Weekend With Ramesh; ಮೊದಲ ಅತಿಥಿ ರಮ್ಯಾ, ಈ ಬಾರಿ ಸಾಧಕರ ಸೀಟ್‌ನಲ್ಲಿ ಯಾರೆಲ್ಲ ಇರ್ತಾರೆ? ಇಲ್ಲಿದೆ ಪಟ್ಟಿ

By Shruthi Krishna  |  First Published Mar 21, 2023, 9:53 AM IST

ವೀಕೆಂಡ್ ವಿತ್ ರಮೇಶ್ ಸೀಸನ್ 5ನ ಮೊದಲ ಅತಿಥಿ ರಮ್ಯಾ. ಈ ಬಾರಿ ಸಾಧಕರ ಸೀಟ್‌ನಲ್ಲಿ ಯಾರೆಲ್ಲ ಕೂರುತ್ತಾರೆ ಎನ್ನುವ ಲಿಸ್ಟ್ ಬಹಿರಂಗವಾಗಿದೆ. 


ಕನ್ನಡ ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋ, ಪ್ರೇಕ್ಷಕರ ಹೃದಯ ಗೆದ್ದ 'ವೀಕೆಂಡ್ ವಿತ್ ರಮೇಶ್' ಮತ್ತೆ  ಬರ್ತಿದೆ. ಈಗಾಗಲೇ 4 ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ವೀಕೆಂಡ್ ವಿತ್ ರಮೇಶ್ ಇದೀಗ 5ನೇ ಸೀಸನ್ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದೆ. ಅಂದಹಾಗೆ ಸ್ಯಾಂಡಲ್ ವುಡ್‌ನ ಖ್ಯಾತ ನಟ, ಯಶಸ್ವಿ ನಿರೂಪಕ ರಮೇಶ್ ಸೀಸನ್ 5 ಅನ್ನು ಸಹ ಹೋಸ್ಟ್ ಮಾಡುತ್ತಿದ್ದಾರೆ. ರಮೇಶ್ ನಿರೂಪಣ ಶೈಲಿ ಕನ್ನಡ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಮತ್ತೆ ಬರ್ತಿದೆ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ. ಅಂದಹಾಗೆ ಈ ಬಾರಿ ಸಾಧಕರ ಸೀಟ್ ಏರುವ ಅತಿಥಿಗಳು ಯಾರು ಎನ್ನುವ ಲಿಸ್ಟ್ ಬಹಿರಂಗವಾಗಿದೆ. ಅಂದಹಾಗೆ ಸೀಸನ್ 5ನೇ ಮೊದಲ ಅತಿಥಿ ರಮ್ಯಾ ಎನ್ನುವುದು ಬಹಿರಂಗವಾಗಿದೆ. 

ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ನಿರೂಪಕ ರಮೇಶ್ ಅರವಿಂದ್ ಹಾಗೂ ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಅವರು ಪತ್ರಿಕಾಗೋಷ್ಠಿಯಲ್ಲಿ ಶೋ ಕುರಿತಾಗಿ ಮಾಹಿತಿ ನೀಡಿದ್ದು, ಮೊದಲ ಎಪಿಸೋಡ್​ನ ಅತಿಥಿ ಯಾರಾಗಲಿದ್ದಾರೆ ಎಂಬುದರ ಜೊತೆಗೆ ಈ ಸೀಸನ್​ನಲ್ಲಿ ಕಾಣಿಸಿಕೊಳ್ಳುವ ಇತರೆ ಕೆಲವು ಅತಿಥಿಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

ನಾನು ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೇನೆ; ಜೀವನದ ಬಗ್ಗೆ ಅಪ್ಪು ಹೇಳಿದ್ದ ಮಾತು ಸಖತ್ ವೈರಲ್

Tap to resize

Latest Videos

ವೀಕೆಂಡ್ ವಿತ್ ರಮೇಶ್ ಮೊದಲ ಎಪಿಸೋಡ್​ನಲ್ಲಿ ರಿಷಬ್ ಶೆಟ್ಟಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ರಮ್ಯಾ ಮೊದಲ ಅತಿಥಿಯಾಗಿ ಸಾಧಕರ ಸೀಟ್ ಏರುವುದು ಕನ್ಫರ್ಮ್ ಆಗಿದೆ. ಅಂದಹಾಗೆ ರಮ್ಯಾ ಜೊತೆಗಿನ ಎಪಿಸೋಡ್​ನ ಚಿತ್ರೀಕರಣ ಮಾರ್ಚ್ 21 ರಿಂದ ಪ್ರಾರಂಭವಾಗಲಿದೆ. ಇನ್ನು ಎರಡನೇ ಎಪಿಸೋಡ್‌ನಲ್ಲಿ ಖ್ಯಾತ ಡಾನ್ಸರ್ ಪ್ರಭುದೇವ ಸಾಧಕರ ಕುರ್ಚಿಯ ಮೇಲೆ ಕೂರಲಿದ್ದಾರೆ. 

