ತೆರೆ ಮೇಲೆ ಪಟ ಪಟ ಮಾತನಾಡುವ ‘ನಂದಗೋಕುಲ’ ಮೀನಮ್ಮಾ… ತೆರೆ ಹಿಂದೆ ಪಡ್ತಿರೋ ಪಾಡು ನೋಡಿ

Published : May 09, 2026, 07:24 AM IST
Nandagokula

ಸಾರಾಂಶ

Nandagokula: ನಂದಗೋಕುಲ ಧಾರಾವಾಹಿಯಲ್ಲಿ ಮೀನಾ ತಮ್ಮ ಮಾತಿಗೆ ಫೇಮಸ್. ತಮ್ಮ ಕ್ಯೂಟ್ ಆಗಿರುವ ಡೈಲಾಗ್ ಮೂಲಕ ಎದುರಿನವರ ಮುಖದಲ್ಲಿ ನಗು ತರಿಸುವ ಪಟ ಪಟ ಮಾತನಾಡುವ ಮೀನಾ, ತೆರೆಯ ಹಿಂದೆ ಆ ಡೈಲಾಗ್ ಗಳನ್ನು ಹೇಳಲು ಎಷ್ಟು ಕಷ್ಟ ಪಡ್ತಿದ್ದಾರೆ ಅನ್ನೋದನ್ನು ನೀವೆ ನೋಡಿ. 

ನಂದಗೋಕುಲದ ಮೀನಾ ಪಾತ್ರಧಾರಿಯ ತೆರೆಯ ಹಿಂದಿನ ಕಥೆ

ನಂದಗೋಕುಲ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಗಳು ತಮ್ಮ ಅತ್ಯುತ್ತಮ ಅಭಿನಯದ ಮೂಲಕ ಗಮನ ಸೆಳೆಯುತ್ತವೆ. ಅದರಲ್ಲೂ ಮೀನಾ ಪಾತ್ರಧಾರಿ ಜನಮನ ಗೆಲ್ಲುವಲ್ಲಿ ಗೆದ್ದಿದ್ದಾರೆ. ಮೀನಾ ಪಾತ್ರ, ಪತ್ನಿಯಾಗಿ ಸೊಸೆಯಾಗಿ, ಬಿಂದಾಸ್ ಹುಡುಗಿಯಾಗಿ ಅವರ ಪಾತ್ರವನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಆರಂಭದಲ್ಲೇ ತಮ್ಮ ಪಾತ್ರದ ಮೂಲಕ ಚಮಕ್ ಕೊಟ್ಟವರು ಮೀನಾ. ಅಪ್ಪನಿಗೆ ಲವ್ ಮಾಡೋದು ಅಂದ್ರೇನೆ ಆಗೋದಿಲ್ಲ. ಅಂತದರಲ್ಲಿ ಅಪ್ಪನಿಗೆ ಕಂಡರೇ ಆಗದ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ಮನೆಗೆ ಬಂದ ಹುಡುಗಿ ಮೀನಾ, ಮನೆ ಮಂದಿಯ ಅದರಲ್ಲೂ ಅತ್ತೆ ಮಾವನ ದ್ವೇಷವನ್ನೇ ಪ್ರೀತಿಗೆ ಬದಲಾಯಿಸಿದವಳು. ಆರಂಭದಲ್ಲಿ ಅತ್ತೆಯ ಮನಸ್ಸನ್ನು ಗೆದ್ದ ಮೀನಾ, ನಂತರ ಮಾವ ನಂದನ ಮನಸ್ಸನ್ನು ನಿಧಾನವಾಗಿ ಗೆಲ್ಲುವಲ್ಲಿ ಯಶಸ್ವಿಯಾದಳು. ಜೊತೆಗೆ ತನ್ನ ಮುದ್ದು ಪೆದ್ದು ಮಾತಿನ ಮೂಲಕವೇ ಮಾವನಿಂದ ಶಹಭಾಸ್ ಗಿರಿ ಪಡೆದುಕೊಂಡು, ಮನೆಯ ಮೆಚ್ಚಿನ ಸೊಸೆಯಾಗಿದ್ದಾಳೆ ಮೀನಾ.

