
ಕಿಚ್ಚ ಸುದೀಪ್ ನಡೆಸಿಕೊಂಡು ಬಿಗ್‌ಬಾಸ್ ಕನ್ನಡದ 10ನೇ ಆವೃತ್ತಿ ಘೋಷಣೆಯಾಗಿದೆ. ಇದೇ 8ರಿಂದ 10ನೇ ಆವೃತ್ತಿ ಶುರುವಾಗಲಿರುವುದಾಗಿ ಇದಾಗಲೇ ತಂಡ ಘೋಷಿಸಿದೆ. ಈ ರಿಯಾಲಿಟಿ ಷೋ ಅನ್ನು ಬೈಯುತ್ತಲೇ ಪ್ರತಿ ದಿನವೂ ನೋಡುವ ದೊಡ್ಡ ವರ್ಗವೇ ಇದೆ. ಬಿಗ್‌ಬಾಸ್ ವಿಷಯಕ್ಕೆ ಬಂದರೆ, ಸ್ಪರ್ಧಿಗಳ ಬಗ್ಗೆ ಹಲವು ಪ್ರೇಕ್ಷಕರು ದಿನನಿತ್ಯವೂ ಟ್ರೋಲ್ ಮಾಡುತ್ತಲೇ ಇರುತ್ತಾರೆ, ಅದೇ ಇನ್ನೊಂದೆಡೆ, ಅವರನ್ನು ನೋಡಲು ದಿನವೂ ಈ ಷೋ ನೋಡುತ್ತಾರೆ. ಇದಕ್ಕೆ ಭಾಗವಹಿಸುವವರು ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿದವರು ಒಂದೆಡೆಯಾದರೆ, ಕಾಂಟ್ರವರ್ಸಿ ಮಾಡಿಕೊಂಡವರಿಗೇ ಹೆಚ್ಚು ಆದ್ಯತೆ ಎನ್ನುವ ಆರೋಪವೂ ಇದೆ. ಬಿಗ್‌ಬಾಸ್ ಕನ್ನಡ ಮಾತ್ರವಲ್ಲದೇ ವಿವಿಧ ಭಾಷೆಗಳಲ್ಲಿ ಸ್ಪರ್ಧಿಸಿರೋ ಹಲವು ಸ್ಪರ್ಧಿಗಳು ಕಿರುತೆರೆ, ಹಿರಿತೆರೆಗಳಲ್ಲಿ ಮಿಂಚುತ್ತಿರುವುದು ಎಷ್ಟು ಸತ್ಯವೋ, ಬಿಗ್‌ಬಾಸ್ ಸ್ಪರ್ಧಿ ಎಂದು ಹೆಮ್ಮೆಯಿಂದ ಅವರನ್ನು ನೋಡುವ ದೃಷ್ಟಿಕೋನವೂ ಬದಲಾಗುವುದು ಇದೆ. ಆದರೆ ಅದೇ ಇನ್ನೊಂದೆಡೆ ಇಲ್ಲಿಯ ಸ್ಪರ್ಧಿಗಳು ಮನೆಯೊಳಕ್ಕೆ ನಡೆದುಕೊಳ್ಳುವ ರೀತಿಗೆ ಬೈಯುವ ವರ್ಗವೂ ಇದೆ.
ಇದೀಗ ಇಂಥದ್ದೇ ಒಂದು ಪ್ರಶ್ನೆ ಬಿಗ್‌ಬಾಸ್ 10ನೇ ಕಂತಿನ ಕುರಿತು ಮಾಹಿತಿ ನೀಡಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಳಿಬಂತು. ಬಿಗ್‌ಬಾಸ್ ತಂಡದ ಜೊತೆ ಕಿಚ್ಚ ಸುದೀಪ್ ಅವರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಹಲವಾರು ಮಾಹಿತಿ ನೀಡಿದರು. ಇದೇ ವೇಳೆ ಪತ್ರಕರ್ತರೊಬ್ಬರು ಸುದೀಪ್ ಅವರಿಗೆ ಬಿಗ್‌ಬಾಸ್ ಸ್ಪರ್ಧಿ ಆಯ್ಕೆ ಮಾನದಂಡದ ಬಗೆಗಿನ ಪ್ರಶ್ನೆಯನ್ನು ಎತ್ತಿದರು. ಆಯ್ಕೆಯ ಮಾನದಂಡದ ಬಗ್ಗೆ ಆರೋಪಗಳು ಇವೆ. ಇಲ್ಲಿರುವ ಕೆಲವು ಸ್ಪರ್ಧಿಗಳು ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಕಳೆದ ಸೀಸನ್ಗಳಲ್ಲಿ ಸ್ಪರ್ಧಿಗಳ ಆಯ್ಕೆಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗಿದೆ ಎಂದರು. ಈ ಪ್ರಶ್ನೆಯನ್ನು ಕೇಳಿ ಸುದೀಪ್ ಸ್ವಲ್ಪ ಗರಂ ಆದರು.
BIGGBOSS ಮನೆಯಲ್ಲಿ 73 ಕ್ಯಾಮೆರಾ: 24 ಗಂಟೆಗಳ ಕ್ಷಣ ಕ್ಷಣದ ದೃಶ್ಯ ವಿಕ್ಷಣೆಗೆ ಈ ಬಾರಿ ಅವಕಾಶ!
