ಮಹಾ ಕುಂಭಮೇಳದಲ್ಲಿ ಹುಟ್ಟುಹಬ್ಬ ಆಚರಿಸಿದ ವೈಷ್ಣವಿ ಗೌಡ… ಕತ್ತಿನಲ್ಲಿ ತಾಳಿ ನೋಡಿ ಫ್ಯಾನ್ಸ್ ಶಾಕ್

Published : Feb 25, 2025, 10:50 AM ISTUpdated : Feb 25, 2025, 12:15 PM IST
ಮಹಾ ಕುಂಭಮೇಳದಲ್ಲಿ ಹುಟ್ಟುಹಬ್ಬ ಆಚರಿಸಿದ ವೈಷ್ಣವಿ ಗೌಡ… ಕತ್ತಿನಲ್ಲಿ ತಾಳಿ ನೋಡಿ ಫ್ಯಾನ್ಸ್ ಶಾಕ್

ಸಾರಾಂಶ

ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಕುಂಭಮೇಳದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  ಫೋಟೋಗಳಲ್ಲಿ ವೈಷ್ಣವಿ ಕುತ್ತಿಗೆಯಲ್ಲಿ ತಾಳಿ ಕಂಡು ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.  

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಸೀತಾ ರಾಮ ಧಾರಾವಾಹಿಯ (Seetha Rama Serial) ಸೀತಾ ವೈಷ್ಣವಿ ಗೌಡ ಸೋಶಿಯಲ್ ಮೀಡೀಯಾದಲ್ಲಿ ಕುಂಭಮೇಳದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ನಟಿ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಲೇಟ್ ಪೋಸ್ಟ್ ಎನ್ನುತ್ತಾ ನಟಿ, ತ್ರಿವೇಣಿ ಸಂಗಮದಲ್ಲಿ (Triveni Sangama) ಮಿಂದೆದ್ದ ಫೋಟೊ ಹಾಗೂ ಹಣೆ ಮೇಲೆ ನಾಮ ಹಾಕಿರುವ ಫೋಟೊ ಶೇರ್ ಮಾಡಿಕೊಂಡಿದ್ದರು. ಈ ಫೋಟೊಗಳಲ್ಲಿ ವೈಷ್ಣವಿ ಕುತ್ತಿಗೆಯಲ್ಲಿ ತಾಳಿ ಇದ್ದು, ಇದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. 

ಕುಂಭಮೇಳದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವೈಷ್ಣವಿ 
ಅಂದ ಹಾಗೇ ನಟಿ ವೈಷ್ಣವಿ ಗೌಡ (Vaishnavi Gowda)ಹುಟ್ಟುಹಬ್ಬ ಫೆಬ್ರುವರಿ 21 ರಂದು, ಈ ಸಂದರ್ಭದಲ್ಲಿ ನಟಿ ಸೀತಾ ರಾಮ ಸೀರಿಯಲ್ ಶೂಟಿಂಗ್ ಗಾಗಿ ಕುಂಭಮೇಳಕ್ಕೆ ತೆರಳಿದ್ದರು. ತಮ್ಮ ಟೀಮ್ ಜೊತೆ ಕುಂಭಮೇಳದಲ್ಲಿ ಭಾಗಿಯಾಗಿ ಶೂಟಿಂಗ್ ಕೂಡ ಮಾಡಿದ್ದರು. ತಮ್ಮ ಹುಟ್ಟುಹಬ್ಬದ ದಿನವೇ ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದಿದ್ದಕ್ಕೆ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.  ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟಿ ಪೋಸ್ಟ್ ಮಾಡಿದ್ದು, ಲೇಟ್ ಪೋಸ್ಟ್, ಮಹಾ ಕುಂಭ ಮೇಳ, ನನ್ನ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸಿದಕ್ಕಾಗಿ ನಾನು ಧನ್ಯಳಾಗಿದ್ದೇನೆ. ನನ್ನ ಹುಟ್ಟುಹಬ್ಬಕ್ಕೆ (Vaishnavi Gowda Birthday) ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು, ನೀವು ನನ್ನ ದಿನವನ್ನು ವಿಶೇಷವಾಗಿರಿಸಿದಿರಿ ಎಂದು ಹೇಳಿದ್ದಾರೆ. 

ಕುಂಭಮೇಳದಲ್ಲಿ ಸೀತಾ-ರಾಮ- ಸುಬ್ಬಿ
 ಈಗಾಗಲೇ ಕುಂಭಮೇಳದಲ್ಲಿ ಸೀತಾ ರಾಮ ಮತ್ತು ಸುಬ್ಭಿಯ ತ್ರಿವೇಣಿ ಸಂಗಮದ ಕುರಿತು ಪ್ರೊಮೋ (Seetha Rama Promo) ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸುಬ್ಬಿ ಕರೆದುಕೊಂಡು, ಸೀತಾ ಹಾಗೂ ರಾಮ ತ್ರಿವೇಣಿ ಸಂಗಮದಲ್ಲಿ ಮಿಂದಿದ್ದಾರೆ. ಅಷ್ಟೇ ಅಲ್ಲ, ಸಿಹಿ ನಾಗ ಸಾಧುವೊಬ್ಬರ ನೆರವಿನಿಂದ ತನ್ನ ಅಮ್ಮ-ಅಪ್ಪನನ್ನು ಸ್ಪರ್ಶಿಸುವಂತಹ ಸೌಭಾಗ್ಯವನ್ನು ಸಹ ಪಡೆದಿದ್ದಾಳೆ. ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಇಷ್ಟು ದೊಡ್ಡ ಪ್ರಯೋಗ ನಡೆಯುತ್ತಿದ್ದು, ವೀಕ್ಷಕರು ಇದನ್ನು ನೋಡಿ ತುಂಬಾನೇ ಖುಷಿಯಾಗಿದ್ದಾರೆ. 

ವೈಷ್ಣವಿ ಗೌಡ ಕತ್ತಿನಲ್ಲಿ ತಾಳಿ ನೋಡಿ ಶಾಕ್
ಸೀತಾರಾಮ ಸೀರಿಯಲ್ ನ ಹೊಸ ಪ್ರೊಮೋ ನೋಡಿರದ ಒಂದಿಷ್ಟು ಜನರು, ವೈಷ್ಣವಿ ಗೌಡ ಹಾಕಿರುವ ಫೋಟೊಗಳಲ್ಲಿ ನಟಿಯ ಕುತ್ತಿಗೆಯಲ್ಲಿ ತಾಳಿ ನೋಡಿ ಶಾಕ್ ಆಗಿದ್ದಾರೆ. ನಿಮಗೆ ಮದುವೆ ಯಾವಾಗ ಆಯ್ತು? ತಾಳಿ ಕುತ್ತಿಗೆಯಲ್ಲಿ ಹೇಗೆ ಬಂತು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ನಿಮ್ಮಷ್ಟು ಲಕ್ಷಣವಾಗಿ ಸೀರೆಯುಟ್ಟುಕೊಂಡು ಕುಂಭ ಸ್ನಾನ ಮಾಡಿ ಬಂದವರು ಯಾರೂ ಇಲ್ಲ ಎಂದಿದ್ದಾರೆ. ಇದಕ್ಕೆ ಉತ್ತರವಾಗಿ ಮತ್ತೊಂದಿಷ್ಟು ಜನ ಇದೆಲ್ಲವೂ ಸೀತಾ ರಾಮ ಸೀರಿಯಲ್ ಗಾಗಿ ನಡೆದದ್ದು ಎಂದು ಉತ್ತರವನ್ನೂ ನೀಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!