ಸುಣ್ಣದಿಂದ ಕಣ್ಣಿನ ದೃಷ್ಟಿ ಕಳೆದುಕೊಂಡ ರಶ್ಮಿ ಪ್ರಭಾಕರ್. ಬಾಲ್ಯದ ಘಟನೆಯನ್ನು ಬಿಚ್ಚಿಟ್ಟ ಸುಂದರಿ...
ಕನ್ನಡ ಕಿರುತೆರೆಯ ಜನಪ್ರಿಯ ನಟಿ ರಶ್ಮಿ ಪ್ರಭಾಕರ್ ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಈ ವೇಳೆ ತಮ್ಮ ಜೀವನದಲ್ಲಿ ಮರೆಯಲಾಗದ ಘಟನೆಯನ್ನು ವೀಕ್ಷಕರ ಜೊತೆ ಹಂಚಿಕೊಂಡಿದ್ದಾರೆ.
ರಶ್ಮಿ ಮಾತು:
'ಜೀ ಕನ್ನಡ ವಾಹಿನಿಯಿಂದ ಸಣ್ಣ ಪಾತ್ರದ ಮೂಲಕ ನನ್ನ ಜರ್ನಿಯನ್ನು ಆರಂಭಿಸಿದ್ದು. ಇಷ್ಟು ವರ್ಷ ಅಳುಮುಂಜಿ ಪಾತ್ರದಲ್ಲಿ ಕಾಣಿಸಿಕೊಂಡು ನಿಮ್ಮ ಮನಸ್ಸು ಗೆದ್ದಿರುವೆ ಆದರೆ ಈ ಶೋನಲ್ಲಿ ಅಳುವುದಿಲ್ಲ ನನ್ನನ್ನು ಪರಿಚಯ ಮಾಡಿಕೊಳ್ಳಲು ಬರುತ್ತಿರುವೆ. ತಂದೆ, ತಾಯಿ ಮತ್ತು ಅಕ್ಕ - ನನ್ನದೊಂದು ಪುಟ್ಟ ಕುಟುಂಬ. ಡ್ಯಾನ್ಸ್ ಮಾಡುವುದಕ್ಕೆ ಬರೋಲ್ಲ ಆದರೆ ಡ್ಯಾನ್ಸ್ ಇಷ್ಟ ಹಾಡುವುದು ತುಂಬಾ ಇಷ್ಟ ಹಾಡಲು ಬರುವುದಿಲ್ಲ. ಬ್ಯೂಟಿಫುಲ್ ವೃತ್ತಿ ಬದುಕಿನ ನಡುವೆ ನನಗೆ ಮದುವೆಯಾಗಿ 6 ತಿಂಗಳು ಕಳೆದಿದೆ. ನನ್ನ ಪತಿ ಹೆಸರು ನಿಖಿಲ್ ಭಾರ್ಗವ್, ಅವರು ಸಿಕ್ಕಿದ್ದು ನನ್ನ ಪುಣ್ಯ' ಎಂದು ಪರಿಯಚ ಮಾಡಿಕೊಳ್ಳುವ ವಿಡಿಯೋದಲ್ಲಿ ರಶ್ಮಿ ಮಾತನಾಡಿದ್ದಾರೆ.
'ರಶ್ಮಿ ಅವರಲ್ಲಿ ನನಗೆ ತುಂಬಾ ಇಷ್ಟ ಅಗಿದ್ದು ಅವರ ಕಣ್ಣು..ಎಲ್ಲರು ಹೇಳುತ್ತಾರೆ ಅವಳ ಕಣ್ಣು ಸಮಸ್ಯೆ ಇದೆ ಚಿಕ್ಕದು ಅಂತ ಅದೆಲ್ಲಾ ಏನೂ ...ರಶ್ಮಿ ಕಣ್ಣು attract ಆದೆ ಆಕೆ ಕಣ್ಣು ನೋಡಿನೇ ನಾನು ಇಷ್ಟ ಪಟ್ಟಿದ್ದು' ಎಂದು ರಶ್ಮಿ ಪತಿ ನಿಖಿಲ್ ಹೇಳಿದ್ದಾರೆ.
