ಮಂಟಪದಲ್ಲಿ ಕುಳಿತು ಮಧುಶ್ರೀ ಮಸ್ತಿ, ಶೂಟಿಂಗ್ ವಿಡಿಯೋ ಹಂಚಿಕೊಂಡ ಯಜಮಾನ ನಟಿ

Published : Feb 26, 2025, 10:49 AM ISTUpdated : Feb 26, 2025, 12:36 PM IST
ಮಂಟಪದಲ್ಲಿ ಕುಳಿತು ಮಧುಶ್ರೀ ಮಸ್ತಿ, ಶೂಟಿಂಗ್ ವಿಡಿಯೋ ಹಂಚಿಕೊಂಡ ಯಜಮಾನ ನಟಿ

ಸಾರಾಂಶ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಯಜಮಾನ' ಧಾರಾವಾಹಿಯಲ್ಲಿ ಝಾನ್ಸಿ ಮತ್ತು ರಾಘವೇಂದ್ರ ಕಾಂಟ್ರಾಕ್ಟ್ ಮದುವೆಯಾಗಿದ್ದಾರೆ. ಆಸ್ತಿಗಾಗಿ ಝಾನ್ಸಿ ರಾಘವೇಂದ್ರನನ್ನು ಬಳಸಿಕೊಳ್ಳುತ್ತಿದ್ದಾಳೆ. ನಟಿ ಮಧುಶ್ರೀ ಮದುವೆಯ ಶೂಟಿಂಗ್‌ನ BTS ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಾಘವೇಂದ್ರನಿಗೆ ಒಂದು ಕೋಟಿ ರೂಪಾಯಿ ಸಿಗಲಿದ್ದು, ಆತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಮದುವೆ ಒಂದು ತಿಂಗಳವರೆಗೆ ಮಾತ್ರ ಇರಲಿದೆ.

ಪುರುಷ ದ್ವೇಷಿ, ಶ್ರೀಮಂತೆ ಝಾನ್ಸಿ (Jhansi) ಮದುವೆ ಅದ್ಧೂರಿಯಾಗಿ ನೆರವೇರಿದೆ. ಯಾವುದೇ ವಿಘ್ನವಿಲ್ಲದೆ ಝಾನ್ಸಿ, ರಾಘವೇಂದ್ರನ ಕೈ ಹಿಡಿದಿದ್ದಾಳೆ. ಆಸ್ತಿಗಾಗಿ ತಾತನನ್ನು ಮೋಸ ಮಾಡ್ತಿರುವ ಝಾನ್ಸಿ ಆಟಕ್ಕೆ ರಾಘವೇಂದ್ರ ಬಲಿಯಾಗಿದ್ದಾನೆ. ಇದೊಂದು ಕಾಂಟ್ರಾಕ್ಟ್ ಮ್ಯಾರೇಜ್ (Contract Marriage). ಈ ವಿಷ್ಯ ರಾಘವೇಂದ್ರ ಮತ್ತೆ ಝಾನ್ಸಿಗೆ ಮಾತ್ರ ಗೊತ್ತಿದೆ. ಮದುವೆ ಸಂಬಂಧ ಒಂದು ತಿಂಗಳಿಗೆ ಸೀಮಿತವಾದ್ರೂ ಯಾವುದೇ ಶಾಸ್ತ್ರವನ್ನು ಬಿಟ್ಟಿಲ್ಲ. ರಾಮಾಚಾರಿ (Ramachari ) ಪುರೋಹಿತ್ಯದಲ್ಲಿ ರಾಘವೇಂದ್ರ, ಝಾನ್ಸಿಗೆ ತಾಳಿ ಕಟ್ಟಿದ್ದಾನೆ. ಝಾನ್ಸಿ ಕೈ ಹಿಡಿದು ಸಪ್ತಪದಿ ತುಳಿದಿದ್ದಾನೆ.  

