
‘ನೂರು ಜನ್ಮಕೂ’ ಧಾರಾವಾಹಿ ಪ್ರಸಾರ ಆಗಿ ಎಂಭತ್ತು ಎಪಿಸೋಡ್‌ಗಳು ಕೂಡ ಆಗಿಲ್ಲ. ಈ ನಡುವೆ ಈ ಧಾರಾವಾಹಿಯ ಹೀರೋ ಪಾತ್ರದಿಂದ, ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಹೌದು, ಧನುಷ್ ಗೌಡ ಅವರು ಈ ಸೀರಿಯಲ್‌ಗೆ ಗುಡ್‌ಬೈ ಹೇಳಿದ್ದಾರೆ.
ಧನುಷ್ ಗೌಡ ಔಟ್!
ʼಗೀತಾʼ ಧಾರಾವಾಹಿ ನಟ ಧನುಷ್ ಗೌಡ ಅವರು ಈ ಧಾರಾವಾಹಿಯಲ್ಲಿ ಚಿರಂಜೀವಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಈಗ ಅವರು ಚಿರು ಪಾತ್ರದಿಂದ ಹೊರಗಡೆ ಬಂದಿದ್ದಾರೆ. ಈ ಸೀರಿಯಲ್‌ಗೆ ನಟ ಸ್ನೇಹಿತ್ ಗೌಡ ಎಂಟ್ರಿಯಾಗಿದೆ. ಇದು ಸೂಪರ್ ನ್ಯಾಚುರಲ್ ಧಾರಾವಾಹಿಯಾಗಿದ್ದೆ. ತಾನು ಪ್ರೀತಿಸುವ ಚಿರುನನ್ನು ಪಡೆದುಕೊಳ್ಳಲು ಕಾಮಿನಿ ಏನು ಬೇಕಿದ್ರೂ ಮಾಡ್ತಾಳೆ. ದೆವ್ವ ಆಗಿದ್ರೂ, ಅಘೋಚರ ಶಕ್ತಿ ಹೊಂದಿರೂ ಕೂಡ ಚಿರುನನ್ನು ಪಡೆದುಕೊಳ್ಳಲು ಕಾಮಿನಿ ಏನು ಬೇಕಿದ್ರೂ ಮಾಡ್ತಾಳೆ.
ಯಾಕೆ ಈ ರೀತಿ ಆಯ್ತು?
ಚಿರು ಪಾತ್ರದಿಂದ ಧನುಷ್ ಗೌಡ ಅವರು ಯಾಕೆ ಹೊರಗಡೆ ಬಂದರು ಎಂಬ ಬಗ್ಗೆ ಮಾಹಿತಿ ಇಲ್ಲ. ಇದಕ್ಕೆ ಧನುಷ್ ಗೌಡ ಅವರು ಉತ್ತರ ಕೊಡಬೇಕಿದೆ. ಅಂದಹಾಗೆ ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಕೂಡ ʼನೂರು ಜನ್ಮಕೂʼ ಧಾರಾವಾಹಿ ಬಗ್ಗೆ ಇತ್ತೀಚೆಗೆ ಯಾವುದೇ ಪೋಸ್ಟ್ ಕಾಣಿಸುತ್ತಿಲ್ಲ. ಇನ್ನು ಮೇ 4ರ ಬಳಿಕ ಜಿಯೋಹಾಟ್‌ಸ್ಟಾರ್‌ನಲ್ಲಿ ಯಾವುದೇ ಎಪಿಸೋಡ್‌ಗಳು ಅಪ್‌ಲೋಡ್ ಆಗಿಲ್ಲ.
ಸ್ನೇಹಿತ್ ಗೌಡ ಏನಂದ್ರು?
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸ್ನೇಹಿತ್ ಗೌಡ ಅವರು, “ನನಗೆ ಫ್ಯಾಂಟಸಿ ಶೋನಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇತ್ತು. ನಾನು ಈ ಆಸೆಯನ್ನು ನೂರು ಜನ್ಮಕೂ ಧಾರಾವಾಹಿ ಮೂಲಕ ಈಡೇರಿಸಿಕೊಳ್ತಿದ್ದೇನೆ. ಈ ಹಿಂದಿನ ಶೋಗಳಿಗೆ ನೀಡಿದಂತೆ ನೀವು ಈ ಶೋಗೂ ಕೂಡ ಅಷ್ಟೇ ಪ್ರೀತಿ, ಅಭಿಮಾನ ತೋರಿಸ್ತೀರಿ ಎಂದು ಭಾವಿಸುವೆ. ನಾನು ವೀಕ್ಷಕರಲ್ಲಿ ನಂಬಿಕೆ ಇಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ಬಿಗ್ ಬಾಸ್ ಶೋನಲ್ಲಿ ಭಾಗಿ!
