ಮೊನ್ನೆ ಮೊನ್ನೆ ತನ್ನ ಎರಡನೇ ಎಂಗೇಜ್‌ಮೆಂಟ್ ಹಾಗೂ ಕತ್ತಲ್ಲಿ ಕರಮಣಿ ಹಾಕ್ಕೊಂಡು ಮದ್ವೆಯಾದ್ರಾ ಅನ್ನೋ ಸುದ್ದಿಯಲ್ಲಿದ್ದ ಕಿರುತೆರೆ ನಟಿ ಜ್ಯೋತಿ ರೈ ಸೀರಿಯಲ್‌ನ ಪ್ರಮುಖ ಪಾತ್ರಕ್ಕೆ ಗುಡ್ ಬೈ ಹೇಳಿ ವೆಬ್ ಸೀರೀಸ್ ಕಡೆ ಮುಖ ಮಾಡಿದ್ದಾರೆ.
ಜ್ಯೋತಿ ರೈ ಕಿರುತೆರೆಯ ಫೇಮಸ್ ಹೆಸರು. ಕನ್ನಡದಲ್ಲಿ ಗೆಜ್ಜೆಪೂಜೆ, ಜೋಗುಳ, ಕಿನ್ನರಿ ಸೇರಿ ಸುಮಾರು 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಕೆಲವು ನಾಯಕಿ ಪಾತ್ರಗಳಾದರೆ, ಇನ್ನೂ ಕೆಲವು ಪೋಷಕ ಪಾತ್ರ. ಇದಲ್ಲದೇ ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ಕೂಡಾ ನಟಿಸಿರುವ ಜ್ಯೋತಿ ರೈ, ತೆಲುಗು ಧಾರಾವಾಹಿಗಳಲ್ಲಿ ಸದ್ಯ ಸಖತ್ ಫೇಮಸ್ ಆಗಿದ್ರು. ಅವರಿಗೆ ತೆಲುಗಿನಲ್ಲಿ ತುಂಬ ಹೆಸರು ತಂದುಕೊಟ್ಟ ಸೀರಿಯಲ್ ಗುಪ್ಪೆಡಂಥಾ ಮನಸು. ಇದು ಕನ್ನಡದಲ್ಲಿ ಹೊಂಗನಸು ಅನ್ನೋ ಹೆಸರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದೆ. ಇದರಲ್ಲಿ ಜ್ಯೋತಿ ರೈ ಅವರದು ನಿರ್ಣಾಯಕ ಪಾತ್ರವಾಗಿತ್ತು. ಒಂಥರಾ ನಮ್ಮ ಕನ್ನಡತಿ ಸೀರಿಯಲ್‌ನ ಅಮ್ಮಮ್ಮನ ಪಾತ್ರದ ಥರ.
ಸದ್ಯಕ್ಕೀಗ ತೆಲುಗಿನ 'ಗುಪ್ಪೆಡಂಥಾ ಮನಸು' ಸೀರಿಯಲ್‌ನ ಅವರ ಬಹು ಮುಖ್ಯ ಪಾತ್ರ ದುರಂತದಲ್ಲಿ ಕೊನೆಗೊಂಡಿದೆ. ಜಗತಿ ಅನ್ನುವ ನಾಯಕನ ತಾಯಿ ಪಾತ್ರ ಇವರದಾಗಿತ್ತು. ಇದೊಂಥರ ಪುತ್ರ ವ್ಯಾಮೋಹದ ತಾಯಿ, ಸಮಾಜಮುಖಿ ಪ್ರೊಫೆಸರ್, ನೇರ, ಮಾನವೀಯತೆಯ ವ್ಯಕ್ತಿತ್ವ ಇರುವ ಪಾತ್ರವಾಗಿತ್ತು. ಶುರು ಶುರುವಲ್ಲಿ ಸಖತ್ ಲವಲವಿಕೆಯಿಂದ ಕೂಡಿದ್ದ ಎಲ್ಲರೂ ಇಷ್ಟ ಪಡುವ ಪಾತ್ರ ಇದಾಗಿತ್ತು. ಕ್ರಮೇಣ ಈ ಪಾತ್ರದಲ್ಲಿ ಬರೀ ಗೋಳೇ ಅಧಿಕವಾಗಿತ್ತು. ಇದೀಗ ಈ ಪಾತ್ರದ ಕೊನೆಯಾಗಿದೆ. ಆದರೆ ಈ ಪಾತ್ರ ಸಹಜವಾಗಿ ಕೊನೆಯಾದಂತಿಲ್ಲ. ಅರ್ಜೆಂಟರ್ಜೆಂಟಲ್ಲಿ ಕೊನೆ ಮಾಡಿದಂತಿದೆ. ಈ ಪಾತ್ರದ ಕೊನೆಯ ಬಗ್ಗೆ ವೀಕ್ಷಕರು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.
