Anchor Suma Kanakala Troll: ಸುಮಾ ನಿರೂಪಣೆ ಅಂದ್ರೆ ಪ್ರೇಕ್ಷಕರಿಗೂ ಅಚ್ಚು ಮೆಚ್ಚು. ಕೆಲವೊಮ್ಮೆ ಸುಮಾ ತಮ್ಮ ಅತಿರೇಕ ವರ್ತನೆಯಿಂದ ಟ್ರೋಲಿಗರಿಗೆ ಆಹಾರವಾಗಿದ್ದುಂಟು. ಸುಮಾ ನಿರೂಪಣೆಯ ಸುಮಾ ಅಡ್ಡಾ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದ್ದು, ಈ ಸಂಬಂಧ ಪ್ರೋಮೋ ಬಿಡುಗಡೆಯಾಗಿದೆ.
ಹೈದರಾಬಾದ್: ಕರುನಾಡಿನಲ್ಲಿ ನಿರೂಪಕಿ ಅನುಶ್ರೀ (Anchor Anushree) ಹೇಗೆ ರಾಜ್ಯದ ಮನೆ ಮನೆಗೂ ಪರಿಚಯವೋ ಹಾಗೆ ತೆಲುಗು ಪ್ರದೇಶದಲ್ಲಿ ಸುಮನಾ ಕನಕಲಾ (Anchor Suma Kanakala) ಸಹ ಅಷ್ಟೇ ಫೇಮಸ್. ಚಿತ್ರರಂಗದ ಯಾವುದೇ ಕಾರ್ಯಕ್ರಮ ಇರಲಿ ಅಲ್ಲಿ ಸುಮಾ ಮೈಕ್ ಹಿಡಿದು ನಿಂತಿದ್ದಾರೆ. ಎಲ್ಲಾ ಕಾರ್ಯಕ್ರಮಗಳಿಗೂ ಸುಮಾ ನಿರೂಪಣೆಯೇ ಬೇಕು ಅನ್ನೋಷ್ಟರ ಮಟ್ಟಿಗೆ ಬಹು ಬೇಡಿಕೆಯ ನಿರೂಪಕಿಯಾಗಿದ್ದಾರೆ. ಇಷ್ಟು ಮಾತ್ರವಲ್ಲದೇ ತಾವೇ ಸುಮಾ ಅಡ್ಡಾ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕವೂ ಸಕ್ಸಸ್ ಕಂಡಿದ್ದಾರೆ. ನಿರೂಪಣೆಯ ಜೊತೆಯಲ್ಲಿ ಸುಮಾ ಅವರ ಕಾಮಿಡಿ ಡೈಲಾಗ್, ಪಂಚ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ.
ಈ ಎಲ್ಲಾ ವಿಷಯಗಳಿಂದ ಸುಮಾ ನಿರೂಪಣೆ ಅಂದ್ರೆ ಪ್ರೇಕ್ಷಕರಿಗೂ ಅಚ್ಚು ಮೆಚ್ಚು. ಕೆಲವೊಮ್ಮೆ ಸುಮಾ ತಮ್ಮ ಅತಿರೇಕ ವರ್ತನೆಯಿಂದ ಟ್ರೋಲಿಗರಿಗೆ ಆಹಾರವಾಗಿದ್ದುಂಟು. ಸುಮಾ ನಿರೂಪಣೆಯ ಸುಮಾ ಅಡ್ಡಾ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದ್ದು, ಈ ಸಂಬಂಧ ಪ್ರೋಮೋ ಬಿಡುಗಡೆಯಾಗಿದೆ. ಪ್ರತಿ ಶನಿವಾರ ಬದಲು ಮಂಗಳವಾರ ಸುಮಾ ಅಡ್ಡಾ ಕಾರ್ಯಕ್ರಮ ಪ್ರಸಾರವಾಗಲಿದೆ.
ನೈಟ್ ಮೆಸೇಜ್ ಮಾಡಿ ಅಂದಿದ್ರಿ ನಂಬರ್ ಕೊಟ್ಟು; ಅನುಶ್ರೀಗೆ ತಗ್ಲಾಕೊಂಡ್ರಾ ಅಚ್ಯುತ್ ಕುಮಾರ್?
ಸುಮಾ ಅಡ್ಡಾ ಶೋಗೆ ಬಂದ್ರು ಸ್ಪೆಷಲ್ ಗೆಸ್ಟ್!
