ವರ್ಷಾ ಕಾವೇರಿ ಜೊತೆಗಿನ ಬ್ರೇಕಪ್‌ಗೆ ಕಾರಣ ಬಿಚ್ಚಿಟ್ಟ ವರುಣ್‌ ಆರಾಧ್ಯ!

By Gowthami KFirst Published Sep 15, 2024, 7:23 PM IST
Highlights

ಬೃಂದಾವನ ಧಾರಾವಾಹಿ ಖ್ಯಾತಿಯ ನಟ ವರುಣ್ ಆರಾಧ್ಯ ಮತ್ತು ವರ್ಷಾ ಕಾವೇರಿ ನಡುವಿನ ಬ್ರೇಕಪ್ ಕುರಿತ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಮೇಲೆ ಹೊರಿಸಲಾದ ಆರೋಪಗಳಿಗೆ ಉತ್ತರ ನೀಡಿದ್ದಾರೆ.

ಬೃಂದಾವನ ಧಾರಾವಾಹಿ ಖ್ಯಾತಿಯ ವರುಣ್ ಆರಾಧ್ಯ ತಮ್ಮ ಮಾಜಿ ಗರ್ಲ್‌ ಫ್ರೆಂಡ್ ವರ್ಷ ಕಾವೇರಿಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ, ಖಾಸಗಿ ವಿಡಿಯೋ ಮತ್ತು ಫೋಟೋ ಲೀಕ್ ಮಾಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಎಲ್ಲೆಡೆ ಸುದ್ದಿ ಹರಿದಾಡುತ್ತಿತ್ತು. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ವರ್ಷ ಕಾವೇರಿ ಬಳಿಕ ಭವಿಷ್ಯದಲ್ಲಿ ನನ್ನ ಜೀವನಕ್ಕೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ನಾನು  ದೂರು ದಾಖಲು ಮಾಡಿದೆ ಹೊರತು ಬೇರೇನು ಅಲ್ಲ ಎಂದಿದ್ದರು.  ವರುಣ್ ಆರಾಧ್ಯ ಕೂಡ ಸ್ಪಷ್ಟನೆ ನೀಡಿ ಬೆಳೆಯಲು ಅವಕಾಶ ಕೊಡಿ ಎಂದು ಅತ್ತುಕೊಂಡು ವಿಡಿಯೋ ಮಾಡಿದ್ದರು.

ಇದೀಗ ಖಾಸಗಿ ಯೂಟ್ಯೂಬ್  ಒಂದರಲ್ಲಿ ಸಂದರ್ಶನ ನೀಡಿರುವ ವರುಣ್ ಆರಾಧ್ಯ , ವರ್ಷಾ ಕಾವೇರಿ ಜೊತೆಗೆ ಬ್ರೇಕಪ್ ಮಾಡಿಕೊಳ್ಳಲು ಕಾರಣ ಏನೆಂದು ಮಾತನಾಡಿದ್ದಾರೆ. ತುಂಬಾ ಜನ ಬ್ರೇಕಪ್‌ ಗೆ ಕ್ಲಾರಿಟಿ ಕೊಡಿ ಎಂದು ಹೇಳಿದ್ದಾರೆ. ಎರಡು ಕೈ ಸೇರಿದರೆಯೇ ಚಪ್ಪಾಳೆ ನಾವಿಬ್ಬರೂ ಶೂನ್ಯದಿಂದ ಆರಂಭಿಸಿ ಜೊತೆಗೆ ಬೆಳೆದವರು.  ಜೊತೆಗೆ ಕಂಟೆಟ್‌ ಮಾಡಿ , ಇಬ್ಬರೂ  ಜೊತೆಗೇ ಯೂಟ್ಯೂಬ್ ಅಕೌಂಟ್‌ ಕ್ರೀಯೆಟ್‌ ಮಾಡಿದ್ದು, ಜನರು ನಮ್ಮನ್ನು ನೋಡಿ ಬೆಳೆಸಿದರು. ಎಲ್ಲವೂ ಚೆನ್ನಾಗಿತ್ತು.

