
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಗ್ಲಾಮರಸ್ ಫೋಟೋ ಪೋಸ್ಟ್ ಮಾಡುವ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವುದು ಕಿರುತೆರೆ ನಟಿ ಜ್ಯೋತಿ ರೈ. ಕನ್ನಡದಲ್ಲಿ ಸಾಕಷ್ಟು ಫೇಮಸ್ ಧಾರವಾಹಿಗಳಲ್ಲಿ ನಟಿಸಿದ್ದ ಜ್ಯೋತಿ ರೈ, ತೆಲುಗು ನಿರ್ದೇಶ ಸುಕು ಪೂರ್ವಜ್ ಅವರನ್ನು ವಿವಾಹವಾದ ಬಳಿಕ ತಮ್ಮ ಹೆಸರನ್ನು ಜ್ಯೋತಿ ಪೂರ್ವಜ್ ಎಂದು ಬದಲಿಸಿಕೊಂಡಿದ್ದಾರೆ. ಅವರ ಎರಡನೇ ಮದುವೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಎಲ್ಲಿಯೂ ತಮ್ಮ ಮದುವೆಯ ಬಗ್ಗೆ ಖಚಿತವಾಗಿ ಹೇಳದ ಜ್ಯೋತಿ ರೈ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲು ಕಾರಣವೇನು ಅನ್ನೋದನ್ನು ತಿಳಿಸಿದ್ದರು.
ಕಿಲ್ಲರ್ ಹಾಗೂ ಪ್ರೆಟಿ ಗರ್ಲ್ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿರುವ ಜ್ಯೋತಿ ರೈ ಈಗ ಪತಿ ಜೊತೆ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ಐಷಾರಾಮಿ ರೆಸಾರ್ಟ್‌ನಲ್ಲಿ ತಂಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸ್ಪೆಷಲ್ ರೀಲ್‌ಅನ್ನು ಹಂಚಿಕೊಂಡಿದ್ದಾರೆ. ಮಾಲ್ಡೀವ್ಸ್ ಬೀಚ್‌ನಲ್ಲಿ ಬಿಕಿನಿ ಧರಿಸಿ ಆಕೆಯ ಹೊಸ ರೀಲ್ಸ್ ಸಖತ್ ಟ್ರೆಂಡ್ ಆಗಿದೆ. ವಯಸ್ಸು 40 ದಾಟಿದ್ದರೂ ಯಾವುದೇ ಹೀರೋಯಿನ್‌ಗೆ ಕಮ್ಮಿ ಇಲ್ಲದಂತೆ ಸೌಂದರ್ಯ ಹೊಂದಿರುವ ಜ್ಯೋರಿ ತೈ ಅಂದಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 3.85 ಲಕ್ಷ ಮಂದಿ ಇದನ್ನು ವೀಕ್ಷಣೆ ಮಾಡಿದ್ದು, 27 ಸಾವಿರ ಮಂದಿ ಲೈಕ್ಸ್ ಒತ್ತಿದ್ದಾರೆ. ಆಕೆಯ ಸೌಂದರ್ಯವನ್ನು ವರ್ಣಿಸಿ 450ಕ್ಕೂ ಅಧಿಕ ಕಾಮೆಂಟ್‌ಗಳೂ ಬಂದಿವೆ. ಇತ್ತೀಚಿನ ವರ್ಷಗಳಲ್ಲಿ ಫಿಟ್‌ನೆಸ್‌ನತ್ತ ಹೆಚ್ಚಾಗಿ ಗಮನ ನೀಡಿರು ಜ್ಯೋತಿ ರೈ, ಇದಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಕನ್ನಡ ಕಿರುತೆರೆಯಲ್ಲಿ ಸಾಂಪ್ರದಾಯಿಕ ಪಾತ್ರಗಳ ಮೂಲಕ ಮನೆಮಾತಾಗಿದ್ದ ಜ್ಯೋತಿ, ನಂತರ ತೆಲುಗು ಕಿರುತೆರೆಯಲ್ಲೂ ದೊಡ್ಡ ಯಶಸ್ಸು ಕಂಡರು. ಕನ್ನಡದಲ್ಲಿ ಜೋಗುಳ ಧಾರವಾಹಿ ಇವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ಆ ನಂತರ ಬಂದೇ ಬರತಾವ ಕಾಲ,ಕನ್ಯಾದಾನ, ಲವಲವಿಕೆ, ಅನುರಾಗ ಸಂಗಮ ಹಾಗೂ ಗೆಜ್ಜೆಪೂಜೆಯಂಥ ಸೀರಿಯಲ್‌ಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಸೀರಿಯಲ್‌ನಲ್ಲಿ ತಾಯಿ, ಅಕ್ಕನ ಪಾತ್ರ ಮಾಡುತ್ತಿದ್ದ ಜ್ಯೋತಿ ರೈ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಂಪೂರ್ಣ ಭಿನ್ನ ಲುಕ್‌ನಲ್ಲೇ ಟ್ರೆಂಡ್ ಆಗುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.