ಬಿಗ್ ಬಾಸ್ ಕನ್ನಡ ಸೆ.6ಕ್ಕೆ ಟೇಕಾಫ್ ಆಗೋದೇ ಡೌಟ್; ಅನುಮತಿಯನ್ನೇ ಕೊಡೋದಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ!

Published : Aug 31, 2026, 03:44 PM IST
Bigg Boss Kannada Jollywood Studios

ಸಾರಾಂಶ

ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ಆರಂಭಕ್ಕೆ ಸಂಕಷ್ಟ ಎದುರಾಗಿದೆ. ಬಿಡದಿಯ ಜಾಲಿವುಡ್ ಸ್ಟುಡಿಯೋ ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದು, ಕಳೆದ ವರ್ಷದ ದಂಡ ಪಾವತಿಸಿಲ್ಲ ಮತ್ತು ಎಸ್‌ಟಿಪಿ ಅಳವಡಿಸಿಲ್ಲ. ಈ ಲೋಪಗಳನ್ನು ಸರಿಪಡಿಸದಿದ್ದರೆ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಸಿದ್ದಾರೆ.

ಬೆಂಗಳೂರು (ಆ.31): ಸ್ಯಾಂಡಲ್‌ವುಡ್‌ನ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' (Bigg Boss Kannada season 13) ಹೊಸ ಸೀಸನ್‌ಗಾಗಿ ಕಾಯುತ್ತಿದ್ದ ವೀಕ್ಷಕರಿಗೆ ಕಳವಳಕಾರಿ ಸುದ್ದಿಯೊಂದು ಹೊರಬಿದ್ದಿದೆ. ಬಹುನಿರೀಕ್ಷಿತ ಬಿಗ್ ಬಾಸ್ ಕಾರ್ಯಕ್ರಮವು ನಿಗದಿಯಂತೆ ಸೆಪ್ಟೆಂಬರ್ 6ರಂದು ಆರಂಭವಾಗುವುದೇ ಅನುಮಾನ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವಾಗಿರುವ ಪರಿಸ್ಥಿತಿಯ ಬಗ್ಗೆ ಕರ್ನಾಟಕದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಜಾಲಿವುಡ್ ಸ್ಟುಡಿಯೋಗೆ ಸಂಕಷ್ಟ:

ಪ್ರತಿ ಬಾರಿಯಂತೆ ಈ ಬಾರಿಯೂ ಬಿಗ್ ಬಾಸ್ ಸೆಟ್ ಅನ್ನು ಬಿಡದಿ ಬಳಿಯಿರುವ 'ಜಾಲಿವುಡ್ ಸ್ಟುಡಿಯೋ' (Jollywoods Studio) ದಲ್ಲಿ ನಿರ್ಮಿಸಲಾಗಿದೆ. ಆದರೆ, ಕಳೆದ ವರ್ಷದಂತೆ ಈ ಬಾರಿಯೂ ಜಾಲಿವುಡ್ ಸ್ಟುಡಿಯೋ ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು ಬಿಗ್ ಬಾಸ್ ಆಯೋಜಕರಿಗೆ ಮತ್ತು ಸ್ಟುಡಿಯೋ ಮಾಲೀಕರಿಗೆ 'ಬಿಗ್ ಶಾಕ್' ನೀಡಿದ್ದಾರೆ.

ಸಚಿವರು ಹೇಳಿದ್ದೇನು?

'ಜಾಲಿವುಡ್‌ನವರು ಈ ಬಾರಿ (ಬಿಗ್ ಬಾಸ್ ನಡೆಸಲು) ಅನುಮತಿ ಪಡೆದುಕೊಂಡಿಲ್ಲ. ಕಳೆದ ವರ್ಷದ ಹಳೆಯ ದಂಡವನ್ನು (Fine) ಇನ್ನೂ ಪಾವತಿಸಿಲ್ಲ. ಪರಿಸರ ನಿಯಮಗಳನ್ನು ಸರಿಪಡಿಸಿಕೊಂಡಿಲ್ಲ ಮತ್ತು ಎಸ್‌ಟಿಪಿ (STP - Sewage Treatment Plant) ಅಳವಡಿಕೆ ನಿಯಮಗಳನ್ನು ಪಾಲಿಸಿಲ್ಲ. ಈ ಎಲ್ಲ ಲೋಪಗಳನ್ನು ಸರಿಪಡಿಸಿಕೊಳ್ಳದೆ ಹೋದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ' ಎಂದು ಸಚಿವ ರಾಮಲಿಂಗಾರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಳೆದ ವರ್ಷವೂ ಇದೇ ರೀತಿಯ ಪರಿಸರ ಉಲ್ಲಂಘನೆ ಮತ್ತು ಕಾನೂನು ತೊಡಕುಗಳಿಂದಾಗಿ ಬಿಗ್ ಬಾಸ್ ಶೂಟಿಂಗ್ ಹಾಗೂ ಪ್ರಸಾರಕ್ಕೆ ತೊಂದರೆಯಾಗಿತ್ತು. ಈಗ ಮತ್ತೊಮ್ಮೆ ಅದೇ ಸಮಸ್ಯೆ ಎದುರಾಗಿರುವುದರಿಂದ, ನಿರ್ಮಾಪಕರು ಮತ್ತು ಕಲರ್ಸ್ ಕನ್ನಡ ವಾಹಿನಿಯು ಪರಿಸರ ಮಂಡಳಿಯ ನಿಯಮಗಳನ್ನು ಪೂರೈಸಿ ಅನುಮತಿ ಪಡೆಯುವುದು ಅನಿವಾರ್ಯವಾಗಿದೆ. ಒಂದು ವೇಳೆ ಸಚಿವರ ಈ ಮಾತಿನಂತೆ ಷರತ್ತುಗಳನ್ನು ಪೂರೈಸದಿದ್ದರೆ, ಸೆಪ್ಟೆಂಬರ್ 6ರಂದು ಬಿಗ್ ಬಾಸ್ ಆರಂಭವಾಗುವುದು ನಿಜಕ್ಕೂ ಡೌಟ್ ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಿಚ್ಚ ಸುದೀಪ್ ಜೊತೆ ದಾಖಲೆ ಮೇಲೆ ದಾಖಲೆ ಬರೆದಿದ್ದ ಬಿಗ್ ಬಾಸ್ 12 ಸೀಸನ್ ! 13ರ ಮೇಲಿಗ ಎಲ್ಲರ ಕಣ್ಣು
ಬಿಗ್‌ಬಾಸ್ 13: ಸಂಭವನೀಯ ಪಟ್ಟಿಯಲ್ಲಿ ಝೀ ಕನ್ನಡ ಸೀರಿಯಲ್‌ನ ಆರು ಸ್ಟಾರ್‌ಗಳ ಹೆಸರು