ಹೀಗೆ ಮಹತ್ವದ ಪಾತ್ರವೊಂದು ಅಚಾನಕ್ ಆಗಿ ಎಂಡ್ ಆಗ್ತಿರೋದಕ್ಕೆ ಕಾರಣ ಜ್ಯೋತಿ ಅವರ ವೆಬ್ ಸೀರೀಸ್ ಎನ್ನಲಾಗಿದೆ. ಇತ್ತೀಚೆಗೆ ಜ್ಯೋತಿ ರೈ ಸಖತ್ ಹಾಟ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಅದರಲ್ಲಿ ತನ್ನ ವಯಸ್ಸಿಗಿಂತಲೂ ಚಿಕ್ಕವರಾಗಿ ಕಾಣ್ತಿದ್ದರು. ಈಗ ಮೂವತ್ತೆಂಟರ ಹರೆಯದಲ್ಲಿರುವ ಜ್ಯೋತಿ ಆ ಫೋಟೋಗಳಲ್ಲಿ ಇಪ್ಪತ್ತೆಂಟರ ಹುಡುಗಿಯಂತೆ ಕಾಣುತ್ತಿದ್ದರು. ಇದಕ್ಕೆ ಕಾರಣ ಕೇಳಿದರೆ ಫಾರ್ ಎ ಚೇಂಜ್ ಅನ್ನೋ ಉತ್ತರ ಬಂದಿತ್ತು. ಆದರೆ ಅವರು ವೆಬ್ ಸೀರೀಸ್ ಗೋಸ್ಕರ ಹೊಸ ಅವತಾರ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ತೆಲುಗಿನಲ್ಲಿ ಈ ವೆಬ್ ಸೀರೀಸ್ ಹೊರಬರಲಿದೆ. ಇದರಲ್ಲಿ ಡೇರಿಂಗ್ ಲೇಡಿ ಪಾತ್ರದಲ್ಲಿ ಜ್ಯೋತಿ ನಟಿಸುತ್ತಿದ್ದಾರೆ. ಈ ಕಾರಣಕ್ಕೆ ಅವರು ತಾಯಿ ಪಾತ್ರಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.
ಕನ್ನಡದ ಬೆಡಗಿ ಜ್ಯೋತಿ ರೈ ಗುಟ್ಟಾಗಿ ಇನ್ನೊಂದ್ ಮದ್ವೆಯಾದ್ರಾ? ಕೊರಳಲ್ಲಿ ತಾಳಿ, ಪಕ್ಕದಲ್ಲಿ ನಿರ್ದೇಶಕ!
ಜ್ಯೋತಿ ರೈ ಅವರು ಇತ್ತೀಚೆಗೆ ಸಂದರ್ಶನದಲ್ಲೂ ಇನ್ನು ಮೇಲೆ ಪೋಷಕ ಪಾತ್ರದಲ್ಲಿ ನಟಿಸೋದಿಲ್ಲ ಎಂದಿದ್ದರು. ಅದಕ್ಕೆ ತಕ್ಕಂತೆ ತನ್ನ ಫಿಟ್‌ನೆಸ್ ಕೂಡ ಕಾಯ್ದುಕೊಂಡಿದ್ದರು. ಇದೀಗ ವೆಬ್ ಸೀರೀಸ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆ ನೋಡಿದರೆ ಗುಪ್ಪೆಡಂಥಾ ಮನಸು ಸೀರಿಯಲ್‌ನ ಇವರ ಪಾತ್ರ ಚಿಕ್ಕ ವಯಸ್ಸಿನ ತಾಯಿಯಿಂದ ಮಾಗಿದ ತಾಯಿಯವರೆಗಿನ ಜರ್ನಿ ಇರೋ ಪಾತ್ರವಾಗಿತ್ತು. 'ವರ್ಣಪಟಲ' ಅನ್ನೋ ಸಿನಿಮಾದಲ್ಲೂ ಜ್ಯೋತಿ ಕಾಲೇಜ್ ಹುಡುಗಿಯಿಂದ ಹರೆಯದ ಮಗಳ ತಾಯಿವರೆಗಿನ ಪಾತ್ರ ನಿರ್ವಹಿಸಿದ್ದರು.
ಮೊನ್ನೆ ಮೊನ್ನೆ ತಾನೇ ಜ್ಯೋತಿ ರೈ ತಾನು ತೆಲುಗಿನ ನಿರ್ದೇಶಕರೊಬ್ಬರೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಸುದ್ದಿ ಹೇಳಿದ್ದರು. ಅವರು ವಿವಾಹವೂ ಆಗಿದ್ದಾರಾ ಅನ್ನೋ ಗುಮಾನಿಯೂ ಇತ್ತು. ಇದೀಗ ಸೀರಿಯಲ್‌ನಿಂದಲೂ ಹೊರ ನಡೆಯುತ್ತಿದ್ದಾರೆ. ಇಲ್ಲಿಯವರೆಗೆ ಈ ಪಾತ್ರವನ್ನು ಅಭಿಮಾನದಿಂದ ನೋಡಿದ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ಈ ಪಾತ್ರವನ್ನು ಹೀಗೆ ಅವಸರವಸರವಾಗಿ ಮುಗಿಸುವ ಬದಲು ನೀಟಾಗಿ ಮುಗಿಸಬಹುದಿತ್ತು. ಇಷ್ಟು ಟೈಮ್ ಅಷ್ಟು ಚೆನ್ನಾಗಿ ಬಂದ ಪಾತ್ರ ಹೀಗೆ ಅಬ್ರಪ್ಟ್ ಆಗಿ ಎಂಡ್ ಆಗಿರುವುದು ಸರಿಯಲ್ಲ ಎಂಬ ಮಾತು ಕೇಳಿಬರುತ್ತಿದೆ.
ಹಾಟ್ ಫೋಟೋ ಪೋಸ್ಟ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ ನಟಿ ಜ್ಯೋತಿ ರೈ