ಟ್ರೋಲ್ಗೆ ಒಳಗಾದವರ ಹೆಸರುಗಳನ್ನು ಹೇಳಿ, ನಮಗೂ ಗೊತ್ತಾಗಲಿ ಎಂದರು. ಕೊನೆಗೆ ಅದೇ ಕೋಪದಿಂದಲೇ ಸ್ಥಳದಿಂದ ಎದ್ದು ಪ್ರಶ್ನೆ ಕೇಳಿದ ಪತ್ರಕರ್ತರ ಬಳಿಗೆ ಹೋಗಿ ಈಗಲಾದರೂ ಹೇಳಿ, ಟ್ರೋಲ್ಗೆ ಒಳಗಾದವರು ಯಾರು ಎಂದು ತುಸು ಜೋರಾದ ದನಿಯಲ್ಲಿಯೇ ಪ್ರಶ್ನಿಸಿದರು. ನಂತರ ‘ನೀವು ಮಾತನಾಡುತ್ತಿರುವುದು ಇನ್ನೊಬ್ಬರ ಬಗ್ಗೆ. ನೀವು ಹೆಸರು ಹೇಳಿದರೆ ಮಾತ್ರ ಉತ್ತರ ಕೊಡುತ್ತೇನೆ. ಅವರು ಯಾರದ್ದೋ ತಂದೆ-ತಾಯಿಯ ಮಕ್ಕಳು. ಯಾರದ್ದೋ ಗಂಡ, ಯಾರದ್ದೋ ಹೆಂಡತಿ. ಅವರ ಮನೆ ಒಳಗೆ ಏನು ನಡೆದಿತ್ತೋ ನಮಗೆ ಗೊತ್ತಾ? ಕ್ಲೀನ್ ಆಗೋಕೆ ಮತ್ತು ಅವರು ತಮ್ಮನ್ನು ಸಾಬೀತು ಮಾಡಿಕೊಳ್ಳೋಕೆ ಇದು ಇದು ಒಳ್ಳೆಯ ವೇದಿಕೆ. ಆ ಜಾಗದಲ್ಲಿ ನಾಳೆ ನೀವು ಇರಬಹುದು. ಆಗ ನಿಮ್ಮ ಪರವಾಗಿ ನಾವಿರುತ್ತೇವೆ. ಯಾರೋ ಟ್ರೋಲ್ ಮಾಡಿರಬಹುದು. ಆದರೆ ನಿಮಗೆ ಜವಾಬ್ದಾರಿ ಇದೆ’ ಎಂದು ಸುದೀಪ್ ಹೇಳಿದರು.
ನಂತರ ಸೀಟಿನಲ್ಲಿ ಕುಳಿತುಕೊಂಡ ಅವರು, ಯಾರೋ ಟ್ರೋಲ್ ಮಾಡಿದ್ರು ಅಂತ ನಾವು ಮಾಡಲು ಆಗಲ್ಲ. ಹೊರಗಡೆ ಟ್ರೋಲ್ಗೆ ಒಳಗಾದವರನ್ನು ಬಿಗ್‌ಬಾಸ್ ಮನೆಯಲ್ಲಿ ಚೆನ್ನಾಗಿ ಇಡಲು ಬಿಡುವುದು ನಮ್ಮ ಕೆಲಸ. ಯಾರೂ ಒಳ್ಳೆಯವರೂ ಅಲ್ಲ, ಯಾರೂ ಕೆಟ್ಟವರೂ ಅಲ್ಲ. ಒಳ್ಳೆಯವರು, ಕೆಟ್ಟವರು ಎಂದು ಡಿಸೈಡ್ ಮಾಡಲು ನಾವ್ಯಾರು ಎಂದು ಪ್ರಶ್ನಿಸಿದರು. ಒಬ್ಬ ಸರಿ ಇಲ್ಲ ಎಂದು ಒಬ್ಬನಿಗೆ ಅನ್ನಿಸಿದರೆ, ಇನ್ನೊಬ್ಬನಿಗೆ ಆತ ಒಳ್ಳೆಯವ ಆಗಿರಬಹುದು. ಯಾವುದೇ ಮನುಷ್ಯನನ್ನು ನಾವು ಹೇಗೆ ಜಡ್ಜ್ ಮಾಡೋದು ಎಂದು ಸುದೀಪ್ ಪ್ರಶ್ನಿಸಿದರು. ರಾತ್ರಿ ಎಣ್ಣೆ ಹೊಡೆಯಲು ಕೂತಾದರೂ ಸೇಮ್ ಮ್ಯಾಚ್ ಹುಡುಕುತ್ತೇವೆ. ಅಂಥದ್ದರಲ್ಲಿ ಯಾರು ತಪ್ಪು-ಯಾರು ಸರಿ ಎಂದು ಹೇಳುವುದು ಕಷ್ಟ. ಒಬ್ಬ ತಪ್ಪು ಮಾಡಿ ಜೈಲಿಗೆ ಹೋದವ ದೇವಸ್ಥಾನಕ್ಕೆ ಹೋದರೆ ದೇವರು ವರ ಕೊಡುತ್ತಾನೆ ಎಂದರೆ ನಾವು, ನೀವು ಮನುಷ್ಯರು ಬ್ರದರ್ ಎಂದು ಹೇಳಿ ಒಳ್ಳೆಯ ಪ್ರಶ್ನೆಗಳಿಗೆ ಮಾತ್ರ ಒಳ್ಳೆ ಉತ್ತರ ಕೊಡಲು ಸಾಧ್ಯ ಎಂದು ಖಡಕ್ ಆಗಿಯೇ ನುಡಿದರು.
Bigg Boss Kannada 10: ಬಿಗ್‌ಬಾಸ್ ಮನೆಗೆ ಕಾಲಿಡಲಿರುವ ಸಂಭಾವ್ಯ 17 ಸ್ಪರ್ಧಿಗಳ ಮಾಹಿತಿ ಇಲ್ಲಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.