
ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ದಿವ್ಯಾ ಶ್ರೀಧರ್ ಅವರೀಗ ತಮಿಳು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ವರ್ಷಗಳ ಹಿಂದೆ ಕಾಂಟ್ರವರ್ಸಿಯಲ್ಲಿ ದಿವ್ಯಾ ಹೆಸರು ಕೇಳಿ ಬಂದಿತ್ತು. ಈಗ ಅವರು ತಮಿಳು ವಾಹಿನಿಯ ಪ್ರಶಸ್ತಿ ಸಮಾರಂಭದಲ್ಲಿ ಮನದ ನೋವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.
ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ರು
ದಿವ್ಯಾ ಶ್ರೀಧರ್ ಅವರು ಕನ್ನಡದ ʼಆಕಾಶ ದೀಪʼ ಹಾಗೂ ʼಅಮ್ಮʼ ಧಾರಾವಾಹಿಗಳಲ್ಲಿ ನಟಿಸುವಾಗಲೇ ಅವರಿಗೆ ಮದುವೆ ಆಗಿತ್ತು, ಮಗಳು ಹುಟ್ಟಿದ್ದಳು. ಈ ಸಂಬಂಧ ಮುರಿದು ಬಿತ್ತು. ಆ ಬಳಿಕ ಅವರು ಡಿವೋರ್ಸ್ ಪಡೆದರು. ತಮಿಳು ಧಾರಾವಾಹಿಯೊಂದರ ಸಹನಟ ಆರ್ನವ್ ( ಅಮ್ಝಾದ್ ಖಾನ್ ) ಜೊತೆ ಪ್ರೀತಿಯಲ್ಲಿ ಬಿದ್ದರು. ಈ ಜೋಡಿ ಆರು ವರ್ಷಗಳ ಕಾಲ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿತ್ತು. ಆ ನಂತರ ಇವರು ಖಾಸಗಿಯಾಗಿ ಮದುವೆಯಾದರು. ಹಿಂದು, ಇಸ್ಲಾಂ ಧರ್ಮದ ಪ್ರಕಾರ ಮದುವೆ ಆಗಿತ್ತು.
ಜ್ಯೋತಿ ರೈ, ಛಾಯಾ ಸಿಂಗ್....ಪರಭಾಷಾ ನಟರ ವರಿಸಿದ ಕನ್ನಡ ಕಿರುತೆರೆ ನಟಿಯರಿವರು!
ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ದಿವ್ಯಾ
ಈ ಮದುವೆ ಬಗ್ಗೆ ಆರಂಭದಲ್ಲಿ ದಿವ್ಯಾ ಹೇಳಿಕೊಂಡಿರಲಿಲ್ಲ. ಆ ನಂತರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವಿಷಯ ಹಂಚಿಕೊಂಡಿದ್ದರು. ಇದಾದ ಬಳಿಕ ಹೊಸ ಮನೆ, ಕಾರ್ ಕೂಡ ಖರೀದಿಸಿದರು. ದಿವ್ಯಾ ಅವರು ಗರ್ಭಿಣಿಯಾಗುತ್ತಿದ್ದಂತೆ ಪರಿಸ್ಥಿತಿ ಎಲ್ಲವೂ ಬದಲಾಯ್ತು. “ನನ್ನ ಮೇಲೆ ಹಲ್ಲೆ ಮಾಡಿದರು. ಅವರಿಗೆ ಬೇರೆ ಸಂಬಂಧ ಇದೆ, ನಾನೇ ಅವರನ್ನು ಇಷ್ಟುದಿನ ಸಾಕಿದ್ದೇನೆ, ಸಿಕ್ಕಾಪಟ್ಟೆ ಹಣ ಕೊಟ್ಟಿದ್ದೇನೆ” ಎಂದೆಲ್ಲ ದಿವ್ಯಾ ಶ್ರೀಧರ್ ಅವರು ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
Divya Shridhar: ಲವ್ ಜಿಹಾದ್ಗೆ ಸಿಲುಕಿದ ಕನ್ನಡದ ಖ್ಯಾತ ನಟಿ, ತುಂಬು ಗರ್ಭಿಣಿಯಾದರೂ ತಪ್ಪಿಲ್ಲ ಕಷ್ಟ
ಏಕಾಂಗಿಯಾಗಿ ಮಗು ಬೆಳೆಸ್ತಿರುವ ದಿವ್ಯಾ
ಈ ಕೇಸ್ ಇತ್ಯರ್ಥವಾಯ್ತೋ ಇಲ್ಲವೋ! ಆದರೆ ದಿವ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆರ್ನವ್ ಜೊತೆಗಿದ್ದ ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ. ಗರ್ಭಿಣಿಯಾಗಿದ್ದರೂ ಕೂಡ ದಿವ್ಯಾ ಅವರು ಸೀರಿಯಲ್‌ನಲ್ಲಿ ನಟಿಸಿದ್ದರು. ಇದಾದ ಬಳಿಕ ಮಗು ಆಯ್ತು. ಆ ಚಿಕ್ಕ ಮಗುವನ್ನು ಕೂಡ ಸೀರಿಯಲ್ ಸೆಟ್‌ಗೆ ಕರೆದುಕೊಂಡು ಬಂದು ನಟಿಸಿದರು. ಆರ್ನವ್ ದೂರ ಹೋದರೂ ಕೂಡ ದಿವ್ಯಾ ಅವರು ಆ ಮಗುವನ್ನು ಏಕಾಂಗಿಯಾಗಿ ಬೆಳೆಸುತ್ತಿದ್ದಾರೆ.
ಕಣ್ಣೀರು ಹಾಕಿದ ದಿವ್ಯಾ ಶ್ರೀಧರ್
ತಮಿಳಿನ ವೇದಿಕೆಯಲ್ಲಿ ಮಾತನಾಡಿದ ದಿವ್ಯಾ ಶ್ರೀಧರ್, “ಎಲ್ಲವೂ ವಾಹಿನಿಯಲ್ಲಿ ಸೀರಿಯಲ್ ಮಾಡಿ ಹೋಗ್ತಾರೆ. ಆದರೆ ನನಗೆ ವಾಹಿನಿ ತುಂಬ ಕೊಟ್ಟಿದೆ. ನನ್ನ ತಾಯಿಗೆ ಅನಾರೋಗ್ಯ ಆದಾಗ ಆರ್ಥಿಕವಾಗಿ ತುಂಬ ಕಷ್ಟದಲ್ಲಿದ್ದೆ. ಆಗ ವಾಹಿನಿಯವರೇ ನನ್ನ ಕೈಹಿಡಿದಿದ್ದು” ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ದಿವ್ಯಾ ಮಾತು ಕೇಳಿ ಎಲ್ಲರೂ ಭಾವುಕರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.