ನಿಮ್ಮ ದಾಂಪತ್ಯದಲ್ಲಿ ಹೊಂದಾಣಿಕೆ ಚೆನ್ನಾಗಿದ್ಯಾ? ಆದರ್ಶ ದಂಪತಿಯಲ್ಲಿ ಟೆಸ್ಟ್ ಮಾಡ್ಕೊಳ್ಳಿ

Published : Feb 25, 2025, 11:16 AM ISTUpdated : Feb 25, 2025, 01:00 PM IST
ನಿಮ್ಮ ದಾಂಪತ್ಯದಲ್ಲಿ ಹೊಂದಾಣಿಕೆ ಚೆನ್ನಾಗಿದ್ಯಾ? ಆದರ್ಶ ದಂಪತಿಯಲ್ಲಿ ಟೆಸ್ಟ್ ಮಾಡ್ಕೊಳ್ಳಿ

ಸಾರಾಂಶ

ಉದಯ ಟಿವಿಯಲ್ಲಿ ಜನಪ್ರಿಯ ರಿಯಾಲಿಟಿ ಶೋ 'ಆದರ್ಶ ದಂಪತಿಗಳು' ಮರುಪ್ರಾರಂಭವಾಗಲಿದೆ. ಈ ಬಾರಿ ಹಾಸ್ಯ ನಟ ಶಿವರಾಜ್ ಕೆ.ಆರ್. ಪೇಟೆ ಮತ್ತು ನಟಿ ಅಂಕಿತಾ ಗೌಡ ನಿರೂಪಕರಾಗಿದ್ದಾರೆ. ದಾವಣಗೆರೆಯಲ್ಲಿ ಮಾರ್ಚ್ 2 ರಂದು ಕಾರ್ಯಕ್ರಮ ನಡೆಯಲಿದ್ದು, ದಂಪತಿಗಳು ತಮ್ಮ ಕಿರು ಪರಿಚಯದ ವಿಡಿಯೋ ಕಳುಹಿಸಿ ಭಾಗವಹಿಸಬಹುದು. ಈ ಶೋ ದಂಪತಿಗಳ ನಡುವಿನ ಬಾಂಧವ್ಯವನ್ನು ಪರೀಕ್ಷಿಸುವ ಮತ್ತು ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ನೀಡುತ್ತದೆ.

ಕನ್ನಡಿಗರ ಮನಸ್ಸಿನಲ್ಲಿ ಸದಾ ಹಸಿರಾಗಿರುವ, ಎಂದೆಂದೂ ಮರೆಯಲಾಗದ ಅತ್ಯುತ್ತಮ ರಿಯಾಲಿಟಿ ಶೋ (Reality show) ಮತ್ತೆ ಆರಂಭವಾಗ್ತಿದೆ. ನಿಮ್ಮ ನೆಚ್ಚಿನ ಚಾನೆಲ್ ಉದಯ ಟಿವಿ ( Udaya TV) ಯಲ್ಲಿ ಆದರ್ಶ ದಂಪತಿಗಳು (Adarsha Dampathigalu) ಶೋ ಪುನಃ ಆರಂಭ ಆಗ್ತಿದೆ. ಆದರ್ಶ ದಂಪತಿಗಳು ಎಂದಾಗ ಸ್ಯಾಂಡಲ್ವುಡ್ ಹಿರಿಯ ನಟ ಶ್ರೀನಾಥ್ (Sandalwood actor Srinath) ನೆನಪಿಗೆ ಬರ್ತಾರೆ. ಅವರ ನೇತೃತ್ವದಲ್ಲಿಯೇ ಈ ಶೋ ಹೆಚ್ಚು ಪ್ರಸಿದ್ಧಿ ಪಡೆದಿತ್ತು.  ಊರೂರಿಗೆ ಹೋಗಿ ಅಲ್ಲಿ ದಂಪತಿಗೆ ಒಂದಿಷ್ಟು ಪ್ರಶ್ನೆ ಕೇಳಿ, ಸ್ಪರ್ಧೆ ನಡೆಸಿ ಅದ್ರಲ್ಲಿ ಒಬ್ಬರಿಗೆ ಆದರ್ಶ ದಂಪತಿ ಪಟ್ಟ ನೀಡಲಾಗ್ತಾ ಇತ್ತು. ಶೋ ತುಂಬಾ ಚೆನ್ನಾಗಿದೆ ಅಂತ ಮಹಿಳೆಯರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಕುಳಿತು ಅದನ್ನು ವೀಕ್ಷಣೆ ಮಾಡ್ತಾ ಇದ್ರು. ಈಗ ಮತ್ತೆ ವೀಕ್ಷಕರನ್ನು ರಂಜಿಸಲು ಉದಯ ಚಾನೆಲ್ ನಿರ್ಧರಿಸಿದೆ. ಹೊಸ ಸ್ಟೈಲ್ ನಲ್ಲಿ, ಹೊಸ ಆಂಕರ್ ಜೊತೆ ರಿಯಾಲಿಟಿ ಶೋ ಆದರ್ಶ ದಂಪತಿ ನಿಮ್ಮ ಮುಂದೆ ಬರಲಿದೆ.  

