
ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada Season 12)ರ ಬಗ್ಗೆ ಸದ್ಯ ಎಲ್ಲ ಕಡೆ ಚರ್ಚೆ ಆಗ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಮಾತನಾಡ್ತಿದ್ದಾರೆ. ಸೆಲೆಬ್ರಿಟಿಗಳು ತಮ್ಮ ಫೆವರೆಟ್ ಬಗ್ಗೆ ಮಾತನಾಡಿದ್ರೆ ಕಿವಿ ನೆಟ್ಟಗಾಗೋದು ಸಾಮಾನ್ಯ. ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಯಾರು ವಿನ್ ಆದ್ರೆ ತಮಗೆ ತುಂಬಾ ಖುಷಿಯಾಗುತ್ತೆ ಎಂಬುದನ್ನು ಹೇಳಿದ್ದಾರೆ.
ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ವಂಶಿ ಅಮ್ಮ ಹಾಗೂ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ, ಆನಂದ್ ಅವರಿಗೆ ಬಿಗ್ ಬಾಸ್ ಕುರಿತಂತೆ ಪ್ರಶ್ನೆ ಕೇಳಿದ್ದಾರೆ. ಈ ಬಾರಿ ಬಿಗ್ ಬಾಸ್ ಫೀನಾಲೆಗೆ ಹೋಗುವ ಐದು ಕಂಟೆಸ್ಟೆಂಟ್ ಯಾರು ಅಂತ ಕೇಳಿದ್ದಾರೆ. ಅದಕ್ಕೆ ಉತ್ತರ ನೀಡಿದ ಮಾಸ್ಟರ್ ಆನಂದ್, ಇಷ್ಟು ಬೇಗ ಯಾರು ಹೋಗ್ತಾರೆ ಅನ್ನೋದು ಕಷ್ಟ. ಯಾರು ಹೋಗ್ಬೇಕು ಎನ್ನುವ ಪ್ರಶ್ನೆಗೆ ಉತ್ತರ ನೀಡ್ತೆನೆ ಅಂದ್ರು. ಅಲ್ದೆ ತಮ್ಮಿಷ್ಟದ, ಫೀನಾಲೆಗೆ ಹೋಗಬೇಕಾದ ಐದು ಸ್ಪರ್ಧಿಗಳ ಹೆಸರನ್ನು ಹೇಳಿದ್ದಾರೆ. ಒಂದು ತಿಂಗಳು ಬಿಗ್ ಬಾಸ್ ಮನೆಯಲ್ಲಿ ಏನಾಗಿದೆ ಎಲ್ಲವನ್ನು ನೋಡಿ ವಿಶ್ಲೇಷಣೆ ಮಾಡಿದ ಮಾಸ್ಟರ್ ಆನಂದ್, ಗಿಲ್ಲಿ, ರಕ್ಷಿತಾ, ರಘು, ಮಾಳು, ಕಾವ್ಯ ಹಾಗೂ ಸ್ಪಂದನಾ ಹೆಸರನ್ನು ಆನಂದ್ ಹೇಳಿದ್ದಾರೆ.
