
“ಕಳೆದ ಶನಿವಾರ ಎಲ್ಲರಿಗೂ ನಾರ್ಮಲ್ ಡೇ ಆದರೆ ನನಗೆ ಮಾತ್ರ ಬ್ಯಾಡ್ ಡೇ ಆಗಿತ್ತು” ಎಂದು ಯಶಸ್ವಿನಿ ಆನಂದ್ ಅವರು ಹೇಳಿದ್ದಾರೆ. ಹೌದು, ಒಂದು ವಿಡಿಯೋ ಮಾಡಿ, ಜೀವನದಲ್ಲಾದ ಈ ಅವಘಡದ ಬಗ್ಗೆ ಹೇಳಿಕೊಂಡಿದ್ದಾರೆ.
ನಿಜಕ್ಕೂ ಏನಾಯ್ತು?
ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಅವರು ಹಾಟ್ ವಾಟರ್ ಸ್ಟೀಮ್ ತಗೊಳ್ತಿದ್ದರು. ಈ ಸ್ಟೀಮ್ ತಗೊಳೋದಿಕ್ಕೆ ನೀರು ಸಿಕ್ಕಾಪಟ್ಟೆ ಬಿಸಿ ಇರಬೇಕು. ಈ ಬಿಸಿನೀರು ಕೈತಪ್ಪಿ ಕಾಲು ಮೇಲೆ ಬಿತ್ತು. ಅವರಿಗೋ ಉರಿಯೋ ಉರಿ. ಯಶಸ್ವಿನಿ ಪತಿ ಮಾಸ್ಟರ್ ಆನಂದ್ ಅವರು ಹಂಪಿ ಉತ್ಸವಕ್ಕೆ ತೆರಳಿದ್ದರು. ಹೀಗಾಗಿ ಸಂತು ಎನ್ನುವವರನ್ನು ಕರೆದುಕೊಂಡು ಯಶಸ್ವಿನಿ ಆಸ್ಪತ್ರೆಗೆ ತೆರಳಿದರು. ಅಲ್ಲಿ ಅವರಿಗೆ ಬ್ಯಾಂಡೇಜ್ ಹಾಕಲಾಯ್ತು. “ಏನೂ ತೊಂದರೆ ಇಲ್ಲ, ಕಡಿಮೆ ಆಗತ್ತೆ” ಅಂತ ಯಶಸ್ವಿನಿಗೆ ವೈದ್ಯರು ಭರವಸೆ ನೀಡಿದ್ದರು. ವೈದ್ಯರ ಮಾತು ಕೇಳಿ ಬ್ಯಾಂಡೇಜ್ ಹಾಕಿದ್ದಾರೆ, ಕಮ್ಮಿ ಆಗತ್ತೆ ಅಂತ ಯಶಸ್ವಿನಿ ಭಾವಿಸಿದ್ದರು. ಆದರೆ ಬೆಳಗಾಗುವುದರೊಳಗಡೆ ಆಗಿದ್ದೇ ಬೇರೆ.
ಅಬ್ಬಬ್ಬಾ..! ಎಲೆಮರಿ ಕಾಯಿಯಂತಿರೋ ಅದ್ಭುತ ಕಲಾವಿದ ಈ ʼರಾಮಾಚಾರಿʼ ನಟ ರವಿ ಸಾಲಿಯಾನ್
ಕಾಲು ತುಂಬ ಗುಳ್ಳೆಗಳು!
ಯಶಸ್ವಿನಿ ಅವರ ಕಾಲುಗಳ ಮೇಲೆ ದೊಡ್ಡ ಗುಳ್ಳೆಗಳು ಆದಹಾಗೆ ಆಗಿತ್ತು. ಇನ್ನು ಮಾಸ್ಟರ್ ಆನಂದ್ ಮನೆಗೆ ಬರುತ್ತಿದ್ದಂತೆ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಕಾಲುಗಳ ಮೇಲೆ ಗುಳ್ಳೆಗಳು ಆಗಿವೆ, ಒಮ್ಮೆ ನೋಡಿ ಅಂತ ಯಶಸ್ವಿನಿ ವೈದ್ಯರಿಗೆ ಹೇಳಿದರು. ಆಗ ವೈದ್ಯರು ಬ್ಯಾಂಡೇಜ್ ಬಿಚ್ಚಿ ನೋಡಿದ್ರೆ ದೊಡ್ಡ ದೊಡ್ಡ ಗುಳ್ಳೆಗಳು. ಆ ಗುಳ್ಳೆಗಳನ್ನು ಒಡೆದು ಔಷಧಿ ಹಚ್ಚಲಾಯ್ತು. ಮತ್ತೆ ಆನಂದ್ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು.
ʼರಿಯಾಲಿಟಿ ಶೋ ನಂತ್ರ ಯಶಸ್ವಿನಿ ಬದಲಾದ್ರು, ಚಿಕ್ಕ ಬಟ್ಟೆ ಹಾಕ್ತಾರೆʼ; ಖಡಕ್ ಮಾತಾಡಿದ ಪತಿ ಮಾಸ್ಟರ್ ಆನಂದ್!
ಎಲ್ಲ ಕೆಲಸ ಮಾಡ್ತಿರುವ ಮಾಸ್ಟರ್ ಆನಂದ್!
ಇನ್ನು ಮನೆಯ ಎಲ್ಲ ಕೆಲಸಗಳನ್ನು ಕೂಡ ಅವರೇ ಮಾಡುತ್ತಿದ್ದಾರಂತೆ. ಯಶಸ್ವಿನಿಗೆ ಊಟ-ತಿಂಡಿ ಮಾಡಿಸೋದರಿಂದ ಹಿಡಿದು, ಎಲ್ಲ ಕೆಲಸ ಮಾಡುತ್ತಿರೋದು ಒಂದು ಲೆಕ್ಕದಲ್ಲಿ ಖುಷಿಯಾಗುತ್ತಿದೆ. ನನ್ನ ಗಂಡ ಇಷ್ಟು ಪ್ರೀತಿ ಮಾಡ್ತಾರೆ, ಕಾಳಜಿ ಮಾಡ್ತಾರೆ ಅಂತ., “ಇನ್ನೂ ನಾನು ಹುಷಾರಾಗಿಲ್ಲ. ಯಾರ ಕಣ್ಣು ಬಿತ್ತೋ ಏನೋ! ಈ ಥರ ಆಯ್ತು, ಆಗಿದ್ದೆಲ್ಲ ಒಳ್ಳೆಯದಕ್ಕೆ ಅಂತ ಭಾವಿಸ್ತೀನಿ. ನಾನು ಬೇಗ ಹುಷಾರ್ ಆಗ್ತೀನಿ ಅಲ್ವಾ?” ಎಂದು ಯಶಸ್ವಿನಿ ಆನಂದ್ ಅವರು ವಿಡಿಯೋ ಮಾಡಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಡಿವೋರ್ಸ್ ಸುದ್ದಿ ಇಷ್ಟು ದೊಡ್ಡದಾಗಲು ಇವಳೇ ಕಾರಣ: ಪತ್ನಿ ಮೇಲೆ ಕೋಪಗೊಂಡ ಆನಂದ್ ಹೇಳಿದ್ದೇನು?
ವೀಕ್ಷಕರು ಏನು ಹೇಳಿದ್ದಾರೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.