ಬಿಗ್ಬಾಸ್ ಕನ್ನಡ ಸೀಸನ್ 11ಕ್ಕೆ ಸುದೀಪ್ ನಿರೂಪಕರೇ ಎಂಬ ಬಗ್ಗೆ ಗೊಂದಲ ಮೂಡಿದೆ. ಸೆಪ್ಟೆಂಬರ್ 31 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಅವರು ಕಾರ್ಯಕ್ರಮ ನಿರೂಪಣೆ ಮಾಡುವ ಬಗ್ಗೆ ಸ್ಪಷ್ಟನೆ ನೀಡದೆ ಗೊಂದಲ ಸೃಷ್ಟಿಸಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಬಿಗ್‌ಬಾಸ್ ಸೀಸನ್ 11 ಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಬಿಗ್‌ಬಾಸ್ ಕನ್ನಡದ 11 ನೇ ಸೀಸನ್ ಪ್ರಸಾರವಾಗಲಿದೆ ಎಂದು ಸುದ್ದಿಯಾಗಿದೆ. ಅದಕ್ಕೂ ಮುನ್ನ ಪ್ರೋಮೋ ರಿಲೀಸ್ ಆಗಲಿದೆ.
ಇತ್ತೀಚೆಗೆ ಬಿಗ್‌ಬಾಸ್ ಕನ್ನಡ ಸೀಸನ್ 11 ರ ಪ್ರೋಮೋ ಶೂಟಿಂಗ್ ಸೆಟ್‌ನಿಂದ ಎರಡು ಫೋಟೋಗಳು ಸೋರಿಕೆಯಾಗಿತ್ತು ಈ ಫೋಟೋಗಳಲ್ಲಿ ಕಿಚ್ಚ ಸುದೀಪ್ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದ್ದು, ಅವರೇ ಈ ಬಾರಿಯೂ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎನ್ನಲಾಗಿತ್ತು. ಇದರಿಂದ ಫ್ಯಾನ್ಸ್ ಕೂಡ ಖುಷಿಯಾಗಿದ್ದರು.
ನೀನಾದೆ ನಾ ಹೊಸ ತಿರುವು, ಸ್ಮಗ್ಲರ್ ಆಗಿ ಬದಲಾದ ವಿಕ್ರಮ್, ಬೆನ್ನು ಬಿಡದ ಬೇತಾಳನಾದ ವೇದಾ!
ಈ ಬಾರಿ ಹೆಚ್ಚು ಚರ್ಚೆಯಾದ ವಿಷಯ ನಿರೂಪಕರು ಯಾರು? ಎಂಬುದು. ಇದೀಗ ಸುದೀಪ್ ಬಿಗ್ ಬಾಸ್ ಬಗ್ಗೆ ಮಾತನಾಡಿದ್ದಾರೆ. ಸೆ.31ರಂದು ಪತ್ರಿಕಾಗೋಷ್ಠಿ ನಡೆಸಿರುವ ಕಿಚ್ಚ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಈ ಸೀಸನ್ ನಲ್ಲಿ ಬೇರೆ ಆ್ಯಂಕರ್ ನ ನೋಡ್ತಿದ್ದಾರೆ ಎನ್ನುವ ಸುದ್ದಿಗೆ ಉತ್ತರ ಕೊಟ್ಟ ಕಿಚ್ಚ, ಕಾರ್ಯಕ್ರಮ ನಿರೂಪಣೆ ಮಾಡ್ತೇನೆ ಅಥವಾ ಮಾಡುವುದಿಲ್ಲ ಎಂಬ ಬಗ್ಗೆ ಏನೂ ಹೇಳಿಲ್ಲ. ಆದರೆ ಅಡ್ಡಗೋಡೆ ಮೇಲೆ ದೀಪವಿಟ್ಟ ಹಾಗೆ ಮಾತನಾಡಿದ ಸುದೀಪ್, ಬಿಗ್ ಬಾಸ್ ಮಾಡಲು ನಾನು ಎಷ್ಟು ಕಷ್ಟ ಪಡುತ್ತೇನೆ ಗೊತ್ತಾ? ಸಿನಿಮಾಗೆ ಅಂತ ಟೈಂ ಕೊಡ್ಲಾ? ಬಿಗ್ಬಾಸ್ ಗೆ ಅಂತ ಟೈಂ ಕೊಡ್ಲಾ? ಅಥವಾ ನನಗೆ ಅಂತ ಟೈಂ ಕೊಡ್ಲ ಎಂದು ಉತ್ತರಿಸಿ ಗೊಂದಲ ಸೃಷ್ಟಿಸಿದ್ದಾರೆ.
ದರ್ಶನ್‌ಗೆ ಬಳ್ಳಾರಿ ಬೇಡ ತಿಹಾರ್ ಜೈಲಿಗೆ ಕಳುಹಿಸಿ, ಅತ್ಯಂತ ಕೆಟ್ಟ ಸೆರೆಮನೆ ಕಿರಣ್ ಬೇಡಿಯಿಂದ ಬದಲಾಯ್ತು
ಹೀಗಾಗಿ ಮತ್ತೆ ಈ ಬಾರಿ ಸುದೀಪ್ ಬಿಗ್‌ಬಾಸ್ ನಿರೂಪಣೆ ಮಾಡ್ತಾರಾ? ಇಲ್ವಾ? ಅಂತ ಗೊಂದಲ ಹುಟ್ಟಿಕೊಂಡಿದೆ. ಆದರೆ ಸುದೀಪ್ ಈ ಹಿಂದಿನ ಸೀಸನ್ ನಲ್ಲಿ ಹೇಳಿದಂತೆ ಕರ್ನಾಟಕದ ಜನರಿಗೆ ನಾನು ತುಂಬಾ ಹತ್ತಿರವಾಗಿರುವುದು ಈ ಶೋ ನಿಂದನೇ, ಇದರಿಂದ ನಾನು ಮನೆ ಮನೆಗೆ ತಲುಪಿದ್ದು ಎಂದಿದ್ದರು. ಹೀಗಾಗಿ ಈ ಬಾರಿ ಕೂಡ ಸುದೀಪ್ ಅವರೇ ನಿರೂಪಕನಾಗಿರುವುದರಲ್ಲಿ ಅನುಮಾನ ಇಲ್ಲ.