Latest Videos

ನನಗೆ ಜೀವ ಬೆದರಿಕೆ ಹಾಕಿರುವುದು ನಿಜ, ಈಗಲೂ ತಂದೆ ತಾಯಿಗೆ ಧೈರ್ಯ ಹೇಳುತ್ತಿರುವೆ: ವರ್ಷ ಕಾವೇರಿ

ಇಬ್ಬರೂ ಇಷ್ಟಪಟ್ಟಾಗ ಲವ್ ಆಗುತ್ತದೆ. ಎಲ್ಲವೂ ಚೆನ್ನಾಗಿರುತ್ತೆ, ಅದೇ ರೀತಿ ಬ್ರೇಕ್ ಅಪ್ ಆಗೋದು ಕೂಡ ಹಾಗೆಯೇ ಎರಡೂ ಕಡೆಯಿಂದ ತಪ್ಪಾದಾಗ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಾಗ ಸಂಬಂಧ ಹಾಳಾಗುತ್ತೆ. ನೂರಕ್ಕೆ ನೂರು ನಮ್ಮಿಬ್ಬರ ಕಡೆಯಿಂದಲೂ ತಪ್ಪಾಗಿದೆ. ಹಾಗಾಗಿ ಬ್ರೇಕ್ ಅಪ್ ಆಗಿದೆ. ನಮ್ಮಿಬ್ಬರದು ಬ್ರೆಕಪ್ ಆಗಿ 1 ವರ್ಷವಾಗಿದೆ ಇದುವರೆಗೆ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಒಂದೇ ಒಂದು ನೆಗೆಟಿವ್‌ ಮಾತು ಆಡಿಲ್ಲ. ಅವರನ್ನು ಸಂಪರ್ಕಿಸಿಲ್ಲ.

ನಾನು ಒಂದು ಹುಡುಗಿಯನ್ನು ಡೌನ್ ಮಾಡಿ ಕೆಟ್ಟ ರೀತಿಯಲ್ಲಿ ಆಕೆಯನ್ನು ಬಿಂಬಿಸುವಂತಹ ಹುಡುಗ ನಾನಲ್ಲ. ಹೌದು ತಪ್ಪಾಗಿದೆ. ಅರ್ಥ ಮಾಡಿಕೊಂಡು ಬ್ರೇಕ್ ಅಪ್ ಮಾಡಿಕೊಂಡಿದ್ದೇವೆ. ಅವರು ಚೆನ್ನಾಗಿರಲಿ. ನಾನು ಚೆನ್ನಾಗಿರಬೇಕು. ಅವರ ಜೀವನ ಹಾಳು ಮಾಡಿ ನಾನು ಚೆನ್ನಾಗಿರ್ತೀನಿ ಅಂತ ಅಂದುಕೊಳ್ಳುವುದು ಮುಟ್ಟಾಳತನ.

ನಾವು ಜೊತೆಗೆ ಇದ್ದಾಗ ಇಬ್ಬರೂ ಒಂದೇ ಯೂಟ್ಯೂಬ್ ಅಕೌಂಟ್‌ ಮಾಡಿಕೊಂಡಿದ್ದೆವು. ಅದರಲ್ಲಿ ಬರುತ್ತಿದ್ದ 1 ರೂ ಹಣವನ್ನು ಮುಟ್ಟುತ್ತಿರಲಿಲ್ಲ. ಭವಿಷ್ಯಕ್ಕಾಗಿ ಎತ್ತಿ ಇಟ್ಟುಕೊಳ್ಳೋಣ ಎಂದು ಯೋಚಿಸಿದ್ದೆವು. ನಮಗೇನಾದ್ರೂ ಗ್ಯಾಜೆಟ್ಸ್ ಬೇಕು. ಕಂಟೆಂಟ್‌ ಮಾಡಲು ಖರ್ಚಾಗುತ್ತದೆ ಎಂದಾಗ ಮಾತ್ರವೇ  ಎತ್ತಿಕೊಳ್ಳುತ್ತಿದ್ದೆವು. ನಾವು ವೈಯಕ್ತಿಕ ಖರ್ಚಿಗಾಗಿ ಆ ಹಣವನ್ನು ಬಳಸುತ್ತಿರಲಿಲ್ಲ. ಆ ಎಲ್ಲಾ ಹಣವು ಅವರ ಬ್ಯಾಂಕ್ ಅಕೌಂಟ್‌ ನಲ್ಲಿತ್ತು. ನನ್ನ ಬಳಿ ಆಗ ಬ್ಯಾಂಕ್ ಅಕೌಂಟ್‌ ಇರಲಿಲ್ಲ. ಹಾಗಾಗಿ ಅದನ್ನೆಲ್ಲ ಅವರ ಅಕೌಂಟ್‌ ನಲ್ಲೇ ಸೇವ್‌ ಮಾಡಿಕೊಂಡು ಫ್ಯೂಚರ್‌ ಗೆ ಇಟ್ಟುಕೊಳ್ಳುತ್ತಿದ್ದೆವು.