ಮೀನಾ ಪಾತ್ರಧಾರಿಯ ತೆರೆಯ ಮುಂದಿನ ಕತೆಯನ್ನು ನೀವು ಕೇಳಿರುತ್ತೀರಿ. ನೋಡಿರುತ್ತೀರಿ. ಆದರೆ ತೆರೆಯ ಹಿಂದೆ ಅವರು ಏನೆಲ್ಲಾ ಕಸರತ್ತು ಮಾಡುತ್ತಾರೆ ಅನ್ನೋದು ಗೊತ್ತಾ? ತೆರೆಯ ಮೇಲೆ ಪಟ ಪಟ ಎಂದು ಮಾತನಾಡಿ, ಎದುರು ಯಾರೇ ನಿಂತಿದ್ದರೂ ಉತ್ತರ ಕೊಡುವ ಮೀನಾ, ತೆರೆಯ ಹಿಂದೆ ಮಾತ್ರ ತಮ್ಮ ಡೈಲಾಗ್ ಹೇಳೋದಕ್ಕೆ ತುಂಬಾನೆ ಕಷ್ಟಪಡುತ್ತಾರೆ. ಒಂದೊಂದು ಡೈಲಾಗನ್ನು ಹತ್ತು ಬಾರಿಯಾದರೂ ಹೇಳುತ್ತಾರೆ. ನಿರ್ದೇಶಕರಾದ ಶ್ರವಂತ್ ಹತ್ತಿರವಿದ್ದು, ತಿದ್ದಿ ಸರಿಪಡಿಸಿದರೂ, ಮತ್ತೆ ಕನ್ಫ್ಯೂಶನ್ ಆಗಿ ತಪ್ಪು ಮಾಡುತ್ತಾರೆ. ತೆರೆಯ ಹಿಂದಿನ ತಮಾಷೆಯಾದ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಮ್ಮು, ಪ್ರಿಯಾ ಮತ್ತು ಮೀನಾ ನಡುವೆ ಸಂಭಾಷಣೆ ನಡೆಯುತ್ತಿದೆ. ಪ್ರಿಯಾ ಮುಂದೆ ಧಾರವಾಹಿಯಲ್ಲಿ ಡೈಲಾಗ್ ಹೊಡೆದಷ್ಟು ಸುಲಭದಲ್ಲಿ, ಸೀರಿಯಲ್ ಶೂಟಿಂಗ್ ಸಂದರ್ಭದಲ್ಲಿ ಡೈಲಾಗ್ ಹೊಡೆಯಲು ಸಾಧ್ಯ ಆಗೋದಿಲ್ಲ. ವಿಡಿಯೋ ನೋಡಿ ಜನ ಅಯ್ಯೋ ಒಂದು ಡೈಲಾಗ್ ಹೊಡೆಯೋದು ಇಷ್ಟೊಂದು ಕಷ್ಟಾನ ಎಂದು ಹೇಳಿದ್ದಾರೆ. ಹೇಗಿದೆ ವಿಡಿಯೋ ನೀವೆ ನೋಡಿ.

 

 

ಅಂದ ಹಾಗೇ ‘ನಂದಗೋಕುಲ’ ಧಾರಾವಾಹಿಯಲ್ಲಿ ಮೀನಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಮೇಘಾ ಎಸ್ ವಿ. ಇವರು ಈ ಹಿಂದೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಇಷ್ಟ ದೇವತೆ, ಜೀವ ಹೂವಾಗಿದೆ ಹಾಗೂ ಜೀ ಕನ್ನಡದ ನಾಗಿಣಿ ಧಾರವಾಹಿಯಲ್ಲೂ ಸಹ ಮೇಘಾ ನಟಿಸಿದ್ದರು. ಅಷ್ಟೇ ಅಲ್ಲ ಇವರು ಕಲರ್ಸ್ ಕನ್ನಡದ ಕಪಲ್ಸ್ ರಿಯಾಲಿಟಿ ಶೋ ರಾಜಾ ರಾಣಿ ಸೀಸನ್ ೩ ವಿನ್ನರ್ ಕೂಡ ಹೌದು. ಇವರ ಪತಿ ಸಂಜಯ್. ಇಬ್ಬರ ಜೋಡಿಯನ್ನು ಜನ ಇಷ್ಟಪಟ್ಟಿದ್ದರು. ಈಕೆ ಕ್ಲಾಸಿಕಲ್ ಡ್ಯಾನ್ಸರ್ ಕೂಡ ಹೌದು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಪ್ಲೀಸ್​ ಪೊಲೀಸ್ರೇ ಸೀರಿಯಲ್​ ನೋಡಿ, ಜೈದೇವ್​ನ ಬಿಟ್ಟುಬಿಡಿ: ಗೋಳಾಡ್ತಿದ್ದಾರೆ ಜೈ ಫ್ಯಾನ್ಸ್​
ಬ್ಲಡಿ ಮದರ್ ಸೆಂಟಿಮೆಂಟ್ ಕ್ಲೋಸ್ ಮಾಡಿದ್ದ ಜೈದೇವ್‌ಗೆ ಆಘಾತ; ಕೆಡಿ ನೋಡಿ ಪೊಲೀಸರೇ ಕಂಗಾಲು