ಶೆರ್ಲಿನ್​ ನಾಗಿನ್​ ಡ್ಯಾನ್ಸ್! ವಿಡಿಯೋ ನೋಡಿ ಹಾವು ಆತ್ಮಹತ್ಯೆ ಮಾಡ್ಕೊಳೋದು ಗ್ಯಾರೆಂಟಿ ಎಂದ ಟ್ರೋಲರ್ಸ್​

By Suchethana D  |  First Published Jun 2, 2024, 4:26 PM IST

ನಟಿ ಶೆರ್ಲಿನ್​ ಚೋಪ್ರಾ ನಾಗಿನ್​ ಡ್ಯಾನ್ಸ್​ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.
 


ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರನ್ನು ಮದ್ವೆಯಾಗಲು ರೆಡಿ ಎನ್ನುವ ಮೂಲಕ ಅಸಭ್ಯ ಮಾತನಾಡಿ,  ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಎಂದು ಹೇಳುತ್ತಲೇ ಸೆನ್​ಸೇಷನ್​ ಕ್ರಿಯೇಟ್​ ಮಾಡಿದ ಬಾಲಿವುಡ್​ ನಟಿ ಶೆರ್ಲಿನ್​ ಚೋಪ್ರಾ. ವಯಸ್ಸು ನಲವತ್ತು ಆದರೂ, ಅರೆಬರೆ ಡ್ರೆಸ್​ನಲ್ಲಿಯೇ ದಿನವೂ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ನಟಿ ಈಕೆ. ಅಷ್ಟಕ್ಕೂ, ನಟಿ ಶೆರ್ಲಿನ್​ ಚೋಪ್ರಾ ತಮ್ಮ ಅಂಗಾಂಗ ಪ್ರದರ್ಶನಗಳಿಂದಲೇ ಖ್ಯಾತಿ ಗಳಿಸಿದ ತಾರೆ.  ಈಕೆ (Sherlyn Chopra) ಆಗಾಗ ಶಾಕಿಂಗ್‌ ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ದೇಹ ಪ್ರದರ್ಶನ ಮಾಮೂಲಾಗಿಬಿಟ್ಟಿದೆ. ಎದೆಯ ಪ್ರದರ್ಶನ ಮಾಡಿದರಷ್ಟೇ  ಸಿನಿಮಾದಲ್ಲಿ ತಮಗೆ ಉಳಿಗಾಲ ಎಂದು ಹೆಚ್ಚಿನ ನಟಿಯರು ಅಂದುಕೊಂಡಂತಿದೆ. ಇದಕ್ಕಾಗಿಯೇ ತೆಳ್ಳಗೆ, ಬೆಳ್ಳಗೆ ಇರಲು ಸಾಕಷ್ಟು ಡಯಟ್​ ಪಾಲನೆ, ಯೋಗ, ಜಿಮ್​, ವ್ಯಾಯಾಮಗಳ ಮೊರೆ ಹೋಗುವ ನಟಿಯರು ಎದೆ ಭಾಗವನ್ನು ದೊಡ್ಡದಾಗಿ ತೋರಿಸಿಕೊಳ್ಳಲು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳುವುದು ಮಾಮೂಲಾಗಿದೆ. ಇವರ ಪೈಕಿ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಕೂಡ ಒಬ್ಬರು.

ಇದೀಗ ಅದೇ ರೀತಿಯ ಡೈಮಂಡ್​​ ಡ್ರೆಸ್​ ಧರಿಸಿರುವ ನಟಿ ನಾಗಿನ್​ ಡ್ಯಾನ್ಸ್​ ಮಾಡಿದ್ದಾರೆ.  ವೆಬ್​ಸೀರಿಸ್​ ಒಂದರಲ್ಲಿ ಡಬಲ್​ ರೋಲ್​ ಮಾಡಿರುವ ನಟಿ, ಅದರಲ್ಲಿ  ವಿಷ ಕನ್ಯೆಯಾಗಿದ್ದಾರೆ. ಅದಕ್ಕೆ ಈಗ ಹೋದಲ್ಲಿ, ಬಂದಲ್ಲಿ ಹಾವಿನಂತೆಯೇ ಬಳಕುತ್ತಾರೆ. ನನ್ನ ದೇಹದ ತುಂಬೆಲ್ಲಾ ವಿಷವಿದೆ ಎಂದು ಹೇಳಿದ್ದ ನಟಿ, ಇದೀಗ ನಾಗಿನ್​ ನೃತ್ಯವನ್ನೇ ಮಾಡಿಬಿಟ್ಟಿದ್ದಾರೆ. ಇದರ ವಿಡಿಯೋ ನೋಡಿದ ಟ್ರೋಲಿಗರು ಹಾವು ನೋಡಿದ್ರೆ ಆತ್ಮಹತ್ಯೆ ಮಾಡಿಕೊಳ್ಳೋದು ಗ್ಯಾರೆಂಟಿ ಎಂದು ಹೇಳುತ್ತಿದ್ದಾರೆ.  ಹೇಳಿಕೇಳಿ ಪ್ಲಾಸ್ಟಿಕ್​ ಸರ್ಜರಿ ಮಾಡಿಕೊಂಡಿರುವವರು ಶೆರ್ಲಿನ್​. ಇದನ್ನೇ ಬಂಡವಾಳವಾಗಿಸಿಕೊಂಡು ಈ ನೃತ್ಯ ಮಾಡಿದ್ದಾರೆ. ಇದಕ್ಕೆ ಹಲವರು ಛೀಮಾರಿಯನ್ನೂ ಹಾಕಿದ್ದಾರೆ. ಏನೇ ಮಾಡಿದರೂ ನಟಿ ಡೋಂಟ್​ ಕೇರ್​.

