ಅಜ್ಜಿಯಾಗುವ ಹೊತ್ತಿನಲ್ಲಿ ತುಳಸಿ ಅಮ್ಮ ಆಗ್ತಿರೋ ವಿಷಯ ಹೇಳಿದ್ದಾರೆ ಡಾಕ್ಟರ್. ಇದರ ಪ್ರೊಮೋ ಬಿಡುಗಡೆಯಾದ ಸ್ವಲ್ಪ ಹೊತ್ತಲ್ಲೇ ಜೀ ವಾಹಿನಿ ಕಮೆಂಟ್ ಸೆಕ್ಷನ್ ಆಫ್ ಮಾಡಿದೆ. ಏನಿದು ವಿಷ್ಯ?
ಒಬ್ಬ ಹೆತ್ತ ಮಗ, ಇನ್ನಿಬ್ಬರು ಹೊಸದಾಗಿ ಬಂದಿರುವ ಮಕ್ಕಳು. ಎಲ್ಲರಿಗೂ ಮದುವೆಯಾಗಿದೆ. ಇನ್ನೇನು ಮಕ್ಕಳಿಗಾಗಿ ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ ಮಕ್ಕಳು ಅವರ ಮಕ್ಕಳನ್ನು ನಿರೀಕ್ಷೆ ಮಾಡುವ ಹೊತ್ತಿನಲ್ಲಿಯೇ ಅಜ್ಜಿಯಾಗಲು ಕಾಯ್ತಿರೋ ಅಮ್ಮನೇ ಮತ್ತೊಮ್ಮೆ ಗರ್ಭಿಣಿಯಾದ್ರೆ? ಹಿಂದಿನ ಕಾಲದಲ್ಲಿ ಹೀಗೆಲ್ಲಾ ಇತ್ತು ಬಿಡಿ. ಇಂದು ಕೂಡ 10-12 ಮಕ್ಕಳನ್ನು ಹೆರುವವರೂ ಇದ್ದಾರೆ, ಇಲ್ಲ ಎಂದೇನಿಲ್ಲ. ಅಮ್ಮ- ಮಕ್ಕಳು ಒಟ್ಟಿಗೇ ಡೆಲವರಿ ಆಗುವುದೂ ಇದೆ. ಆದರೆ ಇದನ್ನು ಬಹುಪಾಲು ಜನರು ಇದನ್ನು ಒಪ್ಪುತ್ತಾರಾ? 50-55 ವರ್ಷದ ಅಮ್ಮ ಒಬ್ಬಳು ಇನ್ನೊಮ್ಮೆ ಗರ್ಭಿಣಿಯಾಗೋದನ್ನು ಸಹಿಸಿಕೊಳ್ಳುವುದೇ ಇಲ್ಲ ಎನ್ನುವುದಕ್ಕೆ ಜೀ ಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಸೀರಿಯಲ್ಲೇ ಸಾಕ್ಷಿಯಾಗಿದೆ!
ಹೌದು. ಶ್ರೀರಸ್ತು ಶುಭಮಸ್ತು ಸೀರಿಯಲ್ಗೆ ಬಹುಶಃ ಯಾವ ಪ್ರೇಕ್ಷಕರೂ, ಯಾವ ನೆಟ್ಟಿಗರೂ ಊಹಿಸಲಾಗದ ಟ್ವಿಸ್ಟ್ ಸಿಕ್ಕಿದೆ. ಅವಿ ಮತ್ತು ಅಭಿ ಇಬ್ಬರೂ ಅಮ್ಮ ಎಂದು ಸ್ವೀಕರಿಸಿದ ತುಳಸಿ, ಎಲ್ಲರ ಬಾಯಲ್ಲೂ ತುಳಸಿ ಅಮ್ಮ ಎಂದೇ ಕರೆಸಿಕೊಳ್ಳುತ್ತಿರುವ ಈ ಅಮ್ಮಾ, ಇನ್ನೇನು ಅಜ್ಜಿಯಾಗುವ ಕನಸು ಕಾಣುತ್ತಿರುವ ತುಳಸಿ ಅಮ್ಮಾ... ಮತ್ತೊಮ್ಮೆ ಅಮ್ಮಾ ಆಗ್ತಿದ್ದಾಳೆ! ಹೌದು. ಯಾರ ಊಹೆಗೂ ನಿಲುಕದ ಟ್ವಿಸ್ಟ್ ಅನ್ನು ಈ ಸೀರಿಯಲ್ಗೆ ನೀಡಲಾಗಿದೆ. ಒಂದೆಡೆ ಅವಿ ಮತ್ತು ಅಭಿ ಮತ್ತೊಂದೆಡೆ ಸಮರ್ಥ್, ಹೀಗೆ ಮೂವರು ಮಕ್ಕಳ ನಡುವೆ ಪ್ರೀತಿಯ ವಿಷಯದಲ್ಲಿ ಜಟಾಪಟಿ ಏರ್ಪಡಿಸಿದ್ದ ತುಳಸಿ ಅಮ್ಮಾ, ಈಗ ಮತ್ತೊಂದು ಮಗುವಿನ ತಾಯಿಯಾಗುತ್ತಿದ್ದಾಳೆ.
undefined
ದೈಹಿಕ ಸಂಬಂಧವೇ ಬೇಡ ಅಂದಿದ್ದ ತುಳಸಿಗೆ ಇದೇನಾಗೋಯ್ತು? ಎಲ್ಲರ ಊಹೆಗೂ ಮೀರಿದ ಟ್ವಿಸ್ಟ್ ಇದು!