ಝಾನ್ಸಿ ಪಾತ್ರದಲ್ಲಿ ಮಿಂಚುತ್ತಿರುವ, ರೀಲ್ಸ್ ನಿಂದ ಸೀರಿಯಲ್ ಗೆ ಎಂಟ್ರಿಯಾಗಿರುವ ಮಧುಶ್ರೀ ಭೈರಪ್ಪ ತಮ್ಮ ಇನ್ಸ್ಟಾ ಖಾತೆಯಲ್ಲಿ ಶೂಟಿಂಗ್ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಯಜಮಾನ ಸೀರಿಯಲ್ ಮದುವೆಗಾಗಿ ಅಧ್ಬುತ ಸೆಟ್ ಸಿದ್ಧವಾಗಿತ್ತು. ಕಲಾವಿದರು ಮದುವೆಯಲ್ಲಿ ಮಿಂಚಿದ್ದರು. ಝಾನ್ಸಿ ಕೂಡ ಥೇಟ್ ಮಧುಮಗಳಂತೆ ಅಲಂಕಾರ ಮಾಡ್ಕೊಂಡಿದ್ದಳು. ಬಿಟಿಎಸ್ ಆಫ್ ಮದುವೆ ಅಂತ ಶೀರ್ಷಿಕೆ ಹಾಕಿರುವ ಮಧುಶ್ರೀ, ಮದುವೆಗೆ ಸಿಂಗಾರಗೊಂಡಿದ್ರಿಂದ ಹಿಡಿದು ಪ್ರತಿಯೊಂದನ್ನು ತಮ್ಮ ವಿಡಿಯೋದಲ್ಲಿ ತೋರಿಸಿದ್ದಾರೆ. ರಾಮಾಚಾರಿ ಜೊತೆ ಮಂಟಪದಲ್ಲಿ ಮಾತನಾಡುವ ಮಧುಶ್ರೀ ನಂತ್ರ ರಾಘವೇಂದ್ರ ಹಾಗೂ ನಿರ್ದೇಶಕರ ಜೊತೆ ಫೋಸ್ ನೀಡಿದ್ದಾರೆ. ಮದುವೆಗೆ ಸಿದ್ಧವಾದ ಸೆಟ್ ತೋರಿಸಿದ್ದಾರೆ. ಇಷ್ಟೇ ಅಲ್ಲ ತಾತನ ಪಾತ್ರಕ್ಕೆ ಜೀವ ತುಂಬಿರುವ ರಮೇಶ್ ಭಟ್ ಹಾಗೂ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಗಾಭರಣ ಜೊತೆ ಮಧುಶ್ರೀ ಫೋಸ್ ನೀಡಿದ್ದಾರೆ. 

ನೀವು ಬಿಟ್ಟೋದ ಮೇಲೆ ಜೀವನ ತುಂಬಾ ಬದಲಾಗಿದೆ; ತಾಯಿ ನೆನೆದು ಭಾವುಕರಾದ ಬಿಗ್ ಬಾಸ್ ಐಶ್ವರ್ಯ ಶಿಂಧೋಗಿ

ಮಧುಶ್ರೀ ವಿಡಿಯೋಕ್ಕೆ ಫ್ಯಾನ್ಸ್ ಲೈಕ್ ಒತ್ತಿದ್ದಾರೆ. ಎಂಕಾಂ ಮುಗಿಸಿ ಒಳ್ಳೆ ಅವಕಾಶಕ್ಕೆ ಕಾಯ್ತಿದ್ದ ಮಧುಶ್ರೀಗೆ ರೀಲ್ಸ್ ಕೈ ಹಿಡಿದಿತ್ತು. ರೀಲ್ಸ್ ಮೂಲಕವೇ ವೈರಲ್ ಆಗಿದ್ದ ಮಧುಶ್ರೀಗೆ ಒಂದು ಸೀರಿಯಲ್ ಕೈತಪ್ಪಿ ಹೋಗಿತ್ತು. ಈಗ ಯಜಮಾನದಲ್ಲಿ ಮುಖ್ಯ ಪಾತ್ರ ಸಿಕ್ಕಿದೆ. ರೀಲ್ಸ್ ಮಾಡ್ತಿದ್ದವರಿಗೆ ಸೀರಿಯಲ್ ನಲ್ಲಿ ಅವಕಾಶ ನೀಡ್ತಿರೋದು ತಪ್ಪು ಎಂದು ಕೆಲವರು ಈ ಹಿಂದೆ ಆರೋಪಿಸಿದ್ದರು. ಆದ್ರೆ ಸೀರಿಯಲ್ ನಲ್ಲೂ ಮಧುಶ್ರೀ ಉತ್ತಮವಾಗಿ ಅಭಿನಯಿಸ್ತಾ ಇದ್ದು, ನಿಧಾನವಾಗಿ ಮಧುಶ್ರೀ ಆಕ್ಟಿಂಗ್ ಗೆ ಫ್ಯಾನ್ಸ್ ಫಿದಾ ಆಗ್ತಿದ್ದಾರೆ. 

