
ಕನ್ನಡ ಕಿರುತೆರೆ ಜನಪ್ರಿಯ ನಟಿ, ಸೋಷಿಯಲ್ ಮೀಡಿಯಾ ಮಮ್ಮಿ, Influencer ಶಾಂಭವಿ ವೆಂಕಟೇಶ್ (Shaambhawi Venkatesh) ಜೂನ್ 4ರಂದು ಕುಟುಂಬಕ್ಕೆ ಅವಳಿ-ಜವಳಿ (twins) ಗಂಡು-ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಬಣ್ಣದ ಜರ್ನಿ ಮಾತ್ರವಲ್ಲದೇ ತಮ್ಮ ಪ್ರೆಗ್ನೆನ್ಸಿ (pregnancy) ಹಾಗೂ ಮಗು ಆಗಮಿಸಿದ ಜರ್ನಿ ಕೂಡ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಶೂಟ್ ಮೂಲಕ ಮಕ್ಕಳ ಮುಖ ರಿವೀಲ್ ಮಾಡಿದ ನಟಿ, ಮಕ್ಕಳ ಬಣ್ಣದ ಬಗ್ಗೆ ಕೊಂಕು (Discrimination) ಮಾತನಾಡುತ್ತಿರುವವರಿಗೆ ಉತ್ತರ ನೀಡಿದ್ದಾರೆ.
'ದುಷ್ಯಂತ್ ಚಕ್ರವರ್ತಿ (Dushyanth Chakravarthy) 1.5 ತಿಂಗಳು ಮಗುವಾಗಿದ್ದಾಗ ಜುಲೈ 17ರಂದು ಕ್ಲಿಕ್ಕಿಸಿದ್ದು. ಇವನು ಮುಖದ ತೇಜಸ್, ಬಟ್ಟಲ ಕಂಗಳು, ತುಂಟ ನಗು ಮನಮೋಹಕ. ನಮ್ಮ ಮಗ ಕೃಷ್ಣ ಸುಂದರ. ನಾನು ಗೋಧಿ ಬಣ್ಣ, ಯಜಮಾನ್ರು ನಸುಗಪ್ಪು. ಮತ್ತೆ ಮಗು ಯಾಕೆ ಬೆಳ್ಳಗಿರಬೇಕು? ಕಪ್ಪು ಅಂತಾ ಹೇಳಿದ್ರಿ, ನಂಗೆ ಬೇಜಾರಿಲ್ಲ. ಅದು ನಮ್ಮೆಲ್ಲರಿಗೂ ಗೊತ್ತಿರೋ ವಿಚಾರ. ಹಾಗಂತ ಅವನನ್ನು ಬೆಳ್ಳಗೆ ಮಾಡೋ ಯೋಚನೆ ಖಂಡಿತಾ ಇಲ್ಲ. ಹೀಗಾಗಿ ಕೆಲವರಲ್ಲಿ ನಿನಂತಿ, 'ನನಗೆ ದಯವಿಟ್ಟು ಕ್ರೀಮ್ಸ್, ಎಣ್ಣೆ, ಹಿಟ್ಟು, ಯಾವುದನ್ನೂ ಸಜೆಸ್ಟ್ ಮಾಡಬೇಡಿ,' ಮುಗ್ಧ ಮಗುವನ್ನು ಜಡ್ಜ್ ಮಾಡೋದು ತಪ್ಪು. ಅಲ್ವಾ?' ಎಂದು ಶಾಂಭವಿ ಬರೆದುಕೊಂಡಿದ್ದಾರೆ.
'ಇವರಿಬ್ಬರನ್ನೂ ಚೆನ್ನಾಗಿ ಡ್ರೆಸ್ ಅಪ್ (Dress Up) ಮಾಡೋದು ಅಂದ್ರೆ ನಂಗ್ ತುಂಬಾ ಇಷ್ಟ. ಬಹುಶಃ ಎಲ್ಲ ತಾಯಂದಿರಿಗೂ ಇಷ್ಟ. ಆದ್ರೆ ಫೀಡಿಂಗ್, ದೇಕು, ಮಲಗುವುದು, ಸುಸು, ಕಕ್ಕಾ, ಡೈಪರ್ಸ್ (Diaper) ಮಧ್ಯ ಇಬ್ಬರೂ ಟ್ವಿನ್ಸ್‌ನ ಒಂದೇ ಸಮಯದಲ್ಲಿ ರೆಡಿ ಮಾಡಿ ಪರ್ಫೆಕ್ಟ್ ಪಿಚರ್ ತೆಗೆಯೋದು ದೊಡ್ಡ ಸರ್ಕಸ್,' ಎಂದು ಬರೆದುಕೊಂಡು ಇಬ್ಬರು ಮಕ್ಕಳಿಗೂ ದಿನ ಅಲಂಕಾರ ಮಾಡುವ ಫೋಟೋ ಹಂಚಿಕೊಳ್ಳುತ್ತಾರೆ.
ಮಗನಿಗೆ ದುಷ್ಯಂತ್ ಚಕ್ರವರ್ತಿ ಎಂದು ಹೆಸರಿಟ್ಟಿರುವ ಶಾಂಭವಿ ಮಗಳಿಗೆ ದುರ್ಗ ಭಗವತಿ (Durga Bhagavathi) ಎಂದು ಹೆಸರಿಟ್ಟಿದ್ದಾರೆ. 'ಡೆಲಿವರಿ ಟೇಬಲ್ ಮೇಲೆ ಗಂಡು ಹೆಣ್ಣು ಎರಡೂ ಆಯ್ತು, ಅಂತಾ ಗೊತ್ತಾದ ಕ್ಷಣವನ್ನು ಹೇಗೆ ವರ್ಣಿಸಲಿ? ಶಬ್ದಗಳಲ್ಲಿ ಕಟ್ಟೋದು ಅಸಾಧ್ಯ. ಖುಷಿಯಿಂದ ಕಣ್ಣೀರಾದೆ. ನಂಗೆ ಹುಟ್ಟೋ ಅವಳಿಗಳು ಹೆಣ್ಣಾ? ಗಂಡಾ? ಎರಡೂ ನಾ? ಏನು ಅಂತ ತಿಳಿದೋ ಆಸೆ, ಕುತೂಹಲ ಇದ್ರುನೂ illegally ಅದನ್ನ ತಿಳಿಯೋ ಪ್ರಯತ್ನವನ್ನು ಮಾಡದೇ ಸರ್ಪ್ರೈಸ್ ಗೋಸ್ಕರ ತುದಿಗಾಲಲ್ಲಿ ಕಾಯ್ತಾ ಇದ್ವಿ. ಆಗ ಆ ದೇವರಿಗೆ ಎಷ್ಟು ಧನ್ಯವಾದಗಳನ್ನ ಹೇಳಿದ್ದರೂ ಸಾಲದು,' ಎಂದಿದ್ದಾರೆ ಶಾಂಭವಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.