ಅವಿ ಮತ್ತು ಅಭಿಯ ಮೇಲಿನ ಪ್ರೀತಿಯನ್ನು ನೋಡಲಾಗದೇ ಮಗ ಸಮರ್ಥ್ ಅಮ್ಮನನ್ನು ಕೈಹಿಡಿದು ಕರೆದುಕೊಂಡು ಹೋಗುವಾಗ ಆಕೆ ತಲೆ ತಿರುಗಿ ಬಿದ್ದಿದ್ದಳು. ತುಳಸಿಯನ್ನು ವೈದ್ಯೆ ಚೆಕ್ ಮಾಡಿ ಕಂಗ್ರಾಟ್ಸ್ ಎಂದಿದ್ದಾರೆ. ಏನಾಯ್ತು ಎಂದು ಗಾಬರಿಯಿಂದ ತುಳಸಿ ಕೇಳಿದಾಗ ನೀವು ತಾಯಿಯಾಗ್ತಾ ಇದ್ದೀರಾ ಎಂದು ವೈದ್ಯೆ ಹೇಳಿದ್ದಾರೆ! ಇದನ್ನು ಕೇಳಿ ತುಳಸಿಗೆ ಆಕಾಶವೇ ಕಳಚಿಬಿದ್ದ ಅನುಭವವಾಗಿದೆ. ತುಳಸಿಗೆ ಆಘಾತವಾಗುವುದು ಬೇರೆ ವಿಷ್ಯ. ಆದರೆ ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಒಂದೇ ನಿಮಿಷದಲ್ಲಿ ಸಹಸ್ರಾರು ಮಂದಿ ನೆಗೆಟಿವ್ ಕಮೆಂಟ್ಸ್ ಹಾಕಿದ್ದಾರೆ. ಅದು ಎಷ್ಟರಮಟ್ಟಿಗೆ ಎಂದರೆ ಇದೊಂದು ಸೀರಿಯಲ್ ಅನ್ನುವುದನ್ನು ಮರೆತು ಒಂದೇ ಸಮನೆ ಬೈಯುತ್ತಿದ್ದಾರೆ.
ಕೆಟ್ಟ ಕೆಟ್ಟ ಪದಗಳ ಪ್ರಯೋಗ ಮಾಡುತ್ತಿದ್ದಾರೆ. ನಿರ್ದೇಶಕರ ವಿರುದ್ಧವೇ ಗರಂ ಆಗಿದ್ದಾರೆ. ಅಜ್ಜಿಯಾಗುವ ಕಾಲದಲ್ಲಿ ಅಮ್ಮ ಆಗುವುದು ಹೇಗೆ ಸಾಧ್ಯ ಎನ್ನುವುದು ಬಹುತೇಕ ಮಂದಿಯ ಅಭಿಮತ. ಇದೊಂದು ಅಸಹ್ಯ ಎಂದೂ ಹೇಳಿದ್ದಾರೆ ಹಲವರು. ತಮ್ಮ ನಡುವೆ ದೈಹಿಕ ಸಂಬಂಧ ಬೇಡ ಎಂದಿದ್ದ ತುಳಸಿ ಮತ್ತು ಮಾಧವ್ ಹೀಗೆ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ ಹಲವರು. ಯಾರ ಅಭಿಮತ ಏನೇ ಆಗಿರಲಿ, ಒಟ್ಟಿನಲ್ಲಿ ಈ ವಯಸ್ಸಿನಲ್ಲಿ ತುಳಸಿ ಅಮ್ಮ ಆಗುವುದನ್ನು ಸಹಿಸುತ್ತಿಲ್ಲ. ಇದರ ಕಮೆಂಟ್ ಯಾವ ಮಟ್ಟಿಗೆ ಆಗಿದೆ ಎಂದರೆ ಇನ್ಸ್ಸ್ಟಾಗ್ರಾಮ್ನಲ್ಲಿನ ಪ್ರೊಮೋದಲ್ಲಿರುವ ಕಮೆಂಟ್ ಸೆಕ್ಷನ್ ಆಫ್ ಮಾಡಲಾಗಿದೆ. ಆದರೆ ನೆಟ್ಟಿಗರು ಸುಮ್ನೆ ಇರ್ತಾರಾ? ಬೇರೆ ಸೀರಿಯಲ್ ಪ್ರೊಮೋಗಳಲ್ಲಿನ ಕಮೆಂಟ್ ಸೆಕ್ಷನ್ಗೆ ಬಂದು ಶ್ರೀರಸ್ತು ಶುಭಮಸ್ತು ಸೀರಿಯಲ್ ಅನ್ನು ಉಗಿಯುತ್ತಿದ್ದಾರೆ. ಅಬ್ಬಬ್ಬಾ! ಎನ್ನುವಂಥ ರಿಯಾಕ್ಷನ್ ಇದು.
ಭಾಗ್ಯ-ಕುಸುಮಾ ಎದುರೇ ಶ್ರೇಷ್ಠಾಗೆ ತಾಳಿ ಕಟ್ತಾನಾ ತಾಂಡವ್? ಮನೆ ಬಿಡ್ತಾಳಾ ಭಾಗ್ಯ?