ಉದಯ ಟಿವಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಅದ್ರ ಪ್ರೋಮೋಗಳನ್ನು ಹಂಚಿಕೊಂಡಿದೆ. ದಶಕಗಳ ಕಾಲ ಕನ್ನಡಿಗರ ಜನಮನ ಗೆದ್ದ ಮೆಗಾ ರಿಯಾಲಿಟಿ ಶೋ "ಆದರ್ಶ ದಂಪತಿಗಳು" ಈಗ ಮತ್ತೊಮ್ಮೆ ನಿಮ್ಮ ಮನೆ ಮನಗಳಿಗೆ ಲಗ್ಗೆ ಹಾಕಲು ಬರುತ್ತಿದೆ. ಬನ್ನಿ ನಿಮ್ಮ ನೆಚ್ಚಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಸರಳ ಪ್ರಶ್ನೆಗಳಿಗೆ ಉತ್ತರಿಸಿ ಆಕರ್ಷಕ ಬಹುಮಾನಗಳನ್ನು ಗೆಲ್ಲಿ. ಇದೇ ಮಾರ್ಚ್ 02, ಭಾನುವಾರ, ಬೆಳಗ್ಗೆ 9ರಿಂದ ಬೆಣ್ಣೆ ನಗರಿ ದಾವಣಗೆರೆಯ  ಬಾಪೂಜಿ ಸಭಾಂಗಣದಲ್ಲಿ ಎಂದು ಚಾನೆಲ್ ತನ್ನ ಪ್ರೋಮೋಗೆ ಶೀರ್ಷಿಕೆ ಹಾಕಿದೆ.  ಈ ಶೋನಲ್ಲಿ ಪಾಲ್ಗೊಳ್ಳುವ ದಂಪತಿ ತಮ್ಮ ವಿವರಗಳೊಂದಿಗೆ ನಿಮ್ಮ ಪರಿಚಯದ ಕಿರು ವಿಡಿಯೋ ಮಾಡಿ, 9591618989 ನಂಬರ್ ಗೆ ಕಳುಹಿಸುವಂತೆ, ವೀಕ್ಷಕರಿಗೆ ಚಾನೆಲ್ ಹೇಳಿದೆ. 

ಮಹಾ ಕುಂಭಮೇಳದಲ್ಲಿ ಹುಟ್ಟುಹಬ್ಬ ಆಚರಿಸಿದ ವೈಷ್ಣವಿ ಗೌಡ… ಕತ್ತಿನಲ್ಲಿ ತಾಳಿ ನೋಡಿ ಫ್ಯಾನ್ಸ್ ಶಾಕ್

