ಅಬ್ಬಬ್ಬಾ ಸೀರಿಯಲ್​ ಮಹಿಮೆಯೆ? ಮೊದಲ ಎಪಿಸೋಡ್​ಗೆ 5 ಸಾವಿರ ಮುಗಿಯುವಾಗ ದಿನಕ್ಕೆ ಎರಡೂವರೆ ಲಕ್ಷ ಸಂಬಳ!

By Suchethana D  |  First Published Jul 9, 2024, 5:54 PM IST

ಬಿಗ್​ಬಾಸ್​ ವಿಜೇತೆ, ನಟಿ ಶ್ವೇತಾ ತಿವಾರಿ ತಾವು ಸೀರಿಯಲ್​ ಒಂದಕ್ಕೆ ಮೊದಲ ದಿನ ಹಾಗೂ ಕೊನೆಯ ಅವಧಿಯಲ್ಲಿ ಪಡೆದ ಕುತೂಹಲದ ಸಂಬಳದ ವಿಷಯ ತಿಳಿಸಿದ್ದಾರೆ. ಅವರು ಪಡೆದದ್ದೆಷ್ಟು? 
 


ಇಂದು ಸೀರಿಯಲ್​ಗಳು ಎಂದರೆ ಸುಮ್ಮನೇ ಅಲ್ಲ. ಇದರಲ್ಲಿ ಪ್ರತಿದಿನವೂ ಸಾಧಾರಣ ನಟ-ನಟಿಯರೇ ಹಲವು ಸಾವಿರ ಪಡೆಯುವುದು ಇದ್ದರೆ, ಸ್ಟಾರ್​ ನಟ-ನಟಿಯರು ಪ್ರತಿದಿನವೂ ಲಕ್ಷದ ಲೆಕ್ಕದಲ್ಲಿ ಹಣ ಎಣಿಸುತ್ತಾರೆ. ಸೀರಿಯಲ್​ಗಳ ಟಿಆರ್​ಪಿ ಏರಿದಂತೆ ಕೆಲವೊಮ್ಮೆ ತಾರೆಯರ ಸಂಭಾವನೆಯೂ ಏರುತ್ತದೆ. ಪ್ರತಿನಿತ್ಯವೂ ಶೂಟಿಂಗ್​ ಇರಬೇಕೆಂದೇನೂ ಇಲ್ಲ. ಆದರೆ ಶೂಟಿಂಗ್​ ಇದ್ದಾಗಲೆಲ್ಲಾ ಪ್ರತಿದಿನದ ಲೆಕ್ಕದಲ್ಲಿ ಸಂಭಾವನೆ ಕಲಾವಿದರಿಗೆ ಸಿಗುತ್ತದೆ. ಭಾಷೆ ಭಾಷೆಗಳಿಗೆ ಈ ಸಂಭಾವನೆಯಲ್ಲಿ ಹೆಚ್ಚೂ-ಕಡಿಮೆ ಆಗುವುದು ಇದೆಯಾದರೂ ಹಿರಿತೆರೆಗಿಂತಲೂ ಒಂದು ಸೀರಿಯಲ್​ಗೆ ಕೆಲವೊಮ್ಮೆ ಸೀರಿಯಲ್​ಗಳಲ್ಲಿಯೂ ಹೆಚ್ಚು ಸಂಭಾವನೆ ಪಡೆಯುವುದು ಉಂಟು. ಅದರಲ್ಲಿಯೂ ಸೀರಿಯಲ್​ಗಳು ಎಂದರೆ ಅವೇನೂ ಒಂದೆರಡು ತಿಂಗಳಲ್ಲಿ ಮುಗಿಯುವಂಥದ್ದಲ್ಲ. ಕೆಲವೊಮ್ಮೆ ನಾಲ್ಕೈದು ವರ್ಷಗಳು ಎಳೆದರೆ ಹಿಂದೆ 8-10 ವರ್ಷ ಹೋದ ಸೀರಿಯಲ್​ಗಳೂ ಇವೆ.

ಇದೀಗ ಬಾಲಿವುಡ್​ ನಟಿ ಶ್ವೇತಾ ತಿವಾರಿ  ತಾವು ಪ್ರಸಿದ್ಧ ಕಸೌಟಿ ಜಿಂದಗೀಕಾ ಸೀರಿಯಲ್​ನಲ್ಲಿ ಪಡೆದ ಸಂಭಾವನೆ ಕುರಿತು ಮಾತನಾಡಿದ್ದಾರೆ. ಈ ಸೀರಿಯಲ್​ 2018ರಿಂದ 2020ರ ವರೆಗೆ ನಡೆದಿತ್ತು. ಆರಂಭದಲ್ಲಿ ಪ್ರತಿದಿನ ಐದು ಸಾವಿರ ರೂಪಾಯಿ ಪಡೆಯುತ್ತಿದ್ದ ನಟಿ, ಸೀರಿಯಲ್​ ಮುಗಿಯುವ ಸಮಯದಲ್ಲಿ ಪ್ರತಿ ದಿನ ಎರಡೂವರೆ ಲಕ್ಷ ಪ್ರತಿ ದಿನ ಪಡೆಯುತ್ತಿದ್ದರಂತೆ! ಜೊತೆಗೆ ಮೇಲಿಂದ ಮೇಲೆ ಇಂಕ್ರೀಮೆಂಟ್​ಗಳೂ ಸಿಗುತ್ತಿದ್ದವು ಎಂಬ ಅಚ್ಚರಿಯ ಮಾಹಿತಿಯನ್ನು ನಟಿ ಹೇಳಿದ್ದಾರೆ. 