Tap to resize

Latest Videos

ಶೆರ್ಲಿನ್​ ಅವತಾರ ನೋಡಿ ದೇವ್ರೇ ಎರಡೇ ಕಣ್ಣು ಯಾಕೆ ಕೊಟ್ಟೆ ಅಂತಿದ್ದಾರೆ ಪಡ್ಡೆ ಹೈಕಳು!

ಏಕೆಂದರೆ,   ದೇಹ ಪ್ರದರ್ಶನದಿಂದಲೇ ಫೇಮಸ್​ ಆಗಿರುವ ನಟಿಯರ ಪೈಕಿ ಇವರು ಕೂಡ ಒಬ್ಬರು.  ಆಗಾಗ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್‌ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ.  ಇತ್ತೀಚಿಗೆ ಡ್ರಾಮಾ ಕ್ವೀನ್​ ರಾಖಿ ಸಾವಂತ್​ ಅವರಿಂದ ಮತ್ತಷ್ಟು ಪ್ರಚಾರಕ್ಕೆ ಬಂದಿದ್ದರು.  ಉದ್ಯಮಿಯೊಬ್ಬರ ವಿರುದ್ಧ  ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ  ನಟಿ ದೂರಿನಲ್ಲಿ ತಿಳಿಸಿದ್ದರು.  

 ಕೆಲ ದಿನಗಳ ಹಿಂದೆ ನಟಿ, ಐಸ್​ಕ್ರೀಂ ಹೇಗೆ ತಿನ್ನಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದರು. ಐಸ್​ಕ್ರೀಂ ಷಾಪ್​ ಒಂದರಲ್ಲಿ ಕೋನ್​ ಐಸ್​ಕ್ರೀಂ ಖರೀದಿ ಮಾಡಿರುವ ಶೆರ್ಲಿನ್​ ಹೆಣ್ಣುಮಕ್ಕಳು ಐಸ್​ಕ್ರೀಂ ಹೀಗೆ ತಿನ್ನಬೇಕು ಎಂದು ಹೇಳಿದ್ದರು. ಈ ಹಿಂದೆ ನಟಿ ಫ್ರೀ ಆಗಿ  ರೋಡ್​ಸೈಡ್​ನಲ್ಲಿ ಕೋನ್​ ಐಸ್​ಕ್ರೀಂ ತಿಂದಿದ್ದು, ಅದಕ್ಕೆ ದುಡ್ಡು ಕೊಡದೇ ಭಾರಿ ಟೀಕೆಗೆ ಒಳಗಾಗಿದ್ದರು. ಇದೀಗ  ಅದೇ ರೀತಿ ಮತ್ತೆ ಐಸ್​​ಕ್ರೀಂ ಸೇವನೆ ಮಾಡಿದ್ದರು. ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬಂದಿದ್ದು, ನಟಿಯ ವಿರುದ್ಧ ಟೀಕೆಗಳ ಸುರಿಮಳೆಯೇ ಆಗಿತ್ತು.   

ಶೆರ್ಲಿನ್​ ಬರ್ತ್​ಡೇ ಆಚರಿಸಿಕೊಂಡದ್ದು ಹೀಗೆ- ಹುಟ್ಟುಡುಗೆಯಲ್ಲಿ ಬರೋದೊಂದೇ ಬಾಕಿ ಎಂದ ನೆಟ್ಟಿಗರು!

 

click me!