ಒಂದೊಳ್ಳೆ ಕಾರಣಕ್ಕೆ ಕೂದಲು ದಾನ ಮಾಡಿದ ಗರ್ಭಿಣಿ ನಟಿ ಮಾನಸಾ ಜೋಶಿ

Published : Oct 18, 2022, 04:07 PM IST
ಒಂದೊಳ್ಳೆ ಕಾರಣಕ್ಕೆ ಕೂದಲು ದಾನ ಮಾಡಿದ ಗರ್ಭಿಣಿ ನಟಿ ಮಾನಸಾ ಜೋಶಿ

ಸಾರಾಂಶ

ಒಂದೊಳ್ಳೆ ಕಾರಣಕ್ಕೆ ನಟಿ ಮಾನಸಾ ಪ್ರೀತಿಯಿಂದ ಉದ್ದ ಬೆಳೆಸಿದ್ದ ಕೂದಲನ್ನು ದಾನ ಮಾಡಿದ್ದಾರೆ.

ನಟಿ ಮಾನಸಾ ಜೋಶಿ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಈ ನಡುವೆ ಗರ್ಭಿಣಿ ಮಾನಸಾ ಜೋಶಿ ಮಾನವೀಯ ಕೆಲಸ  ಮಾಡಿ ಸುದ್ದಿಯಾಗಿದ್ದಾರೆ. ಹೌದು ಒಂದೊಳ್ಳೆ ಕಾರಣಕ್ಕೆ ಮಾನಸಾ ಪ್ರೀತಿಯಿಂದ ಉದ್ದ ಬೆಳೆಸಿದ್ದ ಕೂದಲನ್ನು ದಾನ ಮಾಡಿದ್ದಾರೆ. ಹೌದು ಕ್ಯಾನ್ಸರ್ ರೋಗಿಗಳಿಗೆ ತನ್ನ ಕಾದಲನ್ನು ದಾನ ಮಾಡಿದ್ದಾರೆ ಮಾನಸಾ. ಇತ್ತೀಚೆಗೆ ಸಾಕಷ್ಟು ನಟಿಯರು ಕೂದಲನ್ನು ದಾನ ಮಾಡಿದ್ದಾರೆ. ಇದೀಗ ಮಾನಸಾ ಕೂಡ ತನ್ನ ಪ್ರೀತಿಯ ಕೂದಲಿಗೆ ಕತ್ತರಿ ಹಾಕಿ ಕ್ಯಾನ್ಯರ್ ರೋಗಿಗಳಿಗೆ ವಿಗ್ ಮಾಡಿಸುವ ಸಂಸ್ಥೆಗೆ ನೀಡಿದ್ದಾರೆ. ಈ ಬಗ್ಗೆ ಮಾನಸಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 

ಕೂದಲು ಕತ್ತರಿಸಿರುವ  ಪೋಸ್ಟ್ ಶೇರ್ ಮಾಡಿ, ಇವತ್ತಿನ ಪೋಸ್ಟ್ ತುಂಬಾ ವಿಶೇಷ ಮತ್ತು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ಹೇಳಿದ್ದಾರೆ. ಕೂದಲು ದಾನ ಮಾಡಬೇಕೆಂದು 10ವರ್ಷಗಳ ಹಿಂದೆಯೇ ಯೋಚಿಸಿದ್ದೆ. ಕೊನೆಗೂ ದಾನ ಮಾಡಿದೆ ಎಂದು ಹೇಳಿದ್ದಾರೆ. 'ನಾನು ಈ ಹೆಜ್ಜೆ ಇಡಲು ಸಾಧ್ಯವಾಗಿದ್ದಕ್ಕೆ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆಯಿದೆ. 15 ವರ್ಷಗಳ ಹಿಂದೆ ನಾನು ಚಿಕ್ಕ ಕೂದಲನ್ನು ಹೊಂದಿರುವ ವ್ಯಕ್ತಿಯನ್ನು ಮೊದಲ ಬಾರಿಗೆ ಕಾರ್ಟೂನ್ ನಾಟ್ಯಂನಲ್ಲಿ ನೋಡಿದೆ.  15 ವರ್ಷಗಳ ಹಿಂದೆ ಅವಳನ್ನು ವೇದಿಕೆಯ ಮೇಲೆ ನೋಡಿ ತುಂಬಾ ಶಾಕ್ ಆಗಿತ್ತು' ಎಂದು ಹೇಳಿದರು. ಗರ್ಭಿಣಿ ಮಾನಸ ಅವರ ಈ ನಿರ್ಧಾರ ಅನೇಕರಿಗೆ ಸ್ಪೂರ್ತಿಯಾಗಿದೆ. ನೆಟ್ಟಿಗರು ಹಾಗೂ ಸ್ನೇಹಿತರು ಮೆಚ್ಚುಗೆ ಕಾಮೆಂಟ್ ಮಾಡುತ್ತಿದ್ದಾರೆ. 