Tap to resize

Latest Videos

ಬಿಕಿನಿ ಬಿಟ್ಟು ಇಸ್ಲಾಂ ಅಪ್ಪಿಕೊಂಡ ಕನ್ನಡದ 'ಕೂಲ್​' ನಟಿಯ ಮಗನ ಮುಖ ರಿವೀಲ್​: ಈಗ ಹೇಗಿದ್ದಾರೆ ಸನಾ?

ಇನ್ನು ಶ್ವೇತಾ ತಿವಾರಿ ಕುರಿತು ಹೇಳುವುದಾದರೆ,. ಇವರು 'ಬಿಗ್ ಬಾಸ್' ಖ್ಯಾತಿಯ ಭೋಜ್‌ಪುರಿ ಮತ್ತು ಕಿರುತೆರೆ ನಟಿ. 'ಬಿಗ್ ಬಾಸ್' ವಿನ್ನರ್‌ ಕೂಡ ಹೌದು.  ವಯಸ್ಸು 43 ಆದರೂ ಈಕೆಯ ಸೌಂದರ್ಯ ಇನ್ನೂ ಕುಗ್ಗಿಲ್ಲ. ಯುವತಿಯಂತೆಯೇ ಕಂಗೊಳಿಸುತ್ತಿದ್ದಾರೆ. ಆಗಾಗ್ಗೆ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯವಾಗಿರುವ ನಟಿ ತನ್ನ ಬೋಲ್ಡ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  ಈಕೆ ಹಲವಾರು ಧಾರಾವಾಹಿಗಳನ್ನು ಮಾಡಿದರೂ ಮೈ ಹೂಂ ಅಪರಾಜಿತಾ ಧಾರಾವಾಹಿಯ ಮೂಲಕ ಚಿರಪರಿಚಿರತಾಗಿದ್ದಾರೆ. ಹೆಚ್ಚಾಗಿ ಈಕೆ ಧಾರಾವಾಹಿಗಳಲ್ಲಿ ಸಾಂಪ್ರದಾಯಿಕ ಪಾತ್ರಗಳನ್ನು ಮಾಡಿದರೂ  ನಿಜ ಜೀವನದಲ್ಲಿ ಅವರ ವ್ಯಕ್ತಿತ್ವವೇ ಬೇರೆ. 43 ನೇ ವಯಸ್ಸಿನಲ್ಲಿ, ಶ್ವೇತಾ ಫಿಟ್​ನೆಸ್​ಗೆ ಫ್ಯಾನ್ಸ್​ ಫಿದಾ ಆಗುವುದು ಇದೆ. ಸೀರೆಯಲ್ಲಿ ಫೋಟೋಶೂಟ್​ ಮಾಡಿಸಿಕೊಂಡರೂ, ಸೆಕ್ಸಿ ಇಮೇಜಿನಲ್ಲಿ ಈಕೆ ಕಾಣಿಸಿಕೊಳ್ಳುತ್ತಾರೆ. 

ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ ಶ್ವೇತಾ. ಕುತೂಹಲದ ವಿಷಯವೆಂದರೆ, ಇವರ ಮಗಳಿಗೆ ಈಗ 22 ವರ್ಷ. ಇದರ ಹೊರತಾಗಿಯೂ ಕಿರುತೆರೆಯಲ್ಲಿ (Hindi serial) ಜನಪ್ರಿಯತೆ ಪಡೆದಿದ್ದಾರೆ  ನಟಿ ಶ್ವೇತಾ ತಿವಾರಿ. ತಮ್ಮ ಸೌಂದರ್ಯವನ್ನು ತೋರಿಸುವ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ.  ತಮ್ಮ ಎರಡನೇ ಮಗುವಿನ ಜನನದ ನಂತರ ಒಮ್ಮೆ 73 ಕೆಜಿ ತೂಕವನ್ನು ಹೊಂದಿದ್ದರು. ಇದರಿಂದ ಸಕತ್​ ಟೆನ್ಷನ್​ ಆಗಿತ್ತಂತೆ. ಈ ಕುರಿತು  ಟಿವಿ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿಕೊಂಡಿದ್ದರು. ಸಿಂಗಲ್​ ಪೇರೆಂಟ್​ ಆಗಿರುವ ಶ್ವೇತಾ ತಮ್ಮ ಫಿಟ್​ನೆಸ್​ ಗುಟ್ಟನ್ನು ಬಿಟ್ಟುಕೊಟ್ಟಿದ್ದರು. ನನ್ನ  ಪೌಷ್ಟಿಕತಜ್ಞರು  ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಕೊಬ್ಬಿನ ಉತ್ತಮ ಮಿಶ್ರಣವನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ನಾನು ನಡೆದುಕೊಂಡೆ ಎನ್ನುತ್ತಾರೆ. 

ನಾಯಕ ತೊಡೆ ಮೇಲೆ ಕೈಯಿಟ್ಟಾಗ ಪವಿತ್ರಾ ಗೌಡ ರಿಯಾಕ್ಷನ್​ ಹೇಗಿತ್ತು? ಘಟನೆ ವಿವರಿಸಿದ ನಿರ್ದೇಶಕಿ ಚಂದ್ರಕಲಾ
 

click me!