'ತುಂಬಾ ಜನ ಹೊರಗಡೆ ಸಿಕ್ಕಾಗ ಅಥವಾ ನನ್ನ ನಾನು ಫ್ರೇಮ್‌ನಲ್ಲಿ ನೋಡಿಕೊಂಡಾಗಲ್ಲೂ ಛೇ ನನ್ನ ಕಣ್ಣು ಚೆನ್ನಾಗಿದ್ದರೆ ಅಂತ ಈಗಲೂ ಅನ್ಸುತ್ತೆ. ನಾನು ನಟಿಸಿರುವ ನನ್ನ ಯಾವ ಎಪಿಸೋಡ್‌ನೂ ನಾನು ನೋಡುವುದಿಲ್ಲ. ಕಣ್ಣು ಬಿಟ್ಟಾಗ ಕಣ್ಣು ಸಮವಾಗಿ ಕಾಣಿಸುವುದಿಲ್ಲ ಸ್ವಲ್ಪ ಚಿಕ್ಕದಾಗಿ ಕಾಣಿಸುತ್ತದೆ. ನನಗಿಂತ ಹೆಚ್ಚಿಗೆ ನೋವು ಅನುಭವಿಸಿರುವುದು ನನ್ನ ತಾಯಿ ಅನ್ಸುತ್ತೆ. ಮಗಳ ಕಣ್ಣಿಗೆ ಸುಣ್ಣ ಬೀಳುವಾಗ ನೀನು ಏನ್ ಮಾಡುತ್ತಿದ್ದೆ ಅಂತ ತುಂಬಾ ಜನರು ಮಾತನಾಡಿದ್ದಾರೆ. ಏನೇ ಹೊಸ ಕೆಲಸ ಮಾಡುವಾಗಲೂ ಸಿಕ್ಕಾಪಟ್ಟೆ ಭಯ ನನಗೆ. ನನಗೆ ಮಾಡೋಕೆ ಆಗುತ್ತಾ ಅಂತ ನನಗೆ ನಾನೇ ಪ್ರಶ್ನೆ ಮಾಡಿಕೊಳ್ಳುವೆ...ಆಗುತ್ತೆ ಅಂತ ಸಾಭೀತು ಮಾಡಲು ಸೂಪರ್ ಕ್ವೀನ್‌ಗೆ ಬಂದಿರುವೆ' ಎಂದಿದ್ದಾರೆ ರಶ್ಮಿ.
ತಂದೆ ಕಳೆದುಕೊಂಡ 2 ವರ್ಷಕ್ಕೆ ತಾಯಿ ಅಗಲಿದ್ದರು: ಕಣ್ಣೀರಿಟ್ಟ ಕಿರುತೆರೆ ನಟಿ ಐಶ್ವರ್ಯಾ ಶಿಂದೋಗಿ
'ಮನೆಯಲ್ಲಿ ಅಮ್ಮ ಮಕ್ಕಳಿಗೆ ಪಾಠ ಮಾಡುತ್ತಾರೆ. ನಾವು ಹಳ್ಳಿಯಲ್ಲಿ ಇದ್ದ ಕಾರಣ ವೀಳ್ಯದೆಲೆ ಮತ್ತು ಸುಣ್ಣ ಪ್ಯಾಕೆಟ್ ಎಲ್ಲಾ ಕಡೆ ಇರುತ್ತಿತ್ತು. ಒಬ್ಬ ಹುಡುಗ ಸುಣ್ಣದ ಪ್ಯಾಕೆಟ್ ಹಿಡಿದುಕೊಂಡು ಆಟ ಆಡುತ್ತಿದ್ದ ಹೇ ನಿನಗೆ ಆಟ ಆಡಲು ಬರುವುದಿಲ್ಲ ಕೊಡು ನನಗೆ ಅಂತ ತೆಗೆದುಕೊಂಡು ಕೈಯಲ್ಲಿ ಪ್ರೆಸ್ ಮಾಡಿದಾಗ ನನ್ನ ಕಣ್ಣಿಗೆ ಸುಣ್ಣ ಬಿತ್ತು. ಹಳ್ಳಿಯಲ್ಲಿ ಇದ್ದ ಕಾರಣ ಮನೆ ಮದ್ದು ಹೆಚ್ಚಿಗೆ ಪ್ರಯತ್ನ ಪಟ್ಟರು. ಕಣ್ಣಿಗೆ ನೀರು ಹಾಕುವ ಬದಲು ಹರಳೆಣ್ಣೆ ಹಾಕಿಬಿಟ್ಟರು ಆಗ ಕಣ್ಣು ಸಂಪೂರ್ಣವಾಗಿ ಕ್ಲೋಸ್ ಆಯ್ತು ಆಗ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಬಂದರು. ಬಲಗಣ್ಣಿಗೆ ನೀರು ಹಾಕಿ ಸರಿ ಮಾಡಿದ್ದರು ಆದರೆ ಎಡಗಣ್ಣು ರಿಕವರ್ ಮಾಡಲು ಆಗಲಿಲ್ಲ. ಜನರು ತುಂಬಾ ರೇಗಿಸುತ್ತಾರೆ ತಮಾಷೆಗೆ ಕುರುಡಿ ಅಂತ ಹೇಳಿದ್ದರೂ ನಾನು ಗಂಭಿರವಾಗಿ ಪರಿಗಣಿಸುತ್ತೀನಿ. ಮೂರ್ನಾಲ್ಕು ಆಪರೇಷನ್ ಮಾಡಿದ್ದಾರೆ ಈಗಲ್ಲೂ ಶೂಟಿಂಗ್ ಲೇಟ್ ಆದರೆ ಕೆಂಪು ಆಗುತ್ತೆ ಶಾಟ್‌ಗೆ ಬರುವ ಮುಂಚೆ ಕಣ್ಣಿಗೆ ಡ್ರಾಪ್ಸ್ ಹಾಕಿಕೊಳ್ಳಬೇಕು. ಈ ಇಂಡಸ್ಟ್ರಿಗೆ ನಟಿಯಾಗಿ ಬರಬೇಕು ಅಂತ ಕನಸು ಕಂಡಿರಲಿಲ್ಲ ...ಯಾವತ್ತು ಚಲ ಬಂತು ಅಲ್ಲಿ ನನ್ನ ಕಣ್ಣಿನ ಪ್ರಾಮುಖ್ಯತೆ ಅರ್ಥವಾಯ್ತು. ಫ್ರೆಂಡ್ ಅಥವಾ ತಂಗಿ ಪಾತ್ರ ಕೊಡಿ ಎಂದು ಅನೇಕ ಆಡಿಷನ್‌ಗಳಲ್ಲಿ ಮನವಿ ಮಾಡಿಕೊಂಡಿರುವೆ. ನೋಡಿದ ತಕ್ಷಣ ಕಣ್ಣಿನ ಸಮಸ್ಯೆ ಗೊತ್ತಾಗುವುದಿಲ್ಲ ಕ್ಲೋಸಪ್ ಮಾಡಿದಾಗ ಮಾತ್ರ ಗೊತ್ತಾಗುತ್ತದೆ. ಈಗ ತಲೆ ಕೆಡಿಸಿಕೊಳ್ಳುತ್ತಿಲ್ಲ ಯಾರಿಗೂ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಿಲ್ಲ. ಒಂದು ಸಮಯ ಆದ್ಮೇಲೆ ಜನ ಈಕೆ ಇರುವುದು ಹೀಗೆ ಎಂದು ಒಪ್ಪಿಕೊಳ್ಳಲು ಶುರು ಮಾಡಿದ್ದರು' ಎಂದು ರಶ್ಮಿ ಹೇಳಿದ್ದಾರೆ.