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ನಟಿ ಮಾನಸ ಜೋಶಿ

ನಟಿ ಮಾನಸಾ ಸಧ್ಯದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ. ಇನ್ನು ಬಣ್ಣದ ಲೋಕದ ಪಯಣದ ಬಗ್ಗೆ ಹೇಳುವುದಾದರೆ, ಮಹಾದೇವಿ ಮತ್ತು ಮಂಗಳ ಗೌರಿ ಮದುವೆ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಧಾರಾವಾಹಿ ಮಾತ್ರವಲ್ಲ ಬೆಳ್ಳಿ ತೆರೆಯಲ್ಲೂ ಮಾನಸ ಮಿಂಚಿದ್ದಾರೆ.  ಲಾಸ್ಟ್‌ ಬಸ್, ಅಮೃತ ಅಪಾರ್ಟ್‌ಮೆಂಟ್ಸ್‌, ಯಶೋಗಾಥೆ, ಹರಿವು, ಹಜ್, ಕಿರುಗೂರಿನ ಗಯ್ಯಾಳಿಗಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಮನದ `ಅಂತರಾಳ' ತೆರೆದ ನಟಿ ಮಾನಸ ಜೋಶಿ

ಅಂದಹಾಗೆ ಇತ್ತೀಚಿಗಷ್ಟೆ ಮಾನಸಾ ಗರ್ಭಿಣಿ ಆಗಿರುವ ಸಂತಸದ ವಿಚಾರವನ್ನು ಬಹಿರಂಗ ಪಡಿಸಿದ್ದರು. ಪತಿಯ ಜೊತೆ ಇರುವ ಫೋಟೋ ಶೇರ್ ಮಾಡಿ ಹೊಸ ಫೇಸ್‌ಗೆ ಹೆಜ್ಜೆ ಇಡುತ್ತಿದ್ದೀವಿ ಎಂದು ಹೇಳಿದ್ದರು.  2015, ಡಿಸೆಂಬರ್‌ ತಿಂಗಳಿನಲ್ಲಿ ಮಾನಸ ಜೋಶಿ, ಸಂಕರ್ಷಣ ಜೊತೆ  ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬೆಂಗಳೂರಿನ ದೇವಸ್ಥಾನದಲ್ಲಿ ನಡೆದ ಅದ್ಧೂರಿ ವಿವಾಹದಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ನೀನು ಫ್ರೀ ಪ್ರೊಡಕ್ಟ್‌, ಏನೂ ಮಾಡದೆ ಇಲ್ಲಿದ್ದೀಯಾ? ಕೊನೆಗೂ ಕಾವ್ಯ ವಿರುದ್ಧ ತಿರುಗಿಬಿದ್ದ ಗಿಲ್ಲಿ ನಟ
Bigg Boss: ರೊಮ್ಯಾನ್ಸ್‌ ಎಂದ ರಜತ್;‌ ಎಪಿಸೋಡ್‌ನಲ್ಲಿ ಇಲ್ಲ ಅಂತ ವೀಕ್ಷಕರು ಅಂದ್ಕೊಂಡ್ರೆ ಏನ್‌ ಮಾಡಲಿ?: ರಾಶಿಕಾ