ಈ ಹಿಂದೆ ಸ್ನೇಹಿತ್ ಗೌಡ ಅವರು, ʼನಮ್ಮನೆ ಯುವರಾಣಿʼ ಧಾರಾವಾಹಿಯಲ್ಲಿ ನಟಿಸಿದ್ದರು. ಅದಾದ ಬಳಿಕ ಅವರು ʼಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ಶೋನಲ್ಲಿ ಸ್ನೇಹಿತ್ ಗೌಡ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಆನಂತರ ಅವರು ʼಬಾಯ್ಸ್ v/s ಗರ್ಲ್ಸ್ʼ ಶೋನಲ್ಲಿ ಕೂಡ ಭಾಗವಹಿಸಿದ್ದರು.
ಮಂತ್ರಾಲಯದಲ್ಲಿ ಶೂಟಿಂಗ್!
ಮೊದಲ ಬಾರಿಗೆ ಕನ್ನಡ ಧಾರಾವಾಹಿಯೊಂದು ‘ಮಂತ್ರಾಲಯ'ದ ಒಳಗಡೆಯೇ ಶೂಟಿಂಗ್ ಮಾಡಿದೆ. ಮೊದಲ ಬಾರಿಗೆ ಮಂತ್ರಾಲಯದ ಶ್ರೀಗಳಾದ ಶ್ರೀ ಸುಬುಧೇಂದ್ರ ತೀರ್ಥರು ಧಾರಾವಾಹಿಯೊಂದರಲ್ಲಿ ನಟಿಸಿದ್ದಾರೆ. ಈ ಹಿಂದೆ ಯಾವ ಧಾರಾವಾಹಿಯಲ್ಲಿಯೂ ಮಂತ್ರಾಲಯದ ಒಳಭಾಗವನ್ನು ತೋರಿಸಿರಲಿಲ್ಲ, ಮೊದಲ ಬಾರಿಗೆ ಕನ್ನಡದ ʼನೂರು ಜನ್ಮಕೂʼ ಸೀರಿಯಲ್‌ನಲ್ಲಿ ಈಗ ಮಂತ್ರಾಲಯ ದರ್ಶನ ಮಾಡಿಸಲಾಗಿದೆ. ರಾಘವೇಂದ್ರ ಸ್ವಾಮಿಗಳು ಎಂದಕೂಡಲೇ ನಮಗೆ ರಾಯರ ಸನ್ನಿಧಿ ಮಂತ್ರಾಲಯ ನೆನಪಾಗುವುದು. ಯಾವುದೇ ಕಷ್ಟವಿರಲೀ, ಏನೇ ಸಂಕಟವಿರಲಿ ನಾವು ರಾಯರನ್ನು ನೆನೆದರೆ, ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ರಾಯರನ್ನು ಆರಾಧಿಸುವ ಎಷ್ಟೋ ಜನರಿದ್ದಾರೆ. ರಾಯರ ಪವಾಡವನ್ನು ಮಾತಿನಲ್ಲಿ ಹೇಳಲಾಗದು.
ತಾರಾಗಣದಲ್ಲಿ ಯಾರು ಯಾರಿದ್ದಾರೆ?
ಅಂದಹಾಗೆ ಗಾಯಕಿ ರೆಮೋ, ನಟಿ ಗಿರಿಜಾ ಲೋಕೇಶ್, ಗಾಯಕಿ ಅರ್ಚನಾ ಉಡುಪ, ಮಂಜುನಾಥ್, ನಟ ವೆಂಕಟೇಶ್, ಅನುಪಲ್ಲವಿ ಗೌಡ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಹೊಸ ಕಲಾವಿದರಿಗೆ ಇಲ್ಲಿ ಹೆಚ್ಚಿನ ಅವಕಾಶ ನೀಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.