ಸಲ್ಲು ಕಾಲೆಳೆದ ಬ್ಯುಸಿನೆಸ್‌ಮೆನ್‌ Bigg Boss 18ರ ಮೊದಲ ಕಂಟೆಸ್ಟೆಂಟ್‌ : ರಣರಂಗವಾಗಲಿದ್ಯಾ ಬಿಗ್‌ ಬಾಸ್‌ ಮನೆ?

By Roopa Hegde  |  First Published Sep 10, 2024, 5:13 PM IST

ಇನ್ಮುಂದೆ ಬಿಗ್ ಬಾಸ್ ಹವಾ ಶುರುವಾಗಲಿದೆ. ಕನ್ನಡ ಮತ್ತು ಹಿಂದೆ ಬಿಗ್ ಬಾಸ್ ಶೋ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಸ್ಪರ್ಧಿಗಳು ಯಾರೆಂಬ ಚರ್ಚೆಗೆ ಇನ್ನೊಬ್ಬರ ಹೆಸರು ಸೇರ್ಪಡೆಯಾಗಿದೆ. 
 


ಬಿಗ್ ಬಾಸ್ ಹಿಂದಿ ಸೀಸನ್ 18 (Bigg Boss Hindi Season 18) ರ ಶೋ ಈಗ ಟ್ರೆಂಡ್ ನ್ಯೂಸ್. ಬಿಗ್ ಬಾಸ್ ಶೋ ಹೋಸ್ಟ್ ಯಾರು ಎಂಬ ಬಗ್ಗೆ ಕುತೂಹಲವಿತ್ತು. ಅವರನ್ ಬಿಟ್, ಇವರನ್ ಬಿಟ್, ಅವರ್ಯಾರು ಅಂದಾಗ ಅಲ್ಲಿ ಕಾಣಿಸಿಕೊಂಡಿದ್ದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Bollywood Superstar Salman Khan). ಈ ಹಿಂದಿನ ಸರಣಿಗಳನ್ನು ಅಧ್ಬುತವಾಗಿ ನಡೆಸಿಕೊಟ್ಟ ಸಲ್ಮಾನ್ಖಾನ್ ಬಿಟ್ಟು, ಬಿಗ್ ಬಾಸ್ ವೇದಿಗೆ ಮತ್ತ್ಯಾರಿಗೂ ಸೆಟ್ ಆಗೋದಿಲ್ಲ ಅನ್ನೋದು ಮತ್ತೊಮ್ಮೆ ಸಾಭಿತಾಗ್ತಿದೆ. 

ಈಗ ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿ ಸಿದ್ಧವಾಗ್ತಿದೆ. ಬಿಗ್ ಬಾಸ್ ಮನೆಯನ್ನು ಮೊದಲು ಪ್ರವೇಶ ಮಾಡುವ ಸ್ಪರ್ಧಿ ಯಾರೆಂಬುದು ಗೊತ್ತಾಗಿದೆ. ಬಿಗ್ ಬಾಸ್ ಮನೆಗೆ ಎಂದೂ ಹೋಗಲ್ಲ ಎಂದಿದ್ದ, ಸಲ್ಮಾನ್ ಖಾನ್ ಅವರಿಂದ ಪರೋಕ್ಷವಾಗಿ ಮಾತಿನ ಏಟು ತಿಂದಿದ್ದ, ಬಾಲಿವುಡ್ ಬೆಡಗಿ ಪತಿ, ದೊಡ್ಡ ಬ್ಯುಸಿನೆಸ್ ಮೆನ್ ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ. ವಿಶೇಷ ಅಂದ್ರೆ ಅವರೇ ಬಿಗ್ ಬಾಸ್ ಮೊದಲ ಸ್ಪರ್ಧಿ ಎನ್ನಲಾಗ್ತಿದೆ. ಅಷ್ಟಕ್ಕೂ ಇಷ್ಟೆಲ್ಲ ಪೀಠಿಕೆ ನೀಡ್ತಿರೋ ಆ ವ್ಯಕ್ತಿ ಮತ್ತ್ಯಾರು ಅಲ್ಲ, ಮಂಗಳೂರು ಬೆಡಗಿ, ಬಳಕುವ ಬಳ್ಳಿ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ (Raj Kundra). 

Tap to resize

Latest Videos

ಸಲ್ಮಾನ್ ಖಾನ್ ಮದುವೆಯಾಗಿಲ್ಲ ಯಾಕೆ, ಜ್ಯೋತಿಷ್ಯ ಮಾತಿಗೆ ಮೀಮ್ಸ್ ಹರಿಬಿಟ್ಟ ಜನ!

ಯಸ್. ರಾಜ್ ಕುಂದ್ರಾ, ಬಿಗ್ ಬಾಸ್ ಮನೆಗೆ ಎಂಟ್ರಿಯಾಗ್ತಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಜ್ ಕುಂದ್ರಾ ಬಿಗ್ ಬಾಸ್ ಗೆ ಬರ್ತಿದ್ದಾರೆ, ಡಬಲ್ ಮಜಾ ಸಿಗೋದ್ರಲ್ಲಿ ಡೌಟೇ ಇಲ್ಲ ಎನ್ನುವ ಎಮೋಜಿ ಹರಿದಾಡ್ತಿದೆ. ಕಪಿಲ್ ಶರ್ಮಾ ಶೋಗೆ ಬಂದಿದ್ದ ರಾಜ್ ಕುಂದ್ರಾ ಬಿಗ್ ಬಾಸ್ ಮನೆಗೆ ಹೋಗಲ್ಲ ಎಂದಿದ್ರು. ಹೋಗಲ್ಲ ಅಂತಾನೆ ಎಷ್ಟೋ ಸೆಲೆಬ್ರಿಟಿಗಳು ಬಿಗ್ ಬಾಸ್ ಸ್ಪರ್ಧಿಯಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಇದನ್ನು ರಾಜ್ ಕುಂದ್ರಾ ಅದ್ರಲ್ಲಿ ಒಬ್ಬರಾದ್ರೆ ವಿಶೇಷವಿಲ್ಲ.