ಕಲರ್ಸ್ ಕನ್ನಡದಲ್ಲಿ ರಾತ್ರಿ ಹತ್ತು ಗಂಟೆಗೆ ಯಜಮಾನ ಸೀರಿಯಲ್ ಪ್ರಸಾರವಾಗ್ತಿದೆ. ಅದ್ರಲ್ಲಿ ಪುರುಷ ದ್ವೇಷಿ ಝಾನ್ಸಿ 50 ಕೋಟಿಯ ಒಡತಿ.  ಬಡ ಹುಡುಗ ರಾಘವೇಂದ್ರ ಸೀರಿಯಲ್ ನಾಯಕ. ತಾತನ ಆಸ್ತಿ ತನಗೆ ಸಿಗ್ಬೇಕು ಎನ್ನುವ ಕಾರಣಕ್ಕೆ ಝಾನ್ಸಿ, ರಾಘವೇಂದ್ರ ಜೊತೆ ಕಾಂಟ್ರಾಕ್ಟ್ ಮ್ಯಾರೇಜ್ ಆಗಿದ್ದಾಳೆ. ಅನಿವಾರ್ಯ ಕಾರಣಕ್ಕೆ ರಾಘವೇಂದ್ರ ಝಾನ್ಸಿ ಕೈ ಹಿಡಿದಿದ್ದಾನೆ. ಈ ಮದುವೆ ನಂತ್ರ ರಾಘವೇಂದ್ರನಿಗೆ 1 ಕೋಟಿ ರೂಪಾಯಿ ಸಿಗುತ್ತೆ. ಆದ್ರೆ ಹಣದ ಜೊತೆ ತೊಂದ್ರೆಯನ್ನೂ ರಾಘವೇಂದ್ರ ಮೈಮೇಲೆ ಎಳೆದುಕೊಂಡಿದ್ದಾನೆ. ತಂಗಿ ಮದುವೆ ಮಾಡಿದ್ಮೇಲೆ ತಂಗಿ ಮದುವೆ ಆಗೋ ಹುಡುಗನ ಸಹೋದರಿಯನ್ನು ರಾಘವೇಂದ್ರ ಮದುವೆ ಆಗ್ಬೇಕಿತ್ತು. ಆಕೆ ವಿಕಲಾಂಗೆಯಾದ್ರೂ ರಾಘವೇಂದ್ರ ಒಪ್ಪಿಕೊಂಡಿದ್ದ. ಆದ್ರೀಗ ರಾಘವೇಂದ್ರನ ಮದುವೆ ಆಗಿದೆ. ಇದು ರಾಘವೇಂದ್ರ ಸಹೋದರಿಗೆ ತಿಳಿದಿದೆ. ಮದುವೆಯಾಗಿ ಮನೆಗೆ ಬಂದ ಅಣ್ಣನನ್ನು ತಂಗಿ ತರಾಟೆಗೆ ತೆಗೆದುಕೊಳ್ತಿದ್ದಾಳೆ. ಇತ್ತ ಝಾನ್ಸಿ ಕಳ್ಳಾಟ ಕೂಡ ವಕೀಲರಿಗೆ ತಿಳಿದಿದೆ. ಝಾನ್ಸಿ ಹಾಗೂ ರಾಘವೇಂದ್ರ ಏನು ಮಾಡ್ತಾರೆ ಎಂಬುದೇ ಸೀರಿಯಲ್ ಮುಂದಿನ ಕಥೆ. 

2 ವರ್ಷ ಹಿಂದೆ ಪತ್ನಿ ಜೊತೆ ಹೋಗಿದ್ದ ಜಾಗಕ್ಕೆ ಮತ್ತೆ ಭೇಟಿ ನೀಡಿದ ವಿಜಯ್ ರಾಘವೇಂದ್ರ; ಅದೇ ಶರ್ಟ್‌ ಹಾಕಿರುವುದು ಆಶ್ಚರ್ಯ

ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ಝಾನ್ಸಿ ಹಾಗೂ ರಾಘವೇಂದ್ರ ತಿಂಗಳ ನಂತ್ರವೂ ಒಟ್ಟಿಗೆ ಇರ್ತಾರಾ ಎಂಬ ಪ್ರಶ್ನೆ ಕಾಡ್ತಿದೆ. ಇದು ರಾಮಾಚಾರಿ ಮಾಡಿಸಿರೋ ಮದುವೆ ಆದ್ರಿಂದ ಮದುವೆ ಸುಲಭವಾಗಿ ಮುರಿಯೋದಿಲ್ಲ, ಕಾಂಟ್ರಾಕ್ಟ್ ಅಂತ ಮದುವೆ ಆದ ಝಾನ್ಸಿ ಜೀವನ ಪರ್ಯಂತ ರಾಘವೇಂದ್ರ ಜೊತೆಗಿರ್ತಾಳೆ ನೋಡಿ ಎನ್ನುತ್ತಿದ್ದಾರೆ ವೀಕ್ಷಕರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!