BIGGBOSS ಮನೆಯಲ್ಲಿ 73 ಕ್ಯಾಮೆರಾ: 24 ಗಂಟೆಗಳ ಕ್ಷಣ ಕ್ಷಣದ ದೃಶ್ಯ ವಿಕ್ಷಣೆಗೆ ಈ ಬಾರಿ ಅವಕಾಶ!

By Suvarna News  |  First Published Oct 3, 2023, 5:45 PM IST

ಈ ಬಾರಿಯ ಬಿಗ್​ಬಾಸ್​ ಕನ್ನಡದ ಮನೆಯೊಳಗಿನ 24 ಗಂಟೆಗಳ ವೀಕ್ಷಣೆಯನ್ನು ಪ್ರೇಕ್ಷಕರು ನೇರವಾಗಿಯೇ ನೋಡಬಹುದು. ಹೇಗದು?
 


ಹಿಂದಿಯಲ್ಲಷ್ಟೇ ಖ್ಯಾತಿ ಪಡೆದಿದ್ದ ಬಿಗ್ ಬಾಸ್ ಹಲವು ಭಾಷೆಗಳಲ್ಲಿ ಆರಂಭಗೊಂಡು ಹಲವು ವರ್ಷಗಳೇ ಕಳೆದಿವೆ. ಅದರಂತೆಯೇ ಕನ್ನಡದಲ್ಲಿಯೂ ಇದಾಗಲೇ 9 ಆವೃತ್ತಿಗಳನ್ನು ಮುಗಿಸಿರುವ ಬಿಗ್​ಬಾಸ್​ 10ನೇ ಆವೃತ್ತಿಗೆ ಸಜ್ಜಾಗಿ ನಿಂತಿದೆ.  ಇದನ್ನು ಭಾರತದ ಅತ್ಯಂತ ಜನಪ್ರಿಯ ರಿಯಾಲಿಟಿ ಟಿವಿ ಶೋ ಎಂದೂ ಕರೆಯಲಾಗುತ್ತದೆ. ಬಿಗ್​ಬಾಸ್​ 10ನೇ ಆವೃತ್ತಿ ಯಾವಾಗ ಶುರುವಾಗುತ್ತದೆ ಎಂದು ಕಾದು ಕುಳಿತಿದ್ದ ಫ್ಯಾನ್ಸ್​ಗೆ ಇದಾಗಲೇ ಪ್ರೆಸ್​ಮೀಟ್​ನಲ್ಲಿ ಅದರ ಮಾಹಿತಿಯನ್ನು ಬಹಿರಂಗಗೊಳಿಸಲಾಗಿದೆ. ಇದೇ   8ರಿಂದ  10ನೇ ಆವೃತ್ತಿ ಶುರುವಾಗಲಿದೆ. ಹಿಂದಿನ ಎಲ್ಲಾ ಸೀಸನ್‌ಗಳಲ್ಲಿ ಕಾರ್ಯಕ್ರಮದ ನಿರೂಪಕರಾಗಿದ್ದ ಸುದೀಪ್ ಅವರೇ ಈಗಲೂ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. ಯಾರೆಲ್ಲಾ ಈ ಬಾರಿ ಬಿಗ್‌ಬಾಸ್‌ ಮನೇಲಿ ಇರ್ತಾರೆ ಅನ್ನೋ ಅನುಮಾನಗಳ ಮಧ್ಯೆ ಕಂಟೆಸ್ಟೆಂಟ್‌ಗಳ ಮಾಹಿತಿ ಹೊರಬಿದ್ದಿದೆ. 

ಈ ಬಾರಿ ಇನ್ನೂ ಕೆಲವು ವಿಶೇಷತೆಗಳು ಇರಲಿವೆ ಎನ್ನುವ ಮಾಹಿತಿ ಸಿಕ್ಕಿದೆ. ಅದೇನೆಂದರೆ ಟಿ.ವಿಯಲ್ಲಿ ಬಿಗ್​ಬಾಸ್​ ಅನ್ನು ಕೇವಲ ಒಂದು ಗಂಟೆಯಷ್ಟೇ ವೀಕ್ಷಿಸಬಹುದಾಗಿದೆ. ಆದರೆ ಇದೇ ಮೊದಲ ಬಾರಿಗೆ   'ಬಿಗ್‌ಬಾಸ್ ಕನ್ನಡ' cದಲ್ಲಿಯೂ ಪ್ರಸಾರವಾಗಲಿದ್ದು, ದಿನದ ಇಪ್ಪತ್ತನಾಲ್ಕು ಗಂಟೆಯೂ ಮನೆಯಲ್ಲಿ ಏನಾಗುತ್ತಿದೆ ಎಂಬುದರ ನೇರಪ್ರಸಾರವನ್ನು ವೀಕ್ಷಕರು 24 ಗಂಟೆ ಲೈವ್ ಚಾನಲ್‌ನಲ್ಲಿ ನೋಡಬಹುದಾಗಿದೆ! ಇಂಥದ್ದೊಂದು ಹೊಸತನಕ್ಕೆ ಬಿಗ್​ಬಾಸ್ ಕೈ ಹಾಕಿದೆ.  ದೈನಂದಿನ ಸಂಚಿಕೆಗಳು ಮರುದಿನದಿಂದ ಪ್ರತಿ ದಿನ ರಾತ್ರಿ 9.30ರಿಂದ  ಪ್ರಸಾರವಾಗುದರೆ, ದಿನವೂ ಏನಾಗುತ್ತಿದೆ ಎನ್ನುವುದನ್ನು ಜಿಯೋ ಸಿನಿಮಾದ ಮೂಲಕ ನೋಡಬಹುದಾಗಿದೆ. 

Tap to resize

Latest Videos

Bigg Boss Kannada 10: ಬಿಗ್‌ಬಾಸ್‌ ಮನೆಗೆ ಕಾಲಿಡಲಿರುವ ಸಂಭಾವ್ಯ 17 ಸ್ಪರ್ಧಿಗಳ ಮಾಹಿತಿ ಇಲ್ಲಿದೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ದಿನದ ಎಪಿಸೋಡಿನ ಹೊರತಾಗಿಯೂ ಹಲವು ವೈವಿಧ್ಯದ ಎಕ್ಸ್​ಕ್ಲೂಸಿವ್​ ಮತ್ತು ಅನ್‌ಸೀನ್ ಮನರಂಜನಾ ಕಂಟೆಂಟ್‌ಗಳು JioCinema ದಲ್ಲಿ ಇರಲಿವೆ ಎಂದು ತಂಡ ಹೇಳಿದೆ. 'ಬಿಗ್ ನ್ಯೂಸ್', 'ಅನ್‌ಸೀನ್ ಕಥೆಗಳು', 'JioCinema ಫನ್ ಫೊಡೇ', 'ಡೀಪ್ ಆಗಿ ನೋಡಿ...' ಹೀಗೆ ಹಲವಾರು ರೂಪದಲ್ಲಿ, ಮನೆಯೊಳಗಿನ ಕುತೂಹಲಕಾರಿ ಘಟನಾವಳಿಗಳನ್ನು ವೀಕ್ಷಕರಿಗೆ ತಲುಪಿಸಲು ವೇದಿಕೆ ಸಜ್ಜುಗೊಂಡಿದೆ. ಮನೆಯೊಳಗೆ ನಡೆಯುವ ನಾಟಕೀಯ ಬೆಳವಣಿಗೆಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ 'ಲೈವ್ ಶಾರ್ಟ್ ಇನ್ನೊಂದು ವಿಶೇಷ ಆಕರ್ಷಣೆಯಾಗಿದೆ ಎಂದು ಬಿಗ್​ಬಾಸ್​ ತಂಡ ಹೇಳಿದೆ. ಹದಿನಾರು ಸ್ಪರ್ಧಿಗಳು ಭಾಗವಹಿಸಲಿರುವ ಈ ಸೀಸನ್ ನ ಮನೆಯನ್ನು ಕಾಯಲು 73 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಮನೆಯೊಳಗಿನ ಕ್ಷಣ ಕ್ಷಣದ ಸನ್ನಿವೇಶಗಳನ್ನು ವೀಕ್ಷಿಸಬಹುದಾಗಿದೆ. 


ಇದರ ಜೊತೆಜೊತೆಯಲ್ಲಿ 'ವಾಚ್ ಆಂಡ್ ಎನ್', 'ಮೀಮ್ ದ ಮೊಮೆಂಟ್', 'ಹೈಪ್ ಚಾಟ್', 'ವಿಡಿಯೋ ವಿಚಾರ್‌'ಗಳ ಮೂಲಕ ಬಿಗ್‌ಬಾಸ್ ಕನ್ನಡದ ಅಭಿಮಾನಿಗಳಿಗೆ, ಸಂವಾದ ನಡೆಸುವ ಅಪೂರ್ವ ಅವಕಾಶವನ್ನೂ ಕಲ್ಪಿಸಲಾಗಿದೆ. ಇಷ್ಟೇ ಅಲ್ಲ, ಇದೇ ಮೊದಲ ಬಾರಿಗೆ, ಟೀವಿಯಲ್ಲಿ ಷೋ ನೋಡಿ, ಅಲ್ಲಿ ಕೇಳಲಾದ ಪ್ರಶ್ನೆಗಳಿಗೆ JioCinemaದಲ್ಲಿ ಉತ್ತರಿಸುವ ಮೂಲಕ ಪ್ರತಿದಿನವೂ ರೋಮಾಂಚಕಾರಿ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶವನ್ನೂ ಪರಿಚಯಿಸಲಾಗಿದೆ. ಈ ಎಲ್ಲ ಸಂವಾದ ದಾರಿಗಳು, ವೀಕ್ಷಕರ ಅನುಭವವನ್ನು ಇನ್ನಷ್ಟು ರೋಚಕಗೊಳಿಸುವುದರ ಜೊತೆಗೆ, ಮನೆಯೊಳಗೆ ತೆಗೆದುಕೊಳ್ಳಲಾಗುವ ಅತಿಮುಖ್ಯ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ತಮ್ಮಿಷ್ಟದ ಅಭ್ಯರ್ಥಿಯನ್ನು ಉಳಿಸುವ ಅಧಿಕಾರವನ್ನೂ ನೀಡಲಿವೆ ಎಂದು ತಂಡ ಹೇಳಿದೆ.

BIGGBOSS ಮನೆಗೆ ಹೋಗ್ತಿದ್ದಾರಾ 'ಜೊತೆಜೊತೆಯಲಿ' ಅನು ಸಿರಿಮನೆ? ನಟಿ ಹೇಳಿದ್ದೇನು?
 

click me!