ಬಿಗ್ ಬಾಸ್ ಟಾಪ್ ಐದರ ಬದಲು ಆರು ಕಂಟೆಸ್ಟೆಂಟ್ ಹೆಸರು ಹೇಳಿದ ಆನಂದ್, ಇದ್ರಲ್ಲಿ ಯಾರು ವಿನ್ ಆದ್ರೆ ತಮಗೆ ಖುಷಿ ಆಗುತ್ತೆ ಎಂಬುದನ್ನೂ ಹೇಳಿದ್ದಾರೆ. ಆನಂದ್ ಪ್ರಕಾರ, ಗಿಲ್ಲಿ ಇಲ್ಲ ರಕ್ಷಿತಾ ವಿನ್ ಆದ್ರೆ ಖುಷಿ. ರಕ್ಷಿತಾ ಬೇರೆ ಫೀಲ್ಡ್ ನಿಂದ ಬಂದವರು. ಜಾತ್ರೆಯಲ್ಲಿ ಕಳೆದು ಹೋದ ಮಗುವಿನಂತಿದ್ದವರು ಈಗ ಓಪನ್ ಅಪ್ ಆಗಿದ್ದಾರೆ. ಎಲ್ಲರನ್ನೂ ಅರ್ಥ ಮಾಡಿಕೊಂಡಿದ್ದಾರೆ. ರಕ್ಷಿತಾ ವಿನ್ ಆದ್ರೆ %100 ಖುಷಿ.ಮ ಒಂದ್ವೇಲೆ ಗಿಲ್ಲಿ ಆದ್ರೆ % 105 ಖುಷಿ ಅಂತ ಮಾಸ್ಟರ್ ಆನಂದ್ ಹೇಳಿದ್ದಾರೆ.
ಗಾಸಿಪ್ ನಿಜವಾಯ್ತು; ಸದ್ದಿಲ್ಲದೆ ಮದುವೆಯಾದ Amruthavarshini Serial ನಟಿ ರಜಿನಿ
ಯಶಸ್ವಿನಿ, ಆನಂದ್ ಅವ್ರನ್ನು ಇಷ್ಟಕ್ಕೆ ಬಿಡಲಿಲ್ಲ. ಉಳಿದಂತೆ ಅಶ್ವಿನಿ, ರಾಶಿಕಾ, ರಿಷಿ, ಸೂರಜ್, ಸುಧಿ ಇವರದ್ದೆಲ್ಲ ಏನು ಕಥೆ ಅಂತ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರ ಕೊಡದೆ ತಲೆ ಕೆಳಗೆ ಹಾಕಿಕೊಂಡು ಕುಳಿತಿದ್ದ ಆನಂದ್, ತುಂಬಾ ಖುಷಿ ಆಯ್ತು ಅಂತ ಬಾಯಿ ಮುಚ್ಚಿಕೊಂಡು ತಮಾಷೆ ಮಾಡ್ತಾರೆ. ಆನಂದ್ – ಯಶಸ್ವಿನಿ ಪೋಸ್ಟ್ ಸಾಕಷ್ಟು ಕಮೆಂಟ್ ಕೂಡ ಬಂದಿದೆ. ಆನಂದ್, ಕಟ್ಟಪ್ಪ ಅಂತ ಹೆಸರು ಹೇಳಿದ್ದು ಯಾರಿಗೆ ಅಂತ ಕೆಲವರು ಕೇಳಿದ್ದಾರೆ. ಮತ್ತೆ ಕೆಲವರು ಗಿಲ್ಲಿ ಗೆಲ್ಲೋದು ಗ್ಯಾರಂಟಿ ಅಂದ್ರೆ ಮತ್ತೆ ಕೆಲವರಿಗೆ ಯಶಸ್ವಿನಿ, ಹರಿ ಓಂ ಅಂತ ಆನಂದ್ ಅವರನ್ನು ಕರೆದಿದ್ದು ಇಷ್ಟವಾಗಿದೆ.
ಸದ್ಯ ಬಿಗ್ ಬಾಸ್ ಮನೆಯಿಂದ ಚಂದ್ರಪ್ರಭ ಹೊರಬಿದ್ದಿದ್ದಾರೆ. ಕಿಚ್ಚ ಸುದೀಪ್ ಅನೇಕ ವಿಷ್ಯಗಳನ್ನು ಸ್ಪರ್ಧಿಗಳಿಗೆ ಮುಟ್ಟಿಸಿ, ಬಿಸಿ ಮುಟ್ಟಿಸಿದ್ದಾಗಿದೆ. ಇಂದು ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್, ಗಿಲ್ಲಿಗೆ ಹಸಿ ಮೆಣಸಿನಕಾಯಿ ತಿನ್ನಿಸೋದನ್ನು ವೀಕ್ಷಕರು ನೋಡ್ಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.