ನಾನು ಪ್ರತಿಯೊಂದನ್ನು ಡಿಲೀಟ್ ಮಾಡಿದೆ, ದಯವಿಟ್ಟು ನನ್ನನ್ನು ಬೆಳೆಯಲು ಬಿಡಿ; ಕಣ್ಣೀರಿಟ್ಟ ವರುಣ್ ಆರಾಧ್ಯ

ಈಗ ತುಂಬಾ ಜನ ಮಾತಾಡ್ತಾರೆ. ನೀವು ಅವರಿಂದ ಬೆಳೆದಿದ್ದು, ಅದು ಇದು ಕೊಟ್ಟಿದ್ದು ಅವರು, ಮನೆ ಲೀಸ್ ಹಾಕೊಂಡಿದ್ದು ಅವರ ದುಡ್ಡಲ್ಲಿ, ಹಾಗೆ ಹೀಗೆ ಬಿಕ್ಷೆ ಅಂತ. ನಂಗೆ ಯಾರೂ ಬಿಕ್ಷೆ ಹಾಕಿಲ್ಲ. ನಮ್ಮಪ್ಪ ಮೀಟರ್‌ ಹಾಕಿ ದುಡಿದು ಒಂದೊಂದು ರೂಪಾಯಿ ಕೂಡಿ ಇಟ್ಟು,  ಉಳಿಸಿದ ದುಡ್ಡಲ್ಲಿ ಮನೆ ಲೀಸ್‌ ಗೆ ಹಾಕೊಂಡಿದ್ದು. ನಮ್ಮಿಬ್ಬರ ಬ್ರೇಕ್‌ ಅಪ್ ಆದ ಮೇಲೆ ಯೂಟ್ಯೂಬ್‌ ನಿಂದ ಬಂದ ಹಣವನ್ನು ನಾವಿಬ್ಬರೂ ಡಿವೈಡ್ ಮಾಡಿಕೊಳ್ಳಲು ನಿರ್ಧರಿಸಿದೆವು. ಅವರ ಅಕೌಂಟ್‌ ನಲ್ಲೇ ದುಡ್ಡು ಇದ್ದು, ಅವರೇ ಭಾಗ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದರು. ಆ ದುಡ್ಡಲ್ಲಿ ಅವರು ಮನೆ ಲೀಸ್ ಹಾಕಿಕೊಂಡಿದ್ದರು. ನಾನು ಅವರಲ್ಲಿ ಹಣ ಕೊಡು ಎಂದು ಕೇಳಿದ್ದೆ. ಕೊಡ್ತೇನೆ ಅಂದು ಇಲ್ಲಿವರೆಗೂ  1 ರೂ ಕೂಡ ನನಗೆ ಬಂದಿಲ್ಲ. ಕೊಡ್ತಾರೋ ಇಲ್ಲವೋ ಗೊತ್ತಿಲ್ಲ. ಸರಿ ಸುಮಾರು 20 ಲಕ್ಷ ಹಣವನ್ನು ನಾವಿಬ್ಬರೂ 3 ವರ್ಷದಿಂದ ಕೂಡಿಟ್ಟಿದ್ದೆವು ಎಂದಿದ್ದಾರೆ ವರುಣ್.

click me!