ರಾಜ್ ಕುಂದ್ರಾಗೆ ಟಾಂಟ್ ಕೊಟ್ಟಿದ್ದ ಸಲ್ಲು : ರಾಜ್ ಕುಂದ್ರಾ ನಾದಿನಿ ಸ್ಮಿತಾ ಶೆಟ್ಟಿ (Smita Shetty) ಬಿಗ್ ಬಾಸ್ ಸೀಸನ್ 15 ರಲ್ಲಿ ಕಾಣಿಸಿಕೊಂಡಿದ್ದರು. ಈ ಟೈಂನಲ್ಲಿ ಹೋಸ್ಟ್ ಸಲ್ಮಾನ್ ಖಾನ್, ಸ್ಪರ್ಧಿ ಪ್ರತೀಕ್ ಸಹಜಪಾಲ್ ಅವರನ್ನು ಗುರಿಯಾಗಿಸಿಕೊಂಡು ಸನ್ನೆಗಳ ಮೂಲಕ ರಾಜ್ ಕುಂದ್ರಾ ಗೇಲಿ ಮಾಡಿದ್ದರು. ಈಗ ರಾಜ್ ಕುಂದ್ರಾ ಶೋಗೆ ಬರ್ತಿದ್ದಾರೆ. ಇಬ್ಬರು ಮುಖಾಮುಖಿಯಾಗಲಿದ್ದಾರೆ. ರಾಜ್ ಕುಂದ್ರಾ, ಬಿಗ್ ಬಾಸ್ ಮನೆಗೆ ಬರ್ತಾರೆ ಎಂಬ ಸುದ್ದಿ ಕೇಳಿಯೇ ಬಿಗ್ ಬಾಸ್ ಫ್ಯಾನ್ಸ್ ಖುರ್ಚಿ ತುದಿಗೆ ಬಂದು ಕುಳಿತುಕೊಳ್ಳಲು ಸಿದ್ಧವಾಗಿದ್ದಾರೆ. ಈ ಬಾರಿ ಬಿಗ್ ಬಾಸ್ ಶೋನಲ್ಲಿ ಮತ್ತಷ್ಟು ಧಮಾಕಾ ನೋಡ್ಬಹುದು ಎಂಬ ನಿರೀಕ್ಷೆ ವೀಕ್ಷಕರದ್ದು.

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಸಿನಿಮಾದಲ್ಲಿ ನಟಿಸದೆ ಹೋದ್ರೂ ಸದಾ ಸುದ್ದಿಯಲ್ಲಿರುವ ಬ್ಯುಸಿನೆಸ್ ಮೆನ್. ಈ ಹಿಂದೆ ಅಡಲ್ಟ್ ಸಿನಿಮಾ (adult movie) ಮೇಕಿಂಗ್ ವಿಷ್ಯದಲ್ಲಿ ಜೈಲಿಗೆ ಹೋಗಿದ್ದ ರಾಜ್ ಕುಂದ್ರಾ, ಒಂದಿಲ್ಲೊಂದು ವಿಷ್ಯಕ್ಕೆ ಟೈಂಲೈನ್ ಗೆ ಬರ್ತಿರುತ್ತಾರೆ.  

ಹಸಿಬಿಸಿ ದೃಶ್ಯದ ಬಳಿಕ 'ಪೆನ್​ಡ್ರೈವ್'​ನಲ್ಲಿ ಬಿಗ್​ಬಾಸ್​ ತನಿಷಾ! ಥೋ ಥೋ... ವಿಡಿಯೋ ವೈರಲ್​

ಈ ಬಾರಿ ಬಿಗ್ ಬಾಸ್ ಸೀಸನ್ 18 ಅಕ್ಟೋಬರ್ ಎರಡನೇ ವಾರದಿಂದ ಶುರುವಾಗುವ ನಿರೀಕ್ಷೆ ಇದೆ. ಡಾಲಿ ಚಾಯ್ವಾಲಾ, ಪಾಯಲ್ ಮಲಿಕ್ ಮತ್ತು ಸ್ತ್ರೀ 2 ಪ್ರಸಿದ್ದಿಯ ಸುನೀಲ್ ಕುಮಾರ್ ಸೇರಿದಂತೆ ಪಟ್ಟಿಯಲ್ಲಿ ಅನೇಕರ ಹೆಸರಿದೆ. ಬಿಗ್ ಬಾಸ್ ನ ಪ್ರೋಮೋ ಶೂಟ್ ಈಗಾಗಲೇ ಮುಗಿದಿದೆ. ಬಿಗ್ ಬಾಸ್ ಒಟಿಟಿ 3ರಲ್ಲಿ ಅನಿಲ್ ಕಪೂರ್ ಕಾಣಿಸಿಕೊಂಡಿದ್ದ ಕಾರಣ, ಬಿಗ್ ಬಾಸ್ ಶೋ ಕೂಡ ಅವರೇ ನಡೆಸ್ತಾರೆ ಎಂಬ ವದಂತಿ ಇತ್ತು. 
 

click me!