ಹೆಂಡ್ತಿಗೆ ಗಂಡನ ಫೆವರೆಟ್ ತಿಂಡಿ ಏನು ಅಂತ ಗೊತ್ತಿಲ್ಲ, ಗಂಡಂಗೆ ಮದುವೆ ಆನಿವರ್ಸರಿ ನೆನಪಿಲ್ಲ ಎಂಬ ಥೀಮ್ ನಲ್ಲಿ ಶುರುವಾಗುವ ವಿಡಿಯೋ ಕೊನೆಯಲ್ಲಿ, ಆದಷ್ಟು ಬೇಗ ಪತಿ ಪತ್ನಿಯ ಇಷ್ಟ, ಕಷ್ಟ, ಬರ್ತ್ ಡೇಟ್, ಆನಿವರ್ಸರಿ ಡೇಟ್ ತಿಳಿದುಕೊಳ್ಳಿ. ನಿಮ್ಮನ್ನು ಪರೀಕ್ಷಿಸೋಕೆ, ಆಟ ಆಡಿಸೋಕೆ ನಾವು ಬರ್ತಿದ್ದೇವೆ ಎನ್ನುತ್ತ ವಿಡಿಯೋವನ್ನು ಆಂಡ್ ಮಾಡಲಾಗುತ್ತದೆ. 

ಆದರ್ಶ ದಂಪತಿಗಳು ಅಂದ್ರೆ ಅದು ಶ್ರೀನಾಥ್ ಅಂದ್ಕೊಂಡವರು ಈ ಬಾರಿ ಹೊಸಬರನ್ನು ನಿರೂಪಕರಾಗಿ ನೋಡ್ಬೇಕು. ಆದರ್ಶ ದಂಪತಿ ರಿಯಾಲಿಟಿ ಶೋವನ್ನು ಸ್ಯಾಂಡಲ್ವುಡ್ ಹಾಸ್ಯ ನಟ ಶಿವರಾಜ್. ಕೆ. ಆರ್ ಪೇಟೆ ನಡೆಸಿಕೊಡಲಿದ್ದಾರೆ. ಕಾಮಿಡಿ ಕಿಲಾಡಿಗಳಿಂದ ಮನೆ ಮಾತಾಗಿರುವ ಶಿವರಾಜ್ ಕೆ.ಆರ್ ಪೇಟೆ ನಾನು ಮತ್ತು ಗುಂಡ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು. ಇನ್ನು ಶಿವರಾಜ್ ಕೆ.ಆರ್ ಪೇಟೆ (Shivaraj K.R. Pete) ಜೊತೆಗೆ ನಟಿ ಅಂಕಿತಾ ಗೌಡ (Actress Ankita Gowda) ನಿರೂಪಣೆ ಹೊಣೆ ಹೊರಲಿದ್ದಾರೆ. ಅಂಕಿತಾ ಗೌಡ, ನಿರೂಪಕಿ, ಜರ್ನಲಿಸ್ಟ್ , ನಟಿ ಆಗಿ ಸದ್ಯ ಮಿಂಚುತ್ತಿದ್ದಾರೆ.

 ನೀಲಿ ಸೀರೆಗೆ ವಜ್ರದ ಡಾಬು ಮತ್ತು ಸರ ಧರಿಸಿದ 'ಪುಟ್ಟ ಗೌರಿ' ಸಾನ್ಯಾ ಅಯ್ಯರ್

ರಿಯಾಲಿಟಿ ಶೋ ಪ್ರೋಮೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಅನೇಕ ವರ್ಷಗಳ ನಂತ್ರ ಮತ್ತೊಂದು ಒಳ್ಳೆಯ ರಿಯಾಲಿಟಿ ಶೋ ಬರ್ತಿದೆ, ಒಳ್ಳೆಯದಾಗ್ಲಿ ಎಂದು ಹರಸಿದ್ದಾರೆ. 2005ರಲ್ಲಿ ಮೊದಲ ಬಾರಿ ನಟ ಶ್ರೀನಾಥ್ ಈ ಆದರ್ಶ ದಂಪತಿ ರಿಯಾಲಿಟಿ ಶೋ ನಡೆಸಿದ್ದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರಿಗೈಯಲ್ಲಿ ಟಾಯ್ಲೆಟ್​ ತೊಳೆದ Bigg Boss ಡಾಗ್​ ಸತೀಶ್​​: ನಿಮ್ಮ ಮನೆಗೂ ಬೇಕಾದ್ರೆ ಬರ್ತಾರಂತೆ!
Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?