ಇನ್ನೂ ಉಳಿದಂತೆ 5ನೇ ಸೀಸನ್​ನಲ್ಲಿ ನಟ ಧ್ರುವ ಸರ್ಜಾ, ನಟಿ ರಚಿತಾ ರಾಮ್, ನಟಿ ಮಾಲಾಶ್ರೀ, ಇಶಾ ಫೌಂಡೇಶನ್​ನ ಜಗ್ಗಿ ವಾಸುದೇವ್ , ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್ ಸೇರಿದಂತೆ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷವೆಂದರೆ ಇನ್ನು 16 ಸಾಧಕರ ಬಳಿಕ ನೂರನೇ ಸಾಧಕರು ಬರಲಿದ್ದು, ಆ ಎಪಿಸೋಡ್​ಗೆ ಬಹಳ ವಿಶೇಷ ಅತಿಥಿಯೊಬ್ಬರು ಸಾಧಕರ ಕುರ್ಚಿ ಏರಲಿದ್ದಾರೆ. ನೂರನೇ ಎಪಿಸೋಡ್​ಗೆ ಬರುವ ಅತಿಥಿ ಆ ಚೇರ್​ಗೆ ನ್ಯಾಯ ಕೊಡಲಿದ್ದಾರೆ ಎಂದಿದ್ದಾರೆ ನಟ ರಮೇಶ್.

Puneeth Rajkumar ಕೈಗೆ ಹಣ ಕೊಡುತ್ತಿರಲಿಲ್ಲ; ಸ್ಟ್ರಿಕ್ಟ್‌ ತಾಯಿ ಬಗ್ಗೆ ಅಪ್ಪು ಮಾತನಾಡಿದ ವಿಡಿಯೋ ವೈರಲ್!

'ಇಲ್ಲಿಯವರೆಗೂ 84 ಸಾಧಕರು ಕುರ್ಚಿಯ ಮೇಲೆ ಕೂತಿದ್ದು 110 ಸಂಚಿಕೆಗಳು ಪ್ರಸಾರವಾಗಿವೆ. ಇನ್ನು 16 ಸಾಧಕರು ಅದ ಬಳಿಕ ಸೆಂಚೂರಿ ಭಾರಿಸುತ್ತೇವೆ. ಸಿನಿಮಾದಲ್ಲಿಯೂ ಸೆಂಚುರಿ ಹೋಡಿದಿದ್ದೇನೆ. ಈಗ ಇದರಲ್ಲೂ ಹೋಡೆದರೆ ಖುಷಿ ಆಗುತ್ತೆ. ಇದನ್ನೆಲ್ಲ ನೋಡಿದಾಗ ನನಗೆ ಅನಿಸುತ್ತಿರುವುದು, ಎಲ್ಲಾ ಸೇಮ್, ಎಲ್ಲಾ ಸಾಧಕರು ಸಾಧನೆಗೆ ಹೋರಾಟವನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಸಾಧಕರಿಗೆ ಕೊರತೆ ಇಲ್ಲ. ಕೇವಲ ನಟ, ರಾಜಕಾರಣಿ ಅಲ್ಲ ವೈದ್ಯರು, ರೈತರು, ನರ್ಸ್, ಹೀಗೆ ಹಲವರನ್ನು ಕರೆಸಬಹುದು. ಸ್ಫೂರ್ತಿ ತುಂಬುವಂತಹ ಕೆಲಸ ಮಾಡಬೇಕು. ಅದರಿಂದ, ಕರ್ನಾಟಕದಲ್ಲಿರೋ ಎಲ್ಲರಿಗೂ ತಮ್ಮ ನಿಜವಾದ ಶಕ್ತಿಯ ಅರಿವಾಗಿ, ಎಲ್ಲರೂ ತಮ್ಮ ಅತ್ಯುತ್ತಮ ವ್ಯಕ್ತಿತ್ವನ್ನು ಹೊರಗೆ ತೋರಬೇಕು ಅನ್ನುವುದೇ ವೀಕೆಂಡ್ ವಿತ್ ರಮೇಶ್ ಅನ್ನೋದೆ ಉದ್ದೇಶ ಎಂದು ರಮೇಶ್ ಅರವಿಂದ್ ಹೇಳಿದರು. ಅಂದಹಾಗೆ ಕಿರುತೆರೆ ಪ್ರೇಕ್ಷಕರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ವೀಕೆಂಡ್ ರಮೇಶ್ ಇದೇ ಮಾರ್ಚ್ 25 ರಿಂದ ಪ್ರಾರಂಭವಾಗುತ್ತಿದೆ. 

click me!