ಅತಿ ಹೆಚ್ಚು ಗಮನ ಸೆಳೆಯುತ್ತಿದ್ದ ರಿಯಲ್ ಜೋಡಿಗಳು ರಿಯಾಲಿಟಿ ಶೋನಿಂದ ಹೊರ ನಡೆದಿದ್ದಾರೆ.
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಲ್ ಜೋಡಿಗಳ ರಿಯಾಲಿಟಿ ಗೇಮ್ ಶೋ ದಿನೆ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ. ಪ್ರತಿಯೊಂದೂ ಸಂಚಿಯೂ ಜೋಡಿಗಳಿಗಿಂದ ವೀಕ್ಷಕರಿಗೆ ಹುಮ್ಮಸ್ಸು ನೀಡುತ್ತಿದೆ. ರಿಯಲ್ ಲೈಫ್‌ನಲ್ಲೂ ಹೀಗೆ ಇರ್ತಾರಾ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಆದರೆ ಜನಪ್ರಿಯತೆ ಪಡೆಯುತ್ತಿರುವ ಸಮಯಕ್ಕೆ ಶೋನಿಂದ ಎರಡು ಜೋಡಿಗಳು ಹೊರ ನಡೆದಿವೆ. ಇದು ಎಲಿಮಿನೇಷನ್ (Elimination) ಅಲ್ಲ.....
ರಂಗಭೂಮಿ ಕಲಾವಿದ, ಕನ್ನಡ ಚಿತ್ರರಂಗದ ಹಿರಿಯ ನಟ ರಾಜು ತಾಳಿಕೋಟಿ (Raju Thalikote) ಮತ್ತು ಅವರ ಇಬ್ಬರು ಪತ್ನಿಯರು ಕಳೆದ ಎರಡು ಸಂಚಿಕೆಗಳಿಂದ ಕಾಣಿಸಿಕೊಳ್ಳುತ್ತಿಲ್ಲ. ರಾಜು ಅವರ ಇಬ್ಬರು ಪತ್ನಿಯರು ಪ್ರೇಮಾ (Prem) ಅವರು ಟಿವಿಯಲ್ಲಿ ಕಾಣಿಸಿಕೊಂಡ ನಂತರ ಜನಪ್ರಿಯತೆ ಪಡೆದುಕೊಂಡರು. ಇಬ್ಬರನ್ನೂ ಮದುವೆ ಆದರೂ, ಟೆನ್ಶನ್ ಇಲ್ಲದೇ ಲೈಫ್ ಸೂಪರ್ ಆಗಿ ಎಂಜಾಯ್ ಮಾಡುತ್ತಿದ್ದ ರಾಜು ಜೋಡಿ ತೀರ್ಪುಗಾರ್ತಿ ತಾರಾ (Tara Anuradha) ಅವರಿಗೆ ತುಂಬಾನೇ ಇಷ್ಟ. ಆದರೆ ಶೋ ಪ್ರಕಾರ ಒಂದು ವಾರ ಮಿಸ್ ಆದರೂ ಎಲಿಮಿನೇಷನ್‌ಗೆ ಹತ್ತಿರವಾಗಿರುತ್ತಾರೆ. ವೈಯಕ್ತಿಕ ಕಾರಣದಿಂದ ಈ ಜೋಡಿ ಎರಡು ವಾರ ಮಿಸ್ ಆಗಿದ್ದಾರೆ.
ಇನ್ನು ಕ್ರಿಕೆಟರ್ (Cricket),ಬಿಗ್ ಬಾಸ್ (Bigg Boss) ಸ್ಪರ್ಧಿ ಅಯ್ಯಪ್ಪ ಹಾಗೂ ನಟಿ ಅನು (Anu) ಕೂಡ ಶೋ ಮಧ್ಯದಿಂದ ಹೊರ ನಡೆದಿದ್ದಾರೆ ಎಂದು ನಿರೂಪಕಿ ಅನುಪಮಾ ಗೌಡ (Anupama Gowda) ವೇದಿಕೆಯ ಮೇಲೆ ಹೇಳಿದ್ದಾರೆ. ವೈಯಕ್ತಿಕ ಕಾರಣಗಳಿಂದ ಎಂದು ಹೇಳಲಾಗಿದೆ. ಆದರೆ ಜೋಡಿ ಈ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿಲ್ಲ. ಹೀಗಾಗಿ ಅವರು ಎಲಿಮಿನೇಟ್ ಎಂದು ಪರಿಗಣಿಸಲಾಗಿದೆ. ಉಳಿದ 8 ಜೋಡಿಗಳ ಜೊತೆ ರಿಯಾಲಿಟಿ ಶೋ ಮುಂದುವರೆಸಲಾಗುತ್ತದೆ ಎಂದು ಹೇಳಿ ಹೋಮ್ ಸ್ವೀಟ್ ಹೋಮ್ (Home Sweet Home) ಎಪಿಸೋಡ್ ಪ್ರಸಾರ ಮಾಡಲಾಗಿದೆ.
ಮಾಲಾಶ್ರೀ ಆಯ್ತು ಈಗ ನಟಿ ಆರತಿ ಲುಕ್‌ನಲ್ಲಿ ಕಾಣಿಸಿಕೊಂಡ ನಿರೂಪಕಿ ಅನುಪಮಾ ಗೌಡ!ಈ ರಿಯಾಲಿಟಿ ಶೋ ಅನೇಕರಿಗೆ ಸ್ಪೂರ್ತಿಯಾಗಿದೆ. ಹೆಣ್ಣು ಮಕ್ಕಳು ಹೇಗೆಲ್ಲಾ ಯೋಚನೆ ಮಾಡುತ್ತಾರೆ, ಎಷ್ಟು ಕಷ್ಟ ಪಡುತ್ತಾರೆ ಎಂಬ ದೊಡ್ಡ ವಿಚಾರಗಳನ್ನು ಸೂಕ್ಷವಾಗಿ ತೋರಿಸಲಾಗಿದೆ. ಕಿರುತೆರೆ ನಟಿ ನೇಹಾ ಗೌಡ (Neha Gowda) ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಕಾರಣ 7-8 ವರ್ಷಗಳಿಂದ ಹುಟ್ಟು ಹಬ್ಬಕ್ಕೆ ಗಿಫ್ಟ್ ನೀಡಿರಲಿಲ್ಲ. ಮದುವೆಗೂ (Marriage) ಮುನ್ನ ಪ್ರತಿ ಹುಟ್ಟುಹಬ್ಬಕ್ಕೆ ಸೀರೆ ಕೊಡುತ್ತೇನೆ ಎಂದು ಹೇಳಿದ್ದರು. ಅದು ಮಿಸ್ ಆಗಿದ್ದ ಕಾರಣ ರಾಜಾ ರಾಣಿ ವೇದಿಕೆ ಮೇಲೆ 7-8 ಸೀರೆ ಕೊಟ್ಟಿದ್ದಾರೆ. ನಿವೇದಿತಾ ಗೌಡಗೆ (Niveditha Gowda) ಚಂದನ್ ಶೆಟ್ಟಿ ಸ್ಪೆಷಲ್ ಹಾಡು ಡೆಡಿಕೇಟ್ ಮಾಡಿದ್ದಾರೆ.