ಸುಮಾ ಅಡ್ಡಾ ಕಾರ್ಯಕ್ರಮದ ಪ್ರೋಮೋದಲ್ಲಿ ಲವ್ ಮಿ ಚಿತ್ರದ ಆಶಿಶ್ ರೆಡ್ಡಿ ಮತ್ತು ಬೇಬಿ ಖ್ಯಾತಿಯ ವೈಷ್ಣವಿ ಚೈತನ್ಯ ಅತಿಥಿಗಳಾಗಿ ಆಗಮಿಸಿದ್ದಾರೆ. ಸುಮಾ ಆಂಜನೇಯನಿಗೆ ಪೂಜೆ ಸಲ್ಲಿಸೋದನ್ನು ಪ್ರೋಮೋದಲ್ಲಿ ಕಾಣಬಹುದಾಗಿದೆ. ಪ್ರೋಮೋವನ್ನು ಫನ್ನಿಯಾಗಿ ತೋರಿಸಲಾಗಿದೆ.
ಆಂಜನೇಯನಲ್ಲಿ ಸುಮಾ ಬೇಡಿಕೆ
ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುವ ಸುಮಾ, ನಿಮ್ಮ ಕೃಪೆಯಿಂದ ನಾನು ಇನ್ಮುಂದೆ ಮಂಗಳವಾರ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ ಜನರನ್ನು ಮನರಂಜಸಲು ಮುಂದಾಗುತ್ತಿದ್ದೇನೆ. ಇದಕ್ಕೆ ನಿನ್ನ ಆಶೀರ್ವಾದ ಬೇಕೆಂದು ವಾಯಪುತ್ರ ಆಂಜನೇಯನಲ್ಲಿ ಕೇಳಿಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸುಮಾ, ಪ್ರೀ ರಿಲೀಸ್ ಈವೆಂಟ್‌ಗಳು, ಸಕ್ಸಸ್ ಸೆಲೆಬ್ರೇಷನ್ ಈವೆಂಟ್‌ಗಳು ಎಲ್ಲಾ ನನ್ನ ಬಳಿಗೆ ಬರುವಂತೆ ಮಾಡು ಎಂದು ಭಗವಂತನಲ್ಲಿ ಬೇಡಿಕೆ ಇರಿಸಿದ್ದಾರೆ. ಇದಕ್ಕೆ ನನ್ನ ಕೈಯಲ್ಲಿ ಏನಿದೆ ಎಂದು ಆಂಜನೇಯ ಹೇಳುವಂತೆ ಪ್ರೋಮೋದಲ್ಲಿ ತೋರಿಸಲಾಗಿದೆ. ಈ ಪ್ರೋಮೋ ನೋಡಿದ ನೆಟ್ಟಿಗರು, ಸುಮಾಗೆ ಅದೆಷ್ಟು ಹಣದ ಹುಚ್ಚು, ಇಷ್ಟೆಲ್ಲಾ ಹಣ ಏನು ಮಾಡ್ತಿರಿ ಎಂದು ಕಮೆಂಟ್ ಮಾಡಿದ್ದಾರೆ.
ಮದುಮಗಳಾದ ಆ್ಯಂಕರ್ ಅನುಶ್ರೀ ವಿಡಿಯೋ ವೈರಲ್! ಗುಟ್ಟಾಗಿ ಮದುವೆ ನಡೆದೋಯ್ತಾ ಕೇಳ್ತಿದ್ದಾರೆ ಫ್ಯಾನ್ಸ್...
ಸುಮಾ ಕಾಲೆಳೆದ ನಟಿ ವೈಷ್ಣವ್
ಈ ಬಾರಿಯ ಎಪಿಸೋಡ್ ಸಖತ್ ಫನ್‌ನೊಂದಿಗೆ ಇರಲಿದೆ ಎಂಬುದನ್ನು ಕಾಣಬಹುದು. ಲವ್ ಮಿ ಚಿತ್ರದ ಟೀಂ ಸುಮಾ ಅಡ್ಡಾ ಕಾರ್ಯಕ್ರಮದಲ್ಲಿ ಫುಲ್ ಮಸ್ತಿ ಮಾಡಿದೆ. ಪ್ರೋಮೋದಲ್ಲಿ ನಟಿ ವೈಷ್ಣವಿಗೆ ರಾತ್ರಿ ಮಾತ್ರ ಯಾಕೆಗಳು ದೆವ್ವಗಳು ಸಂಚರಿಸುತ್ತವೆ ಎಂದು ಸುಮಾ ಕೇಳುತ್ತಾರೆ. ಇದಕ್ಕೆ ವ್ಯಂಗ್ಯವಾಗಿ ಉತ್ತರಿಸಿದ ವೈಷ್ಣವಿ, ದೆವ್ವಗಳು ಹಗಲಿನಲ್ಲಿ ಕಾರ್ಯಕ್ರಮಗಳಿಗೆ ಆ್ಯಂಕರ್ ಮಾಡುವುದರಲ್ಲಿ ನಿರತವಾಗಿವೆ ಎಂದು ಸುಮಾ ಕಾಲೆಳೆದರು.