಆಗಿದೆ. ಮೊದಲು ವಾಹಿನಿ ಜಡ್ಜ್ ಆಗಿ ಬರಬೇಕು ಎಂದು ತುಂಬಾನೇ ಯೋಚಿಸಿದೆ. ಮಗಳಿಗೆ ಜಸ್ಟ್‌ ಎರಡು ತಿಂಗಳು. ಈಗ ಮಗಳ ಜೊತೆ ಗಂಡ ಮತ್ತು ಅಮ್ಮಾ ಇದ್ದಾರೆ. ಅವರಿಬ್ಬರ ಸಪೋರ್ಟ್ ಇಲ್ಲದೇ ಇಲ್ಲಿಗೆ ಬರಲು ಸಾಧ್ಯ ಆಗುತ್ತಿರಲಿಲ್ಲ. ನನ್ನ ಕೆಲಸಗಳಿಗೆ ಫ್ಯಾಮಿಲಿ ತುಂಬಾನೇ ಸಪೋರ್ಟ್ ಮಾಡುತ್ತೆ ಎಂದು ತಿಳಿಸಿದರು. ಮಗಳಿಗೆ ನಾನು ಎದೆಹಾಲು ಉಣಿಸುತ್ತಿದ್ದೇನೆ. ಅದಕ್ಕೂ ಸಹ ವಾಹಿನಿ ವ್ಯವಸ್ಥೆ ಮಾಡಿಕೊಟ್ಟಿದೆ. ಸಮಯ ಸಿಕ್ಕಾಗೆಲ್ಲಾ ಮಗಳ ಬಳಿ ಹೋಗುತ್ತೇನೆ. ಮಗಳ ಜೊತೆಯಲ್ಲಿಯೂ ಇದ್ದಂತೆ ಆಗುತ್ತೆ, ನನ್ನ ಕೆಲಸವೂ ನಡೆಯುತ್ತದೆ ಎಂದು ಹೇಳಿದರು.

ಮಗಳ ಬಗ್ಗೆ ಅದಿತಿ ಮಾತು

ನನಗೆ ಮೊದಲು ಮಗಳೇ ಹುಟ್ಟಬೇಕೆಂಬ ಆಸೆ ಇತ್ತು. ನನ್ನ ಜೀವನದಲ್ಲಿ ಅಮ್ಮಾ ನನಗೆ ತುಂಬಾನೇ ಸಪೋರ್ಟಿವ್ ಆಗಿದ್ದರು, ನನಗೆ ಏನೇ ಆಗಲಿ ಅಥವಾ ಅವರಿಗೆ ಏನೇ ಆಗಲಿ ಮೊದಲು ನಮಗೆ ಗೊತ್ತಾಗುತ್ತದೆ. ಆ ಒಂದು ಮುಂದುವರಿಯಬೇಕು ಎಂಬ ಆಸೆಯಿಂದ ಮಗಳು ಬರಬೇಕು ಎಂದು ಆಸೆಪಟ್ಟಿದ್ದೆ. ಅದೇ ರೀತಿ ನನ್ನ ಜೀವನಕ್ಕೆ ಮಗಳು ಬಂದಳು ಎಂದು ಹೇಳಿ ಸಂತೋಷಪಟ್ಟರು.

ಅಮ್ಮನಾದ ಮೇಲೆ ಹೇಗಿದೆ ಲೈಫ್​? 2 ತಿಂಗಳ ಮಗು ಬಿಟ್ಟು ರಿಯಾಲಿಟಿ ಷೋಗೆ ಬಂದ ಅದಿತಿ ಹೇಳಿದ್ದೇನು?

ಭಾವುಕರಾಗಿದ್ದೇಕೆ ಅದಿತಿ ಪ್ರಭುದೇವ?

ಮೊದಲು ಜಡ್ಜ್ ಆಗಿ ಬಂದಿರೋ ಅದಿತಿ ಪ್ರಭುದೇವ ಅವರನ್ನು ಅನುಪಮಾ, ಸೃಜನ್ ಲೋಕೇಶ್ ಮತ್ತು ತಾರಾ ಅನುರಾಧಾ ಸ್ವಾಗತಿಸಿದರು. ಇದೇ ವೇಳೆ ನಿಮ್ಮನ್ನು ವಿಶೇಷ ವ್ಯಕ್ತಿಯೊಬ್ಬರು ಸ್ವಾಗತಿಸುತ್ತಾರೆ ಎಂದು ಹೇಳಿದ ಅನುಪಮಾ ಎವಿ ಪ್ಲೇ ಮಾಡಿದರು. ಸ್ಕ್ರೀನ್ ಮೇಲೆ ಅದಿತಿ ಪುತ್ರಿಯ ಕೋಮಲ ಹಸ್ತದ ಫೋಟೋ ಹಾಕಲಾಗಿತ್ತು. ನಂತರ ಮಗುವಿನ ಕಲರವ ಧ್ವನಿಯನ್ನು ಹಾಕಲಾಯ್ತು. ಮಗಳ ಧ್ವನಿ ಕೇಳುತ್ತಲೇ ಅದಿತಿ ಪ್ರಭುದೇವ  ಭಾವುಕರಾಗಿ ಕಣ್ಣೀರು ಹಾಕಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